ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 31) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮಘಾ, ಯೋಗ: ಪ್ರೀತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ ಸಂಜೆ 06:13 ರವರೆಗೆ,
ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:24 ರಿಂದ 04:48ರ ವರೆಗೆ.
ಮೇಷ ರಾಶಿ: ಸಾಲಬಾಧೆಯನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಹುಡುಕುವಿರಿ. ಅನೇಕ ಹೂಡಿಕೆಗಳ ಬಗ್ಗೆಯೂ ನಿಮ್ಮ ಮನಸ್ಸು ಹೋಗುವುದು. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾದೀತು. ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ಪಡೆಯುವಿರಿ. ಹದಗೆಡುವ ಆರೋಗ್ಯವನ್ನು ಮೊದಲೇ ಸರಿಮಾಡಿಕೊಂಡು ಜಾಣರಾಗಿರಿ. ಅಸಭ್ಯವರ್ತನೆಯು ನಿಮಗೆ ಇಷ್ಟವಾಗದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೂ ಪ್ರಯೋಜನವಾಗದು. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಸಂಗಾತಿಯ ಬೆಂಬಲವಿಲ್ಲದ ಕಾರ್ಯವನ್ನು ಇಂದು ಮಾಡುವಿರಿ. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಬೇಡವೆಂದು ಬಿಟ್ಟ ವಸ್ತುವನ್ನು ಪುನಃ ಬಳಸುವಿರಿ.
ವೃಷಭ ರಾಶಿ: ಹೊಟ್ಟೆಕಿಚ್ಚು ಈಗ ಬಹಳ ಸುಂದರ ಎಂದು ಕಂಡರೂ ಅದು ನಿಮ್ಮನ್ನೇ ಸುಡುವುದು. ಮನಃಸ್ಥೈರ್ಯವಿಲ್ಲದ ಯಾವ ಕಾರ್ಯವನ್ನೂ ಮಾಡುವ ಹುಂಬುತನ ಬೇಡ. ಅಧಿಕ ವಿಶ್ರಾಂತಿಯು ನಿಮಗೆ ಜಾಡ್ಯವನ್ನು ತಂದೀತು. ಹಳೆಯ ವಸ್ತುಗಳ ಮೇಲೆ ವ್ಯಾಮೋಹವು ಅಧಿಕವಾಗಿ ಇರುವುದು. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಸಮಯಪ್ರಜ್ಞೆಯಿಂದ ನೀವು ಯೋಗ್ಯ ಮಾತುಗಳನ್ನು ಆಡುವಿರಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ನಿಮ್ಮ ಕುತೂಹಲದ ಸಂಗತಿಗಳಿಗೆ ತಣ್ಣೀರು ಬೀಳಬಹುದು. ಅತಿಯಾದ ಸಂತೋಷದಿಂದ ಹಿಮ್ಮುಖರಾಗುವಿರಿ.
ಮಿಥುನ ರಾಶಿ: ಅನುಕೂಲಕರ ವಾತಾವರಣವನ್ನು ಹಾಳುಮಾಡಿಕೊಳ್ಳುವಿರಿ, ಆರೋಗ್ಯವು ಪೂರ್ಣವಾಗಿ ಸರಿಯಾಗದು. ಹಾಗಾಗಿ ಅತಿಯಾದ ಉತ್ಸಾಹವೂ ಬೇಡ. ಸ್ತ್ರೀಯರಿಗೆ ಮನೆಯ ನೆನಪಾಗಿ ಸಂಗಾತಿಯ ಜೊತೆ ಹಂಚಿಕೊಳ್ಳುವರು. ಹೊರಗಿನ ಆಹಾರವನ್ನು ತಿನ್ನುವ ಅನಿವಾರ್ಯತೆ ಬರಬಹುದು. ಇಂದಿನ ನಿಮ್ಮ ಸಿಟ್ಟು ನಗಣ್ಯವಾದೀತು. ತಂದೆಯ ಜೊತೆಗಿನ ಮನಸ್ತಾಪವನ್ನು ನೀವು ಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಕಲಾವಿದರು ಅತಿಯಾದ ನಿರೀಕ್ಷೆಯಿಂದ ಬೇಸರವನ್ನು ತಂದುಕೊಳ್ಳುವರು. ನಿಮ್ಮ ವಿದ್ಯೆಗೆ ಗೌರವ ಸಿಗುವುದು. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವು ನಿಮಗೆ ದುಃಖಕೊಟ್ಟೀತು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಆದಾಯದಲ್ಲಿ ನಿಯಮವನ್ನು ಮೀರುವುದು ಬೇಡ.
ಕಟಕ ರಾಶಿ: ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬರುವುದು. ನಿಮ್ಮ ಯೋಜನೆಗಳನ್ನು ಮುಂದೂಡುವುದು ಉತ್ತಮ. ನಿಷ್ಪ್ರಯೋಜಕ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಕರಕುಶಲ ವಸ್ತುಗಳನ್ನು ನಿರ್ಮಿಸುವುದು ಇಷ್ಟದ ಸಂಗತಿಯಾಗಲಿದೆ. ಇಂದು ನಿಮ್ಮ ಮನೆಗೆ ಅತಿಥಿಗಳ ಆಗಮನವಾಗಬಹುದು. ಅಶುಭ ವಾರ್ತೆಯು ನಿಮ್ಮನ್ನು ವಿಚಲಿತಗೊಳಿಸೀತು. ರಾಜಕೀಯದ ಅನಿರೀಕ್ಷಿತ ಬದಲಾವಣೆಯ ಬಿಸಿಯು ನಿಮಗೂ ತಟ್ಟಬಹುದು. ಕೆಲವನ್ನು ನೀವು ಹೇಳಿ ಮಾಡುವುದು ಸಾಧ್ಯವಾಗದು. ನಿಮ್ಮ ಮಾತನಲ್ಲಿ ಸುಳ್ಳಿರುವುದು ಇತರರಿಗೂ ಗೊತ್ತಾಗುವುದು. ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಸಣ್ಣ ಉದ್ಯೋಗದವರು ಅಲ್ಪ ಲಾಭವನ್ನು ಗಳಿಸುವರು. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ಬಗ್ಗೆ ಇರುವ ಅಭಿಪ್ರಾಯವು ಬದಲಾಗುವ ಸಂಭವವಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು.