Horoscope: ಕೆಲಸದ ಆರಂಭದಲ್ಲೇ ಮೇಲಧಿಕಾರಿಗಳಿಂದ ಬೈಗುಳ ಕೇಳಬೇಕಾಗಬಹುದು
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜುಲೈ.02 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಜುಲೈ.02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದಶಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಸುಕರ್ಮಾ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 15:51 ರಿಂದ 17:28ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 ರಿಂದ ಬೆಳಿಗ್ಗೆ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 14:14ರ ವರೆಗೆ.
ಸಿಂಹ ರಾಶಿ: ನೀವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ನಿಮಗೆ ದೈರ್ಯವನ್ನು ತುಂಬುವವರೂ ಇಲ್ಲವಾಗಬಹುದು. ಪ್ರೇಮಸಂಬಂಧದಲ್ಲಿ ಹುರುಳಿಲ್ಲ ಎನಿಸುವುದು. ವಿಶ್ರಾಂತಿ ಬೇಕೆನಿಸಿದರೆ ಪಡೆದು ಮುನ್ನಡೆಯುವುದು ಉತ್ತಮ. ವ್ಯಾಪಾರವನ್ನು ಮಾಡುತ್ತಿದ್ದರೆ ಸಾಲವನ್ನು ಕೊಡಲು ಹೋಗಬೇಡಿ. ಭಾರವಾದ ಮನಸ್ಸಿನ ಜೊತೆ ಕೆಲಸ ಮಾಡಲಾಗದು. ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಮನೆಯನ್ನು, ಮಕ್ಕಳನ್ನು ಮರೆಯಬಹುದು. ಅಕಾರಣವಾಗಿ ದುಃಖದ ಸನ್ನಿವೇಷಗಳು ಬರಬಹುದು. ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂದು ಅನ್ನಿಸಿದರೂ ಅದನ್ನು ಪರಿವರ್ತಿಸಲು ಅಸಾಧ್ಯವಾಗುವುದು.
ಕನ್ಯಾ ರಾಶಿ: ನಿಮ್ಮದಲ್ಲದ ವಸ್ತುವನ್ನು ಜೋಪಾನಮಾಡುವುದು ಅತ್ಯವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ಆದರೆ ನೀವು ನಿರೀಕ್ಷಿಸಿದಷ್ಟು ಲಾಭವನ್ನು ಪಡೆಯುವುದು ಕಷ್ಟವಾಗಬಹುದು. ಇಂದು ಮನೆಗೆ ಬರುವವರು ಬಾರದೇಹೊಇಗಬಹುದು. ನೀವು ಸ್ವತಂತ್ರವಾಗಿ ಬದುಕುವ ಇಚ್ಛೆ ಹೊಂದುವಿರಿ. ಅನುಕೂಲತೆಯನ್ನು ನೋಡಿ ಮನೆಗೆ ಸಹಾಯ ಮಾಡುವಿರಿ. ಪರರ ಉಪಕಾರವನ್ನು ನೀವು ಸ್ಮರಿಸುವಿರಿ. ಅನವಶ್ಯವೆನಿಸಿದರೆ ಅಂತಹ ಖರ್ಚನ್ನು ಮಾಡಲೇ ಬೇಡಿ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ.
ತುಲಾ ರಾಶಿ: ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ಸ್ನೇಹವು ಬಲಗೊಳ್ಳಬಹುದು. ಕಛೇರಿಯಲ್ಲಿ ಇಂದು ಅಸಮಾಧನಕಾರ ವಾತಾವರಣ ಇರಲಿದೆ. ಕಛೇರಿಯ ಆರಂಭದಲ್ಲಿ ಮೇಲಧಿಕಾರಿಗಳಿಂದ ಬೈಗುಳ ಕೇಳಿಬರುವುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಕೆಲಸವು ಎಷ್ಟೇ ಚೆನ್ನಾಗಿದ್ದರೂ ಪ್ರಶಂಸೆ ಸಿಗುತ್ತಿಲ್ಲ ಎಂಬ ನೋವು ಹೆಚ್ಚಾಗಬಹುದು. ಕೆಲಸದಲ್ಲಿ ವೈರಾಗ್ಯವೂ ಬರುವ ಸಾಧ್ಯತೆ ಇದೆ. ನಕಾರಾತ್ಮಕತೆಯ ಬಗ್ಗೆ ಚಿಂತಿಸಿ, ಆದರೆ ಅದರದ್ದೇ ಆಲೋಚನೆಯಲ್ಲಿ ನೀವು ಮುಳುಗಬೇಡಿ. ಅನಿವಾರ್ಯವಾಗಿ ಬಂದ ಕೆಲಸವನ್ನು ಮಾಡಬೇಕಾಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ದೂರದ ಪ್ರಯಾಣವನ್ನು ಮಾಡುವ ನಿರ್ಧಾರವನ್ನು ಕೈ ಬಿಡುವಿರಿ.
ವೃಶ್ಚಿಕ ರಾಶಿ: ನಿಮ್ಮ ಬಳಿ ಇರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ಸಹಾಯಕ್ಕಾಗಿ ನೀಡಿ. ಮುಂದೆ ಅದೇ ಮರಳಿ ಬರಬಹುದು. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವವು ಎಲ್ಲರಿಗೂ ಅರಿವಿಗೆ ಬರುವುದು. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ನೈತಿಕವಾಗಿ ಮಾತು ಇರಲಿ. ಹಣಕಾಸಿನ ವಿಚಾರದಲ್ಲಿ ಇರುವ ಗೊಂದಲವನ್ನು ಆರ್ಥಿಕ ತಜ್ಞರ ಬಳಿ ಬಗೆಹರಿಸಿಕೊಳ್ಳಬಹದು. ಯಾರ ಬಗ್ಗೆಯೂ ತೀರ್ಮಾನ ಕೊಡುವ ಬದಲು ಪೂರ್ವಾಪರ ವಿಚಾರಗಳನ್ನು ಗಮನಸಿಕೊಳ್ಳಿ. ನಿಮ್ಮ ಮೂಗಿನ ನೇರದ್ದು ಮಾತ್ರ ಸತ್ಯವಾಗಿ ಇರದು. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ ಮೇಲೆ ಪ್ರಭಾವವನ್ನು ಬೀರಲಿದೆ. ಉದ್ಯೋಗದ ಸ್ಥಾನದಲ್ಲಿ ಕೆಲವು ಮಾತುಗಳು ನಿಮಗೆ ಹಿಡಿಸದು.