AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 4ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 4ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 4ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 04, 2025 | 12:15 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮನೆ ಕೆಲಸಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಮಕ್ಕಳ ಶಿಕ್ಷಣದ ಪ್ರಗತಿಗಾಗಿ ನೀವು ಕೆಲವು ತ್ಯಾಗ ಮಾಡಲಿಕ್ಕೆ ಮುಂದಾಗಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ ದೊರೆಯಲಿದೆ. ಹೂವು- ಹಣ್ಣಿನ ವ್ಯಾಪಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದ್ದು, ಹೊಸ ಆರ್ಡರ್ ಗಳು- ಹೊಸ ಗ್ರಾಹಕರು ದೊರೆಯಲಿದ್ದಾರೆ. ಆಸ್ತಮಾ- ಕಫ ಇಂಥ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಪರಿಸ್ಥಿತಿ ಉಲ್ಬಣ ಅಗುತ್ತದೆ. ಔಷಧದ ಪದ್ಧತಿಯಲ್ಲಿ ಅಥವಾ ವೈದ್ಯರನ್ನು ಬದಲಾವಣೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಸಲ ಆಲೋಚನೆ ಮಾಡಿ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಮನಸ್ಸಿಗೆ ಒಪ್ಪುವಂಥ ವಧು/ವರ ಸಿಗಲಿದ್ದಾರೆ. ದೊಡ್ಡ ಭರವಸೆ ನೀಡುವುದಕ್ಕೆ ಮುಂಚೆ ಅದನ್ನು ಪೂರೈಸುವುದಕ್ಕೆ ಸಾಧ್ಯವಾ ಎಂದು ಆಲೋಚಿಸಿ, ಆ ನಂತರ ಮುಂದಕ್ಕೆ ಹೆಜ್ಜೆ ಇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕವಾಗಿ ತುಂಬ ಕಠಿಣವಾದ ದಿನ ಇದಾಗಿರಲಿದೆ. ಬಹಳ ವರ್ಷಗಳಿಂದ ಬಾಂಧವ್ಯ ಇರುವ ವ್ಯಕ್ತಿ, ಸಂಘಟನೆ, ಸಂಸ್ಥೆಯಿಂದ ದೂರ ಆಗಬೇಕಾದ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ಮುಂದೆ ಏನು ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂಥ ಒತ್ತಡವೊಂದು ಮೇಲೆ ಬೀಳಲಿದೆ. ಮುಖ್ಯ ಕೆಲಸಗಳನ್ನು ಗಡುವಿನ ಒಳಗಾಗಿ ಮಾಡಿ ಮುಗಿಸುವುದು ಬಹಳ ಮುಖ್ಯ. ಮರೆವಿನ ಕಾರಣಕ್ಕೆ ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಅನುಭವಿಸುವಂತೆ ಆಗಲಿದೆ. ಮಾಂಸಾಹಾರ ಸೇವನೆ ಮಾಡುವಂಥವರು ದಿನದ ಮಟ್ಟಿಗೆ ದೂರ ಇರುವುದು ಉತ್ತಮ. ಇನ್ನು ಕೆಲವು ನಿರ್ದಿಷ್ಟ ಅಲರ್ಜಿಗಳು ಏನಾದರೂ ಇದ್ದಲ್ಲಿ ಅಂಥ ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲನೆ ಮಾಡಿ. ಕಲಾವಿದರಿಗೆ ದೂರದ ಊರುಗಳಿಂದ ಕಾರ್ಯಕ್ರಮಗಳಿಗೆ ಆಹ್ವಾನ ದೊರೆಯಲಿದೆ. ಭಾಗೀ ಆಗುವುದಾಗಿ ಮಾತು ನೀಡುವ ಮುನ್ನ ಸಾಧ್ಯಾಸಾಧ್ಯತೆಗಳನ್ನು ಆಲೋಚನೆ ಮಾಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ದೇಹದಲ್ಲಿನ ವಿಟಮಿನ್, ಹಿಮೋಗ್ಲೋಬಿನ್ ಇತರ ಮುಖ್ಯ ಅಂಶಗಳು ಸರಿಯಾದ ಪ್ರಮಾಣದಲ್ಲಿ ಇದೆಯೇ ಅಥವಾ ಕೊರತೆ ಇದೆಯಾ ಎಂದು ತಿಳಿದುಕೊಳ್ಳಲು ಕೆಲವು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದೀರಿ. ಬ್ಯಾಂಕ್ ಗಳಲ್ಲಿ ಕೆಲಸ ಮಾಡುವವರು ಈ ದಿನ ನಡೆಸುವ ಹಣಕಾಸು ವ್ಯವಹಾರಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಕುಟುಂಬ ಸದಸ್ಯರಿಂದ ಆಗುವ ಸಣ್ಣ- ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ, ಕೂಗಾಟ- ಕಿರುಚಾಟ ಮಾಡಲಿಕ್ಕೆ ಹೋಗಬೇಡಿ. ಸೆಕೆಂಡ್ ಹ್ಯಾಂಡ್ ಕಾರು ಅಥವಾ ಸ್ಕೂಟರ್ ಖರೀದಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ಕಂಡೀಷನ್ ನಲ್ಲಿ ಇರುವಂಥದ್ದೇ ದೊರೆಯುವ ಯೋಗ ಈ ದಿನ ಇದೆ. ನೀವು ಈಗಾಗಲೇ ಯಾರಿಗಾದರೂ ಸಾಲವನ್ನು ನೀಡಿದ್ದಲ್ಲಿ ಅದನ್ನು ವಸೂಲಿ ಮಾಡುವುದಕ್ಕೆ ದೃಢವಾದ ಧ್ವನಿಯಲ್ಲಿ ಹಿಂತಿರುಗಿಸುವಂತೆ ಕೇಳಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಹೊಸ ಬಟ್ಟೆ- ವಾಚ್, ಶೂ ಇಂಥವುಗಳ ಖರೀದಿ ಮಾಡಲಿದ್ದೀರಿ. ಪ್ರವಾಸಕ್ಕೆ ಅಂತಲೋ ಕಾರ್ಯಕ್ರಮ- ಸಮಾರಂಭಗಳಿಗೆ ಸಿದ್ಧತೆ ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ಇಷ್ಟಪಡುವ ವ್ಯಕ್ತಿ ಎದುರಿಗೆ ಪ್ರೇಮ ನಿವೇದನೆ ಮಾಡಲಿದ್ದೀರಿ. ನಿಮ್ಮ ಬಳಿ ರಹಸ್ಯ ಎಂದು ಇತರರು ಹೇಳಿದಂಥ ವಿಷಯಗಳನ್ನು ಯಾರ ಮುಂದೆಯೂ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಸ್ನೇಹಿತರಿಗೆ ನಿಮ್ಮ ಸಹಾಯದ ಅಗತ್ಯ ಬರಲಿದೆ. ನಿಮ್ಮ ಮೊಬೈಲ್ ಫೋನ್ ನಾಟ್ ರೀಚಬಲ್ ಆಗದಂತೆ ಸಾಧ್ಯವಾದಷ್ಟೂ ನೋಡಿಕೊಳ್ಳಿ. ಹೊಸದಾಗಿ ಉದ್ಯೋಗ ಜೀವನ ಆರಂಭಿಸಬೇಕು ಎಂದು ಇರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ ವ್ಯೂ ಬರುವಂಥ ಯೋಗ ಇದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲು ಬೇಕಾದಷ್ಟು ಸಮಯ ನಿಮಗೆ ದೊರೆಯದೆ ಹೋಗಬಹುದು. ಆದರೆ ಆತ್ಮವಿಶ್ವಾಸದಿಂದ ಇಂಟರ್ ವ್ಯೂ ಎದುರಿಸಿದಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ತುಂಬ ಒತ್ತಡದಲ್ಲಿಯೂ ಅದ್ಭುತವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ವೃತ್ತಿ ಅಥವಾ ವ್ಯವಹಾರದಲ್ಲಿ ಇರುವವರು ಜೊತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಬಹಳ ಸಮಯದಿಂದ ಒಂದು ಅವಕಾಶ ಎಂಬಂತೆ ಎದುರು ನೋಡುತ್ತಾ ಇದ್ದದ್ದು ಅದೀಗ ನಿಮ್ಮ ಕಡೆಗೆ ಬರುವಂಥ ಸುಳಿವು ದೊರೆಯಲಿದೆ. ಮಾನಸಿಕವಾಗಿ ಈ ದಿನ ಬಹಳ ಗಟ್ಟಿಯಾಗಿ ಇರಲಿದ್ದೀರಿ. ಇತರರಿಗೆ ಕಷ್ಟ ಎನಿಸಿದ ವಿಷಯಗಳನ್ನು ಸಹ ಅರ್ಥ ಮಾಡಿಕೊಳ್ಳುವಿರಿ. ಫ್ಲ್ಯಾಟ್ ಅಥವಾ ಗೇಟೆಡ್ ಕಮ್ಯುನಿಟಿಯಲ್ಲಿ ಸೈಟು ಖರೀದಿಗಾಗಿ ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಜೊತೆಗಿನ ಒಡನಾಟದಿಂದ ನಿಮ್ಮಲ್ಲಿಯೂ ಕೆಲವು ಬದಲಾವಣೆಗಳು ಆಗಲಿದ್ದು, ಮಾನಸಿಕವಾಗಿ ಒಂದು ಬಗೆಯ ಸಮಾಧಾನ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮಗೆ ಇಷ್ಟವಾದದ್ದನ್ನು ಖರೀದಿ ಮಾಡಿಬಿಡಬೇಕು ಎಂಬ ಚಡಪಡಿಕೆ ನಿಮ್ಮಲ್ಲಿ ಇರಲಿದೆ. ನಿಶ್ಚಿತವಾದ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನಗಳು ಗುರಿಯ ಕಡೆಗೆ ಸಾಗಲಿವೆ. ಶಿಕ್ಷಕರಿಗೆ ನಿಯೋಜನೆ ಮೇರೆಗೆ ದೊಡ್ಡ ಜವಾಬ್ದಾರಿಗಳು ನಿರ್ವಹಿಸಬೇಕಾಗಿ ಬರಲಿದೆ. ಆರಂಭದಲ್ಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಆತಂಕವಾದರೂ ಇದರಿಂದ ನಿಮಗೆ ಹೆಸರು ಬರುವಂಥ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನ ಇದಾಗಿರಲಿದೆ. ನಿಮ್ಮ ಸ್ನೇಹಿತರು ಬಹಳ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಈ ದಿನ ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಳ್ಳಿ; ನಿಮಗೆ ಎದುರಾಗುವ ಸ್ಪರ್ಧೆ ಬಗ್ಗೆ ಆಲೋಚನೆಯನ್ನೇ ಮಾಡುವುದಕ್ಕೆ ಹೋಗಬೇಡಿ. ಮೈಗ್ರೇನ್ ಸಮಸ್ಯೆ ಇರುವಂಥವರು ಸರಿಯಾದ ಔಷಧೋಪಚಾರದ ಬಗ್ಗೆ ಲಕ್ಷ್ಯವನ್ನು ನೀಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಲ್ಲಿ ಕೆಲವರಿಗೆ ಈ ದಿನದ ಆರಂಭ ಅಷ್ಟೇನೂ ಚೆನ್ನಾಗಿರುವುದಿಲ್ಲ. ಆ ಕಾರಣಕ್ಕಾಗಿ ಎಂದಿನ ಉತ್ಸಾಹದಲ್ಲಿ ನೀವು ಕಂಡುಬರುವುದಿಲ್ಲ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಅಂದುಕೊಳ್ಳದ ಕೆಲವು ಫಲಿತಾಂಶ ಬರುವುದರಿಂದ ವಿಚಲಿತರಾಗುವಂತೆ ಆಗಲಿದೆ. ಸ್ವಲ್ಪ ದೂರದ ಸ್ಥಳಕ್ಕೆ ತೆರಳಿ ಏಕಾಂಗಿಯಾಗಿ ಸಮಯ ಕಳೆಯೋಣ ಎಂದೆನಿಸಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾಗದ- ದಾಖಲೆ ಪತ್ರಗಳ ವ್ಯವಹಾರ ಸಲೀಸಾಗಿ ಆಗಲಿದೆ. ಇದಕ್ಕೆ ನಿಮ್ಮ ಪ್ರಭಾವ- ಪ್ರಯತ್ನ ಸಹಾಯ ಮಾಡಲಿದೆ. ಅಡುಗೆ ಕಾಂಟ್ರಾಕ್ಟ್ ಮಾಡುವುದನ್ನು ಹೊಸದಾಗಿ ಶುರು ಮಾಡಿಕೊಂಡವರಿಗೆ ಹೆಚ್ಚಿನ ಹಣ ಹೂಡುವ ಅಗತ್ಯ ಕಂಡುಬರಲಿದೆ. ಕೌಟುಂಬಿಕವಾಗಿ ಕೆಲವು ವಿಚಾರಗಳಿಗೆ ನಿರ್ಧಾರ ಮಾಡುವುದಕ್ಕೆ ಧೈರ್ಯ ಸಾಲುವುದಿಲ್ಲ. ನಿಮ್ಮ ಕಾರ್ಯತಂತ್ರದಲ್ಲೇ ಬದಲಾವಣೆ ಮಾಡಿಕೊಳ್ಳಬೇಕು ಎಂದು ಬಹಳ ಸಲ ಅಂದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪ್ಲಾನಿಂಗ್- ಪರಿಶ್ರಮ ಜತೆಯಾಗಿ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ದಂಪತಿ ಮಧ್ಯೆ ಸಂತೋಷಕರವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳಿ. ಕಡಿಮೆ ಬಡ್ಡಿ- ದೀರ್ಘಾವಧಿ ಹೀಗೆ ಏನೇ ಆಕರ್ಷಣೆಗಳು ಇದ್ದರೂ ಸಾಲ ಪಡೆದುಕೊಳ್ಳಬೇಡಿ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರು ಅದೆಷ್ಟೇ ಸಣ್ಣ ಪ್ರಮಾಣದ ಕೆಲಸವಾದರೂ ನೀವೇ ಪೂರ್ಣಗೊಳಿಸುವುದು ಉತ್ತಮ. ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಡಿ. ಒಂದು ವೇಳೆ ತಾಯಿಯ ಅಥವಾ ತಾಯಿ ಸಮಾನರಾದವರ ಆರೋಗ್ಯ ಚಿಂತೆಗೆ ಕಾರಣ ಆಗಲಿದೆ. ಫಾಲೋಅಪ್ ಚೆಕಪ್ ಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಹೂಡಿಕೆ ವಿಚಾರಕ್ಕೆ ಬಂದಲ್ಲಿ ಹೆಚ್ಚಿನ ರಿಸ್ಕ್ ಇರುವಂಥದ್ದರಿಂದ ದೂರ ಇರುವುದು ಒಳ್ಳೆಯದು. ಅನುಭವಿಗಳ ಮಾರ್ಗದರ್ಶನ- ಸಲಹೆ ಕಂಡುಬಂದಲ್ಲಿ ಪಡೆದುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಕೆಲಸ- ಜವಾಬ್ದಾರಿ ಅಷ್ಟಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಿ. ಸ್ನೇಹ- ಕರುಣೆ ಹೀಗೆ ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಇತರರಿಗೆ ನೆರವು ನೀಡಲು ಮುಂದಾದಲ್ಲಿ ಆ ನಂತರ ಪಡಿಪಾಟಲು ಪಡುವಂತೆ ಆಗುತ್ತದೆ. ಉಳಿತಾಯದ ಉದ್ದೇಶಕ್ಕೆ ಖರೀದಿ ಮಾಡಿಟ್ಟಿದ್ದ ಚಿನ್ನ ಅಥವಾ ಬೆಳ್ಳಿಯನ್ನು ಮಾರಾಟ ಮಾಡಿ, ಸದ್ಯದ ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳಲು ಚಿಂತನೆ ಮಾಡುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ. ಪ್ರಾಫಿಟ್ ಬುಕ್ಕಿಂಗ್ ಗೆ ನಿರ್ಧಾರ ಮಾಡುತ್ತೀರಿ. ತಾಯಿ ಜೊತೆಗೆ ಅಭಿಪ್ರಾಯ ಭೇದ- ಮನಸ್ತಪ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಅವಕಾಶ ದೊರೆಯಲಿದೆ. ನೀರಿನ ಮಾರಾಟ ವ್ಯವಹಾರದಲ್ಲಿ ತೊಡಗಿರುವವರು ವಿಸ್ತರಣೆಗೆ ಆಲೋಚಿಸಿ, ಅಗತ್ಯ ಸಿದ್ಧತೆಯಲ್ಲಿ ಬಿಡುವಿಲ್ಲದಷ್ಟು ತನ್ಮಯರಾಗುತ್ತೀರಿ. ಹಲ್ಲು ನೋವಿನ ಸಮಸ್ಯೆ ತೀವ್ರವಾಗಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​