ಮದುವೆಯಲ್ಲಿ ವಿಳಂಬ, ನಿಮ್ಮ ಇಷ್ಟದ ಜೀವನ ಸಂಗಾತಿ ಸಿಗುತಿಲ್ವಾ? ಚಿಂತೆ ಬಿಡಿ, ಇಲ್ಲಿದೆ ಪರಿಹಾರ

ಅನೇಕ ಜನರು ಮದುವೆ ವೇಳೆ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ನಿಶ್ಚಿತಾರ್ಥವಾದ ಬಳಿಕ ಮದುವೆ ಮುರಿದು ಬೀಳುತ್ತದೆ. ಅಥವಾ ಇತರ ಕಾರಣಗಳಿಂದಾಗಿ, ಬಯಸಿದ ಜೀವನ ಸಂಗಾತಿ ಸಿಗುವುದಿಲ್ಲ. ಅಂತಹವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ.

ಮದುವೆಯಲ್ಲಿ ವಿಳಂಬ, ನಿಮ್ಮ ಇಷ್ಟದ ಜೀವನ ಸಂಗಾತಿ ಸಿಗುತಿಲ್ವಾ? ಚಿಂತೆ ಬಿಡಿ, ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Apr 05, 2022 | 6:30 AM

ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುವುದು(Marriage) ಒಂದು ಪ್ರಮುಖ ಹಾಗೂ ಮುಖ್ಯವಾದ ಘಟ್ಟ. ಆದ್ರೆ ಕೆಲವೊಮ್ಮೆ, ಜಾತಕ, ಗ್ರಹ, ನಕ್ಷತ್ರಪುಂಜಗಳಿಂದಾಗಿ ಮದುವೆಯ ವಯಸ್ಸು ಮೀರಿದರೂ ಕಂಕಣ ಭಾಗ್ಯ ಕೂಡಿಬರದಿರುವುದು, ಮದುವೆಯಲ್ಲಿ ಅಡೆತಡೆಗಳು, ಮದುವೆ ಮುರಿದು ಬೀಳುವುದು ಹೀಗೆ ಅನೇಕ ಸಮಸ್ಯೆಗಳು ಕಂಡು ಬರುತ್ತವೆ(Facing Problems in Getting Married). ಇಂತಹ ಸಂದರ್ಭಗಳಲ್ಲಿ ತಜ್ಞರ, ಜ್ಯೋತಿಷಿಗಳ ಸಲಹೆ ನಂತರ ನೀಲಮಣಿ ರತ್ನವನ್ನು ಧರಿಸುವುದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಜೀವನದಲ್ಲಿ ಸಂತೋಷ ನೆಲೆಸುತ್ತದೆ.

ಅನೇಕ ಜನರು ಮದುವೆ ವೇಳೆ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ನಿಶ್ಚಿತಾರ್ಥವಾದ ಬಳಿಕ ಮದುವೆ ಮುರಿದು ಬೀಳುತ್ತದೆ. ಅಥವಾ ಇತರ ಕಾರಣಗಳಿಂದಾಗಿ, ಬಯಸಿದ ಜೀವನ ಸಂಗಾತಿ ಸಿಗುವುದಿಲ್ಲ. ಅಂತಹವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ. ರತ್ನಶಾಸ್ತ್ರದಲ್ಲಿ ಹೇಳಲಾದ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ನೀಲಮಣಿ(Topaz) ಧರಿಸುವುದುರಿಂದ ಕಂಕಣ ಭಾಗ್ಯ ನೀಲಮಣಿ ಗುರು ಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಹಳದಿ, ನೀಲಿ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಗುರು ಗ್ರಹವನ್ನು ಬಲಪಡಿಸಲು ಹಳದಿ ನೀಲಮಣಿ ಧರಿಸಲು ಸಲಹೆ ನೀಡಲಾಗುತ್ತದೆ, ಇದು ತುಂಬಾ ಪರಿಣಾಮಕಾರಿಯಾಗಿದೆ. ಆದರೆ ನೀಲಿ ಬಣ್ಣದ ನೀಲಮಣಿ ಕೂಡ ತುಂಬಾ ಪರಿಣಾಮಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ. ನೀಲಮಣಿ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ, ವಿಶೇಷವಾಗಿ ನಿಮ್ಮ ಪ್ರೀತಿಯನ್ನು ಪಡೆಯಲು ಮತ್ತು ಮದುವೆಯಲ್ಲಿನ ತೊಂದರೆಗಳನ್ನು ದೂರವಾಡಲು ಸಹಾಯಕಾರಿ. ಇದಲ್ಲದೆ, ನೀಲಮಣಿ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇತರ ರತ್ನ, ಹವಳಗಳನ್ನ ಧರಿಸುವ ಮುನ್ನ ತಜ್ಞರನ್ನು ಸಂಪರ್ಕಿಸಿದಂತೆ ಈ ರತ್ನದ ಕಲ್ಲುಗಳನ್ನು ಧರಿಸುವ ಮುನ್ನ ಸಹ ತಜ್ಞರನ್ನು ಸಂಪರ್ಕಿಸಿ ಧರಿಸಬೇಕು.

-ನೀಲಮಣಿ ಧರಿಸುವುದರಿಂದ ಪ್ರೀತಿಯಲ್ಲಿ ಯಶಸ್ಸನ್ನು ಕಾಣಬಹುದು. ಹಾಗೂ ಬಯಸಿದ ಸಂಗಾತಿಯನ್ನು ಮದುವೆಯಾಗಲು ಎದುರಾಗುವ ಸಮಸ್ಯೆಗಳನ್ನು ದೂರ ಮಾಡಬಹುದು. -ಮದುವೆ ಮುರಿದು ಹೋಗುತ್ತಿದ್ದರೆ ಅಥವಾ ಮದುವೆಯಲ್ಲಿ ಅಡೆತಡೆಗಳು ಇದ್ದಲ್ಲಿ, ಈ ರತ್ನವನ್ನು ಧರಿಸುವುದರಿಂದ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು. -ನೀಲಮಣಿ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ. ಇದು ಅಜ್ಞಾತ ಭಯದಿಂದ ಪರಿಹಾರವನ್ನು ನೀಡುತ್ತದೆ. ಕೋಪದಿಂದ ಅಥವಾ ಆಗಾಗ ಜಗಳ, ವಿವಾದಗಳಿಗೆ ಒಳಗಾಗುವವರು ಈ ರತ್ನವನ್ನು ಧರಿಸುವುದರಿಂದ ಅವರಿಗೂ ಲಾಭವಾಗುತ್ತದೆ. -ನೀಲಮಣಿ ಧರಿಸುವುದು ಬೆಳವಣಿಗೆಗೆ, ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. ತಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಬಯಸುವವರು, ಸಾಧಿಸಲು ಬಯಸುವ ಜನರು ಸಹ ಈ ರತ್ನವನ್ನು ಧರಿಸಬಹುದು. -ನೀಲಮಣಿ ನಿದ್ರೆಯ ಸಮಸ್ಯೆಗಳು, ಆಲಸ್ಯ ಮತ್ತು ಸೋಮಾರಿತನವನ್ನು ಹೋಗಲಾಡಿಸುವ ಮೂಲಕ ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ: ಹೋಳಿ ಆಚರಣೆ ವೇಳೆ ಯಾವ ರಾಶಿಯ ಜನರು ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು? ಇಲ್ಲಿದೆ ಮಾಹಿತಿ

ನವರಾತ್ರಿ ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಪತ್ರ ಬರೆದ ಮೇಯರ್