ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್

ಮೇಷ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಷಭ, ಮಿಥುನ, ಕರ್ಕಾಟಕ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ಮೇಷದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.

ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Aug 17, 2023 | 7:03 AM

ತೀರಾ ಮೊನ್ನೆ- ಮೊನ್ನೆಯವರೆಗೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದವರು ಇವತ್ತಿಗೆ ನನ್ನ ಫೋನ್ ರಿಸೀವ್ ಮಾಡ್ತಾ ಇಲ್ಲ. ನನ್ನ ನಂಬರ್ ಬ್ಲಾಕ್ ಮಾಡಿಬಿಟ್ಟಿದ್ದಾರೆ ಅಂತ ಕೆಲವರು ಹೇಳಿರುವುದನ್ನು ಕೇಳಿರುತ್ತೀರಿ. ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಅಂತ ಯಾವ ರಾಶಿಯವರಿಗೆ ಯಾವಾಗ ಅನಿಸುತ್ತದೆ ಎಂಬುದರ ಬಗ್ಗೆ ಬಹಳ ಇಂಟರೆಸ್ಟಿಂಗ್ ಆದ ಮಾಹಿತಿ ನಿಮ್ಮೆದುರು ಇದೆ. ಮೇಷ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಷಭ, ಮಿಥುನ, ಕರ್ಕಾಟಕ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ಮೇಷದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.

ಮೇಷ

ಈ ರಾಶಿಯವರ ಇಗೋಗೆ ಹೊಡೆತ ಬೀಳುವಂಥ ಮಾತನಾಡಿದರೆ ಅಂಥವರಿಂದ ದೂರ ಆಗುವುದಕ್ಕೆ ಆರಂಭಿಸುತ್ತಾರೆ. ನಾನು ಮಾಡಬಲ್ಲೆ, ನಾನೇ ಮಾಡಬಲ್ಲೆ ಅಂತ ಮಾತನಾಡುವ ಮೇಷಕ್ಕೆ ಜತೆಗಿರುವವರು ಏನಾದರೂ ಹಂಗಿಸುವುದಕ್ಕೆ, ಮೂದಲಿಸುವುದಕ್ಕೆ, ನಿರುತ್ಸಾಹಗೊಳಿಸುವುದಕ್ಕೆ ಆರಂಭಿಸಿದರೋ ಅಂಥವರನ್ನು ದೂರ ಮಾಡಿಕೊಳ್ಳುತ್ತಾರೆ. ಇವರ ವೈಶಿಷ್ಟ್ಯ ಏನು ಗೊತ್ತಾ ತಾವು ಯಾರನ್ನು ಅವಾಯ್ಡ್ ಮಾಡಬೇಕು ಎಂದುಕೊಳ್ಳುತ್ತಾರೋ ಅವರ ಮುಖಕ್ಕೆ ಹೇಳುತ್ತಾರೆ.

ವೃಷಭ

ನಂಬಿಕೆ ಇವರಿಗೆ ಬಹಳ ಮುಖ್ಯ. ಜತೆಗೆ ಇರುವವರು ನಂಬಿಕೆ ಕಳೆದರು ಅಂದ ಮರು ಕ್ಷಣವೇ ಅವರ ಕೈಗೆ ಸಿಗದಂತೆ ಓಡಾಡಲು ಶುರು ಮಾಡುತ್ತಾರೆ. ಹತ್ತು ಸಲ ಕರೆ ಮಾಡಿದಲ್ಲಿ ಒಂದು ಸಲ ಫೋನ್ ಎತ್ತುಕೊಂಡು, ಬಹಳ ಕೆಲಸ ಇರುವವರಂತೆ ತೋರಿಸಿಕೊಳ್ಳುತ್ತಾರೆ. ಇನ್ನು ಕೊನೆಯ ಹಂತ, ಮೂರೇ ಜನರು ಇರುವಾಗಲೂ ಆ ಇನ್ನೊಬ್ಬರ ಜತೆಗೆ ಮಾತನಾಡುತ್ತಾರೆ ವಿನಾ ನಂಬಿಕೆ ಕಳೆದುಕೊಂಡ ಸ್ನೇಹಿತನ ಕಡೆ ತಲೆ ಎತ್ತಿ ಕೂಡ ನೋಡಲ್ಲ.

ಮಿಥುನ

ಈ ರಾಶಿಯವರು ಬಹಳ ಮೂಡಿ. ಇವರ ಜತೆಗೆ ಯಾವಾಗ ತಮಾಷೆಯಾಗಿ ಮಾತನಾಡಬೇಕೋ ಯಾವಾಗ ಸೀರಿಯಸ್ಸೋ ಗೊತ್ತೇ ಆಗಲ್ಲ. ಜತೆಗೆ ಇವರು ಸ್ನೇಹಿತರ ಆಯ್ಕೆಯಲ್ಲೇ ಮೊದಲೇ ಒಂದಿಷ್ಟು ಲೆಕ್ಕ ಹಾಕಿಕೊಂಡು ಹತ್ತಿರ ಮಾಡಿಕೊಂಡಿರುತ್ತಾರೆ. ಇವರ ಜತೆಗೆ ತುಂಬ ಸಲುಗೆ ತೆಗೆದುಕೊಂಡರಾ ಅಥವಾ ವಿಷಯದ ಗಾಂಭೀರ್ಯ ತಿಳಿದುಕೊಳ್ಳಲು ಸಾಧ್ಯವಾಗದೇ ಎಂಥದೋ ಮಾತನಾಡಿದರಾ ಅಲ್ಲಿಗೆ ಮುಗಿಯಿತು. ಇವರು ಯಾವ ವ್ಯಕ್ತಿಯನ್ನು ಬಿಟ್ಹಾಕುತ್ತಾರೋ ಅಂಥವರಿಗೆ ಯಾವ ಕಾರಣ ಅಂತ ಸಹ ಗೊತ್ತಾಗಲ್ಲ.

ಇದನ್ನೂ ಓದಿ: ತುಲಾದಿಂದ ಮೀನ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್

ಕರ್ಕಾಟಕ

ಈ ರಾಶಿಯವರು ವಿಪರೀತ ಎನಿಸುವಷ್ಟು ಎಮೋಷನಲ್. ಯಾರು ಇವರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುವುದಿಲ್ಲವೋ ಆ ಕೂಡಲೇ ದೂರ ಆಗುವುದಕ್ಕೆ ಆರಂಭಿಸುತ್ತಾರೆ. ಕಣ್ಣೀರು ಹಾಕದೆ, ಶಪಿಸದೆ, ಎದುರಿಗಿರುವ ವ್ಯಕ್ತಿಗಾಗಿ ತಾನು ಏನೆಲ್ಲ ಮಾಡಿದೆ ಎಂಬುದನ್ನು ಹೇಳದೆ ಒಬ್ಬ ವ್ತಕ್ತಿಯ ಸ್ನೇಹವನ್ನು ದೂರ ಮಾಡಿಕೊಳ್ಳದ ಜನ ಇವರು. ತಾವು ಯಾರನ್ನು ದೂರ ಮಾಡುತ್ತಿದ್ದೇನೆ ಎಂಬುದನ್ನು ಸಂಬಂಧಪಟ್ಟವರಿಗೆ ಬಿಟ್ಟು ಉಳಿದೆಲ್ಲರಿಗೂ ಹೇಳಿ, ಆ ನಂತರ ಯಾರಿಗೋ ಹೇಳಬೇಕೋ ಅವರಿಗೆ ತಿಳಿಸುತ್ತಾರೆ.

ಸಿಂಹ

ಈ ರಾಶಿಯವರ ಮೇಲೆ ಯಾರಾದರೂ ತುಂಬ ಅವಲಂಬಿಸುತ್ತಿದ್ದಾರೆ ಅಂದರೆ ಇವರಿಗೆ ಬಹಳ ಖುಷಿ ಕೊಡುತ್ತದೆ. ಆ ರೀತಿ ಇರುವವರ ಪರವಾಗಿ ಎಲ್ಲ ನಿರ್ಧಾರವನ್ನೂ ಮಾಡಿಬಿಡುತ್ತಾರೆ. ಆದರೆ ಹೇಗಿದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದರಲ್ಲಾ ಬೇರೆಯವರಿಗೆ ಇನ್ನೊಂದು ಕೆಲಸ ಕೊಡೋಣ. ಒಂದೇ ಸಮಯಕ್ಕೆ ಎರಡು ಕೆಲಸಗಳು ಆಗುತ್ತದೆ ಎಂದು ಇವರ ಸ್ನೇಹಿತರು ಯೋಚಿಸಿದರೆ ಅಲ್ಲಿಗೆ ಮುಗಿಯಿತು. ಸ್ನೇಹಿತರು, ಸಂಬಂಧಿಕರು, ಆಪ್ತರು ತಮ್ಮನ್ನು ಎಲ್ಲ ವಿಚಾರಕ್ಕೂ ಒಂದು ಸಲ ಕೇಳಬೇಕು ಎಂದು ಯೋಚಿಸುತ್ತಾರೆ. ಹಾಗೆ ಮಾಡಲಿಲ್ಲವೋ ಹೇಳದೆ ಕೇಳದೆ ದೂರವಾಗಿ ಬಿಡುತ್ತಾರೆ.

ಕನ್ಯಾ

ಈ ರಾಶಿಯವರ ಹತ್ತಿರ ಏನು ಬೇಕಾದರೂ ಸಹಾಯ ಕೇಳಬಹುದು. ಇವರೂ ಸಹ ಅದಕ್ಕೆ ಇಲ್ಲ ಎನ್ನದೆ ಮಾಡುತ್ತಾರೆ. ಆದರೆ ಎದುರಿನವರಿಂದಲೂ ಅದೇ ಪ್ರಮಾಣದ ಅಥವಾ ಅದಕ್ಕಿಂತಲೂ ಜಾಸ್ತಿ ಅಪೇಕ್ಷಿಸುತ್ತಾರೆ. ಇವರಿಗೇನೋ ಅಗತ್ಯ ಕಂಡುಬಂದಾಗ ಉದ್ದೇಶಪೂರ್ವಕವಾಗಿಯೋ ಅಥವಾ ನಿರುದ್ದಿಶ್ಯವಾಗಿಯೇ ಆಗಲ್ಲ ಎಂದಿರೋ ಅಲ್ಲಿಗೆ ದೂರವಾಗುವುದಕ್ಕೆ ಶುರು ಮಾಡುತ್ತಾರೆ. ಇವರದು ಇನ್ನೊಂದು ವಿಚಿತ್ರ ಏನೆಂದರೆ, ದೂರ ಆದ ಮೇಲೂ ಮಾತನಾಡುತ್ತಾರೆ, ಏನೂ ಆಗಿಲ್ಲ ಎಂಬಂತೆ ಇರುತ್ತಾರೆ. ಆದರೆ ಅಂತರ ಕಣ್ಣೆದುರು ಎದ್ದು ಕಾಣುತ್ತದೆ.

Published On - 6:52 am, Thu, 17 August 23

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ