AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಶಿ ಭವಿಷ್ಯ: ಈ ರಾಶಿಯವರಿಗೆ ವಾಹನದಿಂದ ಕೆಡುಕಾಗುವ ಸಾಧ್ಯತೆ ಇದೆ-ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 31) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

ರಾಶಿ ಭವಿಷ್ಯ: ಈ ರಾಶಿಯವರಿಗೆ ವಾಹನದಿಂದ ಕೆಡುಕಾಗುವ ಸಾಧ್ಯತೆ ಇದೆ-ಎಚ್ಚರ
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 31, 2023 | 12:30 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 31) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮಘಾ, ಯೋಗ: ಪ್ರೀತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ ಸಂಜೆ 06:13 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:24 ರಿಂದ 04:48ರ ವರೆಗೆ.

ಸಿಂಹ ರಾಶಿ : ಉದ್ಯೋಗಸ್ಥರು ವೃತ್ತಿಯನ್ನು ಬದಲಿಸುವ ಚಿಂತನೆಯಲ್ಲಿ ಇರುವರು. ಅಂತರ್ಜಾಲದಲ್ಲಿ ಅಪರಿಚಿತರ ಸಂಪರ್ಕವು ಬೆಳೆಯಬಹುದು. ನಿಮ್ಮ ಅಭಿಪ್ರಾಯವು ಸ್ಪಷ್ಟವಾಗಿರಲಿ. ನಿಮ್ಮ ಕರಗತ ವಿದ್ಯೆಯನ್ನು ಪ್ರಯೋಗ ಮಾಡಿ. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಕೆಲವು ಜವಾಬ್ದಾರಿಗಳು ನಿಮ್ಮ ಹಿಡಿತದಿಂದ ತಪ್ಪಿಹೋಗಬಹುದು. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು.

ಕನ್ಯಾ ರಾಶಿ : ವ್ಯವಹಾರದಲ್ಲಿ ಆಶಾವಾದಿತನದಿಂದ ಬೇಸರವನ್ನು ಅನುಭವಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ಕೊಟ್ಟರೂ ಅಸಮಾಧಾನವು ಅಧಿಕವಾಗಿರುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ನಿಮ್ಮ ಹಿತಚಿಂತಕರ ಬಗ್ಗೆ ತಾತ್ಸಾರಭಾವವು ಬರಬಹುದು. ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಮಕ್ಕಳ ಹಣಕಾಸಿನ ವ್ಯವಹಾರವು ನಿಮಗೆ ಇಷ್ಟವಾಗದು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ಸೊಂಟ ನೋವು ಕಾಣಿಸಿಕೊಂಡೀತು.

ತುಲಾ ರಾಶಿ : ಸೃಜನಶೀಲತೆಗೆ ಇಂದು ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಹೊಸ ಜವಾಬ್ದಾರಿಗಳನ್ನು ಪಡೆಯುವ ಉತ್ಸಾಹ, ಯೋಗ್ಯತೆ ಎರಡೂ ನಿಮ್ಮಲ್ಲಿ ಇರುವುದು. ಸುಮ್ಮನೇ ನಿಮ್ಮ ಬಗ್ಗೆ ಹೊಗಳುವುದು ನಿಮಗೆ ಇಷ್ಟವಾಗದ ಸಂಗತಿಯಾಗಿದೆ. ವ್ಯವಹಾರದಲ್ಲಿ ಆದ ಅಲ್ಪ ನಷ್ಟವೂ ನಿಮ್ಮ ಮನಸ್ಸನ್ನು ವಿಚಲಿತವಾಗಿಸೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ನೂತನ ಗೃಹದಲ್ಲಿ ವಾಸಮಾಡುವುದು ನಿಮಗೆ ಬಹಳ ಉತ್ಸುಕತೆಯ ವಿಚಾರವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಕೆಲವು ಬಂಧಗಳನ್ನು ನೀವು ಬಿಡಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸಿ.

ವೃಶ್ಚಿಕ ರಾಶಿ : ನಿಮ್ಮ ಅಧಿಕಾರವನ್ನು ಬಳಸಿಕೊಂಡು ಸಲ್ಲದ ವ್ಯವಹಾರವನ್ನು ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನಿಮ್ಮವರಿಗೆ ಇರುವ ಸದಭಿಪ್ರಾಯವನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಮಕ್ಕಳಿಗೆ ಬೇಕಾದ ಅನುಕೂಲತೆಗಳನ್ನು ನೀವು ಮಾಡಿಕೊಳ್ಳುವಿರಿ. ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ವಿವಿಧ ಹೂಡಿಕೆಗಳ ಬಗ್ಗೆ ಆಸಕ್ತಿ ಉಂಟಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವು ಸಿಗದೇಹೋಗಬಹುದು. ಬಂಧುಗಳ ಜೊತೆಗೆ ಮಾತುಕತೆಯು ಇಷ್ಟವಾಗದು. ಧಾರ್ಮಿಕ ಕಟ್ಟುಪಾಡುಗಳಿಂದ ನಿಮಗೆ ಬಂಧನದಂತೆ ಆದೀತು.

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ