Horoscope: ಬಂಧುಗಳ ಮಾತು ನಿಮ್ಮನ್ನು ದಾರಿ ತಪ್ಪಿಸಬಹುದು-ಎಚ್ಚರ
ಅಕ್ಟೋಬರ್ 07, 2024: ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ಅನಗತ್ಯ ತಿರುಗಾಟದಿಂದ ಬೇಸರವಾಗಬಹುದು. ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಹಾಗಾದರೆ ಅಕ್ಟೋಬರ್ 07ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಐದನೇ ದಿನದ ನವರಾತ್ರದ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುವುದು. ಸುಬ್ರಹ್ಮಣ್ಯನ ಜನನಕ್ಕೆ ಕಾರಣವಾದ ದೇವಿಯು ಈಕೆ. ಸಿಂಹಾಸನವನ್ನು ಏರಿ ಶಾಂತಸ್ಥಿತಿಯಲ್ಲಿ ಇದ್ದು, ಕೈಗಳಲ್ಲಿ ಕಮಲವನ್ನು ಧರಿಸಿದ್ದಾಳೆ. ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾಳೆ. ಹಾಗೆಯೇ ಇಂದು ಕಾತ್ಯಾಯಿನಿಯನ್ನು ಆರಾಧಿಸುವ ದಿನ. ಖಡ್ಗ ಹಾಗೂ ಕಮಲವನ್ನು ಕೈಯಲ್ಲಿ ಧರಿಸಿದ ಮಾತೆ ಇವಳು. ಶತ್ರು ಸಂಹಾರವನ್ನು ಮಾಡಿ ಪ್ರಶಾಂತಚಿತ್ತಳಾಗಿ ಇದ್ದಾಳೆ. ಇವರ ಆರಾಧನೆಯಿಂದ ಸಂಪತ್ತುಗಳು ಸಿಗುತ್ತವೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ / ಷಷ್ಠೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:22, ಯಮಘಂಡ ಕಾಲ ಬೆಳಿಗ್ಗೆ 10:51ರಿಂದ 12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:49 ರಿಂದ 03:18 ರವರೆಗೆ.
ಮೇಷ ರಾಶಿ : ಎಂತಹ ಎತ್ತರವನ್ನೇ ಏರಿದರೂ ನಿಮ್ಮ ಮೂಲ ಸ್ಥಾನದ ಬಗ್ಗೆ ಪ್ರೀತಿ ಇರಲಿ. ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ಆಸ್ತಿ ಹಂಚಿಕೆಯು ಇತ್ಯರ್ಥವಾಗಬಹುದು. ನಿಮ್ಮನ್ನು ಕೆಲವು ಸಂದರ್ಭಗಳು ಪರಿವರ್ತನೆ ಮಾಡಬಹುದು. ಉನ್ನತ ಅಧ್ಯಯನವನ್ನು ಬಯಸಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರಲಿದೆ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾದೀತು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಬಹುದು. ಕೃತಜ್ಞತೆಯು ನಿಮ್ಮ ಮುಖ್ಯಗುಣವನ್ನಾಗಿ ಮಾಡಿಕೊಳ್ಳುವಿರಿ. ಬಂಧುಗಳ ಮಾತು ನಿಮ್ಮನ್ನು ದಾರಿ ತಪ್ಪಿಸಬಹುದು. ಹಣಕಾಸಿನ ವ್ಯವಹಾರವನ್ನು ಈಗಲೇ ಸರಿಮಾಡಿಕೊಳ್ಳುವುದು ಉತ್ತಮ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ. ನಿಮ್ಮನ್ನು ನಂಬಿದವರಿಗೆ ಕಿಂಚಿತ್ ಸಹಾಯವನ್ನು ಮಾಡಬೇಕಾಗುವುದು. ನಿಮ್ಮ ಸಾಹಸದ ಬಗ್ಗೆ ಜನರು ಮಾತನಾಡಿಕೊಳ್ಳಬಹುದು.
ವೃಷಭ ರಾಶಿ : ನಿಮ್ಮ ಸಂಧಾನದ ಮಾತುಗಳು ನಿಷ್ಫಲವಾಗಬಹುದು. ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಇಂದು ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಅವಕಾಶಗಳು ಸಿಗಬಹುದು. ಸಾಲದ ಹಣವು ಇಂದು ನಿಮ್ಮ ಕೈಸೇರಬಹುದು. ವಿದೇಶೀ ವ್ಯವಹಾರದಲ್ಲಿ ನಿಮಗೆ ಲಾಭವು ಬರಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರುವುದು. ಇನ್ನೊಬ್ಬರ ಕ್ಷೇಮ ಸಮಾಚಾರವನ್ನು ಕೇಳುವಿರಿ. ನಿಮಗೆ ಬೇಕಸದ ಮುಖ್ಯ ಜನರನ್ನು ನೀವು ಕಡೆಗಣಿಸಿ ಸಂತೋಷದಿಂದ ಇರುಬಿರಿ. ಬಹಳ ದಿನಗಳ ಅನಂತರ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವಿರಿ. ಸಾಹಸದ ಕೆಲಸಗಳನ್ನು ಮಾಡುವಾಗ ಎಚರಚರ ಅಗತ್ಯ. ಆಪ್ತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಹೊಸ ಕಲಿಕೆಯನ್ನು ಆರಂಭಿಸುವಿರಿ. ನಿಮಗೆ ಆಗದವರನ್ನು ನಿಂದಿಸುತ್ತ ದಿನವನ್ನು ಕಳೆಯುವಿರಿ. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ.
ಮಿಥುನ ರಾಶಿ : ಅನಿರೀಕ್ಷಿತ ಕೊಡುಗೆಗಳಿಂದ ನಿಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಇಂದು ಸ್ತ್ರೀಯರು ನಾನಾ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು. ಯಾರದೋ ತಪ್ಪಿಗೆ ತಲೆಕೊಡುವ ಸಂದರ್ಭವು ಬರಬಹುದು. ನೆರೆಹೊರೆಯರ ನಡುವೆ ವಾಗ್ವಾದವು ಆಗಬಹುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗಬಹುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇವೆ. ಉದ್ಯೋಗದ ಮಿತ್ರನನ್ನು ಭೇಟಿಯಾಗುವಿರಿ. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಆದಾಯವು ಹೆಚ್ಚಿನ ಖರ್ಚಿಗೆ ಕಾರಣವಾಗಬಹುದು. ಸಂಗಾತಿಯ ಜೊತೆ ಬಹಳ ದಿನಗಳ ಅನಂತರ ಸೌಹಾರ್ದ ಮಾತುಕತೆ ಇರಲಿದೆ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ.
ಕರ್ಕಾಟಕ ರಾಶಿ : ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ಅನಗತ್ಯ ತಿರುಗಾಟದಿಂದ ಬೇಸರವಾಗಬಹುದು. ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಇಂದು ನೀವು ಮನೋನಿಯಂತ್ರಣದಲ್ಲಿ ಸೋಲುವಿರಿ. ಲಾಭವಿರುವ ಕೆಲಸಗಳನ್ನು ಮಾತ್ರ ಮಾಡಲು ಇಚ್ಛೆಯು ಇರಲಿದೆ. ಮನಸ್ಸಿನ ಚಾಂಚಲ್ಯವನ್ನು ಯೋಗದ ಮೂಲಕ ನಿಯಂತ್ರಿಸುವಿರಿ. ಬಂಧುಗಳು ನಿಮಗೆ ಆರ್ಥಿಕ ಸಹಾಯವನ್ನು ಮಾಡಲು ಬಂದರೂ ನೀವು ಅದನ್ನು ಸ್ವಾಭಿಮಾನದಿಂದ ನಿರಾಕರಿಸುವಿರಿ. ಸರ್ಕಾರದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಕರೆಯು ಬರಬಹುದು. ರೋಗಬಾಧೆಯನ್ನು ನೀವು ಲೆಕ್ಕಕ್ಕೆ ತಂದುಕೊಳ್ಳಲಾರಿರಿ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.