ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಕೆಲಸ, ವ್ಯವಹಾರ, ವಹಿವಾಟುಗಳು, ಕುಟುಂಬ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ ಮತ್ತು ದಿನವಿಡೀ ನಡೆಯುವ ಮಂಗಳಕರ ಮತ್ತು ಅಶುಭ ಘಟನೆಗಳ ಬಗ್ಗೆ ಇಂದಿನ (2023 ಡಿಸೆಂಬರ್ 04) ಭವಿಷ್ಯದಲ್ಲಿ ತಿಳಿಯಿರಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮಘಾ, ಯೋಗ: ವೈಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ, ರಾಹು ಕಾಲ ಬೆಳಗ್ಗೆ 08:09 ರಿಂದ 09:34 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:23ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:47 ರಿಂದ 03:12ರ ವರೆಗೆ.
ಮೇಷ ರಾಶಿ: ವಿದೇಶದಲ್ಲಿ ಇರುವವರಿಗೆ ಅನಾಥ ಪ್ರಜ್ಞೆಯು ಕಾಡಬಹುದು. ಮನೆಯ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಸ್ನೇಹವು ಕಡಿಮೆಯಾಗಬಹುದು. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. ವೃತ್ತಿಯ ಸ್ಥಳದಲ್ಲಿ ನಿಮ್ಮದಲ್ಲದ ಕೆಲಸವನ್ನು ಮಾಡಬೇಕಾಗುವುದು. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು.
ವೃಷಭ ರಾಶಿ: ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಸ್ವತಃ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಸಾಲದು. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು. ತಮಾಷೆಯ ಮಾತುಗಳು ಗಂಭೀರ ರೂಪವನ್ನು ಪಡೆಯಬಹುದು.
ಮಿಥುನ ರಾಶಿ: ಪ್ರೇಮ ವಿವಾಹಕ್ಕೆ ಮನೆಯಲ್ಲಿ ವಿರೋಧ ಬರಬಹುದು. ನಿಮ್ಮ ಹಣವು ಮನೆಯ ಕಾರ್ಯಗಳಿಗೆ ಉಪಯೋಗಕ್ಕೆ ಬರಲಿದೆ. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಸಜ್ಜನರ ಸಹವಾಸವು ಅನಿರೀಕ್ಷಿತವಾಗಿ ಸಿಗುವುದು. ಮನಸ್ಸಿನಲ್ಲಿ ಯಾವುದಾದರೂ ಭೀತಿಯು ಕಾಡಬಹುದು. ಅತಿಯಾಯದೆ ಆಸೆಯಿಂದ ನಿಮಗೆ ದುಃಖವಿದೆ. ಕಾರ್ಯದಲ್ಲಿ ಗೊಂದಲವಿದ್ದರೆ ಅದನ್ನು ಮಾಡುವುದು ಬೇಡ.
ಕರ್ಕ ರಾಶಿ: ಸಮಸ್ಯೆಯ ಜೊತೆ ಜೀವಿಸಬೇಕಾಗುವುದು. ಕೆಲವೊಮ್ಮೆ ನಿಮ್ಮ ವರ್ತನೆಯೇ ನಿಮಗೆ ಮುಳುವಾಗುವುದು. ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಇಂದಿನ ಕಾರ್ಯವನ್ನು ಸರಿಯಾಗಿ ಯೋಜಿಸಿಕೊಂಡು. ಇಲ್ಲವಾದರೆ ತಿರುಗಾಟವಾದೀತು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಕಡಿಮೆ ಆದೀತು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು.
ಸಿಂಹ ರಾಶಿ: ತಂದೆಯು ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದು. ಇದು ನಿಮ್ಮ ಸ್ಥೈರ್ಯವನ್ನು ವರ್ಧಿಸೀತು. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ ಮೇಲೆ ಆಗದೇಹೋದೀತು. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ನಿಮ್ಮ ಇಂದಿನ ಮುಖ್ಯ ಕೆಲಸವೇ ಗೌಣವಾಗಬಹುದು. ಪ್ರೀತಿಯಲ್ಲಿ ಸಡಿಲಿಕೆ ಬೇಡ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲ್ಲು ಪತ್ನಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದ ಪಡೆಯಲು ನೀವು ಕಾದು ಸಮಯವನ್ನು ಹಾಳು ಮಾಡುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ನೀವು ಒಪ್ಪಿಕೊಳ್ಳುವಿರಿ. ಸಂಕೋಚವು ನಿಮ್ಮನ್ನು ಬಂಧಿಸಬಹುದು.
ಕನ್ಯಾ ರಾಶಿ: ವ್ಯರ್ಥ ತಿರುಗಾಟದಿಂದ ನಿಮಗೆ ಕೋಪ ಬಂದೀತು. ಸಂಗಾತಿಯಿಂದ ಒರಟು ಮಾತನ್ನು ಕೇಳುವಿರಿ. ನಿಮಗೆ ಅನಾಥಪ್ರಜ್ಞೆಯು ಕಾಡಲಿದ್ದು ದುಃಖವು ಉಮ್ಮಳಿಸುವುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ನಿಂದನೆಗೆ ಅತಿಯಾದ ಚಿಂತೆ ಬೇಡ. ಕೆಲಸದ ಮೂಲಕ ಉತ್ತರಿಸಲು ಪ್ರಯತ್ನಿಸಿ. ಇಂದು ನೀವು ಕೃತಜ್ಞತೆಯನ್ನು ಮರೆಯುವಿರಿ. ಸಂಬಂಧಗಳ ಮಹತ್ತ್ವವನ್ನು ನೀವು ಅರಿತುಕೊಳ್ಳಲಾರಿರಿ.
ತುಲಾ ರಾಶಿ: ವಿದ್ಯಾಭ್ಯಾಸವನ್ನು ಕೆಲವು ದಿನಗಳವರೆಗೆ ನಿಲ್ಲಿಸಬೇಕಾಗಬಹುದು. ಪ್ರಯತ್ನಿಸಿದ ಕಾರ್ಯದಲ್ಲಿ ಅಲ್ಪ ಜಯವು ಸಿಗವುದು. ಸಮಯದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ನಿಮಗೆ ಕಛೇರಿಯಲ್ಲಿ ಪ್ರಶಂಸೆಯು ಸಿಗಬಹುದು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ. ನಿಮಗೆ ಇನ್ನೊಬ್ಬರ ಬಗ್ಗೆಯೇ ಅಧಿಕ ಆಲೋಚನೆ ಇರುವುದು. ಎಲ್ಲ ವಿಚಾರಕ್ಕೂ ನೀವು ಇನ್ನೊಬ್ಬರನ್ನು ಹಗುರಾಗಿ ಕಾಣುವಿರಿ. ಬಿಡುವಿನ ಸಮಯದಲ್ಲಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಸ್ವಂತ ಉದ್ಯಮವನ್ನು ಆರಂಭಿಸಲು ಚಿಂತಿಸುವಿರಿ.
ವೃಶ್ಚಿಕ ರಾಶಿ: ಹೊಸ ಯೋಜನೆಗೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಬಂಧುಗಳನ್ನು ಕಳೆದುಕೊಳ್ಳ ಬೇಕಾಗಬಹುದು. ಹೊಣೆಗಾರಿಕೆಯು ಅಧಿಕವಾದೀತು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ಆಹಾರ ಅಭಾವವಾಗಬಹುದು. ವಿದ್ಯಾಭ್ಯಾಸಕ್ಕೆ ಉಂಟಾದ ತೊಂದರೆಯನ್ನು ನೀವು ಬಗೆಹರಿಸಿಕೊಳ್ಳುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ಉಂಟುಮಾಡೀತು. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ನೋಡಿ. ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ನಿಮಗೆ ಇಂದು ಕಾರ್ಯಗಳನ್ನು ಮಾಡಿಸಲು ಆಗದು. ನಿಮ್ಮ ಮಾತನ್ನು ಯಾರೂ ಕೇಳರು. ಗೌಪ್ಯ ಸ್ಥಾನದಲ್ಲಿ ತೊಂದರೆಯಾದೀತು.
ಧನು ರಾಶಿ: ವಿವಾಹಕ್ಕಾಗಿ ದೇವರಲ್ಲಿ ಶರಣಾಗತಿಯನ್ನು ಬಯಸುವಿರಿ. ಸಂಪಾದನೆಗೆ ಕೆಲವು ಅವಕಾಶಗಳು ತೆರೆದುಕೊಳ್ಳುವುದು. ಚಂಚಲ ಮನಃಸ್ಥಿತಿಯು ನಿಮ್ಮ ಕಛೇರಿಯ ಕಾರ್ಯವನ್ನು ಮಾಡಲು ಬಿಡದು. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು. ವಿಳಂಬವಾಗಿ ನಡೆಯುವ ವಿವಾಹಕ್ಕೂ ಸಂತೋಷವಿರಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಮಕ್ಕಳನ್ನು ಪಡೆಯಬೇಕು ಎಂಬ ಆಸೆ ಬರುವುದು. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಸಾಧ್ಯವಾಗದು. ಸಂಕೋಚದ ಸ್ವಭಾವದಿಂದ ನೀವು ಬಂದ ಅವಕಾಶವನ್ನು ಕೈ ಬಿಡುವಿರಿ. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು.
ಮಕರ ರಾಶಿ: ಸರ್ಕಾರದಿಂದ ನಿಮಗೆ ಪತ್ರವು ಬರಬಹುದು. ನಿಮ್ಮ ಮಾರ್ಗವು ಋಜುವಾಗಿರಲಿ. ಭವಿಷ್ಯದ ಕನಸನ್ನು ಕಾಣುವಿರಿ. ನಿಮ್ಮ ಕುಲವೃತ್ತಿಯನ್ನು ಮುನ್ನಡೆಸುವುದು ಸೂಕ್ತ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು. ವೈದ್ಯರಿಗೆ ಉತ್ತಮ ಅವಕಾಶವು ಸಿಗಬಹುದು. ಲಾಭವನ್ನೂ ಪಡೆಯು ದಿನ ಇಂದು. ಕುಟುಂಬಕ್ಕೆ ನಿಮ್ಮಿಂದ ಶುಭ ವಾರ್ತೆಯು ಬರಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಗಂಭೀರವಾದ ಸ್ಥಿತಿಯನ್ನು ನೀವು ತಿಳಿಗೊಳಿಸುವಿರಿ.
ಕುಂಭ ರಾಶಿ: ಅಸಮಯದ ಭೋಜನವನ್ನು ಮಾಡಬೇಕಾಗುವುದು. ನಿಮ್ಮ ವೃತ್ತಿಯ ಸ್ಥಳದ ಬದಲಾವಣೆಯಾಗಬಹುದು. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ನಿಮ್ಮ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಮಾಡುವರು. ಪ್ರಯಾಣದಲ್ಲಿ ನೀವು ಬರುವ ತೊಂದರೆಯನ್ನು ದೂರಮಾಡಿಕೊಳ್ಳುವಿರಿ. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ. ನೀವು ಕೊಟ್ಟ ಸಾಲದ ಹಣವು ನಿಮಗೆ ಹಿಂದಿರುಗಬಹುದು.
ಮೀನ ರಾಶಿ: ಅಪರೂಪದ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮ ನೆಚ್ಚಿನವರ ಭೇಟಿಯಾಗಲಿದೆ. ಸ್ತ್ರೀಯರಿಗೆ ಇಂದು ಬೇಡಿಕೆ ಹೆಚ್ಚಾಗಬಹುದು. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ನಿಮ್ಮ ಸಹಾಯಕ್ಕೆ ಯಾರೂ ಬರದಿರುವುದು ಬೇಸರವಾಗುವುದು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಸಂದೇಹ ಬರಬಹುದು. ಹಳೆಯ ಸಾಲವನ್ನು ಉಳಿಸಿಕೊಂಡೇ ಮತ್ತೊಂದು ಸಾಲವನ್ನು ಮಾಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆಗಿರುವುದು ನಿಮಗೆ ಧೈರ್ಯ ಬರಲಿದೆ. ಆತ್ಮವಿಶ್ವಾವೇ ನಿಮಗೆ ಬಲವನ್ನು ಕೊಡಬಹುದು.
ಲೋಹಿತಶರ್ಮಾ – 8762924271 (what’s app only)