Horoscope: ಈ ರಾಶಿಯವರು ಅನವಶ್ಯಕ ಸಮಸ್ಯೆಗಳನ್ನು ಬೇಕೆಂದೇ ಎಳೆದುಕೊಳ್ಳುವಿರಿ
15 ಏಪ್ರಿಲ್ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾರಾದರೂ ಸಾಲವನ್ನು ಕೇಳಿ ಬರಬಹುದು. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ಹಾಗಾದರೆ 15 ಏಪ್ರಿಲ್ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಬೆಂಗಳೂರು, ಏಪ್ರಿಲ್ 15, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಸಿದ್ಧಿ, ಕರಣ : ಗರಜ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:12, ಯಮಘಂಡ ಕಾಲ 09:26 – 10:59, ಗುಳಿಕ ಕಾಲ 12:33 – 14:06.
ತುಲಾ ರಾಶಿ: ನಿಮ್ಮ ಕೆಲವು ನಡತೆಗಳು ಪ್ರಗತಿಗೆ ಮಾರಕವಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಸರ್ಕಾರಿ ಕೆಲಸ ಮಾಡುವವರು ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು. ಬದಲಾಗುತ್ತಿರುವ ವ್ಯಕ್ತಿಗಳಿಗೆ ತಕ್ಕಂತೆ ಬದಲಾವಣೆಗಳನ್ನು ನೀವೇ ಮಾಡುಕೊಳ್ಳುವಿರಿ.. ಕುಟುಂಬಕ್ಕೆ ನಿಮ್ಮ ಸಂಗಾತಿಯ ಸಮರ್ಪಣೆಯು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಹಳೆಯ ಅನುಭವವನ್ನು ಪಾಠವಾಗಿಸಿಕೊಳ್ಳಿ. ಕಲಾವಿದರು ಬಹಳ ಸಂತೋಷವನ್ನು ಅನುಭವಿಸುವರು. ಸಂಗಾತಿಯ ಹೂಡಿಕೆಯನ್ನು ನೀವು ಬಳಸಿಕೊಳ್ಳುವಿರಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ಇಂದು ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಅನ್ನಿಸುವುದು.
ವೃಶ್ಚಿಕ ರಾಶಿ: ಅನವಶ್ಯಕ ಸಮಸ್ಯೆಗಳನ್ನು ನಿಮ್ಮಮೇಲೆ ಬೇಕೆಂದೇ ಎಳೆದುಕೊಳ್ಳುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ನೋಡಿ. ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಶುಭ ವಾರ್ತೆ ಸಿಗಲಿದೆ. ಬಟ್ಟೆ ವ್ಯಾಪಾರಿಗಳು ಕಾಲಕ್ಕೆ ಯೋಗ್ಯವಾದ ರೀತಿಯಲ್ಲಿ ವ್ಯಾಪಾರ ನಡೆಸಿ ಲಾಭ ಗಳಿಸುವೆರು. ನಿಮ್ಮ ಕುಟುಂಬದಲ್ಲಿ ಹೊರಗಿನವರಿಗೆ ಹಸ್ತಕ್ಷೇಪ ಮಾಡಲು ಬಿಡುವುದು ಬೇಡ. ನೀವು ಇಂದು ಉದ್ಯಮದ ಕಾರಣಕ್ಕೆ ಸ್ನೇಹಬಂಧವನ್ನು ಬಿಗಿ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನೀವು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಹಿರಿಯರ ಸೇವೆಯನ್ನು ಮಾಡುವ ಅವಕಾಶವು ಸಿಗಲಿದ್ದು, ಅದನ್ನು ಕಳೆದುಕೊಳ್ಳುವುದು ಬೇಡ. ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.
ಧನು ರಾಶಿ: ನೀವು ತೆಗೆದುಕೊಳ್ಳುವ ನಿರ್ಧಾರವು ಕುಟುಂಬಕ್ಕೆ ಪೂರಕವಾಗಿ ಇರಲಿ. ವಿದ್ಯಾಭ್ಯಾಸಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಅನಗತ್ಯ ಕೋಪದಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ವ್ಯಾಪಾರಿಗಳಿಗೆ ಲಾಭದ ಪರಿಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ವಿದ್ಯಾರ್ಥಿಗಳು ಕಷ್ಟಕರವಾದ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. ಬಹು ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ, ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ಭೂಮಿಯನ್ನು ಭೋಗ್ಯಕ್ಕಾಗಿ ಯಾರಿಗಾದರೂ ನೀಡಬಹುದು. ನಿಮ್ಮ ವಿದ್ಯಾಭ್ಯಾಸದ ಸಾಮರ್ಥ್ಯವನ್ನು ತೋರಿಸುವಿರಿ. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಅಂದುಕೊಂಡಷ್ಟು ಸರಳವಾಗಿ ಇಂದಿನ ಕಾರ್ಯವು ಸಮಾಪ್ತಿಯಾಗದು.
ಮಕರ ರಾಶಿ: ನಕಾರಾತ್ಮಕ ಆಲೋಚನೆಗಳು ಅನ್ಯರ ಕಾರಣದಿಂದ ಬರಬಹುದು. ಅದನ್ನು ದೊಡ್ಡ ಮಾಡುವುದು ಬೇಡ. ಸೇವಾ ಮನೋಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇತರರ ಸೇವೆಯಿಂದ ಆಧ್ಯಾತ್ಮಿಕ ಸಂತೋಷವನ್ನು ಪಡೆಯ ಲಾಗುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೂರದೃಷ್ಟಿಯ ಅಗತ್ಯವಿದೆ. ಕುಟುಂಬ ಸದಸ್ಯರ ಜೊತೆ ಚರ್ಚಿಸಿದ ಅನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅತಿಯಾದ ದುರಾಸೆಯಿಂದ ನೀವು ಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಸಂಬಂಧವನ್ನು ಚೆನ್ನಾಗಿ ನಿಭಾಯಿಸುವ ಕಲೆಯು ಗೊತ್ತಿದೆ. ಯಾರಾದರೂ ಹೊಸ ಯೋಜನೆಗಳ ಬಗ್ಗೆ ಸಲಹೆಯನ್ನು ಕೊಡುವರು, ಉದ್ಯೋಗದ ಕಾರಣದಿಂದ ನೀವು ಓಡಾಟವನ್ನು ಮಾಡಬೇಕಾಗುವುದು. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.
ಕುಂಭ ರಾಶಿ: ನೀವು ಅಗತ್ಯ ಖರ್ಚುಗಳನ್ನೂ ನಿಯಂತ್ರಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಆಭರಣದ ವ್ಯಾಪಾರಸ್ಥರಿಗೆ ಕೆಲಸ ಸಿಗಬಹುದು. ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು.ವ್ಯವಹಾರದಲ್ಲಿ ಕಠಿಣ ಪರಿಶ್ರಮವಿರುತ್ತದೆ, ಯೋಜನೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಕಛೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಿಮ್ಮ ವರ್ತನೆ ಬದಲಾದೀತು. ನಿಮಗೆ ಅನೇಕರು ಪ್ರಭಾವಿತರಾಗಬಹುದು. ಮೇಲಿಂದ ಮೇಲೆ ಒತ್ತಡಗಳು ಕಾಣಿಸಿಕೊಳ್ಳುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.
ಮೀನ ರಾಶಿ: ಇಂದು ನೀವು ಕಾರ್ಯದ ಸರಿಯಾದ ಫಲವನ್ನು ಪಡೆಯದಿದ್ದರೂ ಸಂಯಮದಿಂದ ವರ್ತಿಸುವುದು ಮುಖ್ಯವಾಗಲಿದೆ. ಯಾರಾದರೂ ಸಾಲವನ್ನು ಕೇಳಿ ಬರಬಹುದು. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯೋಗದ ಸಂದರ್ಭದಲ್ಲಿ ಕೆಲಸಗಳ ಮೇಲೆ ಗಮನ ಹೆಚ್ಚಿಸಬೇಕು. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು.