
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 19) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ :ದಶಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸೌಭಾಗ್ಯ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:39 ರಿಂದ 11:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:11 ರ ವರೆಗೆ.
ಧನು ರಾಶಿ : ಕುಟುಂಬದ ಜೊತೆ ಪುಣ್ಯಸ್ಥಳಗಳಿಗೆ ಹೋಗುವಿರಿ. ಇನ್ನೊಬ್ಬರ ಬಗ್ಗೆ ಅತಿಯಾದ ಆಲೋಚನೆಯ ಅವಶ್ಯಕತೆ ಇರದು. ನಿಷ್ಠುರದ ಮಾತುಗಳಿಂದ ಸ್ನೇಹಿತರನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮ ಕುಶಲ ಕರ್ಮಕ್ಕೆ ಪ್ರಶಂಸೆ ಸಿಗಲಿದೆ. ಹಣ ವ್ಯಯವನ್ನು ಅಧಿಕ ಮಾಡುವುದು ಬೇಡ. ದೇವರ ಕಾರ್ಯದಲ್ಲಿ ಮಗ್ನರಾಗುವಿರಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಸಹೋದರಿಯರ ನಡುವೆ ಮನಸ್ತಾಪವು ಬರಬಹುದು. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ. ಪ್ರಶಂಸೆಯಿಂದ ಅಹಂಕಾರವು ಬರುವುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹೊಸ ಮನೆಯ ಖರೀದಿಯನ್ನು ಮಾಡುವಿರಿ.
ಮಕರ ರಾಶಿ : ನಿಮಗಾಗದವರ ಜೊತೆ ಇಂದು ಕಲಹವನ್ನು ಮಾಡಿಕೊಳ್ಳುವಿರಿ. ಇದರ ಕಾರಣ ನಿಮ್ಮ ಮನಸ್ಸಿಗೆ ಶಾಂತತೆ ಕಡಿಮೆಯಾಗುವುದು. ನಿಮ್ಮ ಮಾತಿಗೆ ಆಕರ್ಷಿತರಾಗಬಹುದು. ತಂತ್ರದಿಂದ ಶತ್ರುವನ್ನು ಗೆಲ್ಲುವಿರಿ. ವ್ಯವಹಾರವನ್ನು ಮಾಡಲು ಓಡಾಟ ಹೆಚ್ಚಾಗಬಹುದು. ಅನಿರೀಕ್ಷಿತ ಧನವ್ಯಯದಿಂದ ಆತಂಕವು ಆಗಲಿದೆ. ರಾಜಕೀಯದಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ. ಅನವಶ್ಯಕವಾಗಿ ಆಡುವ ಮಾತುಗಳು ನಿಮ್ಮ ಮೇಲೆನೊ ಗೌರವವನ್ನು ಕಡಿಮೆ ಮಾಡಿಸೀತು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಪ್ರಭಾವೀ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ.
ಕುಂಭ ರಾಶಿ : ನಿಮ್ಮ ಮಿತ್ರರ ಕಾರಣಕ್ಕೆ ನಷ್ಟವಾಗಲಿದೆ. ಹೊಸ ಪಾಲುದಾರಿಕೆಯಿಂದ ನಿಮಗೆ ಕಿರಿಕಿರಿಯಾಗಬಹುದು. ಹೇಳಿಕೊಳ್ಳಲು ಕಷ್ಟವೆನಿಸಬಹುದು. ಇಂದು ನೀವು ವಿವಾದಗಳಿಗೆ ಸಮಯವನ್ನು ಹೆಚ್ಚು ಕೊಡುವಿರಿ. ಸಲ್ಲದ ಆಸೆಗಳನ್ನು ಬೆಳಿಸಿಕೊಳ್ಳುವಿರಿ. ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಸಾಹಸ ಮಾಡಬೇಕಾಗುವುದು. ನಿಮ್ಮ ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಇಂದು ಆದ ನಿದ್ರಾಭಂಗದಿಂದ ದಿನವು ಸರಿಯಾಗದೇ ಹೋಗಬಹುದು. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ಎಲ್ಲದಕ್ಕೂ ದುಷ್ಟರನ್ನು ದೂಷಿಸುವುದು ಸರಿಯಾಗದು.
ಮೀನ ರಾಶಿ : ನಿಮ್ಮ ಅತಿಯಾದ ಸಭ್ಯತೆಯು ದುರುಪಯೋಗವಾಗಬಹುದು. ಕೌಟುಂಬಿಕವಾಗಿ ಸ್ಥಿರಾಸ್ತಿಯ ವಿಚಾರದಲ್ಲಿ ಕಲಹವು ಉಂಟಾಗುವ ಸಾಧ್ಯತೆ ಇದೆ. ಇಂದು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆ ಇರಲಿ. ಇಷ್ಟ ಬಂದ ಕಡೆ ನೀವು ಸುತ್ತಾಡುವಿರಿ. ಹೊಸ ಅನ್ವೇಷಣೆಯನ್ನು ನೀವು ಇಷ್ಟಪಡುವಿರಿ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಬೇಜವಾಬ್ದಾರಿತನದಿಂದ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಗುವುದು. ಅನಾರೋಗ್ಯದ ಸಮಸ್ಯೆಯಿಂದ ಬಳಲಬೇಕಾಗುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ