Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು.

Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ
ಮಿಥುನ ರಾಶಿ
Edited By: Rakesh Nayak Manchi

Updated on: Aug 29, 2023 | 6:05 AM

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ (Gemini) ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಅಥವಾ ನಿಮ್ಮ ಸ್ನೇಹ ಬಳಗದಲ್ಲಿ ಮಿಥುನ ರಾಶಿಯವರಿದ್ದರೆ ಅವರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರೆ ಈ ಸುದ್ದಿ ಉಪಯುಕ್ತವಾಗಲಿದೆ. ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ಅವರ ಸ್ವಭಾವವು ಈ ರೀತಿ ಇರಲಿದೆ.

ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು. ವಿದ್ಯಾವಂತರಾಗಿರುವರು. ತಲೆಯ ಕೂದಲು ವಕ್ರವಾಗಿ ಇರುವುದು. ದೂತ ಕಾರ್ಯದಲ್ಲಿ ನಿಪುಣನೂ ಚುರುಕಾದ ಬುದ್ಧಿಯುಳ್ಳವರೂ ಆಗುವರು. ಹಾಸ್ಯದಲ್ಲಿ ಹೆಚ್ಚು ಆಸಕ್ತಿ ಇರುವುದು. ಇನ್ನೊಬ್ಬರ ಮನೋಗತವನ್ನು ನೀವು ತಿಳಿದುಕೊಳ್ಳುವಿರಿ.

ಇದನ್ನೂ ಓದಿ: ಈ 5 ರಾಶಿಯವರು ಎಂದಿಗೂ ಮದುವೆಯಾಗಬಾರದು; ಇವರ ವ್ಯಕ್ತಿತ್ವ ಮತ್ತು ಗುಣಗಳನ್ನು ತಿಳಿಯಿರಿ

ದ್ಯೂತ ಮುಂತಾದ ಕೆಟ್ಟ ಹವ್ಯಾಸವನ್ನು ರೂಢಿಸಿಕೊಳ್ಳುವರು. ಸುಂದರ ರೂಪವುಳ್ಳವರಾಗುವರು. ಎಲ್ಲರಿಗೂ ಪ್ರಿಯವಾದ ಮಾತುಗಳನ್ನಾಡುವಿರಿ. ಸದಾ ಆಹಾರವನ್ನು ಸೇವಿಸಲು ಆಸಕ್ತಿ ಇರುವುದು. ಸಂಗೀತ, ನೃತ್ಯ ಮುಂತಾದ ವಿವಿಧ ಕಲೆಗಳನ್ನು ಅಭ್ಯಾಸ ಮಾಡಲು ಆಸಕ್ತಿ ಇರುವುದು. ನಿಮ್ಮ ಮೂಗಿನ ಭಾಗವು ದೀರ್ಘವಾಗಿ‌ ಇರುವುದು.

ಗೌರೋ ದೀರ್ಘಃ ಪಟುರ್ವಕ್ತಾ

ಮೇಧಾವೀ ಚ ದೃಢವ್ರತಃ |

ಸಮರ್ಥೋ ನ್ಯಾಯವಾದೀ ಚ

ಜಾಯತೇ ಮಿಥುನೇ ನರಃ ||

ಮೈ ಬಣ್ಣವು ಬಿಳಿಯಾಗಿರುವುದು, ಉದ್ದ ದೇಹವಿರಲಿದೆ, ವಾಗ್ಮೀ, ಬುದ್ಧಿವಂತ, ಹಿಡಿದ ಕೆಲಸವನ್ನು ಬಿಡದೇ ಮಾಡುವುದು, ಎಲ್ಲ‌ ಕಾರ್ಯವನ್ನು ಮಾಡುವವನು, ವಕೀಲನು ಮಿಥುನ ರಾಶಿಯಲ್ಲಿ ಜನಿಸಿದರೆ ಆಗುವರು. ಗ್ರಹಗಳ ಬಲಾಬಲದ ಮೇಲೆ‌ ಈ ರಾಶಿಯಲ್ಲಿ ಜನಿಸಿದವರ ಸ್ವಭಾವವು ವ್ಯತ್ಯಾಸವಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us