AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಇದುವರೆಗೆ ಮುರಿಯಲಾಗದ ದಾಖಲೆಗಳಿವು

T20 World Cup History: 2026ರ ಟಿ20 ವಿಶ್ವಕಪ್ ಸಿದ್ಧವಾಗುತ್ತಿದ್ದಂತೆ, ಹಿಂದಿನ 9 ಆವೃತ್ತಿಗಳ ಇತಿಹಾಸದತ್ತ ನೋಡೋಣ. ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಲಾ ಎರಡು ಬಾರಿ ಚಾಂಪಿಯನ್ ಆಗಿವೆ. ಶ್ರೀಲಂಕಾ ಅತ್ಯಧಿಕ ತಂಡದ ಮೊತ್ತ, ನೆದರ್ಲ್ಯಾಂಡ್ಸ್ ಕಡಿಮೆ ಮೊತ್ತದ ದಾಖಲೆ ಹೊಂದಿವೆ. ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, ಯುವರಾಜ್ ವೇಗದ ಅರ್ಧಶತಕ, ಕ್ರಿಸ್ ಗೇಲ್ ಅತಿ ಹೆಚ್ಚು ಶತಕ ಬಾರಿಸಿದ್ದಾರೆ. ಈ ಕುತೂಹಲಕಾರಿ ದಾಖಲೆಗಳು ಟೂರ್ನಿಯ ವೈಭವವನ್ನು ಹೆಚ್ಚಿಸಿವೆ.

ಪೃಥ್ವಿಶಂಕರ
|

Updated on: Feb 05, 2026 | 4:35 PM

Share
2026 ರ ಟಿ20 ವಿಶ್ವಕಪ್ ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. 2007 ರಿಂದ ಆರಂಭವಾದ ಈ ಟೂರ್ನಿ ಇದುವರೆಗೆ 9 ಆವೃತ್ತಿಗಳನ್ನು ಕಂಡಿದ್ದು, 10ನೇ ಆವೃತ್ತಿಗೆ ಸಜ್ಜಾಗಿದೆ. ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ ಕೆಲವು ಅಚ್ಚರಿಯ ಸಂಗತಿಗಳು ನಡೆದಿವೆ. ಹಾಗೆಯೇ ಈ 9 ಆವೃತ್ತಿಗಳಲ್ಲಿ ನಿಮಗೆ ತಿಳಿದುಕೊಳ್ಳಲೇಬೇಕಾದ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.

1 / 8
ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳು; ಟಿ20 ವಿಶ್ವಕಪ್​ನಲ್ಲಿ ಮೂರು ತಂಡಗಳು ಮಾತ್ರ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಆ  ಮೂರು ತಂಡಗಳಲ್ಲಿ ಭಾರತ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸೇರಿವೆ. 2007ಮತ್ತು  2024 ರ ಭಾರತ ಪ್ರಶಸ್ತಿ ಎತ್ತಿ ಹಿಡಿದರೆ, 2012 ಮತ್ತು 2016 ರಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ, ಇಂಗ್ಲೆಂಡ್ 2010 ಮತ್ತು 2022 ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.

2 / 8
ಅಧಿಕ ಬಾರಿ ಫೈನಲ್ ಆಡಿದ ತಂಡಗಳು; ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ಮೂರು ಬಾರಿ ಟಿ20 ವಿಶ್ವಕಪ್​ ಫೈನಲ್‌ನಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಭಾರತ ಹಾಗೂ ಇಂಗ್ಲೆಂಡ್ 2 ಬಾರಿ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ಮತ್ತು ಶ್ರೀಲಂಕಾ ಒಂದು ಬಾರಿ ಟ್ರೋಫಿ ಎತ್ತಿವೆ.

3 / 8
ಇನ್ನಿಂಗ್ಸ್​ನಲ್ಲಿ ಅತ್ಯಧಿಕ ಮತ್ತು ಕಡಿಮೆ ಮೊತ್ತ; 2007 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕೀನ್ಯಾ ವಿರುದ್ಧ 260/6 ರನ್ ಗಳಿಸುವ ಮೂಲಕ ಶ್ರೀಲಂಕಾ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆಯನ್ನು ಹೊಂದಿದೆ. ಇತ್ತ2014 ರಲ್ಲಿ ಶ್ರೀಲಂಕಾ ವಿರುದ್ಧ 39 ರನ್‌ಗಳಿಗೆ ಆಲೌಟ್ ಆಗಿದ್ದ ನೆದರ್‌ಲ್ಯಾಂಡ್ಸ್ ಇದುವರೆಗಿನ ಅತ್ಯಂತ ಕಡಿಮೆ ಮೊತ್ತದ ಅನಗತ್ಯ ದಾಖಲೆಯನ್ನು ಹೊಂದಿದೆ. 2024 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡಾ ಕೂಡ ಇದೇ ಸ್ಕೋರ್‌ಗೆ ಆಲೌಟ್ ಆಗಿತ್ತು.

4 / 8
ಒಂದು ಆವೃತ್ತಿಯಲ್ಲಿ ಹೆಚ್ಚು ರನ್: ವಿರಾಟ್ ಕೊಹ್ಲಿ ಟೂರ್ನಿಯ ಇತಿಹಾಸದಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದು, 35 ಪಂದ್ಯಗಳಲ್ಲಿ 1,292 ರನ್‌ ಬಾರಿಸಿದ್ದಾರೆ. 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 319 ರನ್ ಬಾರಿಸಿದ ಕೊಹ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಟೂರ್ನಮೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು 50+ ಸ್ಕೋರ್‌ (15) ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ.

5 / 8
ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್; ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 2012 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 58 ಎಸೆತಗಳಲ್ಲಿ 123 ರನ್ ಬಾರಿಸಿ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.

6 / 8
ಅತ್ಯಧಿಕ ಶತಕಗಳು ಮತ್ತು ವೇಗದ ಅರ್ಧಶತಕ: 2 ಶತಕಗಳನ್ನು ಬಾರಿಸಿರುವ ಕ್ರಿಸ್ ಗೇಲ್ ಅತ್ಯಧಿಕ ಶತಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 2007 ರಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಯುವರಾಜ್ ಸಿಂಗ್ ಇಲ್ಲಿಯವರೆಗಿನ ವೇಗದ ಅರ್ಧಶತಕದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

7 / 8
ಅತ್ಯಧಿಕ ಹ್ಯಾಟ್ರಿಕ್: ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಟೂರ್ನಮೆಂಟ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಹ್ಯಾಟ್ರಿಕ್ ಪಡೆದ ಏಕೈಕ ಆಟಗಾರನಾಗಿದ್ದು, ಅವರು 2024 ರ ಆವೃತ್ತಿಯಲ್ಲಿ ಎರಡೂ ಬಾರಿ ಈ ಸಾಧನೆ ಮಾಡಿದ್ದರು.

8 / 8
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ

ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!

ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್

ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ

ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ

‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್

Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು

ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ

ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್