Gemini Yearly Horoscope 2025: 2025ರ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?

| Updated By: ಅಕ್ಷತಾ ವರ್ಕಾಡಿ

Updated on: Dec 28, 2024 | 1:14 PM

ಮಿಥುನ ರಾಶಿ ವರ್ಷ ಭವಿಷ್ಯ 2025: 2025ರಲ್ಲಿ ಮಿಥುನ ರಾಶಿಯವರಿಗೆ ಆರ್ಥಿಕ ಹಿನ್ನಡೆ ಮತ್ತು ಆರೋಗ್ಯ ಸಮಸ್ಯೆಗಳು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಲಿದೆ. ಪ್ರೇಮ ಮತ್ತು ವಿವಾಹದ ವಿಚಾರದಲ್ಲಿ ಸ್ವಲ್ಪ ಅನಿಶ್ಚಿತತೆ ಇರುತ್ತದೆ. ಕುಟುಂಬದಲ್ಲಿ ಸಮಾಧಾನವಿರುತ್ತದೆ. ಶತ್ರುಗಳಿಂದ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಒಟ್ಟಾರೆಯಾಗಿ, ಲಕ್ಷ್ಮೀನಾರಾಯಣ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

Gemini Yearly Horoscope 2025: 2025ರ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?
Gemini Yearly Horoscope 2025
Follow us on

ರಾಶಿ ಚಕ್ರದ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ. ಕಳೆದ ವರ್ಷದ ಬೇಸರ, ಹತಾಶೆ, ಅಪಮಾನ, ಆರ್ಥಿಕ ಹಿನ್ನಡೆ ಇವು ಕಡಿಮೆಯೇ. ಅಲ್ಪ ಗುರು ಬಲವು ಬರವುದರಿಂದ ನಿಮ್ಮಲ್ಲಿ ನೆಮ್ಮದಿ ಗಾಳಿ ಆಗಾಗ ಬೀಸಿ, ಆರಾಮೆನಿಸುವುದು. ಇನ್ನು ಶನಿಯು ಎರಡು ವರೆ ವರ್ಷಗಳ ಅನಂತರ ಸ್ಥಾನ ಬದಲಾವಣೆ ಆಗಲಿದೆ. ನವಮ ಸ್ಥಾನದಲ್ಲಿ ಇದ್ದ ಶನಿಯು ಏಕಾದಶಕ್ಕೆ ಬರುವನು. ದಶಮದಲ್ಲಿ ಇದ್ದ ರಾಹುವು ನವಮಕ್ಕೆ ಹೋಗುವನು ಮತ್ತು ಚತುರ್ಥದಲ್ಲಿ ಕೇತುವಿದ್ದು ಅವನು ತೃತೀಯಕ್ಕೆ ಬರುವನು. ಇವೆಲ್ಲ ಬದಲಾವಣೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಗುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಇರುವುದು.

ಮಿಥುನ ರಾಶಿಯವರ ಆರೋಗ್ಯ:

ಅರೋಗ್ಯ ಅಧಿಪತಿ ಸದ್ಯ ನೀಚನಾಗಿಯೇ ಇರುವನು. ವರ್ಷದ ಮಧ್ಯದವರೆಗೂ ಆರೋಗ್ಯದಲ್ಲಿ ಕಿರಿಕಿರಿ ಇರುವುದು. ಸಣ್ಣ ಔಷಧೋಪಚಾರಗಳ ಮೂಲಕ ಅದನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಮತ್ತೆ ಹೆಚ್ಚಾಗುವುದು ಅಥವಾ ಮತ್ತೇನೋ ಆರಂಭವಾಗುವುದು. ರಕ್ತಸ್ರಾವ ಮೊದಲಾದ ಶಾರೀರಿಕ ಏರುಪೇರು ಕಾಣಿಸುವುದು.

ಮಿಥುನ ರಾಶಿಯವರ ಪ್ರೇಮ ಮತ್ತು ವಿವಾಹ:

ವಿವಾಹಕ್ಕೆ ವರ್ಷದ ಮಧ್ಯಾವಧಿಯವೆರೆಗೆ ಸೂಕ್ತ ಕಾಲವಿಲ್ಲ. ಅನಂತರ ಅನಿವಾರ್ಯವಾದರೆ ಪರಿಹಾರದ ಮೂಲಕ ವಿವಾಹವನ್ನು ಮಾಡಿಕೊಳ್ಳಿ. ಪ್ರೇಮವು ಆದಂತೆ ಅನಿಸಿದರೂ ಕಾರಣಾಂತರಗಳಿಂದ ತಪ್ಪುವುದು. ದುಃಖವು ನಿಮ್ಮನ್ನು ಕೆಲಕಾಲ ಜಿಗುಪ್ಸೆ ತರಿಸುವುದು. ಅನ್ಯ ಕಾರ್ಯದಲ್ಲಿ ತೊಡಗಿದರೆ ಉತ್ತಮ.

ಮಿಥುನ ರಾಶಿಯವರ ಉದ್ಯೋಗ ಮತ್ತು ಆರ್ಥಿಕತೆ:

ಈ ವರ್ಷ ನಿಮ್ಮ ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣಿಸದು. ಉದ್ಯೋಗವನ್ನು ಬದಲಿಸಿ ಮತ್ತೆ ಅಂತದ್ದೆ ಉದ್ಯೋಗಕ್ಕೆ ಹೋಗಬೇಕಾಗುವುದು. ಹಾಗಾಗಿ ಇದ್ದಲ್ಲೇ ಇರುವುದು ಕ್ಷೇಮ. ಆರ್ಥಿಕತೆಯು ವರ್ಷಾರಂಭದಲ್ಲಿ ಕಷ್ಟ.‌ ಬರಬೇಕಾದ ಹಣವು ಶ್ರಮ ಹಾಕಿದರೂ ಸಿಗುವುದು ಸುಲಭವಿಲ್ಲ.

ಇದನ್ನೂ ಓದಿ: 2025ರಲ್ಲಿ ವೃಷಭ ರಾಶಿಯವರ ಭವಿಷ್ಯ ಹೇಗಿರಲಿದೆ? ಲಾಭವೋ, ನಷ್ಟವೋ?

ಮಿಥುನ ರಾಶಿಯವರ ಕುಟುಂಬ ವ್ಯವಸ್ಥೆ:

ಕೌಟುಂಬಿಕ ಅಸಮಾಧಾನವು ಸರಿಯಾಗುವುದು. ನಿಮ್ಮ ಪರವಾಗಿ ನಿಲ್ಲುವರು. ಚತುರ್ಥದ ಅಧಿಪತಿ ಬುಧನೇ ಆಗಿದ್ದು ಬಾಂಧವರ ಸಹವಾಸ ಸಿಗಲಿದೆ.

ಮಿಥುನ ರಾಶಿಯವರ ಶತ್ರುಬಾಧೆ:

ನಿಮಗೆ ಶತ್ರುಗಳ ಕಾಟ ಹಣಕಾಸಿನ ವಿಚಾರದಲ್ಲಿ ಇರುವುದು. ನಿಮಗೆ ಸಿಗಬೇಕಾದ ಹಣವನ್ನು ಪಡೆಯುವುದಾದರೂ ಕೇಳುವ ರೀತಿಯಲ್ಲಿ ಕೇಳಿ.‌‌ ಇಲ್ಲವಾದರೇ ಅದೇ ಶತ್ರುತ್ವಕ್ಕೆ ಕಾರಣವಾಗುವುದು.

ಮಿಥುನ ರಾಶಿಯವರ ಅದೃಷ್ಟ:

ಅದೃಷ್ಟ ಈ ವರ್ಷ ನಿಮ್ಮ ಪಾಲಿಗೆ ಇದೆ. ಆದರೆ ಯಾರಿಗೆ ರಾಹು ದಶಾ ನಡೆಯುತ್ತದೆಯೋ ಅವರಿಗೆ ಈ ಅದೃಷ್ಟ ಸಿಗಲಿದೆ. ಆರಂಬಿಸಿದ ಕಾರ್ಯಕ್ಕೆ ಉತ್ತಮ ವೇಗ ಸಿಕ್ಕಿ, ಅಂದುಕೊಂಡಿದ್ದನ್ನು ಸಾಧಿಸುವುದು ಆಗುವುದು.

ಒಟ್ಟಾರೆಯಾಗಿ ಈ ವರ್ಷ ಲಕ್ಷ್ಮೀನಾರಾಯಣರ ಉಪಾಸನೆಯಿಂದ ವರ್ಷದಲ್ಲಿ ಉಂಟಾಗುವ ಅಲ್ಪ ವ್ಯತ್ಯಾಸ ಮನಸ್ತಾಪ, ಕಿರಿಕಿರಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಆರ್ಥಿಕ ವಿಚಾರದಲ್ಲಿ ಪ್ರಗತಿ ಕಾಣಲು ಸಾಧ್ಯ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: