Horoscope Today 01 December : ಇಂದು ಈ ರಾಶಿಯವರಿಗೆ ಎಲ್ಲರ ಬಗ್ಗೆಯೂ ಅಸಮಾಧಾನ ಸಿಟ್ಟು

ದಿನ ಭವಿಷ್ಯ, 01 ಡಿಸೆಂಬರ್​​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಸೋಮವಾರ ಅನಿದ್ವೇಗ, ಅನಾರೋಗ್ಯ, ಅಪರಿಚಿತರ ಭೇಟಿ, ಆತಂಕ, ಅಸ್ಪಷ್ಟತೆ, ಅಪಘಾತ, ಆದಾಯದ ಆನಂದ, ಅಧಿಕಾರದ ಆಲೋಚನೆ ಇವೆಲ್ಲ ಇಂದಿನ ವಿಶೇಷ.

Horoscope Today 01 December : ಇಂದು ಈ ರಾಶಿಯವರಿಗೆ ಎಲ್ಲರ ಬಗ್ಗೆಯೂ ಅಸಮಾಧಾನ ಸಿಟ್ಟು
ದಿನ ಭವಿಷ್ಯ
Updated By: ಅಕ್ಷತಾ ವರ್ಕಾಡಿ

Updated on: Dec 01, 2025 | 12:15 AM

ಮೇಷ ರಾಶಿ :

ಬೇಸರದಲ್ಲಿರುವ ನಿಮಗೆ ಪ್ರೇರಣೆಯ ಕ್ಷಣಗಳು ಬರುತ್ತವೆ. ಆಧ್ಯಾತ್ಮಿಕ ಚೈತನ್ಯ ಪ್ರತಿ ಕಾರ್ಯದಲ್ಲಿಯೂ ಶಾಂತಿಯನ್ನು ನೀಡುವುದು. ಮಿತಿಯನ್ನು ಅರಿತು ವ್ಯವಹರಿಸುವಿರಿ. ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು.‌ ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಂದು ನೀವು ಕುಟುಂಬಕ್ಕೆ ಯಾವುದೇ ಕೊರತೆ ಆಗದಂತೆ ನೀವು ನೋಡಿಕೊಳ್ಳುವಿರಿ. ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ನಿಮಗೆ ಇಂದು ಸ್ವತಂತ್ರವಾಗಿ ಇರಲಾಗದೇ ಬಂಧನದಂತೆ ಅನ್ನಿಸಬಹುದು. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಸಂತೋಷವಾಗುವಂತೆ ಇರುವಿರಿ. ಬೇಕಾದ ವಸ್ತುವನ್ನು ಕೇಳಿ ಪಡೆಯಿರಿ. ಗೆಳೆತನವು ನಿಮಗೆ ಮತ್ತಷ್ಟು ಸುಖವನ್ನು ಕೊಡುವುದು. ನೆನಪಿನ ಶಕ್ತಿಯು ಕಡಿಮೆ ಆದಂತೆ ಅನ್ನಿಸಬಹುದು. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ.

ವೃಷಭ ರಾಶಿ :

ಬಲವಾದ ಇಚ್ಛಾಶಕ್ತಿ ನಿಮ್ಮ ದಿನವನ್ನು ವಿಶೇಷಗೊಳಿಸುತ್ತದೆ. ನಿಮ್ಮ ಬಳಿ ಆಗದಿದ್ದರೂ ಸಮರ್ಥಿಸಿಕೊಳ್ಳಲು ಹಿಂಜರಿಯಲಾರಿರಿ. ಒಮ್ಮೊಮ್ಮೆ ನಿಮಗೇ ದಾರಿ ತಪ್ಪಿದಹಾಗೆ ಅನ್ನಿಸುವುದು. ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮ್ಮ ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಮಗೆ ಶ್ರದ್ಧೆಯು ಅಧಿಕವಾಗಿ ಇರುವುದು. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಹೊಸ ಆಲೋಚನೆಗಳಿಗೆ ಉತ್ತಮ ಬೆಂಬಲ. ಸ್ನೇಹಿತರ ಸಹಾಯ ಲಭಿಸುತ್ತದೆ. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವದೇ ನಿರ್ಬಂಧವಿಲ್ಲದೇ ಮಾಡುವಿರಿ. ಅನಾರೋಗ್ಯದ ಕಾರಣಕ್ಕೆ ಹಣವನ್ನು ಖರ್ಚು ಮಾಡಬೇಕಾಗುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯವನ್ನು ಮಾಡಲು ಯಾರಾದರೂ ಸಿಗುವರು.

ಮಿಥುನ ರಾಶಿ:

ಕಾರ್ಯದಲ್ಲಿ ಶಿಸ್ತಿನ ಮೂಲಕ ಉತ್ತಮ ಫಲ. ಅಪ್ರತೀಕ್ಷಿತ ಲಾಭದ ಯೋಗ. ನಿಮಗೆ ಹಳೆಯ ವಸ್ತುಗಳ ಖರೀದಿಯಿಂದ ಮೋಸವಾಗಲಿದೆ. ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಇಂದು ಇನ್ನೊಬ್ಬರ ಮಾತು ನಿಮಗೆ ಸಮಾಧಾನ ತರಿಸದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಕಹಿ ವಿಚಾರಗಳನ್ನು ಮತ್ತೆ ಮತ್ತೆ ತಂದುಕೊಳ್ಳುವಿರಿ. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಸಂಬಂಧಗಳಲ್ಲಿ ಗಂಭೀರ ಮಾತುಕತೆ ಸಕಾರಾತ್ಮಕ ತಿರುವು ನೀಡುತ್ತದೆ. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ಸಿಕ್ಕ ಅವಕಾಶದಿಂದ ವಂಚಿತರಾಗಿ ನೋಯುವಿರಿ. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಕಷ್ಟವಾದೀತು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ವಿಳಂಬವಾಗುವುದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಬರಬಹುದು.

ಕರ್ಕಾಟಕ ರಾಶಿ:

ಇಂದು ಶಿಕ್ಷಣ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಪ್ರಗತಿ. ಮನೆಯಲ್ಲಿ ಸಂತೋಷದ ಸುದ್ದಿ. ನಿಮ್ಮನ್ನು ಗುರುತಿಸಬೇಕೆಂಬ ಹಂಬಲ ಅಧಿಕವಾಗುವುದು. ಅಂದುಕೊಂಡಷ್ಟು ಸಫಲತೆಯನ್ನು ಇಂದು ಸಾಧಿಸಲಿದ್ದೀರಿ. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಕಾಣುವುದು. ಇಂದಿನ ಪ್ರಯಾಣವು ನಿಮಗೆ ಸಮಾಧಾನ ನೀಡದು. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲಿದ್ದು ನಿಮಗೆ ಸಹಿಸಲಾಗದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆ ಇರುವುದು. ನಿಮಗೆ ಶೋಧನೆಯ ಕಾರ್ಯವು ಹೆಚ್ಚಿನ‌ ಇಷ್ಟವಾಗುವುದು. ಕೆಲವರು ನಿಮ್ಮ ನಂಬಿಕೆಯನ್ನು ಘಾಸಿಗೊಳಿಸಬಹುದು. ನಿಮಗೆ ನಿಜವಾದ ಮಿತ್ರರ ಅರಿವಾಗುವುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗುತ್ತದೆ.

ಸಿಂಹ ರಾಶಿ:

ಅಂತರಂಗ ಹೆಚ್ಚಾಗಿ ನಿಮಗೆ ಸ್ಪಷ್ಟ ದಾರಿ ದೊರೆಯುತ್ತದೆ. ರಹಸ್ಯ ಯೋಜನೆಗಳು ಯಶಸ್ಸು ಕಾಣಲು ಶುರು. ರಾಜಕೀಯ ತಂತ್ರದಿಂದ ನಿಮ್ಮ ಉದ್ಯಮಕ್ಕೆ ತೊಂದರೆಯಾಗುವುದು. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ. ಉದ್ಯೋಗಕ್ಕೆ ಸಂಬಂಧಿಸದಂತೆ ಶುಭವಾರ್ತೆಯೂ ನಿಮ್ಮ ಸಂತೋಷಕ್ಕೆ ಮತ್ತಷ್ಟು ಪುಷ್ಟಿಯನ್ನು ಕೊಡುವುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ಸಣ್ಣದನ್ನೂ ದ್ವೇಷವಾಗಿ ಮಾಡಿಕೊಳ್ಳುವುದು ಬೇಡ. ನಿಮ್ಮ ಸುಳಿವು ಸಿಗದೇ ಮನೆಯಲ್ಲಿ ಆತಂಕವಾಹಬಹುದು. ಸಾಮರಸ್ಯವನ್ನು ಎಲ್ಲರ ಜೊತೆ ಇಟ್ಟುಕೊಳ್ಳಿ. ಮಧುರವಾದ ಸಂಬಂಧಗಳಲ್ಲಿ ಒಡಕು ಬರಬಹುದು. ನಿಮ್ಮ ನೋವನ್ನು ಯಾರ ಬಳಿಯಾದರೂ ಹಂಚಿಕೊಂಡು ಸಮಾಧನ ತಂದುಕೊಳ್ಳಿ. ಬಲಿಷ್ಠ ನಿರ್ಧಾರಗಳು ಫಲಪ್ರದ. ನಿಮ್ಮ ಮನಸ್ಸು ಎಂದಿಗಿಂತ ಹಗುರಾದಂತೆ ಅನ್ನಿಸುವುದು. ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಬರುವುದು. ಸಂಗಾತಿಯಾಗುವವರ ಜೊತೆ ಮುಕ್ತವಾಗಿ ಮಾತನಾಡಿಕೊಳ್ಳಿ. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ:

ಅಸ್ತಿತ್ವ ಬೇಕಾದರೆ ನಿಮ್ಮ ಮಾತು ಔಷಧದಂತೆ ಇರಲಿ. ಜೀವನದಲ್ಲಿ ಸಮತೋಲನ ವೃದ್ಧಿ. ಶುಭಕರ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ. ಬೇಸರಿಸದೇ ಮುಂದುವರಿಯುವುದು ಸೂಕ್ತ. ವಿಳಂಬವಾಗುವ ಕಾರ್ಯಕ್ಕೆ ಹಣವನ್ನು ಕೊಟ್ಟು ವೇಗವರ್ಧನೆಯನ್ನು ಮಾಡುವಿರಿ. ವಿರಾಮದ ದಿನವೂ ನಿಮಗೆ ನೆಮ್ಮದಿಯಿಂದ ಇರಲು ಕೊಡರು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳುವಿರಿ. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ಬಾಕಿಯ ಕೆಲಸಗಳು ಸುಧಾರಣೆ ಕಾಣುತ್ತವೆ. ರಾಜಕಾರಣಿಗಳ ಭೇಟಿಯಾಗಿ ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಸಿಕೊಳ್ಳುವಿರಿ. ನಿಮ್ಮ‌ ಸಹಜತೆಯು ಇಂದು ನಾಟಕೀಯದಂತೆ ಕಾಣಿಸುವುದು. ಮನೆಯಲ್ಲಿ ಒಟ್ಟಿಗೇ ಹತ್ತಾರು ಕಾರ್ಯಗಳಲ್ಲಿ ನೀವು ಮಗ್ನರಾಗಿರುವಿರಿ. ಉದ್ಯೋಗವನ್ನು ಅನಿವಾರ್ಯಕ್ಕಾಗಿ ಮೆಚ್ಚಿಕೊಳ್ಳುವಿರಿ.

ತುಲಾ ರಾಶಿ:

ಅತಿಯಾದ ಚಿಂತೆಯು ಕಡಿಮೆಯಾಗುತ್ತದೆ. ಲೆಕ್ಕಾಚಾರ, ಯೋಜನೆಗಳು ಸುಗಮವಾಗುವ ಸೂಚನೆ. ಇಂದು ನಿಂತಿರುವ ಕಾರ್ಯಗಳಿಗೆ ಸರಿಯಾದ ಕಾಯಕಲ್ಪವನ್ನು ಕೊಡುವಿರಿ. ಕೋಪವನ್ನು ಶಾಂತ ಮಾಡಿಸಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು. ಇಂದು ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆರೋಗ್ಯದಲ್ಲಿ ಪುನಶ್ಚೇತನವಾಗಲಿದೆ. ಯೋಚಿಸಿ ಮಾಡಿದ ಪ್ರಯತ್ನ ಫಲಿಸುತ್ತದೆ. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆ ಬೇಡ. ವಿವಾಹದ ಮಾತುಕತೆಯನ್ನೂ ಮುಂದೂಡುವುದು ಉತ್ತಮ. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನ ಸಹಾಯವು ಸಿಗುವುದು. ಯಾರನ್ನೂ ಲಘುವಾಗಿ ಕಾಣುವುದು ಬೇಡ. ಇಂದು ವಹಿಸಿಕೊಂಡ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾದೀತು. ನಿಮ್ಮ ಆಪತ್ತಿಗೆ ಸಹಾಯ ಮಾಡುವವರನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ಗರಿಷ್ಠ ಮಟ್ಟದ ಪ್ರಭಾವವನ್ನು ಪ್ರಯೋಗಿಸುವಿರಿ. ನಾಯಕತ್ವದ ಪೂರ್ಣ ಅವಕಾಶವನ್ನು ಬಳಸಿಕೊಳ್ಳಿ. ಕಾರ್ಯಕ್ಷೇತ್ರದಲ್ಲಿ ನಿಮಗೆ ಗೌರವ. ಮನೆಯಲ್ಲಿ ಆಗುವ ಸಂತಸಕ್ಕೆ ನೀವು ಪಾಲುದಾರರಾಗಿರುವಿರಿ. ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮಗೆ ಯಶಸ್ಸನ್ನು ಲಾಭವಾಗುವ ಉತ್ತಮ ಕಾರ್ಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಸಂಗಾತಿಯ ಪ್ರೀತಿಯಿಂದ ನೀವು ಅಚ್ಚರಿಗೊಳ್ಳುವಿರಿ. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಪರರ ದ್ರವ್ಯದ ಆಸೆಯಾಗಲಿದೆ. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಒತ್ತಾಯವಿದ್ದರೂ ಧೈರ್ಯ ಸಾಲದು. ಆಪ್ತರನ್ನು ನೀವು ಮಾತಿನಿಂದಾಗಿ ದೂರ ಮಾಡಿಕೊಳ್ಳುವಿರಿ. ಬರಬೇಕಾದ ಹಣವು ನಿಮ್ಮ ಕೈ ಸೇರಲಿದೆ. ಇಂದು ನಿಮ್ಮ ನಡೆಯು ಹೊಸಬರಂತೆ ಕಾಣುವುದು. ಯಾವುದೇ ಆಟವನ್ನು ಸ್ಪರ್ಧಾಮನೋಭಾವದಿಂದ ಆಡಿದರೆ ಕ್ಷೇಮ.

ಧನು ರಾಶಿ:

ಕುಟುಂಬದ ಬೆಂಬಲ ಹೆಚ್ಚಾಗಿ ಮನೋಬಲ ಬಲವಾಗುತ್ತದೆ. ಹಣಕಾಸಿನ ಪ್ರಯತ್ನಗಳಲ್ಲಿ ಲಘು ಯಶಸ್ಸು. ಇಂದು ನಿಮ್ಮ ಕಾರ್ಯದಲ್ಲಿ ವಿಘ್ನ ಬಾರದಂತೆ ಕ್ರಮವನ್ನು ತೆಗೆದುಕೊಳ್ಳಿ. ಇಂದು ನೀವು ಹೂಡಿಕೆಯ ಮುಖಾಂತರ ಆರ್ಥಿಕ ಸಬಲತೆಯನ್ನು ಪಡೆಯಲು ಯೋಚಿಸುವಿರಿ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಬಹಳ ಉತ್ಸಾಹದಿಂದ ಇರುವಿರಿ. ನಿಮ್ಮನ್ನು ಆಶ್ರಯಿಸಿ ಬಂದವರಿಗೆ ಇಲ್ಲವೆನಬೇಡಿ. ಅಪರಿಚಿತರಿಂದ ಅಗತ್ಯ ಸಹಕಾರವನ್ನು ಪಡೆಯುವಿರಿ. ನೀವು ಹೊಸ ವಾಹನವನ್ನು ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು. ಇಂದು ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಭಾವನಾತ್ಮಕ ನಿರ್ಧಾರಗಳಲ್ಲಿ ಜಾಗರೂಕತೆ. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಆದಾಯವನ್ನು ಹೆಚ್ಚಿಸಲು ಮತ್ತೊಂದು ಉದ್ಯೋಗವನ್ನು ಬದಲಾಯಿಸಲು ಪರಿಗಣಿಸಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು.

ಮಕರ ರಾಶಿ:

ನಿಮ್ಮ ವಚನಶಕ್ತಿ ಪರಿಣಾಮಕಾರಿಯಾಗುತ್ತದೆ. ಹೊಸ ಸಂಪರ್ಕಗಳು ಲಾಭಕರ. ಪ್ರಯಾಣದ ಯೋಗವೂ ಸ್ಪಷ್ಟ. ಮನಸ್ಸಿನಲ್ಲಿ ಗೊಂದಲ ನಿವಾರಣೆ ಕಂಡು ಶಾಂತಿ. ನೀವು ಆದಾಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಕಡಿಮೆ ಖರ್ಚನ್ನು ಮಾತ್ರ ಯೋಜಿಸಿ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಇರುವ ವಿಚಾರವನ್ನು ನೀವು ಸ್ಪಷ್ಟಪಡಿಸಿ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡುವಿರಿ. ಸಾಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆ ಕಡಿಮೆ ಆದೀತು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ಅನಿರೀಕ್ಷಿತ ವಾರ್ತೆಗಳು ನಿಮಗೆ ದುಃಖವನ್ನು ಕೊಡಬಹುದು. ಬುದ್ಧಿವಂತಿಕೆಯಿಂದ‌ ಗೆಲವು ಸಾಧ್ಯ. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ.

ಕುಂಭ ರಾಶಿ:

ತಾಳ್ಮೆ ಫಲ ನೀಡುವ ಕ್ಷಣ. ಮನೆಯಲ್ಲಿ ಸಂತೋಷದ ವಾತಾವರಣ. ಆರ್ಥಿಕವಾಗಿ ಚಿಗುರು ಬೆಳೆಯುವ ಸೂಚನೆ. ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಶ್ಲಾಘನೆ. ಸಾಲದ ಮರುಪಾವತಿಯಾದರೂ ಮತ್ತೆ ಸಾಲದ ಭಯವು ಕಾಡುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ಬಂಧುಗಳ ಸಹಕಾರವನ್ನು ಅಪೇಕ್ಷಿಸುವಿರಿ. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ನಿಮ್ಮನ್ನು ಅಪಹಾಸ್ಯ ಮಾಡಲಿದ್ದು ನಿಮಗೆ ಕೋಪ ಬರುವುದು. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕಬೇಕಾದೀತು. ಉಪಕಾರವು ಮರೆತುಹೋಗಬಹುದು. ಇಂದು ಸಿಟ್ಟನ್ನು ನಿಮ್ಮ ಹಿಡಿತದಲ್ಲಿ ಇರಿಸಿಕೊಳ್ಳಿ. ಎಲ್ಲಿಗಾದರೂ ಹೋಗಿ ಸುತ್ತಾಡುವ ಮನಸ್ಸಾದೀತು. ಮೇಲಧಿಕಾರಿಗಳ ಪ್ರಶ್ನೆಗೆ ಉತ್ತರಿಸಬೇಕು. ಏಕಾಂತವನ್ನು ನೀವು ಇಷ್ಟಪಡಲಾರಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ.

ಮೀನ ರಾಶಿ:

ನಿಮ್ಮ ಓಜಸ್ಸು ಹೆಚ್ಚಾಗಿ ಹೊಸ ಸಂಕಲ್ಪಗಳು ಮೂಡುವ ದಿನ. ಗೌರವ ದೊರೆಯುವ ಸಾಧ್ಯತೆ. ಆತ್ಮವಿಶ್ವಾಸದ ಮಾತುಗಳು ಇತರರನ್ನು ಪ್ರೇರೇಪಿಸುತ್ತವೆ. ಇಂದು ಅನಗತ್ಯವಾಗಿ ಯಾರದೋ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಹಿರಿಯರ ಆರೋಗ್ಯದ ಬಗ್ಗೆ ಸಮಸ್ಯೆಯಿಂದಾಗಿ ಓಡಾಟವನ್ನು ಮಾಡಬೇಕಾದೀತು. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಮನದಲ್ಲಿ ದೀರ್ಘಕಾಲದ ಬಯಕೆ ಬೆಳಕು ಕಾಣುವ ಸೂಚನೆ. ಅವಕಾಶವು ಎಷ್ಟೇ ಇದ್ದರೂ ಬೇಕಾದುದಷ್ಟನ್ನೇ ಮಾತನಾಡಿ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬೇಡ. ಇಂದಿನ ಲೆಕ್ಕಾಚಾರದಿಂದ ಧನವ್ಯಯದ ಮಾಹಿತಿಯು ಸಿಗುವುದು. ಇದರಿಂದ ನೀವು ಅಚ್ಚರಿಗೊಳ್ಳುವಿರಿ. ಮನೆಯ ಹೊರಗೆ ಇಂದು ಹೆಚ್ಚು ಸುತ್ತಾಡುವಿರಿ.

ನಿತ್ಯ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವಜ್ರ, ಕರಣ : ವಣಿಜ, ಸೂರ್ಯೋದಯ – 06 – 27 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:53 – 09:18, ಯಮಗಂಡ ಕಾಲ 10:43 – 12:09, ಗುಳಿಕ ಕಾಲ 13:34 – 14:59

-ಲೋಹಿತ ಹೆಬ್ಬಾರ್-8762924271 (what’s app only)