ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 4ರ ದಿನಭವಿಷ್ಯ

Daily Numerology February 4: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 4ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 4ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Feb 04, 2026 | 12:15 AM

ಈ ದಿನ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ, ನಿಮ್ಮಿಂದ ಸಾಧ್ಯವಾಗುವುದಾದಲ್ಲಿ ಒಮ್ಮೆ ಹೇಳಿಕೊಳ್ಳಿ. ಮುಖ್ಯ ಕೆಲಸದ ಮೇಲೆ ಮನೆಯಿಂದ ಆಚೆ ಹೋಗುವಾಗ ಹಸಿರು ಬಣ್ಣದ ಕರ್ಚೀಫ್ ತೆಗೆದುಕೊಂಡು ಹೋಗಿ. ಕಠಿಣ ಎನಿಸಿದಂಥ ಕೆಲಸಗಳನ್ನು ಸುಲಭವಾಗಿ ಮಾಡುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪ್ರಯಾಣದಿಂದ ಆಯಾಸ ಕಾಡಲಿದೆ. ಉದ್ಯೋಗ ಸ್ಥಳದಲ್ಲಿಯೂ ಕೆಲಸದ ಒತ್ತಡ ಇದ್ದು, ಅದರಿಂದ ಮಾನಸಿಕವಾದ ದಣಿವು ಕೂಡ ಜತೆಯಾಗುತ್ತದೆ. ಸಂಬಂಧಿಗಳು ಆಡಿದ ಮಾತುಗಳಿಂದ ಅಥವಾ ಈ ದಿನ ನಿಮಗೆ ಫೋನ್ ಮಾಡಿ, ಆಡುವಂಥ ಕೆಲವು ಮಾತುಗಳಿಂದ ವಿಪರೀತ ಸಿಟ್ಟು ಬರುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿಯು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸಿಟ್ಟು ತರಿಸುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಂಬಂಧಿಗಳೋ- ಸ್ನೇಹಿತರೋ ತಮ್ಮ ಶಾಪಿಂಗ್ ಗೆ ನೀವೂ ಬರಬೇಕು ಎಂದು ಒತ್ತಡ ಹಾಕಿ, ಕರೆದುಕೊಂಡು ಹೋಗಲಿದ್ದಾರೆ. ಮನೆಗೆ ಬೇಕಾದ ವಸ್ತುಗಳು ಕೆಲವನ್ನು ತರಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಇಷ್ಟು ಕಾಲ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಂಥ ವಸ್ತು- ವಿಷಯಗಳಿಗೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಬಂದುಬಿಡುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮದೆಷ್ಟೋ ಅಷ್ಟು ಕೆಲಸವನ್ನು ಮಾತ್ರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಅತ್ಯುತ್ಸಾಹದಲ್ಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗಲಿ ಅಂದುಕೊಂಡೋ ಏನಾದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದೋ ಅಥವಾ ಕೆಲಸಕ್ಕೆ ತೊಡಗುವುದೋ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗಲಿದೆ. ವಸ್ತ್ರಾಭರಣಗಳ ಖರೀದಿಗೆ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.