AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್​ 26: ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮ‌ಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ಯಾರದೋ ಮಾತಿಗೆ ಬೇಸರಿಸಿಕೊಳ್ಳುವುದು ಸರಿಯಲ್ಲ. ನೀವಿಂದು ಯಾರನ್ನಾದರೂ ಅನುಸರಣ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವಿರಿ. ಹಾಗಾದರೆ ಆಗಸ್ಟ್​ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ
ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 26, 2024 | 12:15 AM

Share

ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ / ಅಷ್ಟಮೀ, ನಿತ್ಯನಕ್ಷತ್ರ: ಕೃತ್ತಿಕಾ / ರೋಹಿಣೀ, ಯೋಗ: ವೃದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ 07:55 ರಿಂದ 09:28, ಯಮಘಂಡ ಕಾಲ 11:01 ರಿಂದ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ ಸಂಜೆ 03:41ರ ವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಗೃಹ ನಿರ್ಮಾಣದ ಕಡೆಗೆ ಗಮನವಾಗಬೇಕಾಗುವುದು. ಉದ್ಯೋಗಕ್ಕೆ ವಿರಾಮ‌ ಹೇಳಿದ ನಿಮಗೆ ದಗ್ಭ್ರಾಂತಿಯಾಗಬಹುದು. ನೀವು ಇಂದು ಮನೆಗಾಗಿ ಏನನ್ನಾದರೂ ಕೊಡಲಿದ್ದೀರಿ. ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮ‌ಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ಯಾರದೋ ಮಾತಿಗೆ ಬೇಸರಿಸಿಕೊಳ್ಳುವುದು ಸರಿಯಲ್ಲ. ಯಾರದೋ ಮೇಲಿನ‌ ಸಿಟ್ಟನ್ನು ನೀವು ತೀರಿಸಿಕೊಳ್ಳುವ ಭರದಲ್ಲಿ ನಿಮಗೆ ಸರಿ ತಪ್ಪುಗಳ ನಿರ್ಣಯ ಕಷ್ಟವಾದೀತು. ನೀವಿಂದು ಯಾರನ್ನಾದರೂ ಅನುಸರಣ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮದಾದ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ನಿಮ್ಮ ನೋವಿಗೆ ನೀವೇ ಔಷಧ ಮಾಡಿಕೊಳ್ಳಬೇಕು. ಯಾರೋ ಬರುತ್ತಾರೆ ಎಂದು ಕಾಯುವುದು ಬೇಡ. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಿದೇಶದವರ ಜೊತೆ ನಿಮ್ಮ ವ್ಯವಹಾರವು ನಡೆಯುವುದು.

ಕನ್ಯಾ ರಾಶಿ: ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಬದ್ಧತೆಯಿಂದ ಮಾಡಿದ ಕಾರ್ಯಕ್ಕೆ ಶ್ರೇಯಸ್ಸು ನಿಮ್ಮದೇ. ಅಕಾರಣವಾದ ವಿವಾದಗಳಿಂದ ಸಮಯವು ಹಾಳಾಗಬಹುದು.‌ ಆಕಸ್ಮಿಕವಾಗಿ ಬರುವ ಸುದ್ದಿಯಿಂದ ನಿಮಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರೆ ನಿಮಗೆ ಸಿಗಬಹುದು. ವ್ಯಾವಹಾರಿಕ ಗೌಪ್ಯತೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ವಿದ್ಯಾಭ್ಯಾಸವನ್ನು ಬಹಳ ಆಸಕ್ತಿಯಿಂದ ವಿದ್ಯಾರ್ಥಿಗಳು ಮಾಡುವರು. ಬಂಧುಗಳ ಸಲಹೆಯನ್ನು ನೀವು ಸ್ವೀಕರಿಸಿ ಬಿಡುವಿರಿ. ಸಂಗಾತಿಯ ನಡತೆಯು ನಿಮಗೆ ಅನುಮಾನವನ್ನು ತರಿಸಬಹುದು. ದಂಪತಿಗಳು ಜೊತೆಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಾಧಿಸುವ ಛಲವು ಬರಬಹುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ನಿಮ್ಮ ಮಾತು ಇನ್ನೊಬ್ಬರ ಕೋಪವನ್ನು ಕರಗಿಸೀತು. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸುವ ಕಾರ್ಯಕ್ಕೆ ಮುಂದಾಗುವಿರಿ.

ತುಲಾ ರಾಶಿ: ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇಂದು ನಿಮ್ಮ ಸೇವೆಗೆ ಗೌರವವು ಸಿಗಬೇಕಾದರೂ ಸಿಗದೇ ಹೋದೀತು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ಸನ್ನಿವೇಶಗಳು ಬರಬಹುದು. ಅನಧಿಕೃತಿ ವ್ಯವಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಅಂತರಂಗವು ನಕಾರಾತ್ಮಕವಾಗಿ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ವ್ಯಕ್ತಪಡಿಸಲು ಹೋಗಬೇಡಿ. ಸ್ವಲ್ಪ ಸಮಾಧಾನದಿಂದ ಇರಿ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಸರ್ಕಾರದಿಂದ ಬರುವ ಹಣವು ಕೈ ತಪ್ಪಬಹುದು. ಅದು ಬಂದಂತೆ ಸದ್ಯ ಮುಂದುವರಿಯಿರಿ. ಪುರುಷಪ್ರಯತ್ನವು ಈಗ ಬೇಡ. ಅಪ್ರಯೋಜಕವಾಗಲಿದೆ. ಆದಷ್ಟು ಸಮಯ ತಾಳ್ಮೆಯಿಂದ ಇರಬೇಕಾಗಿದೆ. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ಉಪಕಾರದ ಸ್ಮರಣೆ ನಿಮಗೆ ಯಶಸ್ಸನ್ನು ಕೊಟ್ಟೀತು. ಯಾರದೋ ಕಾರಣದಿಂದ ನಿಮ್ಮ ಇಂದಿನ ಗುರಿಯೇ ಬದಲಾಗಬಹುದು.

ವೃಶ್ಚಿಕ ರಾಶಿ: ಇಂದು ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಎಂದೋ ಮಾಡಿದ ಉಪಕಾರವು ಇಂದು ನಿಮ್ಮ ಕೈ ಸೇರುವುದು. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಇರುವುದು ಅಸಮಾಧನಕ್ಕೆ ಮುಖ್ಯಕಾರಣವಾಗಿದೆ. ನಿಮ್ಮ ವಿದ್ಯೆಗೆ ಅನುಗುಣವಾದ ವೃತ್ತಿಯು ಸಿಗಲಿದೆ. ನಿಮ್ಮ ಅನಾರೋಗ್ಯಕ್ಕೆ ಅನೇಕ ವೈದ್ಯರನ್ನು ಸಂಪರ್ಕಿಸಿ ಸೋಲುವಿರಿ. ಸುಳ್ಳಾಡುವ ಸಂದರ್ಭವು ಬರಬಹುದು. ಅಹಂಕಾರದಿಂದ ಕಛೇರಿಯಲ್ಲಿ ಕಲಹವಾಗಬಹುದು. ಸಹೋದ್ಯೋಗಿಗಳನ್ನು ಎದುರುಹಾಕಿಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಅಸೂಯೆಪಡುವುದು ಬೇಡ. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ವಿರೋಧಿಸದೇ ಒಳ್ಳೆಯ ರೀತಿಯಲ್ಲಿ ಮಾತನಾಡಿ.

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?