AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ; ಈ ರಾಶಿಯವರು ಸ್ತ್ರೀಯರಿಗೆ ಸಹಾಯ ಮಾಡುವ ಮುನ್ನ ಎಚ್ಚರ, ಹಾಸ್ಯಕ್ಕೆ ಒಳಗಾಗಬಹುದು

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 19ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ಈ ರಾಶಿಯವರು ಸ್ತ್ರೀಯರಿಗೆ ಸಹಾಯ ಮಾಡುವ ಮುನ್ನ ಎಚ್ಚರ, ಹಾಸ್ಯಕ್ಕೆ ಒಳಗಾಗಬಹುದು
ರಾಶಿಭವಿಷ್ಯ
Rakesh Nayak Manchi
|

Updated on: Mar 19, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 19) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ :ದಶಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸೌಭಾಗ್ಯ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:39 ರಿಂದ 11:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:11 ರ ವರೆಗೆ.

ಸಿಂಹ ರಾಶಿ : ಇಂದು ನಿಮ್ಮ ಕಾರ್ಯಕ್ಕೆ ಬರುವ ಹಣಕಾಸಿನ ವಿಘ್ನವನ್ನು ಮಿತ್ರರು ಸರಿ ಮಾಡುವರು. ಕೃಷಿಯ ಬಗ್ಗೆ ಅನೇಕ ಕಾರಣಗಳಿಂದ ಆಸಕ್ತಿಯು ಸದ್ಯ ಕಡಿಮೆ ಆಗುವುದು. ನಿಮ್ಮ ಸಹಾಯವು ಇಂದು ಯಾವುದಾದರೊಂದು ರೀತಿಯಲ್ಲಿ ಹಿಂದಿರುಗಬಹುದು. ಯಂತ್ರಗಳ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ. ರಾಜಕೀಯ ಪ್ರೇರಿತದಿಂದ ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳು ಬರಬಹುದು. ಪ್ರಭಾವಿ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಕುತೂಹಲ ಬರಬಹುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ನಿಮ್ಮ ವಸ್ತುಗಳನ್ನು ಇತರರಿಗೆ ನೀಡುವಿರಿ.

ಕನ್ಯಾ ರಾಶಿ : ಧುಗಳ ಜೊತೆ ಆಪ್ತ ಸಮಾಲೋಚನೆ ಇರುವುದು. ಸಾಮಾಜಿಕವಾಗಿ ಜನರ ಪ್ರೀತಿಯನ್ನು ಪಡೆಯುವಿರಿ. ವಿವಾಹಕ್ಕೆ ನೀವು ಕ್ಷಣ ಗಣನೆ ಮಾಡುತ್ತಿರುವಿರಿ. ಅಪೂರ್ಣವಾದ ಕೆಲಸಗಳಿಂದ‌ ಚಿಂತೆ ಹೆಚ್ಚಾದೀತು. ಉನ್ನತವಾದ ಆಲೋಚನೆಗಳು ನಿಮ್ಮನ್ನು ದಡ ಸೇರಿಸುವುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾದೀತು. ಪ್ರಯಾಣವು ಅವಸರವಸರವಾಗಿ ಇರುವುದು. ನಾನಾ ರೀತಿಯಲ್ಲಿ ಹೂಡಿಕೆಯನ್ನು ಮಾಡುವ ಮನಸ್ಸಾಗುವುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನೌಕರರಿಗೆ ಕೆಲಸವನ್ನು ಹೇಳುವ ರೀತಿಯಲ್ಲಿ ಹೇಳಿ, ಮಾಡಿಸಿಕೊಳ್ಳಿ.

ತುಲಾ ರಾಶಿ : ಎಲ್ಲವೂ ಶತ್ರುಗಳಿಂದಲೇ ಆಗಬೇಕೆಂದಿಲ್ಲ. ನಿಮ್ಮ‌ ಸ್ವಭಾವವೂ ಕೆಲವು ಅಧಿಕಾರಕ್ಕೆ ಅಡ್ಡಿಯುಂಟುಮಾಡಬಹುದು. ಅಧಿಕ ಚಾಂಚಲ್ಯದಿಂದ ದ್ವಂದ್ವಕ್ಕೆ ಸಿಲುಕುವಿರಿ. ತಪ್ಪು ಗ್ರಹಿಕೆಯಿಂದ ನಿಮ್ಮ ಕೆಲಸಗಳು ಅಸ್ತವ್ಯಸ್ತವಾಗಬಹುದು. ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾದೀತು. ಅಂದುಕೊಂಡಿದ್ದನ್ನು ಸಾಧಿಸಲು ಸರಿಯಾದ ಮಾರ್ಗವು ಕಾಣಬಹುದು. ಇನ್ನೊಬ್ಬರ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಾರಿರಿ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ಯಾರ ತಪ್ಪನ್ನೂ ನೇರವಾಗಿ ಹೇಳದೇ ಅರ್ಥ ಮಾಡಿಸಿ, ತಿದ್ದಿ. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಮಯಪಾಲನೆಗೆ ಪ್ರಶಂಸೆಯು ಸಿಗುವುದು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ.‌

ವೃಶ್ಚಿಕ ರಾಶಿ : ಇಂದು ತಂದೆ, ತಾಯಿಯರ ಜೊತೆ ಬಹಳ ದಿನಗಳ ಅನಂತರ ಕಾಲ ಕಳೆಯುವ ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರವಾಗಿದೆ. ಇಂದಿನ ವ್ಯಾಪಾರವನ್ನು ಬಹಳ ಚುರುಕಿನಿಂದ ಮಾಡುವಿರಿ. ನಿಮ್ಮ‌ ನಿರ್ಧಾರಗಳನ್ನು ಬೇರೆ ಯಾರಾದರೂ ಬದಲಿಸಬಹುದು. ಇದು ನಿಮ್ಮ ಅಪಕ್ವತೆಯನ್ನು ತಿಳಿಸಿಬಹುದು. ಉದ್ಯಮದಲ್ಲಿ ಚಿಂತಿತ ಲಾಭ ಕಾಣದೇ ಮನಸ್ಸು ಕುಗ್ಗಬಹುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಇಂದಿನ ಮಾನಸಿಕ ಸ್ಥಿತಿಯನ್ನು ಯಾರ ಬಳಿಯಾದರೂ ಹೇಳಿ ನೆಮ್ಮದಿ ತಂದುಕೊಳ್ಳುವಿರಿ. ಪರೀಕ್ಷೆಗೆ ಬೇಕಾದ ಸಿದ್ಧತೆಯನ್ನು ನಡೆಸಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ