Horoscope: ಈ ರಾಶಿಯವರ ಮನೆಯಲ್ಲಿ ಕಲಹವಾಗಬಹುದು-ಎಚ್ಚರ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 21 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರ ಮನೆಯಲ್ಲಿ ಕಲಹವಾಗಬಹುದು-ಎಚ್ಚರ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 21, 2024 | 4:19 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ(ಜೂನ್. 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:58 ರಿಂದ 12:35ರ ವರೆಗೆ, ಯಮಘಂಡ ಕಾಲ 15:49ರಿಂದ 17:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43ರಿಂದ ಬೆಳಗ್ಗೆ 09:20ರ ವರೆಗೆ.

ಧನು ರಾಶಿ :ಇಂದು ಸುಮ್ಮನೆಯೂ ಯಾರನ್ನೂ ಅಪಮಾನ ಮಾಡುವುದು ಬೇಡ. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಮಾತಿನಿಂದಲೇ ಇಂದು ನೀವು ಕೆಲಸವನ್ನು ಮಾಡುವಿರಿ. ಸಾಲಕೊಟ್ಟ ಹಣವು ಬರುತ್ತದೆ ಎಂಬ ನಿರೀಕ್ಷೆಯು ಸುಳ್ಳಾಗಬಹುದು. ದುಂದುವೆಚ್ಚ ಮಾಡಿದ ಕಾರಣ ಮನೆಯಲ್ಲಿ ಕಲಹವಾಗಬಹುದು. ಕಛೇರಿಗೆ ವಿಳಂಬವಾಗಿ ಹೋಗಿ ಮೇಲಧಿಕಾರಿಗಳ‌ ಕೆಂಗಣ್ಣಿಗೆ ಗುರಿಯಾಗುವಿರಿ. ಅದು ಸೋತ ಅನಂತರ ಅರಿವಾದೀತು.‌ ಖುಷಿಯಾಗಿರು ಅನೇಕ ವಿಚಾರಗಳನ್ನು ಬಿಟ್ಟು ದುಃಖದ ಸಂಗತಿಯನ್ನೇ ನೆನೆಯುವಿರಿ. ನಿಮ್ಮ ಸೋಲು ನಿಮಗೆ ಅಪಮಾನಕರವಾಗಲಿದೆ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ವಿದೇಶದ ಜೊತೆಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು.

ಮಕರ ರಾಶಿ :ಇಂದು ಸಂಗಾತಿಯು ನಿಮ್ಮ ಬಗ್ಗೆ ಆಡಿದ ಸಕಾರಾತ್ಮಕ ಮಾತುಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ವೇಗವಾಗಿ ಹಣದಲ್ಲಿ ಅಭಿವೃದ್ಧಿಯ ಕಾಣುವ ಬಗ್ಗೆ ಬಯಕೆ ಇರವುದು. ಮಾತಿಗಾಗಿ ಮಾತು ಬೆಳೆಯಬಹುದು. ಅದು ಮತ್ತೇನೋ ಆಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಏನನ್ನಾದರೂ ಕಳೆದುಕೊಳ್ಳುವ ಭೀತಿ ಇರುವುದು. ಅಭ್ಯಂಗಸ್ನಾನದ ಬಯಕೆಯಾಗುವುದು. ತಲೆ ಗಟ್ಟಿ ಇದೆ ಎಂದು ಬಂಡೆಗೆ ಹೋಗಿ ಕುಟ್ಟಲಾಗದು. ನಿಮ್ಮ ಇತಿಮಿತಿಗಳನ್ನು ನೋಡಿ ಮುಂದುವರಿಯಿರಿ. ನಿಮ್ಮಿಂದ ಸಾಲ ಪಡೆದವರ ಜೊತೆ ವಿವಾದವಾಗಬಹುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯುಳ್ಳವರಾಗುವಿರಿ. ಸ್ತ್ರೀಯರಿಂದ ನಿಮ್ಮ‌ಬಗ್ಗೆ ಸುಳ್ಳು ಅಪವಾದಬರಬಹುದು. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ :ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ಆರ್ಥಿಕಮೂಲಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. ಉತ್ತಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ.‌ ಇಲ್ಲವಾದರೆ ಅನಂತರ ದುಃಖಿಸಿ ಪ್ರಯೋಜನವಾಗದು. ಕುಲಕಸುಬನ್ನು ಕಲಿಯುವ ಮನಸ್ಸಾದೀತು, ಮುಂದುವಿರಿಸಿ. ಅಧ್ಯಾಪನ ವೃತ್ತಿಯಲ್ಲಿ ಇದ್ದವರಿಗೆ ವಿದ್ಯಾರ್ಥಿಗಳು ಉಡುಗೊರೆಯೊಂದನ್ನು ನೀಡುವರು. ನಿಮಗೆ ಯಾರಾದರೂ ಪ್ರೇರಣೆಯಾಗಬಹುದು. ನಿಮ್ಮಿಂದ ಆಶೀರ್ವಾದವನ್ನು ಪಡೆದುಕೊಳ್ಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.

ಮೀನ ರಾಶಿ :ಇಂದು ನಿಮ್ಮ ಹಣದ ವಿಚಾರವಾಗಿ ಸಣ್ಣ ಕಲಹಗಳು ಸಂಗಾತಿಯ ನಡುವೆ ನಡೆಯಬಹುದು. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ನಿಮಗಿಂದು ಪ್ರೀತಿಯನ್ನು ಕಳೆದುಕೊಳ್ಳತ್ತೇನೋ ಎಂಬ ಭಯವಿರಲಿದೆ. ಅನುಕೂಲವಿದ್ದರೆ ದೂರದಲ್ಲಿರುವ ತಂದೆ-ತಾಯಿಯರನ್ನು ಭೇಟಿ ಮಾಡಿ ಬನ್ನಿ. ನಿಮ್ಮ ಮನೆಯಯಿಂದ ನೀವು ಇಷ್ಟಪಡುವ ಪ್ರಾಣಿಯು ಕಾಣೆಯಾಗಬಹುದು. ನಿಮ್ಮ ಸಂಗಾತಿಯು ನೀವು ಪ್ರೀತಿ ತೋರಿಸಿಲ್ಲವೆಂದು ಸಿಟ್ಟಾಗಬಹುದು. ಆದಷ್ಟು ಸಮಯವನ್ನು ಅವರಿಗೆ ಕೊಡಿ, ಖುಷಿಪಡಿಸಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣಮಾಡಬೇಡಿ. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ. ಎಲ್ಲದಕ್ಕೂ ಇನ್ನೊಬ್ಬರನ್ನು ಬೊಟ್ಟುಮಾಡಿ ತೋರಿಸುವುದು ಸರಿಯಾಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 12:40 am, Fri, 21 June 24

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ