AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸುವಿರಿ, ಹಳೆಯ ವಿಚಾರ ಮತ್ತೆ ಕೆದಕುವಿರಿ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 01, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸುವಿರಿ, ಹಳೆಯ ವಿಚಾರ ಮತ್ತೆ ಕೆದಕುವಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 01, 2024 | 12:10 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 01) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹುಬ್ಬಾ, ಯೋಗ: ಆಯುಷ್ಮಾನ್, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:23 ರಿಂದ ಸಂಜೆ 09:47 ರವರೆಗೆ, ಯಮಘಂಡ ಕಾಲ ಬೆಳಗ್ಗೆ 11:12 ರಿಂದ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:00 ರಿಂದ 03:25ರ ವರೆಗೆ.

ಮೇಷ ರಾಶಿ: ನಿಮ್ಮ ಆಲಸ್ಯವನ್ನು ಇತರರು ಸುಮ್ಮನೇ ಆಡಿಕೊಂಡಾರು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ವಹಿಸಿಕೊಂಡ ಕೆಲಸವನ್ನು ನಿಶ್ಚಿತ ಸಮಯಕ್ಕೆ ಮುಗಿಸಲು ಆಗದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು.

ವೃಷಭ ರಾಶಿ: ಮಾತನ್ನು ನಿಧಾನವಾಗಿ ಆಡುವಿರಿ. ಹಳೆಯ ಗೆಳೆಯರು ನಿಮಗೆ ಅನಿರೀಕ್ಷಿತವಾಗಿ ದೊರೆಯಬಹುದು. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಆಗುವ ತೊಂದರೆಯನ್ನು ಲೆಕ್ಕಿಸುವಿರಿ. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಮನೋರಂಜನೆಗೆ ಭಾಗವಹಿಸುವುದು ಇಷ್ಟವಾಗುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ಹೊಸ ಹೂಡಿಕೆಯ ಬಗ್ಗೆ ಆಸಕ್ತಿಯಿರದು.

ಮಿಥುನ ರಾಶಿ: ಉದ್ಯಮದಲ್ಲಿ ನಿಮ್ಮ ತೊಡಗುವಿಕೆ ಎಷ್ಟಿದೆ ಎನ್ನುವುದರ ಮೇಲೆ ಲಾಭವು ನಿರ್ಧಾರವಾಗುವುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ಗಣ್ಯರ ಭೇಟಿಯನ್ನು ಮಾಡುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು.

ಕಟಕ ರಾಶಿ: ದಾಂಪತ್ಯದ ಕಲಹವು ಬೇರೆ ದಾರಿಯಲ್ಲಿ ನಡೆಯುವುದು. ಪ್ರೇಮಿಗಳು ಎಲ್ಲಿಯಾದರೂ ಭೇಟಿಯಾಗಲು ಯೋಚಿಸುವರು. ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ಒಬ್ಬೊಂಟಿಯಾಗಿ ನಿರ್ಜನ ಪ್ರದೇಶದಲ್ಲಿ ವಿಹಾರ ಮಾಡುವಿರಿ. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ.