ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2024 ಜನವರಿ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹುಬ್ಬಾ, ಯೋಗ: ಆಯುಷ್ಮಾನ್, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:23 ರಿಂದ ಸಂಜೆ 09:47 ರವರೆಗೆ, ಯಮಘಂಡ ಕಾಲ ಬೆಳಗ್ಗೆ 11:12 ರಿಂದ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:00 ರಿಂದ 03:25ರ ವರೆಗೆ.
ಇಂದಿನಿಂದ ನೂತನ ವರ್ಷವು ಆರಂಭವಾಗಲಿದೆ. ಈ ವರ್ಷವು ಕಳೆದ ವರ್ಷದ ಯೋಜನೆಗಳನ್ನು ಪೂರ್ಣಮಾಡಿಕೊಳ್ಳುವಂತೆ ಆಗಲಿ. ಎಲ್ಲರ ಸತ್ಸಂಕಲ್ಪವು ಪೂರ್ಣವಾಗಲಿ. ಆರೋಗ್ಯ, ನೆಮ್ಮದಿ, ಸಂತೋಷ, ಸಂಪತ್ತು, ಸ್ಥಾನಮಾನ, ಪ್ರತಿಭೆಯ ಅನಾವಣ, ವಿದೇಶ್ರಯಾಣ, ವಿದ್ಯಾಭ್ಯಾಸ ಎಲ್ಲದಕ್ಕೂ ಅನುಕೂಲವಾಗಲಿ. ದೇವತೋಪಾಸನೆಯನ್ನು ಬಿಡದೇ, ಗುರು, ಗೋವುಗಳ ದರ್ಶನವನ್ನು ಮಾಡುತ್ತಾ ವರ್ಷವನ್ನು ಶುಭದಿಂದ ಕಳೆಯಿರಿ.
ಮೇಷ ರಾಶಿ: ನಿಮ್ಮ ಆಲಸ್ಯವನ್ನು ಇತರರು ಸುಮ್ಮನೇ ಆಡಿಕೊಂಡಾರು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ವಹಿಸಿಕೊಂಡ ಕೆಲಸವನ್ನು ನಿಶ್ಚಿತ ಸಮಯಕ್ಕೆ ಮುಗಿಸಲು ಆಗದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು.
ವೃಷಭ ರಾಶಿ: ಮಾತನ್ನು ನಿಧಾನವಾಗಿ ಆಡುವಿರಿ. ಹಳೆಯ ಗೆಳೆಯರು ನಿಮಗೆ ಅನಿರೀಕ್ಷಿತವಾಗಿ ದೊರೆಯಬಹುದು. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಆಗುವ ತೊಂದರೆಯನ್ನು ಲೆಕ್ಕಿಸುವಿರಿ. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಮನೋರಂಜನೆಗೆ ಭಾಗವಹಿಸುವುದು ಇಷ್ಟವಾಗುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ಹೊಸ ಹೂಡಿಕೆಯ ಬಗ್ಗೆ ಆಸಕ್ತಿಯಿರದು.
ಮಿಥುನ ರಾಶಿ: ಉದ್ಯಮದಲ್ಲಿ ನಿಮ್ಮ ತೊಡಗುವಿಕೆ ಎಷ್ಟಿದೆ ಎನ್ನುವುದರ ಮೇಲೆ ಲಾಭವು ನಿರ್ಧಾರವಾಗುವುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ಗಣ್ಯರ ಭೇಟಿಯನ್ನು ಮಾಡುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು.
ಕಟಕ ರಾಶಿ: ದಾಂಪತ್ಯದ ಕಲಹವು ಬೇರೆ ದಾರಿಯಲ್ಲಿ ನಡೆಯುವುದು. ಪ್ರೇಮಿಗಳು ಎಲ್ಲಿಯಾದರೂ ಭೇಟಿಯಾಗಲು ಯೋಚಿಸುವರು. ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ಒಬ್ಬೊಂಟಿಯಾಗಿ ನಿರ್ಜನ ಪ್ರದೇಶದಲ್ಲಿ ವಿಹಾರ ಮಾಡುವಿರಿ. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ.
ಸಿಂಹ ರಾಶಿ: ಪೂರ್ವಾರ್ಜಿತ ಸಂಪತ್ತನ್ನೇ ನಂಬಿ ನಿಶ್ಚಿಂತರಾಗುವಿರಿ. ನಿಮ್ಮ ಶ್ರಮದ ಬಗ್ಗೆಯೂ ಗಮನವಿರಲಿ. ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ರಾಜಕೀಯದತ್ತ ಒಲವು ಉಂಟಾದೀತು.
ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ನಿಮ್ಮನ್ನು ಅತಿಥಿಗಳಾಗಿ ಆಹ್ವಾನಿಸಬಹುದು. ನಿಮ್ಮ ಪ್ರೇಮಸಂಬಂಧವು ಸಡಿಲಾಗಬಹುದು. ನಿಮ್ಮ ಜವಾಬ್ದಾರಿಗೆ ಬೆನ್ನು ಹಾಕಿಹೋಗುವುದು ಬೇಡ. ಬರುವುದನ್ನು ಎದುರಿಸುವ ತಾಕತ್ತನ್ನು ಬೆಳೆಸಿಕೊಳ್ಳಿ.
ಕನ್ಯಾ ರಾಶಿ: ಸಣ್ಣ ಉದ್ಯೋಗವಿದ್ದರೂ ನಿರುದ್ಯೋಗದಂತೆ ಅನ್ನಿಸಬಹುದು. ಯಾರ ಜೊತೆಯೂ ಬೆರೆಯಬೇಕು ಎನ್ನುವ ಆಸೆಯೂ ಇರದು. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ. ಕಲಾವಿದು ಕೆಲವು ಅವಕಾಶದಿಂದ ವಂಚಿತರಾಗಬಹುದು. ಹಣಕಾಸಿನ ಹೂಡಿಕೆಯು ಹೊಸ ತಿರುವನ್ನು ಪಡೆದೀತು. ಖರ್ಚಿನ ಬಗ್ಗೆ ಅಂದಾಜಿರಲಿ. ನಿಮ್ಮ ವಸ್ತುಗಳು ಕಣ್ಮರೆಯಾದೀತು.
ತುಲಾ ರಾಶಿ: ನಿಮ್ಮ ಪ್ರತಿಭೆಯ ಅನಾವರಣವಾಗುವುದು. ಪ್ರಾಮಾಣಿಕತೆಯನ್ನು ನೀವು ಬಿಡದೇ ಮುಂದುವರಿಸಿ. ಭೂಮಿಯ ವ್ಯವಹಾರಕ್ಕೆ ಯಾರನ್ನಾದರೂ ಸಹಾಯಕರನ್ನು ಪಡೆಯುವಿರಿ. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಕೆಲವು ಕೆಲಸಗಳಿಗೆ ತಾತ್ಕಾಲಿಕ ವಿರಾಮವನ್ನು ಕೊಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದ್ದು ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು. ಮನೆಯಲ್ಲಿ ಸಂಭ್ರಮಕ್ಕೆ ತಯಾರಿಯನ್ನು ನಡೆಸುವಿರಿ.
ವೃಶ್ಚಿಕ ರಾಶಿ: ಆತುರದ ತೀರ್ಮಾನದಿಂದ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಎಲ್ಲಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಲಿದ್ದೀರಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಅವಕಾಶಗಳು ಬಂದು ಬಾಗಿಲು ತಟ್ಟಿದರೂ ತೆರೆಯುವ ಕಲ್ಪನೆಯೂ ಬಾರದು. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ನಂಬಿಕೆಯನ್ನು ಬಲವಾಗಿಸಿಕೊಳ್ಳಬೇಕಾಗುವುದು. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು.
ಧನು ರಾಶಿ: ವಿರೋಧಿಗಳು ನಿಮ್ಮನ್ನು ಯಾವುದಾದರೂ ಕೆಲಸದಲ್ಲಿ ಸಿಕ್ಕಿಸಬಹುದು. ಕಾನೂನಿನ ಬಗ್ಗೆ ನಿಮಗೆ ಸರಿಯಾದ ಜ್ಞಾನವಿರಲಿ. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಶುಭ ಸಮಾರಂಭಗಳಿಗೆ ಹೋಗಬೇಕು ಎಂದುಕೊಂಡರೂ ಆಗದೇಹೋಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸು ಬರುವುದು.
ಮಕರ ರಾಶಿ: ಹೂಡಿಕೆಯನ್ನು ಕುರುಡಾಗಿ ಮಾಡುವುದು ಬೇಡ. ಕೆಲವು ಅನುಭವಿಗಳ ತಜ್ಞತೆಯನ್ನು ಬಳಿಸಿಕೊಳ್ಳಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿಗೆ ಚಟುವಟಿಕೆಗಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ.
ಕುಂಭ ರಾಶಿ: ಹಲವು ದಿನಗಳ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿ ಮುನ್ನಡೆಸುವಿರಿ. ವೇತನದ ವಿಚಾರದಲ್ಲಿ ಘರ್ಷಣೆಯಾದೀತು. ಪ್ರಯಾಣದಿಂದ ಆಯಾಸಗೊಂಡು ವಿಶ್ರಾಂತಿ ಪಡೆಯುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ಪರರಕಾರ್ಯಕ್ಕೆ ಸಹಾಯ ಮಾಡಲಿದ್ದೀರಿ.
ಮೀನ ರಾಶಿ: ನಿಮ್ಮ ಪ್ರಯತ್ನಗಳು ಫಲ ನೀಡುವ ಕಾರಣ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಿ ಉದ್ಯಮಕ್ಕೆ ಪೂರ್ಕವಾಗಲಿದೆ, ಸಾಹಿತಿಗಳಿಗೆ ಅವಕಾಶಗಳು ಸಿಕ್ಕಿದ್ದು ಅದನ್ನು ಉಪಯೋಗಿಸಿಕೊಳ್ಳುವಿರಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)