Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 27ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಮಾಡಬೇಕು ಅಂದುಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ನೀಡುವುದಕ್ಕೆ ಈ ದಿನ ಸಾಧ್ಯವಾಗುವುದಿಲ್ಲ. ಇತರರ ನಿರೀಕ್ಷೆಗಳಿಗೆ ಮತ್ತು ಅಗತ್ಯಗಳಿಗೆ ಹೇಗೆ ಕೆಲಸ ಮಾಡುವುದು ಅನ್ನೋದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ. ನಿಮ್ಮಲ್ಲಿ ಕೆಲವರು ಈಗಾಗಲೇ ಮಾಡಿರುವಂತಹ ಉಳಿತಾಯ ಅಥವಾ ಬೇರೆ ಎಲ್ಲಾದರೂ ಮಾಡಿರುವಂತಹ ಹೂಡಿಕೆಯನ್ನು ತೆಗೆದು, ಒಂದು ಕಡೆ ಶಾಶ್ವತವಾದ ಆದಾಯ ಬರುವಂಥಲ್ಲಿ ಹಣ ಹಾಕುವುದಕ್ಕೆ ಯೋಚನೆ ಮಾಡಲಿದ್ದೀರಿ. ಕುಟುಂಬ ಸದಸ್ಯರ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈಗಾಗಲೇ ಪ್ರಯತ್ನಪಟ್ಟಿದ್ದೀರಿ ಎಂದಾದರೆ ಅದಕ್ಕೆ ಸಂಬಂಧಪಟ್ಟಂತೆ ಶುಭ ಸುದ್ದಿಯನ್ನು ಕೇಳುವ ಯೋಗ ಈ ದಿನ ನಿಮಗೆ ಇದೆ. ಯಾವುದೋ ಹಳೆ ವಿಚಾರದಲ್ಲಿ ನಿಮ್ಮ ಮನಸ್ಸು ಕಹಿಯಾಗಿದ್ದರೆ ಆ ವಿಚಾರವನ್ನು ಈ ದಿನ ಪದೇಪದೇ ಚರ್ಚಿಸಲು ಹೋಗಬೇಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಬ್ಬ ವ್ಯಕ್ತಿ ನಿಮಗೆ ತಗುಲಿಕೊಂಡು ಇಡೀ ದಿನ ವ್ಯರ್ಥವಾಗುವಂತೆ ಮಾಡಬಹುದು ಎಚ್ಚರಿಕೆ ಇರಲಿ. ಒಂದು ವೇಳೆ ಅಂತಹವರು ಯಾರಾದರೂ ನಿಮಗೆ ತಗುಲಿಕೊಂಡಲ್ಲಿ ಆರಂಭದಲ್ಲೇ ಅವರೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿ, ಅವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಸರಕಾರಿ ಕೆಲಸಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಈ ದಿನ ಒಂದಿಷ್ಟು ಒತ್ತಡದ ಅಥವಾ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ನೆಲದ ಮೇಲೆ ನೀರು ಅಥವಾ ಜಾರುವಂಥ ವಸ್ತುಗಳು ಬಿದ್ದಿವೆಯೇ ಎಂಬುದನ್ನು ಸರಿಯಾಗಿ ನೋಡಿಕೊಂಡು ಓಡಾಡುವುದು ಮುಖ್ಯವಾಗುತ್ತದೆ. ಏಕೆಂದರೆ ಇದೇ ಕಾರಣದಿಂದ ಸಣ್ಣ ಪ್ರಮಾಣದಲ್ಲಿ ಆದರೂ ಪೆಟ್ಟು ಮಾಡಿಕೊಳ್ಳುವಂತಹ ಸಾಧ್ಯತೆಗಳು ಇವೆ. ಈ ದಿನ ಕಪ್ಪು ಬಟ್ಟೆಯನ್ನು ಧರಿಸದಿರುವುದು ಉತ್ತಮ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಮನೆಯ ಒಳಗಿನ ಕೆಲಸವೇ ಇರಬಹುದು ಅಥವಾ ಹೊರಗಿನ ಕೆಲಸವೇ ಇರಬಹುದು ತುಂಬಾ ಅಚ್ಚುಕಟ್ಟಾಗಿ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈ ದಿನ ಸಾಕುಪ್ರಾಣಿಗಳನ್ನು ಮನೆಗೆ ತರುವಂತಹ ಯೋಗ ಇದೆ. ಹೊಸ ಬಟ್ಟೆಗಳನ್ನು, ಅದರಲ್ಲೂ ಬ್ರಾಂಡೆಡ್ ಬಟ್ಟೆಗಳನ್ನು ಖರೀದಿ ಮಾಡುವಂತಹ ಸಾಧ್ಯತೆಗಳು ಸಹ ಇವೆ. ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಾದವರು ಅಥವಾ ಆಪ್ತ ಸ್ನೇಹಿತರು ಎನಿಸಿಕೊಂಡವರ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಪಬ್ ರೆಸ್ಟೋರೆಂಟ್ ಇಂತಹ ಕಡೆಗೆ ತೆರಳಿ ಒಟ್ಟಿಗೆ ಊಟ, ತಿಂಡಿಯನ್ನು ಮಾಡಲಿದ್ದೀರಿ. ಮನೆಗೆ ಗ್ಯಾಜೆಟ್ ಅಥವಾ ದೊಡ್ಡ ಅಳತೆಯ ಟಿವಿಯನ್ನು ಅಥವಾ ಹೋಮ್ ಥಿಯೇಟರ್ ಅನ್ನು ಖರೀದಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ದಿನ ಒಂದಿಲ್ಲೊಂದು ಕಾರಣಕ್ಕೆ ಬಹಳ ಬಿಜಿ ಇರುತ್ತೀರಿ. ನಿಮ್ಮಲ್ಲಿ ಕೆಲವರಿಗೆ ಪ್ರಯಾಣದ ಯೋಗಗಳಿವೆ. ಬಹಳ ಸಮಯದಿಂದ ನೀವು ತೆರಳಬೇಕು ಎಂದುಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗುವಂಥ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಕಾರು ಬಳಸುವಂಥವರು ಸರ್ವೀಸ್ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸಣ್ಣ- ಪುಟ್ಟ ಸಮಸ್ಯೆಗಳಷ್ಟೇ, ಆ ಮೇಲೆ ಮಾಡಿಸಿಕೊಂಡರಾಯಿತು ಎಂದುಕೊಂಡು ಏನಾದರೂ ನಿರ್ಲಕ್ಷ್ಯ ಮಾಡಿದಲ್ಲಿ ಆ ನಂತರ ಪರಿತಪಿಸುವಂತಾಗುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ಆಗುವ ಸೂಚನೆಗಳು ದೊರೆಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನೀವು ನಿಮ್ಮ ಪಾಡಿಗೆ ಅಂತ ಇದ್ದರೂ ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಕೆಲವು ಖರ್ಚುಗಳು ಮೈ ಮೇಲೆ ಬೀಳಲಿದ್ದು, ಇದರಿಂದ ಬಹಳ ಬೇಸರ ಕಾಡಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಊಟ- ತಿಂಡಿ ವಿಚಾರದಲ್ಲಿ ಬಹಳ ತೃಪ್ತಿ ಸಿಗಲಿದೆ. ನಿಮಗೆ ಬಹಳ ಇಷ್ಟವಾಗುವಂಥವರು, ಮನಸಿಗೆ ಒಪ್ಪುವಂಥವರ ಜತೆಗೆ ದಿನ ಕಳೆಯಲಿದ್ದೀರಿ. ಮದುವೆ ವಯಸ್ಸಿನಲ್ಲಿದ್ದು, ಸೂಕ್ತ ಸಂಬಂಧಗಳ ಹುಡುಕಾಟದಲ್ಲಿ ಇರುವಂಥವರಿಗೆ ಮನಸ್ಸು ಒಪ್ಪುವಂಥ ವಧು/ವರ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಕೃಷಿ ವೃತ್ತಿಯನ್ನು ಮಾಡುತ್ತಿರುವವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಮೂಡಲಿದೆ. ಈಗಾಗಲೇ ಈ ಕುರಿತು ಹೆಜ್ಜೆ ಇಟ್ಟಿದ್ದಲ್ಲಿ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಹಣಕಾಸಿಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಪ್ರಭಾವಿಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಶ್ಯೂರಿಟಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ದೊರೆಯಲಿದ್ದು, ಮನಸ್ಸಿಗೆ ಸಮಾಧಾನ ದೊರೆಯಲಿದೆ. ಇದೇ ಮೊದಲ ಬಾರಿಗೆ ಎಂದು ಪ್ರಯತ್ನ ಪಟ್ಟಂಥ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ದಿನ ಒಂದು ರೀತಿಯಲ್ಲಿ ಸಮಾಧಾನ ಇರಲಿದೆ. ನಿಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದವರು ತಾವಾಗಿಯೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ. ಎಷ್ಟು ಸಮಯ ಹಿಡಿಸುತ್ತದೋ ಹಾಗೂ ಎಷ್ಟು ಕಷ್ಟ ಆಗುತ್ತದೋ ಎಂದುಕೊಂಡಿರುವ ಕೆಲಸವೊಂದು ಸುಲಭವಾಗಿ ಮುಗಿಯಲಿದೆ ಎಂಬ ಸುಳಿವು ದೊರೆಯಲಿದೆ. ಹೋಟೆಲ್ ಉದ್ಯಮದಲ್ಲಿ ಇರುವಂಥವರಿಗೆ ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವಂಥ ಅವಕಾಶಗಳಿವೆ. ಬಹಳ ವರ್ಷಗಳ ನಂತರ ನಿಮ್ಮ ಮೆಚ್ಚಿನ ಸ್ನೇಹಿತ ಅಥವಾ ಸ್ನೇಹಿತೆಯರು ಭೇಟಿಯಾಗಿ, ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ನೀವೇನಾದರೂ ಅಸ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಒಂದೇ ಸಲಕ್ಕೆ ಹಲವು ಗ್ರಾಹಕರು ಬರಲಿದ್ದಾರೆ. ನಿಮ್ಮ ಗಮನದಲ್ಲಿ ಇರಬೇಕಾದ ಸಂಗತಿ ಏನೆಂದರೆ, ಹಣಕಾಸಿನ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ಮಾಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮಗೆ ಸಂಬಂಧಪಡದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕುವುದಕ್ಕೆ ಹೋಗಬೇಡಿ. ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಅದು ಉಲ್ಬಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಅಗತ್ಯ ಕಂಡುಬಂದಲ್ಲಿ ಸೂಕ್ತ ವೈದ್ಯರ ಬಳಿ ಔಷಧೋಪಚಾರ ಪಡೆದುಕೊಳ್ಳುವುದು ಒಳ್ಳೆಯದು. ಈ ಹಿಂದೆ ಬಹಳ ಚರ್ಚೆಗೆ ಗುರಿಯಾದ ನಿಮ್ಮ ವೈಯಕ್ತಿಕ ವಿಚಾರವೊಂದು ಮತ್ತೆ ಮುನ್ನೆಲೆಗೆ ಬರಲಿದೆ. ಸಾಧ್ಯವಾದಷ್ಟೂ ಡಿಪ್ಲೊಮಾಟಿಕ್ ಆಗಿ ಮಾತನಾಡಿ, ಅಭಿಪ್ರಾಯ ಭೇದಗಳು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ದೂರದ ಊರುಗಳಲ್ಲಿ ಅವಕಾಶಗಳು ಇದೆ ಎಂಬ ವಿಷಯ ತಿಳಿದು, ತಕ್ಷಣಕ್ಕೆ ಹೊರಟು ಬಿಡಬೇಡಿ. ಅಲ್ಲಿಗೆ ಹೋದಲ್ಲಿ ನೀವು ಅಂದುಕೊಂಡಂತೆ ಕೆಲಸ ಮುಗಿಯುತ್ತದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಮುಖ್ಯ. ಈ ದಿನ ನಿಮ್ಮ ರೆಸ್ಯೂಮೆ ಸಿದ್ಧ ಮಾಡಬೇಕು ಎಂದುಕೊಂಡಲ್ಲಿ ಅದನ್ನು ನೀವು ಅಂದುಕೊಂಡಂತೆ ಮಾಡಲಾಗುವುದಿಲ್ಲ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ಸದ್ಯಕ್ಕೆ ಎದುರಿಸುತ್ತಿರುವ ಹಲವು ಸವಾಲುಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ಸಿದ್ಧವಾಗಲಿದೆ. ನಿಮ್ಮ ಬಗ್ಗೆ ಪ್ರೀತಿ, ಕಾಳಜಿ ಹಾಗೂ ಅಕ್ಕರೆ ಇರುವಂಥವರು ನೆರವು ನೀಡುವುದಕ್ಕೆ ಮುಂದೆ ಬರಲಿದ್ದಾರೆ. ಬಹಳ ಸಮಯದ ಹಿಂದೆ ನೀವು ನಿಲ್ಲಿಸಿದ್ದ ಕೆಲಸವೊಂದು ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಅಥವಾ ನೀವಾಗಿಯೇ ಇನ್ನು ಸಾಕು ಎಂದುಕೊಂಡು ಮಾಡುವುದಕ್ಕೆ ನಿಲ್ಲಿಸಿದ್ದ ಕೆಲಸವೊಂದನ್ನು ಮತ್ತೆ ಮುಂದುವರಿಸುತ್ತೀರಾ ಎಂದು ನಿಮ್ಮ ಬಳಿ ಕೇಳುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯ, ಶಿಕ್ಷಣದ ಸಲುವಾಗಿ ಹಣವನ್ನು ಉಳಿಸುವುದಕ್ಕೆ ಕುಟುಂಬದಲ್ಲಿ ಗಂಭೀರವಾಗಿ ಚರ್ಚೆಗಳು ನಡೆಯಲಿವೆ. ಗೇಟೆಡ್ ಕಮ್ಯುನಿಟಿಯಲ್ಲಿ ಸೈಟಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ನಿಮ್ಮ ಮನಸ್ಸಿಗೆ ಒಪ್ಪುವಂಥ ಸ್ಥಳ ದೊರೆಯುವ ಅವಕಾಶಗಳು ಈ ದಿನ ಹೆಚ್ಚಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ದಿನ ಪುಷ್ಕಳವಾದ ಭೋಜನ- ರುಚಿಕಟ್ಟಾದ ತಿಂಡಿ- ಖಾದ್ಯಗಳನ್ನು ಸವಿಯುವಂಥ ಯೋಗ ಇದೆ. ಬಂಧುಗಳ ನಿಮ್ಮ ಮನೆಗೆ ಬರಬಹುದು ಅಥವಾ ನೀವೇ ಅವರ ಮನೆಗೆ ಹೋಗುವಂಥ ಸಾಧ್ಯತೆಗಳು ಇವೆ. ನಿಮ್ಮ ಬಹುದಿನದ ಯೋಜನೆಗೆ ಸೂಕ್ತ ವ್ಯಕ್ತಿ, ಅಥವಾ ವೇದಿಕೆ ದೊರೆಯಲಿದೆ. ಇನ್ನು ನೀವು ಸಾಲ ಮಾಡಿಕೊಂಡಿದ್ದು, ಅದನ್ನು ವಾಪಸ್ ಮಾಡಬೇಕು ಎಂದುಕೊಂಡು, ಆ ಬಗ್ಗೆ ಗೊಂದಲ ಇಲ್ಲಿ ತನಕ ಕಾಡುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಸ್ವಂತ ವ್ಯವಹಾರ, ವ್ಯಾಪಾರ ಮಾಡುತ್ತಿರುವವರಿಗೆ ಅದರ ವಿಸ್ತರಣೆಗೆ ಗೆಳೆಯರು, ಸಂಬಂಧಿಗಳು ಸಹಾಯ ಮಾಡುವುದಕ್ಕೆ ಮುಂದೆ ಬರಲಿದ್ದಾರೆ. ಇನ್ನು ಕೃಷಿಕರಾಗಿದ್ದಲ್ಲಿ ಗದ್ದೆ ಜಮೀನು ಖರೀದಿ ಮಾಡುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇದಕ್ಕಾಗಿ ಸ್ವಲ್ಪ ಪ್ರಯತ್ನವನ್ನು ಪಟ್ಟರೂ ನಿಮ್ಮ ಪ್ರಯತ್ನವು ಯಶಸ್ಸು ಕಾಣುವ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ