ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 9ರ ದಿನಭವಿಷ್ಯ

Daily Numerology February 09: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 9ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 9ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ Edited By:

Updated on: Feb 09, 2026 | 12:15 AM

ಈ ದಿನ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ, ಕೆಂಪು ಬಣ್ಣದ ಹೂವಿನಿಂದ ಕಟ್ಟಿದಂಥ ಮಾಲೆಯೊಂದನ್ನು ಸಮರ್ಪಣೆ ಮಾಡುವುದರಿಂದ ಬಹಳ ಪ್ರಯತ್ನ ಮಾಡುತ್ತಿದ್ದ ಪ್ರಾಜೆಕ್ಟ್ ಗಳು, ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಇತರರ ವೈಯಕ್ತಿಕ ವಿಷಯಗಳಲ್ಲಿ ನೀವಾಗಿಯೇ ಸಲಹೆ- ಸೂಚನೆ ನೀಡುವುದಕ್ಕೆ ಹೋಗಬೇಡಿ. ಕೃಷಿಯನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡವರು ಜಮೀನಿನಲ್ಲಿ ಕೆಲವು ಕೆಲಸಗಳನ್ನು ಮಾಡಿಸುವ ನಿಟ್ಟಿನಲ್ಲಿ ಮಾತುಕತೆ ಆಡಲಿದ್ದೀರಿ. ಒಂದು ವೇಳೆ ಯಾವುದೇ ಕೆಲಸವನ್ನು ತಕ್ಷಣಕ್ಕೆ ಮಾಡಿಸುವುದು ಬೇಡ ಎಂದೆನಿಸಿದ್ದಲ್ಲಿ ಸ್ವಲ್ಪ ಸಮಯ ಮುಂದಕ್ಕೆ ಹಾಕುವುದು ಉತ್ತಮ ಎನಿಸಿಕೊಳ್ಳುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಈ ಹಿಂದೆ ನೀವಾಗಿಯೇ ಹೇಳಿದ್ದ ಕೆಲವು ಸಲಹೆ- ನಿರ್ಧಾರಗಳನ್ನು ಬದಲಿಸುವುದಕ್ಕೆ ಮುಂದಾಗುತ್ತೀರಿ. ಇದೇ ವೇಳೆ ಹೂಡಿಕೆ ವಿಚಾರವಾಗಿ ಕುಟುಂಬದವರ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದ ಸ್ಥಳದ ಖರೀದಿಗೆ ಈ ದಿನ ಇನ್ನೊಮ್ಮೆ ಅವಕಾಶ ತೆರೆದುಕೊಳ್ಳಲಿದೆ. ಎಷ್ಟೇ ಹತ್ತಿರದವರೇ ಆದರೂ ಸಾಧಕ-ಬಾಧಕಗಳನ್ನು ಅಳೆದು ನೋಡದೆ ನಿರ್ಧಾರವನ್ನು ಮಾಡಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಎಲ್ಲವೂ ಮೊದಲಿನಂತಿಲ್ಲ ಎಂದು ಅನಿಸುವುದಕ್ಕೆ ಶುರು ಆಗುತ್ತದೆ. ಹೇಳಿದ ತಕ್ಷಣ ಆಗುತ್ತಿದ್ದ ಕೆಲಸಗಳು ಆಗುವುದಿಲ್ಲ. ಅದೇ ರೀತಿ ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ಸಹ ಅಂಜುತ್ತಿದ್ದವರು ಈ ದಿನ ಟೀಕೆ, ಆಕ್ಷೇಪ ಅಥವಾ ಆರೋಪಗಳನ್ನು ಮಾಡಬಹುದು. ನಿಮಗೆ ಮಾಹಿತಿ ಇಲ್ಲದ ವಿಷಯದಲ್ಲಿ ನಿಮ್ಮ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ.

ಲೇಖನ- ಸ್ವಾತಿ ಎನ್.ಕೆ.

ಸ್ವಾತಿ ಎನ್​ಕೆ

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us