ತುಲಾದಿಂದ ಮೀನ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್
ತುಲಾ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಶ್ಚಿಕ, ಧನುಸ್ಸು, ಮೀನ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ತುಲಾದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.
ತೀರಾ ಮೊನ್ನೆ- ಮೊನ್ನೆಯವರೆಗೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದವರು ಇವತ್ತಿಗೆ ನನ್ನ ಫೋನ್ ರಿಸೀವ್ ಮಾಡ್ತಾ ಇಲ್ಲ. ನನ್ನ ನಂಬರ್ ಬ್ಲಾಕ್ ಮಾಡಿಬಿಟ್ಟಿದ್ದಾರೆ ಅಂತ ಕೆಲವರು ಹೇಳಿರುವುದನ್ನು ಕೇಳಿರುತ್ತೀರಿ. ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಅಂತ ಯಾವ ರಾಶಿಯವರಿಗೆ ಯಾವಾಗ ಅನಿಸುತ್ತದೆ ಎಂಬುದರ ಬಗ್ಗೆ ಬಹಳ ಇಂಟರೆಸ್ಟಿಂಗ್ ಆದ ಮಾಹಿತಿ ನಿಮ್ಮೆದುರು ಇದೆ. ತುಲಾ ರಾಶಿಯವರು ಒಬ್ಬ ವ್ಯಕ್ತಿಯ ಸ್ನೇಹ- ಸಂಪರ್ಕ ಬೇಡ ಎಂದುಕೊಳ್ಳುವುದು ಬೇರೆ, ಅದೇ ವೃಶ್ಚಿಕ, ಧನುಸ್ಸು, ಮೀನ ರಾಶಿಯವರು ಹಾಗೆ ಆಲೋಚಿಸುವುದು ಬೇರೆ. ತುಲಾದಿಂದ ಕನ್ಯಾ ತನಕ ಆರು ರಾಶಿಗಳವರು ಯಾವ ಕಾರಣಕ್ಕೆ ಒಬ್ಬರನ್ನು ತಮಗೆ ಬೇಡ ಎಂದುಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.
ತುಲಾ
ಈ ರಾಶಿಯವರ ಜತೆಗೆ ಯಾವ ಕಾರಣಕ್ಕೂ ಹಣಕಾಸಿನ ವ್ಯವಹಾರ ಸ್ನೇಹಿತರಾಗಿದ್ದುಕೊಂಡು ಮಾಡಬಾರದು. ಹಾಗೊಂದು ವೇಳೆ ಅನಿವಾರ್ಯವಾಗಿ ಮಾಡಿದಿರಿ ಅಂತಾದರೆ ಶೀಘ್ರದಲ್ಲಿ ಅದನ್ನು ಹಿಂತಿರುಗಿಸುವುದು ಉತ್ತಮ. ಬೇರೇನೆ ಸಹಾಯ ಮಾಡಿದ್ದರೂ ಎಂಥ ಅನುಕೂಲವೇ ಮಾಡಿಕೊಟ್ಟಿದ್ದರೂ ಇವರಿಗೆ ಹಣದ ವಿಚಾರದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಬಹಳ ಬೇಗ ಬೇಸರ ಆಗಿಬಿಡುತ್ತದೆ. ಅದನ್ನು ವಾಪಸ್ ಪಡೆಯುವ ತನಕ ಚೆನ್ನಾಗಿದ್ದು, ಆ ನಂತರ ದಿಢೀರನೆ ಅವಾಯ್ಡ್ ಮಾಡಿ ಬಿಡುತ್ತಾರೆ.
ವೃಶ್ಚಿಕ
ಯಾವುದೇ ಘಟನೆಯನ್ನು ಈ ರಾಶಿಯವರು ನೋಡುವ ರೀತಿಯೇ ಬೇರೆ. ದುಡ್ಡು ಮುಖ್ಯವಲ್ಲ, ವಸ್ತು ಮುಖ್ಯವಲ್ಲ, ಸಮಯವೂ ಮುಖ್ಯವಲ್ಲ. ಹೀಗೆ ಒಬ್ಬ ವ್ಯಕ್ತಿಗೆ ಹೇಗೆ ಬೇಕೋ ಹಾಗೆ ಅನುಕೂಲ ಮಾಡಿಕೊಡುತ್ತಾರೆ. ಸ್ನೇಹ ವಲಯದಲ್ಲಿ ಇರುವವರು ಅಂದರೆ ಒಂದು ಹೆಜ್ಜೆ ಮುಂದೆ. ಆದರೆ ಅವರು ನೀಡಿದ ಹಣ, ಸಮಯ, ವಸ್ತು ಇವೆಲ್ಲವನ್ನೂ ನೀವು ಹೇಗೆ ನಿರ್ವಹಿಸಿದಿರಿ ಮತ್ತು ಅದನ್ನು ಮಾತಿನ ಮೂಲಕ ಹೇಗೆ ವ್ಯಕ್ತಪಡಿಸಿದಿರಿ ಎಂದು ಎದುರು ನೋಡುತ್ತಾರೆ. ಈ ರಾಶಿಯವರನ್ನು ದುರುಪಯೋಗ ಮಾಡಿಕೊಂಡರೇನೋ ಎಂಬ ಪ್ರಶ್ನೆ ಸುಳಿದಾಡುತ್ತಲೇ ಇರುತ್ತದೆ. ಅದು ಖಾತ್ರಿ ಆಗುವ ತನಕ ಕಾಯುತ್ತಾರೆ. ಆ ನಂತರ ಶಾಶ್ವತವಾಗಿ ನಾಟ್ ರೀಚಬಲ್ ಆಗಿಬಿಡುತ್ತಾರೆ.
ಧನುಸ್ಸು
ಬಹಳ ಬೇಗ ಇಷ್ಟವಾಗುವಂಥ ವ್ಯಕ್ತಿತ್ವ ಇವರದು. ಆದರೆ ಸ್ನೇಹಿತರು ಪ್ರತಿಯೊಂದಕ್ಕೂ ಇವರ ಸಲಹೆ ಕೇಳುತ್ತಿದ್ದಾರೆ, ಸಲುಗೆ ತೆಗೆದುಕೊಳ್ಳುತ್ತಿದ್ದಾರೆ, ವಿಪರೀತ ಹತ್ತಿರ ಆಗಿಬಿಟ್ಟರು ಅನಿಸಿದಾಗ ಇನ್ನು ಸಾಕು ದೂರವಾಗೋಣ ಎನಿಸುವುದಕ್ಕೆ ಶುರುವಾಗುತ್ತದೆ. ಈ ರಾಶಿಯವರಿಗೆ ಗ್ಯಾಪ್ ತೆಗೆದುಕೊಳ್ಳುವುದು ಬಹಳ ಇಷ್ಟ. ಸಾಮಾನ್ಯವಾಗಿ ಇವರು ದೂರ ಮಾಡಿಕೊಂಡ ಸ್ನೇಹಿತರನ್ನು ಮತ್ತೆ ಯಾವಾಗಲೋ ನೆನಪಿಸಿಕೊಂಡು ಹತ್ತಿರ ಬರುತ್ತಾರೆ. ಆದರೆ ಯಥಾ ಪ್ರಕಾರ ಹತ್ತಿರ ಆಗುತ್ತಿದ್ದಂತೆ ಮತ್ತೆ ದೂರ ಆಗಲುಪ್ರಯತ್ನಿಸುತ್ತಾರೆ.
ಇದನ್ನೂ ಓದಿ:ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್
ಮಕರ
ಇವರಲ್ಲಿ ಭಾವುಕತೆ ಕಡಿಮೆ. ಅರ್ಥಾತ್ ಭಾವನೆಗಳೇ ಮುಖದ ಮೇಲೆ ತೋರುವುದು ಕಡಿಮೆ. ಆದರೆ ಇವರು ಸ್ನೇಹಿತರಿಂದ ಅದನ್ನು ವಿಪರೀತ ನಿರೀಕ್ಷೆ ಮಾಡುತ್ತಾರೆ. ಅಷ್ಟೆಲ್ಲ ಮಾಡಿದೆ, ಒಂದು ಮಾತು ಒಂದೇ ಒಂದು ಮಾತಲ್ಲಿ ಬರೀ ಥ್ಯಾಂಕ್ಸ್ ಹೇಳಿಬಿಟ್ಟರಲ್ಲ ಅನ್ನೋದು ಇವರ ಲೆಕ್ಕಾಚಾರ. ಸರಿ, ಇವರು ಹೇಗೆ ನಡೆದುಕೊಂಡಿರುತ್ತಾರೆ ಅಂದರೆ, ಕೆಲವರಿಗೆ ಆ ಥ್ಯಾಂಕ್ಸ್ ಕೂಡ ಹೇಳಿರುವುದಿಲ್ಲ. ದಿಢೀರನೇ ಮಾತು ನಿಲ್ಲಿಸಿಬಿಡುವುದು, ತಲೆ ತಪ್ಪಿಸಿಕೊಂಡು ಓಡಾಡುವುದು, ಫೋನ್ ಸ್ವಿಚ್ ಆಫ್ ಇದು ಇವರು ಅನುಸರಿಸುವ ವಿಧಾನ.
ಕುಂಭ
ಫ್ರೆಂಡ್ಸ್ ವಿಥ್ ಬೆನಿಫಿಟ್ಸ್ ಎಂದು ಲೆಕ್ಕ ಹಾಕುವ ಕುಂಭ ರಾಶಿಯವರಿಗೆ ಸ್ನೇಹಿತರು ಕಡಿಮೆ, ಸೋಷಿಯಲ್ ಕಾಂಟ್ಯಾಕ್ಟ್ಸ್ ಜಾಸ್ತಿ. ತಮ್ಮ ಕೆಲಸಕ್ಕೆ ಸಂಬಂಧಿಸಿದವರು, ವೃತ್ತಿಗೆ ಸಹಾಯ ಆಗುವಂಥವರು, ಪ್ಲಂಬರ್, ಎಲೆಕ್ಟ್ರಿಷಿಯನ್ ಹೀಗೆ ಇವರ ಸ್ನೇಹ ವಲಯ ಇರುತ್ತದೆ. ಯಾರಾದರೂ ಇವರಿಂದ ತಮಗೆ ಎಂದಿಗಾದರೂ ಸಹಾಯ ಆಗಬಹುದು ಎಂದುಕೊಂಡರೋ ಕ್ಷಮಿಸಿ, ಅವರು ಸದ್ಯಕ್ಕೆ ಬಿಜಿ ಇದ್ದಾರೆ,
ಮೀನ
ಎಲ್ಲ ಸಮಯದಲ್ಲೂ ಎಂಥ ಸಮಯದಲ್ಲೂ ಸ್ನೇಹಿತರು ಒಂದೇ ಥರ ಇರಬೇಕು ಎಂಬುದು ಇವರ ನಿರೀಕ್ಷೆ, ಸ್ನೇಹಿತರ ವೈಯಕ್ತಿಕ ಬದುಕು ಹೇಗೇ ಇರಲಿ, ಎಂಥ ಸ್ಥಿತಿಯಲ್ಲೇ ಇರಲಿ, ತಮ್ಮನ್ನು ಮಾತ್ರ ಒಂದೇ ಥರ ನೋಡಿಕೊಳ್ಳಬೇಕು ಎಂಬುದು ಇವರ ಅಪೇಕ್ಷೆ. ಮತ್ತು ಯಾವಾಗಲೂ ನಿನಗೇನು ಸಹಾಯ ಬೇಕು ಅಂದರೂ ನಾನಿದ್ದೀನಿ ಅನ್ನುವ ಇವರು ಅದಕ್ಕೆ ತಕ್ಕಂತೆಯೂ ನಡೆದುಕೊಳ್ಳುತ್ತಾರೆ. ಆದರೆ ಸ್ನೇಹಿತರ ವಿವಿಧ ಸನ್ನಿವೇಶಗಳು ಅರ್ಥವಾಗಲ್ಲ. ಇವರಿಗೆ ಬೇಡ ಅನಿಸಿದ ವ್ಯಕ್ತಿಗೆ ಬೇಸರ ಆಗುವ ಮಟ್ಟಿಗೆ ಕೈಗೆ ಸಿಗದೆ, ತಮ್ಮದೇ ಹಣ ಎದುರಿನವರಿಂದ ಬರಬೇಕಿದ್ದರೂ ಅದನ್ನು ವಾಪಸ್ ಕೇಳದೆ, ಹಾಗೇ ದೂರ ಆಗಿಬಿಡ್ತಾರೆ. ಸಾಧ್ಯವಾದಷ್ಟೂ ಸ್ನೇಹಿತರ ಹೆಸರನ್ನು ಹಾಳು ಮಾಡುತ್ತಾರೆ.
Published On - 6:53 am, Thu, 17 August 23