Sagittarius Yearly Horoscope 2024: ಧನು ರಾಶಿ ವರ್ಷ ಭವಿಷ್ಯ; ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ ವಾರ್ಷಿಕ ಭವಿಷ್ಯ ಇಲ್ಲಿದೆ

ಧನು ರಾಶಿ ವರ್ಷ ಭವಿಷ್ಯ 2024: ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ.‌ ಗ್ರಹಗಳು ಕೆಲವು ನಿಮಗೆ ಪ್ರತಿಕೂಲವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕುವ ಸಂದರ್ಭವು ಬರುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಮುನ್ನುಗ್ಗಿ, ಮನಸ್ಸನ್ನು ದುರ್ಬಲವಾಗಿಸಿಕೊಳ್ಳದೇ ಸಾಗುವ ಮಾನಸಿಕತೆಯನ್ನು ರೂಢಿಸಿಕೊಳ್ಳಿ.

Sagittarius Yearly Horoscope 2024: ಧನು ರಾಶಿ ವರ್ಷ ಭವಿಷ್ಯ; ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 15, 2023 | 7:03 PM

ಈ ವರ್ಷ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಲು ಅವಕಾಶಗಳು ಸಿಕ್ಕಿದ್ದವು.‌ ವಿದ್ಯಾರ್ಥಿಗಳು ಉನ್ನತ ಅಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನು ಇಟ್ಟಿದ್ದರು. ಮಕ್ಕಳಿಂದ ನೆಮ್ಮದಿಗಳನ್ನು ಪಡೆದು ನೀವು ಈ ವರ್ಷದ ಇದು ಸಿಗದೇ ಪಶ್ಚಾತ್ತಪ ಪಡುವಿರಿ.‌ ಇದಕ್ಕೆ ಕಾರಣ ಗುರು. ಗುರುಬಲವು ನಿಮ್ಮ ಎಲ್ಲ ಕಾಮನೆಗಳನ್ನು ಪೂರೈಸಲು ಅನುವುಮಾಡಿಕೊಟ್ಟಿದೆ.

2024ರ ಧನು ರಾಶಿಯ ಭವಿಷ್ಯ

ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ.‌ ಗ್ರಹಗಳು ಕೆಲವು ನಿಮಗೆ ಪ್ರತಿಕೂಲವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕುವ ಸಂದರ್ಭವು ಬರುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಮುನ್ನುಗ್ಗಿ, ಮನಸ್ಸನ್ನು ದುರ್ಬಲವಾಗಿಸಿಕೊಳ್ಳದೇ ಸಾಗುವ ಮಾನಸಿಕತೆಯನ್ನು ರೂಢಿಸಿಕೊಳ್ಳಿ.

ಧನಾಗಮನ :

ಧನಸ್ಥಾನಾಧಿಪತಿಯಾದ ಶನಿಯು ತೃತೀಯದಲ್ಲಿ ಇರುವನು. ಅದು ಶನಿಯ ಸ್ವಕ್ಷೇತ್ರವೂ ಆಗಿದ್ದು ಅಧಿಕ ಶ್ರಮವನ್ನು ಹಾಕಿ ಕಾರ್ಯವನ್ನು ಸಾಧಿಸಿಕೊಳ್ಳಬೇಕು.‌ ಲಾಭವನ್ನು ಪಡೆಯಬೇಕಾಗುವುದು. ಇನ್ನು ಶುಕ್ರನು ಉಚ್ಚಕ್ಷೇತ್ರವಾದ ಮೀನರಾಶಿಗೆ ಮಾರ್ಚ್ ತಿಂಗಳಲ್ಲಿ ಇರಲಿದ್ದು ತಕ್ಕಮಟ್ಟಿನ ಆದಾಯವನ್ನು ಕಾಣಬಹುದು.‌ ಏಕೆಂದರೆ ರಾಶಿಯ ಅಧಿಪತಿಯು ಷಷ್ಠದಲ್ಲಿ ಇರುವ ಕಾರಣ ಸಂಪತ್ತಿಗೆ ಪೂರಕವಾಗಿ ಇರಲಾರನು. ಮತ್ತು ಏಕಾದಶಾಧಿಪತಿಯೂ ಶುಕ್ರನೇ ಆಗಿದ್ದು ಬರುವ ಅಲ್ಪ ಆದಾಯವೂ ಸಕಾಲಕ್ಕೆ ಬಂದು‌ ನಿಮಗೆ ಸಹಾಯವಾಗುವುದು.

ಪ್ರೀತಿ ಮತ್ತು ವಿವಾಹ :

ಬುಧನು ಸಪ್ತಮಾಧಿಪತಿಯಾಗಿ ವರ್ಷಾರಂಭದಲ್ಲಿ ನಿಮ್ಮ ರಾಶಿಯಲ್ಲಿಯೇ ಇರುವನು. ಬಂಧುಗಳ ಕಡೆಯಿಂದಲೇ ವಿವಾಹವು ಆಗುವ ಸಾಧ್ಯತೆ ಇದೆ. ವಿವಾಹದ ಯೋಚನೆಯನ್ನು ಮಾಡುತ್ತಿದ್ದರೆ ವರ್ಷಾರಂಭದ ನಾಲ್ಕು ತಿಂಗಳ‌ ಒಳಗೇ ಮಾಡಿಕೊಳ್ಳುವುದು ಉತ್ತಮ.

ವೃತ್ತಿ :

ಕರ್ಮಾಧಿಪತಿಯು ತೃತೀಯದಲ್ಲಿ ಇರುವುದರಿಂದ ಶ್ರಮಕ್ಕೆ ಸರಿಯಾದ ಫಲವು ಸಿಗುವುದು.‌ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಿ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ. ಶಿಕ್ಷಕರು, ಸಾಹಿತ್ಯಾಸಕ್ತರು ಸಿಕ್ಕ‌ ಸಣ್ಣ ಅವಕಾಶವನ್ನು ಬಳಸಿಕೊಂಡು ಮುಂದಿನದಕ್ಕೆ ತಯಾರಾಗುವರು.

ಆರೋಗ್ಯದ ಸ್ಥಿತಿ :

ವರ್ಷವಿಡೀ ಆರೋಗ್ಯದಿಂದ ಇದ್ದ ನಿಮಗೆ ಈ ವರ್ಷ ಆರೋಗ್ಯವು ಕೈಕೊಡುವುದು. ಕಫಕ್ಕೆ‌ ಸಂಬಂಧಿಸಿದ ವ್ಯಾಧಿಯಿಂದ ಕಷ್ಟಪಡುವಿರಿ. ವೈದ್ಯರ ಸಲಹೆಯನ್ನು ನೀವು ಪಾಲಿಸುವುದು ಅನಿವಾರ್ಯವಾಗುವುದು.

ಗುರುವಿನ ಆರಾಧನೆ, ದರ್ಶನ, ಆಶೀರ್ವಾದಗಳನ್ನು ಪಡೆಯುವುದು ಅನಿವಾರ್ಯವಾಗಲಿದೆ.‌ ಲಕ್ಷ್ಮೀನಾರಾಯಣರ ಆರಾಧನೆಯಿಂದ ಮಾನಸಿಕವಾಗಿಯೂ ದೈಹಿಕವಾಗಿಯೂ ಗಟ್ಟಿಯಾಗುವಿರಿ.

ಲೋಹಿತ ಹೆಬ್ಬಾರ್, ಇಡುವಾಣಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್