Weekly Horoscope: ವಾರ ಭವಿಷ್ಯ: ಡಿ.31 ರಿಂದ ಜ.06 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಡಿಸೆಂಬರ್ 31 ರಿಂದ​ ಜನವರಿ 06 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ಡಿ.31 ರಿಂದ ಜ.06 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 31, 2023 | 12:01 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಡಿಸೆಂಬರ್ 31 ರಿಂದ​ ಜನವರಿ 06 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : 2024ರ ಹೊಸ ವರ್ಷದ ಮೊದಲ‌ ವಾರವು ಮಿಶ್ರಫಲದಿಂದ ಕೂಡಿರಲಿದೆ. ಗುರುವು ನಿಮ್ಮ ರಾಶಿಯಲ್ಲಿ ಇದ್ದು, ರಾಶಿಯ ಅಧಿಪತಿಯು ಸ್ವಸ್ಥಾನದಲ್ಲಿ ಸೂರ್ಯನ ಜೊತೆಗಿರುವನು. ನವಮಸ್ಥಾನವಾದ ಕಾರಣ ಎಲ್ಲರಿಂದ ಪ್ರೀತಿ, ಗೌರವಕ್ಕೆ ಪಾತ್ರರಾಗುವಿರಿ. ನಿಮ್ಮ ಯೋಜನೆಯಲ್ಲಿ ಸಫಲತೆಯನ್ನು ಕಾಣುವ ಸಾಧ್ಯತೆ ಇದೆ. ಷಷ್ಠದಲ್ಲಿ ಕೇತುವುದು ನಿಮ್ಮ ದೇಹದೊಳಗೆ ಅದರಲ್ಲಿಯೂ ಸೊಂಟದ ಭಾಗಕ್ಕೆ ತೊಂದರೆ ಕೊಟ್ಟಾನು. ಶನಿಯು ಏಕಾದಶದಲ್ಲಿ ಇದ್ದು ಕರ್ಮದ ಮೂಲಕ‌ ಸಂಪತ್ತು ಬರುವಂತೆ‌ಮಾಡುವನು. ಕಾರ್ತಿಕೇಯನ ಸ್ಮರಣೀಯನ್ನು ಸಮಯ ಸಿಕ್ಕಾಗ ಮಾಡಿ, ಧೈರ್ಯ, ಸ್ಥೈರ್ಯವನ್ನು ತಂದುಕೊಳ್ಳಿ.

ವೃಷಭ ರಾಶಿ : ಎರಡನೇ ರಾಶಿಯಾದ ಇದು ದೈವಾನುಕೂಲದಿಂದ‌ ದೂರವಿದೆ. ಗುರುವು ದುರ್ಬಲನಾಗಿ ಇದ್ದು ನಿಮ್ಮ ಚಿಂತಿತ ಅಭಿಷ್ಟಗಳನ್ನು ಪೂರೈಸಲಾರನು. ದಶಮದ ಶನಿಯು ನಿಮ್ಮ ಕಾರ್ಯಗಳಲ್ಲಿ ಶ್ರದ್ಧೆಯನ್ನು ಕಡಿಮೆ‌ ಮಾಡಿಸುವನು. ಏಕಾದಶದಲ್ಲಿ ಇರುವ ರಾಹುವು ಶನಿಯ ಫಲವನ್ನೇ ಕೊಡುವನು. ಹಿರಿಯದಿಂದ ದೂರವಿರಬೇಕಾದೀತು. ಪ್ರೀತಿಯಲ್ಲಿ ಇರುವವರಿಗೆ ವಿವಾಹಭಾಗ್ಯವು ಇರಲಿದೆ. ಉನ್ನತ ಶಿಕ್ಷಣ ಆಸೆಯನ್ನು ಬಿಡುವಿರಿ. ಓದು ಸಾಕೆನಿಸಬಹುದು. ಅಷ್ಟಮದಲ್ಲಿ ಸೂರ್ಯನಿರುವ ಕಾರಣ ತಂದೆಯ ಆರೋಗ್ಯವು ವ್ಯತ್ಯಾಸವಾದೀತು. ದುರ್ಗಾದೇವಿಯ ಆರಾಧನೆಯನ್ನು ಶುಕ್ರವಾರದಂದು ಮಾಡಿ.

ಮಿಥುನ ರಾಶಿ : ಇದು ರಾಶಿ ಚಕ್ರದ ಮೂರನೇ ರಾಶಿಯಾಗಿದ್ದು ವರ್ಷಾರಂಭದಲ್ಲಿ ಉತ್ತಮ ಫಲವನ್ನು ಕಾಣುವಿರಿ. ಸಪ್ತಮದಲ್ಲಿ ಬುಧ ಹಾಗೂ ಸೂರ್ಯರ ಉಪಸ್ಥಿತಿಯು ಒಳ್ಳೆಯ, ಉತ್ತಮ ಕುಲದ, ರೂಪವತಿಯಾದ ಸಂಗಾತಿಯನ್ನು ಪಡೆಯುವಂತೆ ಮಾಡುವುದು. ಶುಕ್ರ ಹಾಗೂ ಕುಜರು ಷಷ್ಠದಲ್ಲಿ ಇದ್ದು ನಿಮ್ಮ ಹಳೆಯ ಪ್ರೇಮವನ್ನು ತಿಳಿಸುತ್ತದೆ. ಚತುರ್ಥದಲ್ಲಿ ಕೇತುವು ಮಾತೃಸೌಖ್ಯವನ್ನು ಕಡಿಮೆ ಮಾಡಿಸುವನು. ತಾಯಿಯ ಬಗ್ಗೆ ಸದ್ಭಾವ, ಪ್ರೀತಿ ಇರದು. ದಶಮದಲ್ಲಿ ರಾಹುವಿದ್ದು ಕಾರ್ಯದಲ್ಲಿ ನೈಪುಣ್ಯತೆ ಇದ್ದರೂ ಅದು ಪ್ರಕಾಶಕ್ಕೆ ಬರದು. ಏಕಾದಶದ ಗುರುವು ನಿಮ್ಮ ಆರೋಗ್ಯಕ್ಕೆ ಪೂರಕವಾಗಿ ಎಲ್ಲವನ್ನೂ ನಡೆಸುವನು. ಲಕ್ಷ್ಮೀನಾರಾಯಣರನ್ನು ಆರಾಧಿಸಿ.

ಕಟಕ ರಾಶಿ : ವರ್ಷದ ಆರಂಭದ ವಾರದಲ್ಲಿ ನೀವು ಉತ್ಸಾಹವನ್ನು ಕಳೆದುಕೊಳ್ಳುವಿರಿ. ಅಷ್ಟಮದ ಶನಿಯು ನಿಮ್ಮ ಎಲ್ಲ ಕೆಲಸ, ಮಾನಸಿಕ ಸ್ಥಿತಿ ಹಾಗೂ ಹಣಕಾಸನ್ನು ನಿಯಂತ್ರಣಕ್ಕೆ ತರುವನು. ಉದ್ಯೋಗ ಸ್ಥಾನದಲ್ಲಿ ಗುರುವಿರುವ ಕಾರಣ ಯಾವುದೇ ದೊಡ್ಡ ತೊಂದರೆಗಳು ಬಾರದೇ ಸಣ್ಣದರಲ್ಲಿಯೇ ಮುಕ್ತಾಯವಾಗುವುದು. ನವಮದಲ್ಲಿ ರಾಹುವಿದ್ದು ಯಾರಿಂದಲೂ ಗೌರವ, ಪ್ರೀತಿ ಸಿಗದು. ಹಣಕಾಸಿಗೂ ಬಹಳ ಶ್ರಮಿಸುವಿರಿ‌. ಪಂಚಮದಲ್ಲಿ ಕುಜ ಹಾಗೂ ಶುಕ್ರರು ಇರಲಿದ್ದು ಉನ್ನತ ಅಭ್ಯಾಸಕ್ಕೆ, ಅದರಲ್ಲಿಯೂ ಕಲಾತ್ಮಕವಾದ ವಿಚಾರಕ್ಕೆ ಆಸಕ್ತಿಯು ಹೆಚ್ಚಿರುವುದು. ಮಹಾಗೌರಿಯ ಆರಾಧನಯಿಂದ ನೆಮ್ಮದಿಯನ್ನು ಕಾಣಬಹುದು.

ಸಿಂಹ ರಾಶಿ : ರಾಶಿ ಚಕ್ರದ ಐದನೇ ರಾಶಿಯಾದ ಇವರಿಗೆ ಹೊಸ ವರ್ಷದ ಮೊದಲ ವಾರವು ಶುಭಪ್ರದವೇ. ಗುರುಬಲಿಷ್ಠನಾಗಿ ಮಿತ್ರನ ಸ್ಥಾನವಾದ ಮೇಷದಲ್ಲಿ ಇದ್ದಾನೆ. ಹಾಗಾಗಿ ಯಾವ ಕೆಲಸದಲ್ಲಿಯೂ ನಿಮಗೆ ಹಿನ್ನಡೆಯಾಗದು. ಅಷ್ಟಮದಲ್ಲಿ ರಾಹುವು ಶಸ್ತ್ರ ಚಿಕಿತ್ಸೆಯಾಗುವಂತ ಅನಾರೋಗ್ಯವನ್ನು ಕೊಡುವನು. ಮಕ್ಕಳಿಂದ‌ ಶುಭ ಸಮಾಚಾರವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಉದ್ಯೋಗದಲ್ಲಿ ಯಾವುದೇ ಅಹಿತಕರವಾದ ಸಂದರ್ಭಗಳು ಬಾರದು. ದ್ವಿತೀಯದಲ್ಲಿ ಕೇತುವಿರುವ ಕಾರಣ ಮಾತಗಳು‌‌ ಇತರರಿಗೆ ಕಠೋರವೆನಿಸಬಹುದು. ನಿಮ್ಮ‌ ಮಾತನ್ನು ಕೇಳುವ ಸಮಾಧಾನವನ್ನೂ ಕಳೆದುಕೊಳ್ಳಬಹುದು. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಅರ್ಪಿಸಿ.

ಕನ್ಯಾ ರಾಶಿ : 2024 ರ ಮೊದಲ ವಾರದಲ್ಲಿ ಈ ರಾಶಿಯವರಿಗೆ ಅಶುಭಫಲವು ಅಧಿಕವಾಗಿ ಇರುವುದು. ಗುರುಬಲವೂ ಇಲ್ಲದೇ ಬಹಳ ನೋವನ್ನು ಅನುಭವಿಸಬೇಕಾಗುವುದು. ಸ್ವರಾಶಿಯಲ್ಲಿ ಕೇತುವೂ ಇರುವ ಕಾರಣ ನಾನಾಬಗೆಯ ತಾಪತ್ರಯಗಳಿಂದ ಪೀಡಿತರಾಗುವ ಸಾಧ್ಯತೆ ಇದೆ. ವಿವಾಹಕ್ಕೆ ಪ್ರತಿಬಂಧಕಗಳು ಎದುರಾದಾವು. ಶನಿಯು ಸದ್ಯ ನಿಮ್ಮ ಷಷ್ಠದಲ್ಲಿ ಇರುವುದರಿಂದ ಶತ್ರು ಬಾಧೆಯಿಂದ ನೀವು ಮುಕ್ತರು. ಸಾಲ ಪಡೆದವರು ನಿಮ್ಮನ್ನು ಮರೆತಿರುವರು. ಚತುರ್ಥದಲ್ಲಿ ರವಿ ಹಾಗೂ ಬುಧರ ಯೋಗದಿಂದ ಕುಟುಂಬದಲ್ಲಿ, ತಂದೆ-ತಾಯಿಯರ ಆರೋಗ್ಯದ ನೆಮ್ಮದಿ ಕಾಣಿಸುವುದು. ತೃತೀಯದಲ್ಲಿ ಶುಕ್ರ ಹಾಗೂ ಕುಜರು ನಿಮ್ಮ ಪ್ರೇಮಕ್ಕೆ ಸಾಥ್ ನೀಡಬಹುದು. ಮಹಾವಿಷ್ಣುವಿನ ಆರಾಧನೆ, ಪ್ರಿಯವಾದ ವಸ್ತುಗಳನ್ನು ಸಮರ್ಪಣೆ ಮಾಡುವುದನ್ನು ರೂಢಿಸಿಕೊಳ್ಳಿ.

ತುಲಾ ರಾಶಿ : ಹೊಸ ವರ್ಷದ ಮೊದಲ‌ ತಿಂಗಳ ಮೊದಲ ವಾರದಲ್ಲಿ ಗ್ರಹಗಳು ಅನುಕೂಲಕರವಾಗಿದ್ದು ಚಿಂತಿತ ಅಭೀಷ್ಟಗಳನ್ನು ಪೂರೈಸುವಿರಿ. ಗುರುಬಲವು ನಿಮಗೆ ಮನೋಬಲವನ್ನು ಕೊಡುವುದಾಗಿದೆ. ರಾಹುವು ಷಷ್ಠದಲ್ಲಿ ಇರುವುದರಿಂದ ಶತ್ರುಗಳ ತೊಂದರೆಯೂ ಇಲ್ಲದೇ ನಿಶ್ಚಿಂತರಾಗುವಿರಿ. ಆದರೆ ಪಂಚಮದಲ್ಲಿ ಶನಿಯು ನಿಮ್ಮ ಕಾರ್ಯಗಳಿಗೆ ಅಡ್ಡ ಬರಬಹುದು. ವೇಗವನ್ನು ಕಡಿಮೆ ಮಾಡಬಹುದು. ಆದರೆ ಅತಿಯಾದ ತೊಂದರೆಯನ್ನು ಕೊಡಲು ಆಗದು. ಗುರುವು ಅದನ್ನು ತಡೆಯುವನು. ಸಂಗಾತಿಯ ವಿಚಾರದಲ್ಲಿ ನಿಮಗೆ ಪ್ರೀತಿ ಇದ್ದರೂ ಹತ್ತಾರು ಸಂದೇಹಗಳು ನಿಮ್ಮ ತಲೆಯಲ್ಲಿ ಸುತ್ತಾಡುವುದು. ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಿ ಮಂಗಲಫಲವನ್ನು ಪಡೆಯುವಿರಿ.

ವೃಶ್ಚಿಕ ರಾಶಿ : ವರ್ಷಾರಂಭ ಮೊದಲ‌ ವಾರದಲ್ಲಿ ಕುಜ ಹಾಗೂ ಶುಕ್ರರು ನಿಮ್ಮ ರಾಶಿಯಲ್ಲಿಯೇ ಇರುವ ಕಾರಣ ದಾಂಪತ್ಯದಲ್ಲಿ ಎಡವಟ್ಟುಗಳು ಆಗಬಹುದು. ಸದ್ಯ ಗುರುಬಲವೂ ಇಲ್ಲದೇ ಎಲ್ಲ ಕಾರ್ಯಗಳನ್ನೂ ಅರ್ಧದಲ್ಲಿ ನಿಲ್ಲಿಕೊಂಡು ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸುವಿರಿ. ದ್ವಿತೀಯದಲ್ಲಿ ಇರುವ ರವಿ ಹಾಗೂ ಬುಧರು ಒಂದಿಷ್ಟು ನೆಮ್ಮದಿಯನ್ನು ಕೊಟ್ಟರೂ ನಿಮಗೆ ಸಮಾಧಾನವಾಗದು. ಮತ್ತೇನನ್ನಾದರೂ ಮಾಡಬೇಕು ಎನ್ನುವ ಅತಿಯಾದ ಆಸೆಯಿಂದ ಮುನ್ನುಗ್ಗುವಿರಿ. ಮಕ್ಕಳು ವಿದ್ಯಾಭ್ಯಾಸ ವಿಚಾರದಲ್ಲಿ ಶ್ರದ್ಧೆ ಕಡಿಮೆ ಆದೀತು. ಮಕ್ಕಳ ನಡವಳಿಕೆಯನ್ನು ನೀವು ಹತೋಟಿ ತರುವ ಕೆಲಸವನ್ನು ಮಾಡಬೇಕು. ವಲ್ಲೀ ಸಹಿತನಾದ ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.

ಧನಸ್ಸು ರಾಶಿ : ವರ್ಷದ ಆರಂಭದ ವಾರವು ಇದಾಗಿದ್ದು ಕೆಲವು ಗ್ರಹಗಳು ಬದಲಾವಣೆಯನ್ನು ಹೊಂದಿದ್ದು ನಿಮ್ಮ‌ ರಾಶಿಯಲ್ಲಿ ರವಿ ಹಾಗೂ ಬುಧ ಉಪಸ್ಥಿತಿ ಇರುವುದರಿಂದ ಸ್ವಲ್ಪ ಮಟ್ಟಿನ ನಿರಾಳತೆ ಇರಲಿದೆ.‌ ಆದರೂ ಕುಜ ಹಾಗೂ ಶುಕ್ರರು ದ್ವಾದಶದಲ್ಲಿ ಇರುವುದರಿಂದ ಅಪರಿಚಿತ ಕೆಲಸಗಳಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಗುರುಬಲವು ನಿಮ್ಮ ರಾಶಿಗೆ ಇರುವ ಕಾರಣ ಯಾವುದೇ ಸನ್ನಿವೇಶವನ್ನೂ ಎದುರಿಸಲು ನೀವು ಸಿದ್ಧರಿರುವಿರಿ. ನಿಮ್ಮ ಕಾರ್ಯದ ಅನುಭವವು ಬೆಳಕಿಗೆ ಬರಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ಕೃತಕ ಬುದ್ಧಿಯನ್ನು ಬಳಸಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಪ್ರೇಮದ ವಿಚಾರದಲ್ಲಿ ದುಡುಕುವುದು ಬೇಡ. ಏನಾದರೂ ಅಸಂಬದ್ಧವು ನಡೆಯಬಹುದು.

ಮಕರ ರಾಶಿ : ಹೊಸ ವರ್ಷದ ಮೊದಲ ತಿಂಗಳ ಮೊದಲ ವಾರವು ಮಿಶ್ರಫಲಪ್ರದವಾಗಿದೆ. ದ್ವೀತಿಯದಲ್ಲಿ ಶನಿ. ಅಂದರೆ ಸಾಡೇ ಸಾಥ್ ನ ಅಂತಿಮ‌ ಅವಧಿಯಲ್ಲಿ ಇದ್ದೀರಿ. ಕರ್ಮಾಧಿಪತಿಯು ನಿಮಗೆ ಹೆಚ್ಚು ಶ್ರಮವನ್ನು ಕೊಡಿಸುವನು. ಅನಗತ್ಯ ಕಾರ್ಯಗಳನ್ನು ಮಾಡಬೇಕಾದೀತು. ರಾಹುವು ತೃತೀಯದಲ್ಲಿ ಇರುವುದರಿಂದ ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ಆಗಾಗ ಕಾಣಿಸಿಕೊಂಡೀತು. ಗುರುಬಲವೂ ಇಲ್ಲದೇ ಇರುವುದು ನಿಮ್ಮ ಶ್ರಮದ ಪೂರ್ಣಫಲವು ಸಿಗದೇ ಇರುವುದು. ಏಕಾದಶದಲ್ಲಿ ಶುಕ್ರ ಹಾಗೂ ಕುಜರು ಇರುವ ಕಾರಣ ಕಲಾವಿದರು ಲ, ತಂತ್ರಜ್ಞರು ಹೆಚ್ಚು ಸುರಕ್ಷಿತರು.‌ ಆದಾಯದಲ್ಲಿ ಹೆಚ್ಚಳವಿಲ್ಲದೇ ಇದ್ದರೂ ಇರುವ ಆದಾಯಕ್ಕೆ ಕೊರತೆಯಾಗದು. ಹನುಮಾನ್ ಚಾಲೀಸ್ ಪಠಣ ಅಥವಾ ಆಂಜನೇಯನಿಗೆ ಪ್ರಿಯವಾದ ನೈವೇದ್ಯವನ್ನು ಶನಿವಾರದಂದು ಮಾಡಿ. ಇಡಿಯ ಬಾಳೆ ಕೊನೆಯನ್ನು ಸಮರ್ಪಿಸಿ.

ಕುಂಭ ರಾಶಿ : ಹೊಸ ವರ್ಷದ ಮೊದಲ ವಾರವು ನಿಮಗೆ ಪರೀಕ್ಷೆಯ ಕಾಲವೂ ಆಗಲಿದೆ. ಬುಧ ಹಾಗೂ ಸೂರ್ಯರು ಏಕಾದಶದಲ್ಲಿ ಇದ್ದು ಸ್ವಲ್ಪ ಮಟ್ಟಿನ ಅನುಕೂಲತೆಯನ್ನು ನೀಡಿಯಾರು. ಉಳಿದಂತೆ ಗುರುವು ತೃತೀಯ ಬಲಹೀನನಾಗಿ ಇರುವನು. ದ್ವಿತೀಯದಲ್ಲಿ ರಾಹುವು ನಿಮ್ಮ ಬಗ್ಗೆ ಸದಭಿಪ್ರಾಯವು ಬರದಂತೆ ಮಾಡಿಸುವನು. ಮಾತಿಗೆ ಎದುರಾಡುವುದನ್ನು ಬುದ್ಧಿಪೂರ್ವಕವಾಗಿ ನಿಲ್ಲಿಸಬೇಕು. ಅಷ್ಟಮದಲ್ಲಿ ಕೇತು, ಸ್ವರಾಶಿಯಲ್ಲಿ ಶನಿ ಇದ್ದು ದೇಹವನ್ನು ದುರ್ಬಲಗೊಳಿಸುವರು. ಈ ವಾರವನ್ನು ಕತ್ತಿಯ ಅಲಗಿನ ಮೇಲೆ‌ ನಡೆದಂತೆ ನಡೆಯಬೇಕಾದೀತು. ಇಷ್ಟದೇವರ ಉಪಾಸನೆಯನ್ನು ಶ್ರದ್ಧಾ- ಭಕ್ತಿಯಿಂದ ಮಾಡಿ, ಅನಗ್ರಹವನ್ನು ಪಡೆಯಿರಿ.

ಮೀನ ರಾಶಿ : ಹೊಸ ವರ್ಷದ ಮೊದಲ ವಾರವು ಇದಾಗಿದೆ. ಗ್ರಹಗಳು ನಿಮಗೆ ಮಿಶ್ರಫಲವನ್ನು ಕೊಡುವರು. ನವಮದಲ್ಲಿ ಶುಕ್ರ ಹಾಗೂ ಬುಧರು ಕುಜನ ಸ್ಥಾನದಲ್ಲಿ ಇರುವ ಕಾರಣ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಇದ್ದರೂ ಆಚರಣೆ ಮಾಡಲು ಆಗದು.‌ ಏನಾದರೂ ನೆಪಗಳನ್ನು ಹೇಳುವಿರಿ. ನಿಮ್ಮ ರಾಶಿಯಲ್ಲಿಯೇ ರಾಹುವಿದ್ದು ಖರ್ಚು, ಮಾನಸಿಕ ಕ್ಲೇಶವನ್ನು ಕೊಡುವನು. ಸಾಡೇಸಾಥ್ ಶನಿಯ ಪ್ರಭಾವವು ಅಧಿಕವಾಗಿದ್ದು ಗುರುಬಲವೂ ಪೂರ್ಣವಾಗಿ ಪ್ರಯೋಜನಕ್ಕೆ ಬಾರದು. ಸಂಗಾತಿಯ ಆರೋಗ್ಯದ ಚಿಂತೆಯು ಕಾಡಬಹುದು. ನಾಗಾರಾಧನೆಯನ್ನು ಗ್ರಾಮದೇವರಿಗೆ ಶುಭದಿನದಂದು ಪೂಜೆಯನ್ನು ಸಲ್ಲಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್