ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 16) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:40 ರಿಂದ 11:04ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:51 ರಿಂದ 08:15ರ ವರೆಗೆ.
ಮೇಷ ರಾಶಿ: ನಿಮ್ಮವರನ್ನು ಮನವೊಲಿಸುವುದು ನಿಮ್ಮಿಂದ ಕಷ್ಟವಾದೀತು. ಸ್ನೇಹಿತರ ಜೊತಿಗಿನ ಸಂಪರ್ಕವನ್ನು ಕಡಿತ ಮಾಡಿಕೊಳ್ಳುವಿರಿ. ನೌಕರರ ತಪ್ಪಿನಿಂದ ನೀವು ಹಣವನ್ನು ಖರ್ಚು ಮಾಡಬೇಕಾದೀತು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸುವರು. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವು ಬೇಕಾಗುವುದು. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ದುರಭ್ಯಾಸಕ್ಕೆ ಅವಕಾಶಗಳು ಬರಲಿದ್ದು ಆಲೋಚಿಸಿ ಮುಂದುವರಿಯಿರಿ. ನಿಮ್ಮ ವರ್ತನೆಯನ್ನು ಕಂಡು ಯಾರಾದರೂ ನಕ್ಕಾರು. ನಿಮ್ಮ ವೇಷಭೂಷಣದ ಬಗ್ಗೆ ಟೀಕಿಸುವರು.ಹೂಡಿಕೆಯ ಬಗ್ಗೆ ಸಂಗಾತಿಯ ನಿಲುವಿಗೆ ಬದ್ಧರಾಗಬೇಲಾದೀತು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ನಿಶ್ಚಿಂತೆಯಿಂದ ಇರುವಿರಿ. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ.
ವೃಷಭ ರಾಶಿ: ಅನವಶ್ಯಕ ಚರ್ಚೆಯಿಂದ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ನಿಂದನೆಗಳು ಸಹಜವೆಂಬಂತೆ ಆಗಲಿದೆ. ನೀವು ಯಶಸ್ಸನ್ನು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕುವಿರಿ. ಆಭರಣದ ವಿಚಾರದಲ್ಲಿ ಜಾಗರೂಕತೆ ಇರಲಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ಇಂದು ನೀವು ಖುಷಿ ಕೊಡುವ ಕಾರ್ಯವನ್ನು ಮಾತ್ರ ಮಾಡುವಿರಿ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಿರಲು ನೀವು ಹೆಚ್ಚು ಇಷ್ಟಪಡುವಿರಿ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ವೃತ್ತಿಯಲ್ಲಿ ಬದಲಾವಣೆ ಬೇಕು ಎನಿಸುವುದು. ಅಜ್ಞಾತವಾಸದಂತೆ ಇರುವ ನಿಮ್ಮ ಜೀವನಕ್ಕೆ ಹೊಸ ತಿರುವು ಸಿಕ್ಕೀತು. ಅಪರಿಚಿತರು ನಿಮಗೆ ಕೆಲವು ತೊಂದರೆಯನ್ನು ಕೊಡಬಹುದು.
ಮಿಥುನ ರಾಶಿ: ಸೋಲಾದ ಸ್ಥಳದಲ್ಲಿಯೇ ಮೇಲೆ ಬರುವ ಛಲವನ್ನು ಇಟ್ಟುಕೊಳ್ಳುವಿರಿ. ಧರ್ಮಾಚರಣೆಯ ಕಡೆ ಒಲವಿದ್ದರೂ ಸಮಯವು ಸರಿಯಾಗಿ ಸಿಗದೇ ಇದ್ದೀತು. ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಅಭಿನಯ ಕ್ಷೇತ್ರದಲ್ಲಿ ನಿಮಗೆ ಅವಕಾಶಗಳು ಸಿಗಲಿವೆ. ನ್ಯಾಯಾಲಯದ ವಿಚಾರವನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಭೋಗವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವಿರಿ. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡವು ಬಂದು ಮುತ್ತಿಕೊಂಡು ದಿಕ್ಕು ತೋಚದಂತೆ ಆಗುವುದು. ದಾಂಪತ್ಯ ಕಲಹವು ಸುಖಾಂತವಾಗಲಿದೆ. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ. ನಿಷ್ಠುರ ಮಾತುಗಳನ್ನು ಆಡುವುದು ಬೇಡ. ಕುಟುಂಬದ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ವೈಯಕ್ತಿಕ ಕೆಲಸಗಳನ್ನು ಬಿಡುವಿಲ್ಲದ ಸಮಯದಲ್ಲಿಯೂ ಮಾಡುವಿರಿ.
ಕರ್ಕ ರಾಶಿ: ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಸ್ಥಿತಿ ಬರಬಹುದು. ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಸಂತೋಷವು ಸಿಗುವುದು. ಎಷ್ಟೋ ದಿನಗಳ ಹಿಂದೆಯೇ ಆಲೋಚಿಸಿದ್ದ ಕಾರ್ಯಗಳನ್ನು ನೀವು ಮತ್ತೆ ಆರಂಭಿಸಲು ಮನಸ್ಸು ಮಾಡುವಿರಿ. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ಪ್ರೇಮವು ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವನ್ನು ಹೆಚ್ಚಿಸಲು ಅಧಿಕಾರಿಗಳನ್ನು ಕೇಳಿಕೊಳ್ಳುವಿರಿ. ದೂರದ ಬಂಧುಗಳ ಭೇಟಿಯಿಂಸ ನಿಮಗೆ ಸಂತೋಷವಾಗುವುದು. ಸಹೋದ್ಯೋಗಿಗಳ ಜೊತೆ ವಾದವನ್ನು ಮಾಡುವಿರಿ. ವ್ಯವಹಾರದಲ್ಲಿ ಮಾತನಾಡುವಾಗ ನಿಮ್ಮನ್ನು ಅಳೆಯಬಹುದು. ಶತ್ರುಗಳನ್ನು ತಿಳಿದುಕೊಳ್ಳುವ ಅಸಕ್ತಿಯು ಇರಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳುವಿರಿ. ಇಂದಿನ ನಿಮ್ಮ ಕಾರ್ಯಕ್ಕೆ ಸಮಯದ ಮಿತಿಯನ್ನು ಅವಶ್ಯಕ.