Horoscope: ಈ ರಾಶಿಯವರು ಇಂದು ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳುವಿರಿ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 31 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಈ ರಾಶಿಯವರು ಇಂದು ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳುವಿರಿ
ಜ್ಯೋತಿಷ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Dec 31, 2023 | 12:45 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 31) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮಘಾ, ಯೋಗ: ಪ್ರೀತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ ಸಂಜೆ 06:13 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:24 ರಿಂದ 04:48ರ ವರೆಗೆ.

ಧನು ರಾಶಿ : ಮಾತಿನ ಘರ್ಷಣೆಯಿಂದ ದ್ವೇಷವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಕಛೇರಿಯ ಕೆಲಸವನ್ನು ಮಾಡಬೇಕಾಗುವುದು. ಹಿತಶತ್ರುಗಳಿಂದ ಕೆಲವನ್ನು ಕಳೆದುಕೊಳ್ಳಬೇಕಾಗುವುದು. ಸಂಪತ್ತಿನ ಅಹಂಕರವು ಬೇಡದ್ದನ್ನು ಹೇಳಿಸಬಹುದು. ಕುಟುಂಬದವರ ಜೊತೆ ನಿಮ್ಮ ಒಡಾನಾಟವನ್ನು ಕಡಿಮೆ ಮಾಡಿಕೊಳ್ಳುವಿರಿ. ಮಿತ್ರರ ಸಹಾಯವನ್ನು ನೀವು ಉಪೇಕ್ಷಿಸುವಿರಿ. ಓಡಾಟದಿಂದ ಕೆಲಸವಾಗದು. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ಸಂಕಷ್ಟದಲ್ಲಿ ಇರುವವರಿಗೆ ನಿಮ್ಮ ಸಹಕಾರವು ಬೇಕಾದೀತು. ಅಪರಿಚಿತರ ಸ್ನೇಹವನ್ನು ಮಾಡುವಾಗ ಜಾಗರೂಕತೆ ಇರಲಿ. ಸ್ನೇಹವೇ ಪ್ರೇಮವಾಗಿ ಬದಲಾಗಬಹುದು. ಮುಖ್ಯ ಕೆಲಸವು ಮರೆತುಹೋಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ. ಗೊಂದಲವನ್ನು ಅಪರಿಚಿತರು ಪರಿಹರಿಸಿಯಾರು.

ಮಕರ ರಾಶಿ : ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಪ್ರಯತ್ನವು ಪರಿಪೂರ್ಣವಾಗಿರಲಿ. ಸಂಸ್ಥೆಗಳ ಮುಖ್ಯಸ್ಥಾನವನ್ನು ಪಡೆದುಕೊಳ್ಳುವಿರಿ. ನಿಮ್ಮ ಸಾಮಾಜಿಕ ಕಾರ್ಯದಿಂದ ಪ್ರಶಂಸೆ ಹಾಗೂ ಗೌರವಗಳು ಲಭಿಸುವುವು. ಬೇಡ ಆಲೋಚನೆಗಳನ್ನು ನೀವು ಮಾಡುತ್ತಾ ಇರುವಿರಿ. ಹಿರಿಯರ ಮಾರ್ಗದರ್ಶನವನ್ನು ನೀವು ಅಲ್ಲಗಳೆಯುವಿರಿ. ಧನವ್ಯಯವಾಗುವ ಸಂದರ್ಭವು ಬರಬಹುದು. ತುರ್ತು ಹಣ ಸಂಪಾದನೆಯನ್ನು ಮಾಡಬೇಕಾದೀತು. ಸಹೋದರರಿಂದ ಅಪರೋಕ್ಷ ಸಹಾಯವು ನಿಮಗಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ.ಶತ್ರುಗಳ ಬಗ್ಗೆ ನಿಮಗೆ ಕುತೂಹಲವಿರುವುದು. ನಿಮ್ಮ ನಡೆಯುವುದು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಅತಿಯಾದ ನಿದ್ರೆಯಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಸಾಮಾಜಿಕ ಗೌರವವನ್ನು ನೀವು ಪಡೆಯಲಿದ್ದೀರಿ. ನಿರಂತರ ಕೆಲಸಕ್ಕೆ ಫಲವು ಸಿಗಲಿದೆ.

ಕುಂಭ ರಾಶಿ : ಇಂದು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಅದರಿಂದ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆದುಕೊಳ್ಳುವಿರಿ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ತಮ್ಮ ಕೆಲಸ ಮತ್ತು ಆತ್ಮಸಾಕ್ಷಿಯ ಬಗ್ಗೆ ಸರಿಯಾದ ಮೆಚ್ಚುಗೆ ಪಡೆಯಬಹುದು. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಸಾಲವನ್ನು ಮಾಡುವಾಗ ಯಾರದ್ದಾದರೂ ಸಲಹೆಯನ್ನು ಪಡೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಸಂಬಂಧಗಳಲ್ಲಿ ಸೌಹಾರ್ದತೆ ಇರಲಿದೆ. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಆದಾಯದ ಮೂಲವು ಬದಲಾಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದರಿಂದ ಬೇಸರವಾದೀತು.

ಮೀನ ರಾಶಿ : ಇಂದು ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸಬಹುದು. ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಬಹುದು. ಇಂದು ನಿಮ್ಮ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ಆಗುತ್ತವೆ. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳಲಾಗದು. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಅಷ್ಟಾಗಿ ಆಸಕ್ತಿಯು ಇರದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಮಾತಿನ ಮೇಲೆ ಹಿಡಿತವು ಬೇಕಾದೀತು. ನಿಮಗೆ ಸಂಗಾತಿಯ ಮೇಲೆ ಸಿಟ್ಟಾಗುವ ಸನ್ನಿವೇಶವು ಬರಲಿದೆ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ.

-ಲೋಹಿತ ಹೆಬ್ಬಾರ್ – 8762924271 (what’s app only)

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು