ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ವೃದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಮಧ್ಯಾಹ್ನ 01:57 ರಿಂದ 03:28, ಯಮಘಂಡ ಕಾಲ ಬೆಳಿಗ್ಗೆ 06:23 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24 ರಿಂದ ಮಧ್ಯಾಹ್ನ 10:55ರ ವರೆಗೆ.
ಸಿಂಹ ರಾಶಿ : ನಿಮ್ಮನ್ನು ನೀವು ಇನ್ನೊಬ್ಬರಿಗೆ ಸಾಕ್ಷಿಯಾಗಿ ತೋರಿಸಬೇಕಿಲ್ಲ. ನಂಬಿಕೆ ಇದ್ದವರು ಇರುತ್ತಾರೆ. ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು. ಉದ್ಯೋಗವನ್ನು ಬದಲಿಸಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಡಲು ನಿಮಗೆ ಇಂದು ಸುಸಂದರ್ಭ. ಬಹಳ ಶ್ರಮದಿಂದ ಪಡೆಯಲು ಹೊರಟ ಭೂಮಿಯು ಕೈ ತಪ್ಪಬಹುದು. ಬೇಸರಗೊಳ್ಳದೇ ಮುಂದಿನ ಯೋಜನೆಯನ್ನು ರೂಪಿಸಿಕೊಳ್ಳಿ. ಪ್ರೀತಿಯನ್ನು ನೀವು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ. ಬೇಗ ಮುಗಿಯಬಹುದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿ. ಸಹೋದರನ ಆರೋಗ್ಯವು ನಿಮ್ಮನ್ನು ಕುಗ್ಗಿಸಬಹುದು. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಸೌಕರ್ಯಗಳಿಂದ ನಿಮಗೆ ಅಹಂಕಾರ ಬರಬಹುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಕನ್ಯಾ ರಾಶಿ : ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ದುಬಾರಿ ವಸ್ತುಗಳನ್ನು ಖರೀದಿಸಬೇಕಾದರೂ ಅದನ್ನು ಮುಂದೂಡುವಿರಿ. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು. ನೀವು ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳಬೇಕಾಗಬಹುದು. ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ಅನಿರೀಕ್ಷಿತ ಆರ್ಥಿಕ ನೆರವು ನಿಮಗೆ ಆಗಲಿದೆ. ನಿಮ್ಮ ಸ್ಥಾನಕ್ಕಾಗಿ ಮತ್ಯಾರನ್ನೋ ಕೆಳಗಿಳಿಸುವ ಹುನ್ನಾರ ನಡೆಸುವಿರಿ. ನಿಮ್ಮ ಬಂಧುಗಳನ್ನು ನೀವು ಬಹಳ ಎಚ್ಚರಿಕೆಯಿಂದ ಕರೆದುಕೊಂಡು ಹೋಗಬೇಕಾದೀತು. ನಿಮ್ಮ ಪ್ರತಿ ಮಾತೂ ತೂಕಕ್ಕೆ ಹೋಗಬಹುದು. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಹೊಂದಾಣಿಕೆಯನ್ನು ಸುಲಭದಲ್ಲಿ ಮಾಡಿಕೊಳ್ಳುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು.
ತುಲಾ ರಾಶಿ : ಸಣ್ಣ ಕಾರ್ಯಗಳಿಗೆ ಇಂದು ಹೆಚ್ಚು ಸಮಯ ಬೇಕಾಗುವುದು. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಇಂದಿನ ಕಾರ್ಯದ ಗುರಿಯನ್ನು ನೀವು ಸಹೋದ್ಯೋಗಿಗಳ ಸಹಕಾರದಿಂದ ಮಾಡುವಿರಿ. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗಲಿದ್ದು ಮನೆಯಲ್ಲಿ ಚರ್ಚೆಗಳು ನಡೆಯಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಇನ್ನೊಬ್ಬರ ಮಾತಿನಿಂದ ಯಾರನ್ನೂ ಅಳೆಯುವುದು ಬೇಡ. ಕೆಲವರ ಮಾತಿನಿಂದ ಮನಸ್ಸಿಗೆ ಕಷ್ಟವಾಗುವುದು. ನಿಮ್ಮದೇ ಆದ ಸಂಸ್ಥೆಯನ್ನು ಹುಟ್ಟು ಹಾಕಲು ಪ್ರಯತ್ನಿಸುವಿರಿ. ಆಯಾಸದಿಂದ ನೀವು ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ಸಿಡಿಮಿಡಿಗೊಳ್ಳುವಿರಿ. ಸಂಗಾತಿಯು ನಿಮ್ಮನ್ನು ಸಮಾಧಾನ ಮಾಡಬಹುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಉದ್ಯೋಗದಲ್ಲಿ ಕೆಲವನ್ನು ಪಾಲಿಸುವುದು ಅನಿವಾರ್ಯವಾಗುವುದು. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು. ನಿಮ್ಮ ಘನತೆಗೆ ಧಕ್ಕೆ ಬರುವುದು.
ವೃಶ್ಚಿಕ ರಾಶಿ : ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳುವುದು ಸಾಧ್ಯವಾಗದು. ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗಲಿದೆ. ಇದು ನಿಮ್ಮ ಇಂದಿನ ಖುಷಿಯ ಸಂಗತಿಯೂ ಹೌದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಿ. ನಿಂತ ಕಾರ್ಯವನ್ನು ಬಂಧುಗಳ ಸಹಕಾರದಿಂದ ಮುನ್ನಡೆಸುವಿರಿ. ನಿಮ್ಮಿಂದ ಆಗದ ಕೆಲಸವನ್ನು ಮತ್ತೊಬ್ಬರು ಮಾಡಿ ಮುಗಿಸುವರು. ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಳ್ಳಬೇಡಿ. ಸುಮ್ಮನೇ ಸಮಯವು ವ್ಯರ್ಥವಾಗುತ್ತಿದೆ ಎಂದನಿಸಬಹುದು. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಿಕೊಡುವುದು ಉತ್ತಮ. ಹಿರಿಯರ ಆಶೀರ್ವಾದದಿಂದ ಉತ್ಸಾಹವಿರಲಿದೆ.