Numerology Yearly Horoscope 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 3ಕ್ಕೆ 2025ರ ವರ್ಷ ಭವಿಷ್ಯ
ಜನ್ಮಸಂಖ್ಯೆ 3ರ ವರ್ಷ ಭವಿಷ್ಯ 2025: ಜನ್ಮಸಂಖ್ಯೆ 3 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 3 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಜನ್ಮಸಂಖ್ಯೆ 3 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 3 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ- ಸ್ವಭಾವ: ಯಾರು ಈ ಜನ್ಮ ಸಂಖ್ಯೆಯಲ್ಲಿ ಜನಿಸಿರುತ್ತಾರೋ ಅಂಥವರನ್ನು ಮುನ್ನಡೆಸುವಂಥ ಗ್ರಹ ಗುರು. ದೇವತೆಗಳ ಗುರುವಾದ ಬೃಹಸ್ಪತಿಯು ಈ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತಾನೆ. ಸಾಮಾನ್ಯವಾಗಿ ಈ ಜನರು ಯಾವುದೇ ವೃತ್ತಿಯನ್ನು ಅಥವಾ ಉದ್ಯೋಗವನ್ನು ಆರಿಸಿಕೊಂಡರೂ ಉಳಿದವರಿಗಿಂತ ವಿಭಿನ್ನವಾದದ್ದನ್ನು ಆಲೋಚಿಸುತ್ತಾರೆ, ಅನುಷ್ಠಾನಕ್ಕೆ ತರುತ್ತಾರೆ. ತಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅಪ್ ಡೇಟ್ ಆಗಿರುವುದಕ್ಕೆ ಅಂತಲೇ ಶ್ರಮವನ್ನು ಹಾಕುತ್ತಾರೆ. ಇನ್ನು ಈ ಸಂಖ್ಯೆಯ ಜನರಿಗೆ ದೊರೆಯುವಂಥ ಕಾಂಟ್ಯಾಕ್ಟ್ ಗಳು ದೊಡ್ಡ ರೀತಿಯಲ್ಲಿ ಪರಿಣಾಮವನ್ನು ಬೀರುತ್ತವೆ. ಆದರೆ ಇವರಲ್ಲಿ ಬಹುತೇಕರು “ಕಿಂಗ್ ಮೇಕರ್”ಗಳಾಗಿಯೇ ಉಳಿದು ಬಿಡುತ್ತಾರೆ. ಅಂದರೆ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಏಳ್ಗೆ, ಯಶಸ್ಸು, ಕೀರ್ತಿಗಾಗಿ ಶ್ರಮವನ್ನು ಪಟ್ಟು, ತಮ್ಮ ಬುದ್ಧಿ- ಪ್ರತಿಭೆಯನ್ನು ಧಾರೆಯೆರೆದ ನಂತರವೂ ಹೆಸರಿಗೆ ಹಂಬಲಿಸುವಂಥ ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಆದರೆ ಗೌರವ ದೊರೆಯದ ಸ್ಥಳದಲ್ಲಿ ಅರೆ ಕ್ಷಣ ಸಹ ನಿಲ್ಲುವುದಿಲ್ಲ. ಅಂದರೆ ತಮಗೆ ಇತರ ಯಾವುದೇ ಲಾಭ ದೊರೆಯುವಂತಿದ್ದರೂ ತಮ್ಮ ಆತ್ಮಾಭಿಮಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ವಿದ್ಯೆ- ಜ್ಞಾನ ಎರಡೂ ಇದ್ದರೂ ಒಂದು ಬಗೆಯ ವೈರಾಗ್ಯ ಇವರಲ್ಲಿರುತ್ತದೆ.
ಸಾಮಾನ್ಯ ಸಂಗತಿಗಳು: ನಿಮ್ಮ ಅಂತರಂಗದ ವಿಚಾರಗಳು, ವ್ಯಾಪಾರ- ವ್ಯವಹಾರದ ಗುಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹೂಡಿಕೆ ಹಾಗೂ ಉಳಿತಾಯದ ಬಗ್ಗೆ ನಿಮ್ಮ ಆದ್ಯತೆ ಹೆಚ್ಚಾಗಲಿದೆ. ಅದೇ ವೇಳೆ ಆದಾಯದ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ವಿದೇಶಕ್ಕೆ ವ್ಯಾಸಂಗ- ಉದ್ಯೋಗ ಮತ್ತ್ಯಾವುದೇ ಕಾರಣಕ್ಕೆ ತೆರಳಬೇಕು ಎಂದುಕೊಂಡವರು ವೀಸಾ ಅಥವಾ ಬೇರೆ ಯಾವುದಾದರೂ ದಾಖಲೆ- ಕಾಗದ ಪತ್ರಗಳ ಸಮಸ್ಯೆ ಕಾಣುವಂತೆ ಆಗುತ್ತದೆ. ಸಿಟ್ಟೋ ಅಥವಾ ಗೊಂದಲಕ್ಕೆ ಒಳಗಾಗದೆ ಅಗತ್ಯ ಇರುವ ದಾಖಲೆ ಹೊಂದಿಸಿಕೊಳ್ಳುವುದಕ್ಕೆ ನಿಮ್ಮ ಸಮಯ ಮೀಸಲಿಡಿ. ಮನೆ ನಿರ್ಮಾಣ ಮಾಡಬೇಕು, ಸೈಟು ಖರೀದಿಸಬೇಕು ಎಂದಿರುವವರು ತಮ್ಮ ಗುರಿಯನ್ನು ತಲುಪುವುದರಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳು ಹೆಚ್ಚಿವೆ.
ಆರೋಗ್ಯ: ವರ್ಷದ ಮೊದಲ ಮೂರು ತಿಂಗಳು ಚೈತನ್ಯ, ಉತ್ಸಾಹ ಇರುತ್ತದೆ. ಆರೋಗ್ಯದಲ್ಲಿ ಈ ಹಿಂದೆ ಇರುವಂಥ ಸಮಸ್ಯೆಗಳಿಗೆ ಸಹ ಉತ್ತಮ ಔಷಧೋಪಚಾರ ದೊರೆಯಲಿದೆ. ಆ ನಂತರದಲ್ಲಿ ಕೂದಲು ಉದುರುವುದು, ನರಗಳ ಸಮಸ್ಯೆ, ನಿದ್ರೆಗೆ ಸಮಸ್ಯೆ ಆಗುವಂಥ ಕೆಲವು ಆರೋಗ್ಯ ಏರುಪೇರುಗಳು ನಿಮ್ಮನ್ನು ಕಾಡಬಹುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕಾಲಿನಲ್ಲಿ ತ್ರಾಣ ಕಡಿಮೆಯಾಗಿ, ಕಾಲು ಎಳೆದುಕೊಂಡು ನಡೆದಾಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ನಿಮಗೆ ಈ ರೀತಿಯ ಆರಂಭಿಕ ಸೂಚನೆ ಸಿಕ್ಕ ಕೂಡಲೇ ವೈದ್ಯರಿಂದ ಸರಿಯಾದ ಔಷಧೋಪಚಾರ ಪಡೆಯುವುದಕ್ಕೆ ಆದ್ಯತೆಯನ್ನು ನೀಡಿ. ಆಹಾರ ಪಥ್ಯವನ್ನು ಅನುಸರಿಸುವುದಕ್ಕೆ ಆರಂಭಿಸಿ. ಒಂದು ವೇಳೆ ಈಗಾಗಲೇ ಅನುಸರಿಸುತ್ತಿದ್ದೀರಿ ಅಂತಾದಲ್ಲಿ ಅದನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಮಾಡುವುದರಿಂದ ಒಳಿತಾಗುತ್ತದೆ.
ಆಸ್ತಿ-ಹಣ- ಹೂಡಿಕೆ: ನಿಮ್ಮಲ್ಲಿ ಕೆಲವರಿಗೆ ಹೂಡಿಕೆ ಅಥವಾ ಆಸ್ತಿ ಖರೀದಿ ಮಾಡುವ ಪ್ರಯತ್ನದಲ್ಲಿ ಸಾಲದ ಪ್ರಮಾಣವು ಹೆಚ್ಚಾಗಲಿದೆ. ಅದರಲ್ಲೂ ಯಾರು ಮನೆ ನಿರ್ಮಾಣ ಮಾಡುತ್ತೀರಿ ಅಥವಾ ಕೃಷಿ ಜಮೀನಿನಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಸುವುದಕ್ಕೆ ಮುಂದಾಗುತ್ತೀರಿ, ಅಂಥವರು ಸಾಮರ್ಥ್ಯಕ್ಕೆ ಮೀರಿ ಖರ್ಚು- ವೆಚ್ಚವನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ಆದರೆ ಈ. ವರ್ಷದಲ್ಲಿ ನೀವು ಬಯಸಿದಂಥ ಸ್ಥಳ ಖರೀದಿ ಮಾಡುವ ಅಥವಾ ಮನೆ ನಿರ್ಮಿಸುವ ಅವಕಾಶವಂತೂ ಇದ್ದೇ ಇದೆ. ಭವಿಷ್ಯವನ್ನು ಆಲೋಚನೆ ಮಾಡಿ, ಕುಟುಂಬ- ಮಕ್ಕಳಿಗೆ ಬೇಕು ಎಂಬ ಕಾರಣದಿಂದ ಅಳತೆ ಮೀರಿ, ಹಣವನ್ನು ಹಾಕುವುದಕ್ಕೆ ಹೋಗಬೇಡಿ. ಅದರ ಬದಲಿಗೆ ಬಜೆಟ್ ಹಾಕಿಕೊಂಡು ಮುಂದುವರಿದಲ್ಲಿ ನೆಮ್ಮದಿ ದೊರೆಯಲಿದೆ. ಷೇರು- ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದವರು ನಿರೀಕ್ಷಿತ ಲಾಭವನ್ನು ಪಡೆಯಬಹುದು. ಈಗಾಗಲೇ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಿದವರಿಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಲಾಭ ದೊರೆಯಲಿದೆ.
ಪ್ರೇಮ-ಮದುವೆ ಇತ್ಯಾದಿ: ವಿವಾಹಕ್ಕೆ ಪ್ರಯತ್ನಿಸುತ್ತಿರುವವರು ಏನಾದರೂ ಒಂದು ಕಾರಣಕ್ಕೆ ಸದ್ಯಕ್ಕೆ ಹುಡುಕುವುದು ನಿಲ್ಲಿಸೋಣ ಎಂದು ಆಲೋಚಿಸುತ್ತೀರಿ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ, ಈ ರೀತಿಯ ತೀರ್ಮಾನಕ್ಕೆ ಬಾರದಿರುವುದು ಒಳ್ಳೆಯದು. ಸಂಬಂಧಿಕರ ಮೂಲಕವಾಗಿ ಮದುವೆಯ ಸಂಬಂಧಗಳ ರೆಫರೆನ್ಸ್ ಬಂದರೆ ಗಂಭೀರವಾಗಿ ಪರಿಗಣಿಸಿ. ಇನ್ನು ಪ್ರೀತಿ- ಪ್ರೇಮದಲ್ಲಿ ಇರುವವರು “ಈಗೋ” ಕಾರಣಕ್ಕೆ ದೀರ್ಘಾವಧಿಗೆ ಮಾತು ಬಿಡುವಂಥ ಅಥವಾ ಬೇರೆಯಾಗುವ ನಿರ್ಧಾರಕ್ಕೆ ಬಂದುಬಿಡಬಹುದು. ಅಂಥ ಸನ್ನಿವೇಶ ತಲೆ ಎತ್ತದಂತೆ ಎಚ್ಚರಿಕೆ ವಹಿಸಿ. ನಿಮ್ಮಲ್ಲಿ ಮತ್ತೆ ಕೆಲವರಿಗೆ ಸ್ನೇಹಿತರಿಗೆ- ಸಂಬಂಧಿಗಳಿಗೆ ಸೂಕ್ತ ಸಂಬಂಧಗಳ ಹುಡುಕಾಟದಲ್ಲಿ ತೊಡಗಿರುವಾಗಲೇ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಗಾತಿ ದೊರೆಯುವ ಅವಕಾಶಗಳು ಹೆಚ್ಚಿವೆ. ವಿವಾಹಿತರಿಗೆ ಲೈಂಗಿಕ ಜೀವನದಲ್ಲಿ ಅಸಂತೃಪ್ತಿ ಕಾಡಲಿದೆ.
ಉದ್ಯೋಗ- ವೃತ್ತಿ: ನಿಮ್ಮಲ್ಲಿ ಕೆಲವರು ಉದ್ಯೋಗದ ಜೊತೆಗೆ ಮತ್ತೊಂದು ಆದಾಯ ತರುವಂಥ ಫ್ರೀಲ್ಯಾನ್ಸ್ ಕೆಲಸವನ್ನೋ ಅಥವಾ ವ್ಯಾಪಾರ- ವ್ಯವಹಾರವನ್ನೋ ಆರಂಭಿಸುವ ಬಗ್ಗೆ ಗಟ್ಟಿಯಾದ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ತಮ್ಮ ತೀರ್ಮಾನಗಳ ಮೂಲಕ ಎಲ್ಲರ ಗಮನವನ್ನು ಸೆಳೆಯುವಂಥ ಅವಕಾಶಗಳಿವೆ. ಇದನ್ನು ಮುಂದಿನ ಯಶಸ್ಸಿಗೆ ಹೇಗೆ ದಾರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಿಟ್ಟುಕೊಳ್ಳಿ. ಒಂದು ವೇಳೆ ಹೊಸ ಶಾಖೆಯನ್ನು ಶುರು ಮಾಡಬೇಕು, ಈಗಿರುವ ಉದ್ಯೋಗಿಗಳಿಗಿಂತ ಇನ್ನೊಂದಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದುಕೊಂಡು ವೃತ್ತಿನಿರತರು ವಿಸ್ತರಣೆಯನ್ನು ಮಾಡಿಕೊಳ್ಳಲಿದ್ದೀರಿ.
Published On - 6:42 pm, Sat, 28 December 24