AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು

ರಾಶಿ ಭವಿಷ್ಯ ಮಂಗಳವಾರ (ಆ. 27): ನಿಮ್ಮ ರಾಶಿ ಧನು, ಮಕರ, ಕುಂಭ, ಮೀನ. ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು.‌ ಏನೇನೋ ಯೋಚನೆಗಳು ಬರಬಹುದು. ಮನೆಯಿಂದ ದೂರದಲ್ಲಿ ನೀವು ವಾಸಮಾಡುವ ಸಂದರ್ಭವು ಬರಬಹುದು.‌ ಇಂದಿನ‌ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟಪಡುವಿರಿ.ಹಾಗಾದರೆ ಆಗಸ್ಟ್​ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 27, 2024 | 12:20 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:46 ಗಂಟೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:13, ಯಮಘಂಡ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ.

ಧನು ರಾಶಿ: ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತುಗಳು ಹಾಳಾದೀತು. ನಿಮ್ಮ ಅಪೂರ್ಣ ಕಾರ್ಯಗಳಿಗೆ ಅಂತ್ಯವನ್ನು ಕಾಣಿಸುವಿರಿ. ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು.‌ ಏನೇನೋ ಯೋಚನೆಗಳು ಬರಬಹುದು. ಮನೆಯಿಂದ ದೂರದಲ್ಲಿ ನೀವು ವಾಸಮಾಡುವ ಸಂದರ್ಭವು ಬರಬಹುದು.‌ ಇಂದಿನ‌ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟಪಡುವಿರಿ. ತಾಯಿಯ ಮಾತನ್ನೂ ನೀವು ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ಸಾಹಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ಅದೃಷ್ಟದಿಂದ ನಿಮ್ಮ ಕಾರ್ಯ ಸಾಧ್ಯ. ದೇಹಕ್ಕೆ ಪೆಟ್ಟುಮಾಡಿಕೊಳ್ಳಲು ನೀವು ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳಬಹುದು. ನಿಮ್ಮ‌ ನೈಪುಣ್ಯತೆಯನ್ನು ಕೆಲಸದಲ್ಲಿ ತೋರಿಸಿ. ಉತ್ತಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ವಾಗ್ವಾದಕ್ಕೆ ಹೋಗಿ‌ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ. ಇನ್ನೊಬ್ಬರಿಗಾಗಿ ಕಾಯುವುದು ನಿಮಗೆ ಕಷ್ಟವಸದೀತು.

ಮಕರ ರಾಶಿ: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಕಾನೂನಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ ಇದೆ. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು.‌ ಅಧಿಕಾರದಿಂದ ನಿಮ್ಮ ಆಸೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗಾದರೂ ಹೇಳಿಕೊಳ್ಳುವಿರಿ. ನಿಮ್ಮ‌ ನೋವಿಗೆ‌ ಸ್ಪಂದಿಸಲು ಯಾರಾದರೂ ಸಿಕ್ಕಾರು. ನಿಮ್ಮ‌ ಒಳ್ಳೆಯ ಚಿಂತನೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ನಿಮಗೆ ಇಷ್ಟವಾದುದನ್ನು ನೀವು ಪಡೆಯುವಿರಿ. ಸ್ವಾಭಿಮಾನವು ನಿಮ್ಮನ್ನು ಕಟ್ಟಿಹಾಕಬಹುದು. ಇಂದಿನ ವಾಯು ವಿಹಾರವು ನಿಮಗೆ ಹಿತವೆನಿಸುವುದು. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ‌ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ. ಹೊಸಬರ ಪರಿಚಯವಾಗಲಿದೆ.

ಕುಂಭ ರಾಶಿ: ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ವ್ಯಾಪಾರದ ಸಂಚು ನಿಮಗೆ ಗೊತ್ತಾಗದೇ ಹೋಗಬಹುದು. ಇಂದಿನ‌ ನಿಮ್ಮ ಆರಂಭವು ಬಹಳ ಸಂತೋಷದಿಂದ‌ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ಕೋಪವನ್ನು ಸ್ವಲ್ಪ ಕಡಿಮೆ‌ ಮಾಡಿಕೊಳ್ಳುವುದು ಉತ್ತಮ.‌ ಇಂದಿನ ತುರ್ತು ಕಾರ್ಯಗಳ ನಡುವೆ ನಿಮಗೆ ಸಮಯ ಹೊಂದಾಣಿಕೆ ಕಷ್ಟವಾಗಬಹುದು. ನಿಮ್ಮ‌ ಅಮೂಲ್ಯ ವಸ್ತುಗಳನ್ನು ಜಾಗರೂಕತೆಯಿಂದ‌ ಇಟ್ಟುಕೊಳ್ಳಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಔಷಧವಾಗಲಿದೆ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸುವಿರಿ. ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಇರುವುದು‌. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ಸಾಗಿದ ದಾರಿಯನ್ನು ನೀವು ನೆನಪಿಸಿಕೊಳ್ಳುವಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ.

ಮೀನ ರಾಶಿ: ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ಉತ್ಸಾಹಕ್ಕೆ ದೃಷ್ಟಿ ಬೀಳಬಹುದು. ನೀವು‌ ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ. ಇಂದು ನಿಮ್ಮ‌ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ನಿಮಗೆ ಆಗದ ವಿಚಾರವನ್ನು ಮತ್ತೆ ಮತ್ತೆ ಸಹೋದ್ಯೋಗಿಗಳು ನೆನಪಿಸುವರು. ನಿಮಗೆ ನೀವೇ ಹಾಕಿಕೊಂಡ ಮಾರ್ಗವು ಪ್ರಶಸ್ತವೆನಿಸಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ‌ ಖರ್ಚಿನಿಂದ‌ ಸ್ನೇಹಿತರಿಗೆ ಭೋಜನ ಹಾಕಿಸುವಿರಿ. ಸ್ನೇಹಿತರ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ‌ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!