Horoscope: ಈ ರಾಶಿಯವರಿಗೆ ಕಳೆದುಕೊಂಡ ಸಂಪತ್ತು ಸಿಗಲಿದೆ, ಶುಭ ಕಾರ್ಯದಲ್ಲಿ ಭಾಗಿ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 06, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಈ ರಾಶಿಯವರಿಗೆ ಕಳೆದುಕೊಂಡ ಸಂಪತ್ತು ಸಿಗಲಿದೆ, ಶುಭ ಕಾರ್ಯದಲ್ಲಿ ಭಾಗಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jan 06, 2024 | 12:10 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 06) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:49 ರಿಂದ 11:14ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:00 ರಿಂದ 08:25ರ ವರೆಗೆ.

ಮೇಷ ರಾಶಿ: ಸ್ನೇಹವಲಯವು ವಿಸ್ತಾರವಾಗುವುದು. ಉದ್ಯೋಗದ ಕಾರಣಕ್ಕೆ ಸಹೋದ್ಯೋಗಿಗಳ‌ ಜೊತೆ ಪ್ರಯಾಣ ಮಾಡುವಿರಿ. ಹಳೆಯ ವಸ್ತುಗಳನ್ನು ಮಾರಾಟ ಮಾಡಿ ಭಾರವನ್ನು ಕಡಿಮೆ ಮಾಡಿಕೊಳ್ಳುವಿರಿ. ವಿವಾಹದ ಕಾರ್ಯದಲ್ಲಿ ನೀವು ಮಗ್ನರಾಗಿ ಮುಖ್ಯ ಕೆಲಸಗಳನ್ನು ಮರೆಯಬೇಕಾಗುವುದು. ಶುಭ ಸಮಾರಂಭಕ್ಕೆ ಹೋಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಸಹೋದ್ಯೋಗಿಗಳ ಮಾತಿನ ಬಗ್ಗೆ ಅಧಿಕವಾಗಿ ಪ್ರತಿಕ್ರಿಯೆ ಬೇಡ. ಸತ್ಯವನ್ನೇ ಹೇಳುವುದಾದರೂ ನೋವಾಗದಂತೆ ಹೇಳಬೇಕು ಎನ್ನುವುದು ನಿಮ್ಮ ಕ್ರಮವಾಗಿರಲಿದೆ.

ವೃಷಭ ರಾಶಿ: ನಿಮ್ಮ ಮಿತವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ಉದ್ಯೋಗದಲ್ಲಿ ಆಗುವ ಬದಲಾವಣೆಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಿತ್ರರ ಕೋಪಕ್ಕೆ ಕ್ಷಮೆಯನ್ನು ಕೇಳುವಿರಿ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಲಾಭದಿಂದ ವಂಚಿತರಾಗುವರು. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ಉದರಬಾಧೆಯಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ: ನೀವು ಹೊಸ ಆದಾಯದ ಮೂಲಗಳನ್ನು ಪಡೆಯುವ ಸಂಭವವಿದೆ. ಮೇಲಧಿಕಾರಿಗಳಿಗೆ ವರದಿಯನ್ನು ಕೊಡದೇ ತಪ್ಪು ಮಾಡಿ, ಅವರಿಂದ ಬೈಗುಳವನ್ನು ಕೇಳಬೇಕಾದೀತು. ದೂರದ ಊರಿನಲ್ಲಿ ಅನಾಥಪ್ರಜ್ಞೆಯು ನಿಮ್ಮನ್ನು ಕಾಡಬಹುದು. ಅಗ್ನಿಯ ಬಳಿಯಲ್ಲಿ ಎಚ್ಚರಿಕೆಯಿಂದ ಓಡಾಡಿ. ಸ್ತ್ರೀಯರು ವಿಶೇಷವಾದ ಗಮನಕೊಡುವುದು ಅಗತ್ಯ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಎಂದೋ ಆದ ತಪ್ಪನ್ನು ಇಂದು ನೆನಪಿಸಿಕೊಳ್ಳುವ ಅಗತ್ಯವಿಲ್ಲ.

ಕಟಕ ರಾಶಿ: ಇನ್ನೊಬ್ಬರ ಬಗ್ಗೆ ಚರ್ಚಿಸುತ್ತಾ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ವ್ಯಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ಜೀವನು ಸಪ್ಪೆಯಾದಂತೆ ಅನ್ನಿಸೀತು. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಕೆಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ನೌಕರರಿಗೆ ಆತಿಥ್ಯ ನೀಡಿ ಅವರನ್ನು ಸಂತೋಷಪಡಿಸುವಿರಿ.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್