Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 1ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 1ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 1ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಗೌರವ, ಕೀರ್ತಿ, ಪ್ರತಿಷ್ಠೆ, ಮಾನ- ಸಮ್ಮಾನ ಎಲ್ಲವೂ ದೊರೆಯುವಂಧ ಅವಕಾಶಗಳು ಈ ದಿನ ಹೆಚ್ಚಿವೆ. ಪಿ.ಜಿ.ಗಳನ್ನು ನಡೆಸುತ್ತಿರುವವರಿಗೆ ಆದಾಯದವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ದಾರಿಗಳು ತೆರೆದುಕೊಳ್ಳಲಿವೆ. ನಿಮ್ಮಲ್ಲಿ ಯಾರು ಸೈಟು ಅಥವಾ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದೀರಿ, ಅಂಥವರಿಗೆ ಅಂದುಕೊಂಡ ಮೊತ್ತಕ್ಕೆ ಖರೀದಿಗಾಗಿ ಕೇಳಿಕೊಂಡು, ಗ್ರಾಹಕರು ಬರುವ ಸಾಧ್ಯತೆ ಇದೆ. ಶುಭ ಕಾರ್ಯಗಳಲ್ಲಿ ಭಾಗೀ ಆಗಲಿದ್ದೀರಿ. ಸಂಬಂಧಿಕರು, ಸ್ನೇಹಿತರು ನಿಮ್ಮನ್ನು ಔತಣ ಕೂಟಗಳಿಗೆ ಅಥವಾ ಗೆಟ್ ಟು ಗೆದರ್ ಗೆ ಅಂತ ಆಹ್ವಾನಿಸಬಹುದು. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಈ ದಿನ ಅದಕ್ಕಾಗಿ ಪ್ರಯತ್ನಿಸಿದಲ್ಲಿ ವಸೂಲಾಗುವಂಥ ಸಾಧ್ಯತೆ ಹೆಚ್ಚಿದೆ. ಸಸಿಗಳನ್ನು ಬೆಳೆದು, ಮಾರಾಟ ಮಾಡುವಂಥ ನರ್ಸರಿಗಳನ್ನು ನಡೆಸುತ್ತಿರುವವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮಗೆ ಇರುವಂಥ ಟಾರ್ಗೆಟ್ ತಲುಪುವುದಕ್ಕೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿರೀಕ್ಷೆ ಮಾಡಿದಂಥ ಬೆಂಬಲ ಸಿಗುವುದು ಕಷ್ಟವಾಗುತ್ತದೆ. ವೃತ್ತಿನಿರತರು ಅಗತ್ಯ ಸಲಕರಣೆಗಳನ್ನು ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಿ, ಮೊತ್ತವನ್ನು ಇಎಂಐ ಆಗಿ ಕನ್ವರ್ಟ್ ಮಾಡಿಸಿಕೊಳ್ಳುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಶುಭ ಕಾರ್ಯಗಳಿಗಾಗಿ ಸಹಾಯ ಕೇಳಿಕೊಂಡು ಕೆಲವರು ನಿಮ್ಮ ಬಳಿ ಬರಲಿದ್ದಾರೆ. ನಿಮ್ಮ ತಂದೆ- ತಾಯಿಯ ಒತ್ತಾಯದ ಕಾರಣಕ್ಕೋ ಅಥವಾ ಭಾವನಾತ್ಮಕವಾಗಿ ನಿಮಗೇ ಅನಿಸುತ್ತದೆ ಎಂಬ ಕಾರಣಕ್ಕೋ ಅವರಿಗೆ ನೆರವು ನೀಡುವುದಕ್ಕೆ ಮುಂದಾಗಲಿದ್ದೀರಿ. ಕೆಲವು ನಿರ್ದಿಷ್ಟ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವಂತೆ ನಿಮಗೆ ವೈದ್ಯರು ಸಲಹೆಯನ್ನು ಮಾಡಲಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹೋಟೆಲ್ ಉದ್ಯಮಿಗಳಿಗೆ, ಕಲ್ಲು ಕ್ವಾರಿ ವ್ಯವಹಾರ ಮಾಡುತ್ತಿರುವವರಿಗೆ ಹಾಗೂ ಲೇವಾ ದೇವಿ ವ್ಯವಹಾರ ಮಾಡುತ್ತಿರುವವರಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಇಷ್ಟು ಸಮಯ ನೀವು ಗಂಭೀರವಾಗಿ ವ್ಯವಹಾರ- ವ್ಯಾಪಾರ ಮಾಡುತ್ತಿರಲಿಲ್ಲ ಎಂದಾದರೆ ಇನ್ನು ಮುಂದೆ ನಿಮ್ಮಲ್ಲೊಂದು ಗಾಂಭೀರ್ಯ ಮೂಡಲಿದೆ. ಅಥವಾ ಪರವಾನಗಿ, ಅನುಮತಿ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಿರಿ ಎಂದಾದರೆ ಅವುಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದೀರಿ. ಪ್ರಭಾವಿ ವ್ಯಕ್ತಿಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಇನ್ನು ಸಂಬಂಧಿಕರು ಸಹ ಈ ವ್ಯವಹಾರದಲ್ಲಿ ನಿಮ್ಮ ಜತೆಗೆ ಕೈ ಜೋಡಿಸುವ ಸಾಧ್ಯತೆಗಳಿವೆ. ಮೊದಮೊದಲಿಗೆ ಏನಾಗುತ್ತದೋ ಏನೋ ಎಂದು ಪ್ರತಿ ವಿಚಾರಕ್ಕೂ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಆತಂಕವು ದೂರವಾಗಲಿದೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಒಳ್ಳೆಯ ದಿನ ಇದಾಗಿರುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮಲ್ಲಿ ಕೆಲವರು ವಾಹನ ಖರೀದಿ ಮಾಡುವುದಕ್ಕೆ ಅಥವಾ ಮಕ್ಕಳ ಸಲುವಾಗಿ ಚಿನ್ನದ ಒಡವೆಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಕಂಡು ಬರುತ್ತಿದೆ. ಅದೇ ರೀತಿ ಪಿಎಫ್, ಆರ್ ಡಿ ಅಥವಾ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಇಟ್ಟಿರುವಂತಹ ಹಣವನ್ನು ತೆಗೆದು, ಆ ಹಣದಿಂದ ಬೇರೆ ವಸ್ತುಗಳನ್ನು ಕೊಳ್ಳುವುದಕ್ಕೆ ನಿರ್ಧಾರ ಮಾಡಬಹುದು. ಮತ್ತು ಇದೇ ವೇಳೆ ನಿಮ್ಮ ಸಂಗಾತಿ ಕೂಡ ತಮ್ಮಿಂದ ಒಂದಿಷ್ಟು ಮೊತ್ತವನ್ನು ಕೊಡಬಹುದು ಎಂಬುದಾಗಿ ಹೇಳಬಹುದು. ಸಾಲವೊಂದನ್ನು ನೀಡಿ ಬಹಳ ಸಮಯ ಆಯಿತು, ಅವರು ಆಗ- ಈಗ ಎಂದು ಸತಾಯಿಸುತ್ತಿದ್ದಾರೆ ಎಂದೇನಾದರೂ ಇದ್ದಲ್ಲಿ ಈ ದಿನ ಪ್ರಯತ್ನ ಪಟ್ಟರೆ ವಸೂಲಿ ಮಾಡುವಂಥ ಸಾಧ್ಯತೆ ಹೆಚ್ಚಿದೆ. ಆದರೆ ಗಟ್ಟಿಯಾಗಿ ಪ್ರಯತ್ನಿಸಿ ಮತ್ತು ನೀವು ಬಳಸುವ ಪದಗಳು ಸಹ ನಿಮಗೆ ಈ ಸಮಯಕ್ಕೆ ಹಣದ ಅಗತ್ಯ ಎಷ್ಟಿದೆ ಎಂಬುದನ್ನು ಎದುರಿನಲ್ಲಿ ಇರುವ ವ್ಯಕ್ತಿಗೆ ನಾಟುವಂತೆ ಮಾಡಲಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಬಳಿ ಇರುವ ವಸ್ತುವೊಂದಕ್ಕೆ ಅಥವಾ ಸ್ಥಳಕ್ಕೆ ಅಥವಾ ಮಾಹಿತಿಗೆ ದಿಢೀರ್ ಎಂದು ಬೇಡಿಕೆ ಸೃಷ್ಟಿ ಆಗಲಿದೆ. ಮೊದಮೊದಲಿಗೆ ಎಷ್ಟು ಮೊತ್ತ ಸಿಕ್ಕರೂ ಸಾಕು, ಅದನ್ನು ಕೊಟ್ಟು ಬಿಡುತ್ತೇನೆ ಎಂದು ನೀವೇನಾದರೂ ಆಲೋಚಿಸುತ್ತಿದ್ದಲ್ಲಿ ಈಗಿನ ಸನ್ನಿವೇಶದ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಯೋಜನೆಯನ್ನು ಸರಿಯಾಗಿ ರೂಪಿಸಿ. ನಿಮ್ಮಲ್ಲಿ ಕೆಲವರು ದೂರ ಪ್ರದೇಶಕ್ಕೆ ಶಾಶ್ವತವಾಗಿ ತೆರಳಬೇಕು ಎಂದು ಯೋಚಿಸುವ ಅವಕಾಶಗಳು ಸಹ ಇದೆ. ಇದೇ ಸಮಯಕ್ಕೆ ನಿಮ್ಮ ಆಸಕ್ತಿಯ ಅಥವಾ ನೀವು ಈಗ ಮಾಡುತ್ತಿರುವ ಕೆಲಸವೇ ದೂರ ಪ್ರದೇಶದಲ್ಲಿಯೂ ದೊರೆಯುತ್ತದೆ ಎಂಬ ಸುದ್ದಿ ನಿಮ್ಮ ಕಿವಿಗೂ ಬೀಳಬಹುದು. ಒಂದು ವೇಳೆ ಕುಟುಂಬ ಸದಸ್ಯರು ಯಾವುದಾದರೂ ಹರಕೆ ಹೊತ್ತುಕೊಂಡು, ಅದರ ಬಾಕಿ ಉಳಿಸಿದ್ದಾರಾ ಎಂಬ ಬಗ್ಗೆ ಒಮ್ಮೆ ಸರಿಯಾಗಿ ವಿಚಾರಿಸಿಕೊಳ್ಳಿ. ಮುಖ್ಯ ಕೆಲಸಗಳಿಗೆ ಅಡೆತಡೆಗಳು ಕಾಡುತ್ತಿದ್ದಲ್ಲಿ ಆ ಹರಕೆಯನ್ನು ತೀರಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಬೇರೆಯವರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟ ಪ್ರಾಜೆಕ್ಟ್ ಗಳನ್ನು ನೀವು ಮುನ್ನಡೆಸುವಂಥ ಸ್ಥಿತಿ ನಿರ್ಮಾಣ ಆಗಲಿದೆ. ಆರಂಭದಲ್ಲಿ ಇದರಿಂದ ನೀವು ವಿಚಲಿತರಾದಂತೆ ಕಂಡುಬಂದರೂ ದೀರ್ಘಾವಧಿಯಲ್ಲಿ ಇದರಿಂದ ಅನುಕೂಲವೇ ಆಗಲಿದೆ. ಕುಟುಂಬದ ಆಸ್ತಿ ಹಂಚಿಕೆ ವಿಚಾರದಲ್ಲಿ ಈ ತನಕ ಗೊಂದಲ, ವ್ಯಾಜ್ಯಗಳು ಏನಾದರೂ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಒಂದೋ ನೀವಾಗಿಯೇ ಸಂಧಾನಕ್ಕೆ ಮುಂದಾಗಬಹುದು. ಅಥವಾ ನಿಮ್ಮ ಎದುರು ಪಕ್ಷದವರು ಯಾರ ಮೂಲಕವಾದರೂ ರಾಜೀ ಮಾಡಿಕೊಳ್ಳುವುದಕ್ಕೆ ಮಾತುಕತೆಗೆ ಆಹ್ವಾನ ನೀಡಬಹುದು. ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧಗಳ ಹುಡುಕಾಟದಲ್ಲಿ ಇರುವಂಥವರಿಗೆ ಮನಸ್ಸಿಗೆ ಒಪ್ಪುವಂಥ ವಧು/ವರ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಕೆಲವು ವಿಷಯಗಳಲ್ಲಿ ನಿಮಗೆ ಈ ಹಿಂದೆ ಆದಂಥ ಕಹಿ ಅನುಭವಗಳನ್ನು ಮರೆತು, ಮುನ್ನಡೆಯುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮಲ್ಲಿ ಕೆಲವರಿಗೆ ಆರೋಗ್ಯ ಸ್ಥಿತಿ ಚಿಂತೆಗೆ ಕಾರಣ ಆಗುವಷ್ಟು ಹದಗೆಡುವಂಥ ಸನ್ನಿವೇಶ ಎದುರಾಗಬಹುದು. ವೈರಲ್ ಜ್ವರ, ಸುಸ್ತು, ವಾಂತಿ, ತಲೆ ಸುತ್ತು ಮೊದಲಾದ ಸಮಸ್ಯೆಗಳು ತೀವ್ರಗೊಳ್ಳುವ ಸಾಧ್ಯತೆಗಳಿವೆ. ದೂರಪ್ರಯಾಣ ಮಾಡಬೇಕು ಎಂದಿರುವವರು ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು, ಯೋಜನೆಯನ್ನು ಹಾಕಿಕೊಳ್ಳಿ. ಏಕೆಂದರೆ ಅರ್ಧ ದಾರಿಯ ತನಕ ತೆರಳಿ, ವಾಪಸ್ ಬರಬೇಕಾದ ಸ್ಥಿತಿ ಉದ್ಭವ ಆಗಬಹುದು. ಈ ಹಿಂದೆ ನೀವು ಹಣಕಾಸಿನ ವಿಚಾರಕ್ಕೋ ಅಥವಾ ಕೆಲಸ ಮಾಡಿಸಿಕೊಡುವುದಾಗಿ ಮಾತು ನೀಡಿ, ನೆರವು ಪಡೆದುಕೊಂಡಿದ್ದಂಥ ವ್ಯಕ್ತಿಗಳು ತಮಗೆ ಈಗ ನಿಮ್ಮ ಸಹಾಯದ ಅಗತ್ಯ ಇದೆ, ಅದನ್ನು ಮಾಡಿಕೊಡಿ ಎಂದು ಬರಬಹುದು. ಅಬ್ಬರದ ಪ್ರಚಾರದಲ್ಲಿ ಶುರು ಮಾಡಿದ್ದ ಕೆಲವು ಕೆಲಸಗಳು ನಿರೀಕ್ಷಿತ ಮಟ್ಟವನ್ನು ಮುಟ್ಟದ ಕಾರಣಕ್ಕೆ ಭಾರೀ ಮುಜುಗರ ಎದುರಿಸಬೇಕಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಆದಾಯ ಬರುವಂಥ ಯಾವುದೇ ಕೆಲಸ ಬಂದರೂ ಒಪ್ಪಿಕೊಂಡು ಬಿಡೋಣ ಎಂಬ ಮನಸ್ಥಿತಿ ನಿಮ್ಮದಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಂತೂ ಸ್ವಲ್ಪ ಮಟ್ಟಿಗಿನ ವೇತನ ಹೆಚ್ಚಳ ಸಿಕ್ಕರೂ ಸಾಕು, ಕೆಲಸದ ಬದಲಾವಣೆ ಮಾಡಿಯೇ ಬಿಡೋಣ ಎಂಬ ಆಲೋಚನೆಯಲ್ಲಿ ಈ ದಿನ ಇರಲಿದ್ದೀರಿ. ಆದರೆ ಇದನ್ನು ನೀವು ಬಾಯಿ ಬಿಟ್ಟು ಹೇಳುವುದಕ್ಕಾಗಿಲೀ ಅಥವಾ ತೋರಿಸಿಕೊಳ್ಳುವುದಾಗಲೀ ಮಾಡಬೇಡಿ. ಏಕೆಂದರೆ ನಿಮ್ಮ ಪರಿಣತಿಗೆ ಬೇಡಿಕೆ ಇರುವಂಥ ಸ್ಥಳದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮಲ್ಲಿ ಕೆಲವರು ಒಡವೆ- ವಸ್ತ್ರಗಳನ್ನು ಖರೀದಿ ಮಾಡುವಂಥ ಯೋಗ ಕಂಡುಬರುತ್ತಿದೆ. ಒಂದು ವೇಳೆ ನೀವೇನಾದರೂ ಮಾರ್ಕೆಟಿಂಗ್ ಅಥವಾ ಮಾರಾಟ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಾದರೆ ಟಾರ್ಗೆಟ್ ಅನ್ನು ಮುಂಚಿತವಾಗಿಯೇ ತಲುಪುವಂತಹ ಮಾರ್ಗೋಪಾಯಗಳು ಗೋಚರಿಸುತ್ತವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸಂಗಾತಿ ಅಥವಾ ಪ್ರೇಮಿಯ ಮಾತಿನಿಂದ ಮನಸ್ಸಿಗೆ ಬೇಸರ ಆಗುವಂಥ ಯೋಗ ನಿಮ್ಮ ಪಾಲಿಗೆ ಈ ದಿನ ಇದೆ. ನೀವು ಬಹಳ ಪ್ರೀತಿ- ಕಾಳಜಿ ಇಟ್ಟುಕೊಂಡು ನೀಡಿದ ಸಲಹೆ- ಸೂಚನೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಇದರಿಂದ ಮಾನಸಿಕವಾಗಿ ನೀವು ಕುಗ್ಗಿ ಹೋಗಲಿದ್ದೀರಿ. ಇನ್ನು ನೀವು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ಗಡುವಿನೊಳಗೆ ಮುಗಿಸುವುದು ಅಸಾಧ್ಯ ಎಂಬುದು ತಿಳಿದುಬರಲಿದೆ. ಇದನ್ನು ಸಂಬಂಧಪಟ್ಟವರಿಗೆ ತಿಳಿಸಿ, ಹೆಚ್ಚಿನ ಸಮಯ ನೀಡುವಂತೆ ಕೇಳಿಕೊಂಡರೂ ಅವರು ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಾಗಲೀ ಅಥವಾ ಅದಕ್ಕೆ ಹೂಂ ಎನ್ನುವ ಸನ್ನಿವೇಶದಲ್ಲಾಗಲೀ ಇರುವುದಿಲ್ಲ. ನಿಮ್ಮ ವಾಹನವೋ ಅಥವಾ ಜಮೀನು, ಮನೆಯದೋ ಕಾಗದ- ಪತ್ರ ಅಥವಾ ದಾಖಲಾತಿಗಳ ಪೈಕಿ ಪ್ರಮುಖವಾದವು ಕಣ್ಮರೆ ಆಗುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನಿಮಗೆ ಒತ್ತಡ ಹೆಚ್ಚಾಗಲಿದೆ.
ಲೇಖನ- ಎನ್.ಕೆ.ಸ್ವಾತಿ