AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರ ನಿಶ್ಚಯವಾಗಿದ್ದ ವಿವಾಹ ಕಾರಣಾಂತರಗಳಿಂದ ರದ್ದಾಗಬಹುದು

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 04 ಜುಲೈ​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ. ನಿಮಗೆ ಶುಭ ಅಥವಾ ಅಶುಭನಾ? ಇಂದಿನ ಭವಿಷ್ಯದಲ್ಲಿ ನೀವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Astrology: ಈ ರಾಶಿಯವರ ನಿಶ್ಚಯವಾಗಿದ್ದ ವಿವಾಹ ಕಾರಣಾಂತರಗಳಿಂದ ರದ್ದಾಗಬಹುದು
ಈ ರಾಶಿಯವರ ನಿಶ್ಚಯವಾಗಿದ್ದ ವಿವಾಹ ಕಾರಣಾಂತರಗಳಿಂದ ರದ್ದಾಗಬಹುದು
ಗಂಗಾಧರ​ ಬ. ಸಾಬೋಜಿ
| Edited By: |

Updated on:Jul 04, 2024 | 6:27 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜುಲೈ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 14:14 ರಿಂದ 15:51ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:10 ರಿಂದ ಬೆಳಿಗ್ಗೆ07:46ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 11:00ರ ವರೆಗೆ.

ಮೇಷ ರಾಶಿ :ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಸ್ಥಳದ ಕುರಿತೂ ಮಾಹಿತಿಯನ್ನು ಸಂಗ್ರಹಿಸಿ. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಇನ್ನೊಬ್ಬರ ವಿಮರ್ಶೆಯಲ್ಲಿ ಸಮಯ ಹೋಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಜಾಡ್ಯವಾದ ಮನಸ್ಸನ್ನು ಸರಿಮಾಡಿಕೊಳ್ಳಿ.

ವೃಷಭ ರಾಶಿ :ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ಬಹಳ ವರ್ಷಗಳ ಅನಂತರ ಅಸದ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಕಛೇರಿಯ ಕೆಲಸದಲ್ಲಿ ತೊಡಗಿಕೊಂಡು ವೈಯಕ್ತಿಕ ಕೆಲಸವು ಮರೆತುಹೋದೀತು. ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ. ಅಧಿಕಾರಿವರ್ಗದಿಂದ ನಿಮ್ಮ‌ ಮೇಲೆ ಒತ್ತಡ ಬರಬಹುದು. ನಿಮ್ಮ ಜನರು ಕಡೆಗಣಿಸುವ ಜನರೆದು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಾಡುವಿರಿ. ಕೆಟ್ಟ ಘಳಿಗೆಗಳು ನಿಮ್ಮ ತೀರ್ಮಾನವನ್ನು ಬದಲುಮಾಡಬಹುದು. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ.

ಮಿಥುನ ರಾಶಿ :ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕಲಹವು ಸಣ್ಣದೇ ಆಗಿರಬಹುದು ಆ‌ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ನಿಮ್ಮನ್ನೇ ನೀವು ವೈಭವೀಕರಿಸುವುದು ಚೆನ್ನಾಗಿ ಕಾಣಿಸದು. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು. ಸಂಗಾತಿಯ ವೇಗವನ್ನು ನಿಯಂತ್ರಿಸುವಿರಿ. ದೂರದ ಸಂಬಂಧಿಗಳ ಮನೆಯಲ್ಲಿ ಇಂದು ವಾಸ‌ಮಾಡುವಿರಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು.

ಕಟಕ ರಾಶಿ :ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಮನಸ್ತಾಪದಿಂದ ಒಳ್ಳೆಯ ಸಮಯ ಹಾಳಾಗಬಹುದು. ಮನಸ್ಸಿಗೆ ಸಮಾಧಾನವಾದೀತು. ವಿವಾಹ ನಿಶ್ಚಯವಾಗಿದ್ದು ಕಾರಣಾಂತರಗಳಿಂದ ರದ್ದಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯಾರಾದರೂ ಕುಮ್ಮಕ್ಕು ಕೊಡಬಹುದು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ತಾಳ್ಮೆಯಿಂದ ಕಾರ್ಯವನ್ನು ಮುನ್ನಡೆಸಿ. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ತುರ್ತಾದ ಕೆಲಸವನ್ನು ನಿಧಾನ‌ ಮಾಡುವಿರಿ.

Published On - 12:02 am, Thu, 4 July 24

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ