AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Libra Yearly Horoscope 2024: ತುಲಾ ರಾಶಿ ವರ್ಷ ಭವಿಷ್ಯ; ಯಾವುದೇ ಒತ್ತಡ ಚಿಂತೆಗೆ ಒಳಗಾಗದೇ ನಿರ್ಭೀತಿಯಿಂದ ಇರುವಿರಿ ವಾರ್ಷಿಕ ಭವಿಷ್ಯ ಇಲ್ಲಿದೆ

ತುಲಾ ರಾಶಿ ವರ್ಷ ಭವಿಷ್ಯ 2024: ರಾಶಿಯ ಅಧಿಪತಿಯಾದ ಶುಕ್ರನು ವರ್ಷಾರಂಭದಲ್ಲಿ ದ್ವಿತೀಯದಲ್ಲಿ ಬುಧನ ಜೊತೆಗೆ ಕುಜನ ಸ್ಥಾನದಲ್ಲಿ ಇರುವನು. ಅರ್ಧವರ್ಷದ ವರೆಗೆ ನೀವು ಯಾವುದೇ ಒತ್ತಡ ಚಿಂತೆಗೆ ಒಳಗಾಗದೇ ನಿರ್ಭೀತಿಯಿಂದ ಇರುವಿರಿ.‌ ಅನಂತರ ನಿಮ್ಮ ದುರ್ಬಲ ದಿನಗಳು ಆರಂಭವಾಗುವುದು. ಎಚ್ಚರಿಕೆಯಿಂದ ಜೀವನವನ್ನು ನಡೆಸಬೇಕಾದ ಅನಿವಾರ್ಯತೆಯು ಬರುವುದು.

Libra Yearly Horoscope 2024: ತುಲಾ ರಾಶಿ ವರ್ಷ ಭವಿಷ್ಯ; ಯಾವುದೇ ಒತ್ತಡ ಚಿಂತೆಗೆ ಒಳಗಾಗದೇ ನಿರ್ಭೀತಿಯಿಂದ ಇರುವಿರಿ ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on:Dec 15, 2023 | 6:54 PM

Share

ರಾಶಿ ಚಕ್ರದ ಏಳನೇ ರಾಶಿ ತುಲಾ. ಈ ರಾಶಿಯ ಅಧಿಪತಿ ಶುಕ್ರನಾಗಿದ್ದಾನೆ. ಇದು ಸದ್ಯ ಸುಖೀ ರಾಶಿಯಾಗಿದೆ. ಆರು ತಿಂಗಳಿನಿಂದ ಗುರುವು ಸಪ್ತಮದಲ್ಲಿ ಇದ್ದು ಬೇಕಾದ ಸಹಕಾರವನ್ನು ನೀಡುತ್ತಿದ್ದಾನೆ. ಸ್ವಲ್ಪ ಕಾಲ ರಾಹುವಿನಿಂದ ಯುಕ್ತನಾಗಿದ್ದ ಕಾರಣ ಹಿನ್ನಡೆಯೂ ಆಗಿತ್ತು. ಆದರೆ ಈಗ ಸ್ವತಂತ್ರನಾಗಿರುವುದುರಿಂದ ಅದರಲ್ಲೂ ಮಿತ್ರನ ಮನೆಯಲ್ಲಿ ಗುರು ಇದ್ದುದರಿಂದ ಇನ್ನು ಆರು ತಿಂಗಳು ಸಮೃದ್ಧಿಯು ಅಧಿಕವಾಗಿರುವುದು.

2024ರ ತುಲಾ ರಾಶಿಯ ಭವಿಷ್ಯ :

ರಾಶಿಯ ಅಧಿಪತಿಯಾದ ಶುಕ್ರನು ವರ್ಷಾರಂಭದಲ್ಲಿ ದ್ವಿತೀಯದಲ್ಲಿ ಬುಧನ ಜೊತೆಗೆ ಕುಜನ ಸ್ಥಾನದಲ್ಲಿ ಇರುವನು. ಅರ್ಧವರ್ಷದ ವರೆಗೆ ನೀವು ಯಾವುದೇ ಒತ್ತಡ ಚಿಂತೆಗೆ ಒಳಗಾಗದೇ ನಿರ್ಭೀತಿಯಿಂದ ಇರುವಿರಿ.‌ ಅನಂತರ ನಿಮ್ಮ ದುರ್ಬಲ ದಿನಗಳು ಆರಂಭವಾಗುವುದು. ಎಚ್ಚರಿಕೆಯಿಂದ ಜೀವನವನ್ನು ನಡೆಸಬೇಕಾದ ಅನಿವಾರ್ಯತೆಯು ಬರುವುದು.

ಧನಾಗಮನ :

ಧನಾಧಿಪತಿಯಾದ ಶುಕ್ರನು ದ್ವಿತೀಯದಲ್ಲಿ ಇರುವ ಕಾರಣ ಅಲ್ಪ ವಿವಿಧ ಮೂಲಗಳಿಂದ ಬರಬೇಕಾದ ಸಂಪತ್ತನ್ನು ನೀಡುವನು. ಆದಾಯದ ಮೂಲವನ್ನು ಹೆಚ್ಚೂ ಮಾಡಬಹುದು. ಅದನ್ನು ಸರಿಯಾಗಿ ಇಟ್ಟುಕೊಳ್ಳುವ ಹೊಣೆಗಾರಿಕೆ ನಿಮ್ಮದಿರುವುದು.‌ ಔಷಧವ್ಯಾಪಾರಿಗಳು ಆರು ತಿಂಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯುವರು.

ಪ್ರೀತಿ ಮತ್ತು ವಿವಾಹ :

ಪ್ರೀತಿಸಿದವರು ಏಪ್ರಿಲ್ ಒಳಗೇ ವಿವಾಹವನ್ನು ಮಾಡಿಕೊಳ್ಳಿ. ಪ್ರೀತಿಯಲ್ಲಿ‌ ಬೀಳುವಿರಿ. ಉದ್ಯೋಗದ ಸ್ಥಾನದಲ್ಲಿ ಪ್ರೇಮವು ಉಂಟಾಗುವುದು. ಹತ್ತಿರದ ಬಂಧುಗಳೂ ಆಗುವ ಸಾಧ್ಯತೆ ಇದೆ.‌

ವೃತ್ತಿ :

ಈ ವರ್ಷ ವೃತ್ತಿಯಲ್ಲಿ ಚಾಂಚಲ್ಯ ಹೆಚ್ಚು ಕಾಣಿಸುವುದು.‌ ಸರಿಯಾದ, ಸ್ಥಿರವಾದ ನಿರ್ಣಗಳನ್ನು ತೆಗೆದುಕೊಳ್ಳಲು ಕಷ್ಟಪಡುವಿರಿ. ಭವಿಷ್ಯ ಬಗ್ಗ ಭೀತಿ‌ ಇರುವುದು. ಇರುವ ವೃತ್ತಿಯಲ್ಲಿ ಕಷ್ಟವೋ ಸುಖವೋ ಮುಂದೆ ಸಾಗುವಿರಿ.

ಆರೋಗ್ಯಸ್ಥಿತಿ :

ಸದ್ಯ ದೃಢಕಾಯರಾದ ನಿಮಗೆ ಸಣ್ಣ ಖಾಯಿಲೆಗಳು ಕಾಣಿಸಿಕೊಳ್ಳುವುವು. ಅವು ಮಾನಸಿಕ‌ ಕಿರಿಕಿರಿಯನ್ನು ಉಂಟುಮಾಡಬಹುದು. ಅನಾರೋಗ್ಯದ ಕಾರಣ ನಿಮ್ಮ‌ ಮಾನಸಿಕ ಸ್ಥಿತಿಯೂ ದುರ್ಬಲವಾಗುವುದು.

ಲಕ್ಷ್ಮೀನಾರಾಯಣರ ಉಪಾಸನೆಯನ್ನು ಬುಧವಾರದಂದು ಅಥವಾ ಶುಕ್ರವಾರದಂದು ವಿಶೇಷವಾಗಿ ಮಾಡಿ.

ಲೋಹಿತ ಹೆಬ್ಬಾರ್, ಇಡುವಾಣಿ

Published On - 6:42 pm, Fri, 15 December 23