AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Simha Yearly Horoscope 2024: ಸಿಂಹ ರಾಶಿ ವರ್ಷ ಭವಿಷ್ಯ; ಸಂತೋಷ, ನೆಮ್ಮದಿ, ಪ್ರೀತಿ ಕುರಿತು ವಾರ್ಷಿಕ ಭವಿಷ್ಯ ಇಲ್ಲಿದೆ

ಸಿಂಹ ರಾಶಿ ವರ್ಷ ಭವಿಷ್ಯ 2024: ಈ ರಾಶಿಯವರಿಗೆ ಮಧ್ಯದ ಸ್ಥಿತಿ ಇರಲಿದೆ. ಗುರುವು ವರ್ಷದ ಮಧ್ಯದಲ್ಲಿ ದಶಮಕ್ಕೆ ಇರಲಿದ್ದು ಇಷ್ಟು ದಿನಗಳ ಸಂತೋಷ, ನೆಮ್ಮದಿ, ಪ್ರೀತಿ ಎಲ್ಲವೂ ಕಡಿಮೆ ಆಗುವುದು. ಅಷ್ಟಮದಲ್ಲಿ ರಾಹುವಿರುವ ಕಾರಣ ಆರೋಗ್ಯದ ಬಗ್ಗೆ ಗಮನ, ಅನಾರೋಗ್ಯದಲ್ಲು ಕಾಳಜಿಯ ಅವಶ್ಯಕತೆ ಇರಲಿದೆ.

Simha Yearly Horoscope 2024: ಸಿಂಹ ರಾಶಿ ವರ್ಷ ಭವಿಷ್ಯ; ಸಂತೋಷ, ನೆಮ್ಮದಿ, ಪ್ರೀತಿ ಕುರಿತು ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 15, 2023 | 6:23 PM

Share

ಸಿಂಹವು ರಾಶಿ ಚಕ್ರದ ಐದನೇ ರಾಶಿ. ಈ ರಾಶಿಯ ಅಧಿಪತಿ ಸೂರ್ಯ. ವರ್ಷಾರಂಭದಲ್ಲಿ ಪಂಚಮದಲ್ಲಿ ಕುಜನ ಜೊತೆ ಇರುವನು. ಇವನ ಉಚ್ಚ ರಾಶಿ ಮೇಷವಾಗಿದ್ದು ನೀಚ ಸ್ಥಾನ ತುಲಾ ಆಗಿದೆ. ಉಚ್ಚಸ್ಥಾನಕ್ಕೆ ಬಂದಾಗ ಅನೇಕ ಲಾಭಗಳನ್ನು ಉಂಟುಮಾಡುವನು.

2024ರ ಸಿಂಹ ರಾಶಿಯ ಭವಿಷ್ಯ

ಈ ರಾಶಿಯವರಿಗೆ ಮಧ್ಯದ ಸ್ಥಿತಿ ಇರಲಿದೆ. ಗುರುವು ವರ್ಷದ ಮಧ್ಯದಲ್ಲಿ ದಶಮಕ್ಕೆ ಇರಲಿದ್ದು ಇಷ್ಟು ದಿನಗಳ ಸಂತೋಷ, ನೆಮ್ಮದಿ, ಪ್ರೀತಿ ಎಲ್ಲವೂ ಕಡಿಮೆ ಆಗುವುದು. ಅಷ್ಟಮದಲ್ಲಿ ರಾಹುವಿರುವ ಕಾರಣ ಆರೋಗ್ಯದ ಬಗ್ಗೆ ಗಮನ, ಅನಾರೋಗ್ಯದಲ್ಲು ಕಾಳಜಿಯ ಅವಶ್ಯಕತೆ ಇರಲಿದೆ.

ಧನಾಗಮನ :

ದ್ವಿತೀಯದಲ್ಲಿ ಕೇತುವಿರುವ ಕಾರಣ ಸಂಪತ್ತಲ್ಲಿ ನಿಮಗೆ ಲಭಿಸುವುದು ಕಷ್ಟವಾದೀತು. ಅಧಿಕ ಸಂಪತ್ತಿನ ನಿರೀಕ್ಷೆಯನ್ನು ನೀವು ಮಾಡುವುದು ಬೇಡ. ದ್ವಿತೀಯಾಧಿಪತಿಯಾದ ಬುಧನು ದಶಮಸ್ಥಾನಕ್ಕೆ ಬಂದಾಗ ಧನವೃದ್ಧಿಯು ಇರುವುದು.

ಪ್ರೀತಿ ಮತ್ತು ವಿವಾಹ :

ಗುರುವು ನಿಮ್ಮ ದಶಮಸ್ಥಾನದಲ್ಲಿ ಇರವುದರಿಂದ‌ ಗುರುಬಲವು ಪೂರ್ಣವಾಗಿ ಇರದು. ಪ್ರೇಮವು ಉಂಟಾಗಬಹುದು. ಅದು ತಾತ್ಕಾಲಿಕವಾಗಿ ಇರಬಹುದು. ವಿವಾಹವು ಬೇರೆ ಬೇರೆ ಕಾರಣಗಳಿಂದ ಮುಂದೆ ಹೋಗುವುದು.

ವೃತ್ತಿ :

ಚಿತ್ರಕಲೆಯಲ್ಲಿ‌ ಆಸಕ್ತಿ ಇಟ್ಟುಕೊಂಡವರು, ಕಲಾವಿದರು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವಿರಿ. ವಿಶೇಷವಾಗಿ ಇಂಜಿನಿಯರ್ ಗಳು ಹೆಚ್ಚಿನ ಆದಾಯ, ಹೊಸ ಯೋಜನೆಯನ್ನು ಪಡೆಯುವುದು, ಹಣದ ಹರಿವು ಅಧಿಕವಾಗುವುದು. ಕೃಷಿಯಲ್ಲಿಯೂ ಶ್ರಮಕ್ಕೆ ಯೋಗ್ಯವಾದ ಫಲವನ್ನು ಪಡೆಯುವಿರಿ.

ಆರೋಗ್ಯಸ್ಥಿತಿ :

ದ್ವಿತೀಯಾಧಿಪತಿಯಾದ ಬುಧನು ನಿಮ್ಮ ಆರೋಗ್ಯವನ್ನು ಕಾಪಾಡುವನು‌. ವರ್ಷದ ಮಧ್ಯಾವಧಿಯಲ್ಲಿ ಆರೋಗ್ಯದ ಮೇಲೆ ಗಮನ ಅವಶ್ಯಕ.‌ ಯಾವುದಾದರೂ ರೋಗವು ಕಾಣಿಸಿಕೊಂಡೀತು. ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ಲೋಹಿತ ಹೆಬ್ಬಾರ್, ಇಡುವಾಣಿ

ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ