Horoscope: ರಾಶಿಭವಿಷ್ಯ, ಶತ್ರುಗಳ ಕಾಟವು ಇಲ್ಲದಿದ್ದರೂ ಅವರ ಬಗ್ಗೆ ಕುತೂಹಲ, ಅನುಮಾನವು ಇರುವುದು

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 16 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ರಾಶಿಭವಿಷ್ಯ, ಶತ್ರುಗಳ ಕಾಟವು ಇಲ್ಲದಿದ್ದರೂ ಅವರ ಬಗ್ಗೆ ಕುತೂಹಲ, ಅನುಮಾನವು ಇರುವುದು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 16, 2023 | 12:45 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 16) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:40 ರಿಂದ 11:04ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:51 ರಿಂದ 08:15ರ ವರೆಗೆ.

ಧನು ರಾಶಿ : ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಕೆಲಸವು ಸಿಗಬಹುದು. ಅಪಮಾನವನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅವಿವಾಹಿತರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ಅಮೂಲ್ಯ ವಸ್ತುಗಳನ್ನು ಎಲ್ಲಿಯೋ ಇಟ್ಟು ಹುಡುಕುವಿರಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆ ಆಗುವುದು. ಸಾಹಿತ್ಯಸಲ್ಲಿ ಆಸಕ್ತಿ ಇರುವವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ಬೇಡ.

ಮಕರ ರಾಶಿ : ಶತ್ರುಗಳ ಕಾಟವು ಇಲ್ಲದಿದ್ದರೂ ಅವರ ಬಗ್ಗೆ ಕುತೂಹಲ, ಅನುಮಾನವು ಇರುವುದು. ಮಿತ್ರರಿಂದ ಭೂಮಿಯ ಖರೀದಿಯ ವಾರ್ತೆಯು ಇರುವುದು. ಸ್ತ್ರೀಯರು ತಮ್ಮ ಕಾರ್ಯದಲ್ಲಿ ಮುಳುಗುವರು. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಮಕ್ಕಳನ್ನು ದೂರ ಕಳಿಸುವುದು ನಿಮಗೆ ಇಷ್ಟವಾಗದು. ಎಲ್ಲವನ್ನೂ ನೀವೇ ಮಾಡಬೇಕು ಎನ್ನುವ ಮಾನಸಿಕತೆ ಬೇಡ. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ. ಹಿರಿಯರ ಮಾತಿನಿಂದ ಪ್ರೇರಣೆ ಸಿಗಲಿದೆ. ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು.

ಕುಂಭ ರಾಶಿ : ಇಂದಿನ ಖರ್ಚನ್ನು ಕಂಡು ಚಿಂತೆಯಾಗುವುದು. ಸರಳತೆಯನ್ನು ರೂಢಿಸಿಕೊಳ್ಳುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಭೂಮಿಯ ಉತ್ಪನ್ನದಿಂದ ಕೆಲವು ಅದಾಯವು ಸಿಗಬಹುದು. ಬಂಧುಗಳ ಅನಾರೋಗ್ಯದ ಕಾರಣ ನೀವು ಧನಸಹಾಯವನ್ನು ಮಾಡಬೇಕಾದೀತು. ನಿಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವಿರಿ. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ. ನೀವೇ ಆಯ್ಕೆ ಮಾಡಿಕೊಂಡ ಕೆಲಸದಲ್ಲಿ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ. ನಿಮ್ಮ ಕಾರ್ಯಗಳ ವಿವರಗಳನ್ನು ಮೇಲಧಿಕಾರಿಗಳು ಕೇಳಬಹುದು.

ಮೀನ ರಾಶಿ : ವಾದದಲ್ಲಿ ಸೋಲನ್ನು ಒಪ್ಪಿಕೊಂಡು ಗೆಲುವಿಗಾಗಿ ಪ್ರಯತ್ನಿಸುವಿರಿ. ಉದ್ಯಮದಲ್ಲಿ ಜಾಣ್ಮೆ ತೋರುವಿರಿ. ಉನ್ನತ ವಿದ್ಯಾಭ್ಯಾಸದ ಕಾರಣ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ತಾಯಿಯ ಕಡೆಯಿಂದ ನಿಮಗೆ ಆಸ್ತಿಯು ಲಭಿಸುವುದು. ಅಂದುಕೊಂಡ ಕಾರ್ಯಕ್ಕೆ ಬೆಂಬಲು ಪೂರ್ಣವಾಗಿ ಸಿಗದು.‌ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್