Horoscope Today 06 January: ಲಾಭ – ನಷ್ಟಗಳ ಏರಿಳಿತ, ಇಂದು ಈ ರಾಶಿಯವರಿಗೆ ಮಿಶ್ರ ಫಲ
ಪೌಷ ಮಾಸ ಕೃಷ್ಣ ಪಕ್ಷದ ದ್ವಿತೀಯ ತಿಥಿ, ಮಂಗಳವಾರದ ಶಾಲಿವಾಹನ ಶಕ 1948ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ಪ್ರೀತಿ, ಆರ್ಥಿಕತೆ, ವೃತ್ತಿ ಮತ್ತು ಸಂಬಂಧಗಳ ಕುರಿತು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ಕಲಹ, ಹಣಕಾಸಿನ ಚಿಂತೆಗಳು, ಹೊಸ ಭೇಟಿಗಳು ಮತ್ತು ವೈಯಕ್ತಿಕ ಭಾವನೆಗಳ ಬದಲಾವಣೆಗಳು ಈ ದಿನದ ವಿಶೇಷಗಳಾಗಿವೆ. ನಿಮ್ಮ ಅದೃಷ್ಟ ಮತ್ತು ಸವಾಲುಗಳನ್ನು ತಿಳಿಯಲು ಸಂಪೂರ್ಣ ಭವಿಷ್ಯವನ್ನು ಓದಿ.

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ದ್ವಿತೀಯ ತಿಥಿ ಮಂಗಳವಾರ ವಿವಾಹದಲ್ಲಿ ಕಲಹ, ಅರೂಪದ ಭೇಟಿ, ಆದಾಯಕ್ಕೆ ಆಲೋಚನೆ, ಸಿಟ್ಟಿಗೆ ಕ್ಷಮೆ, ಪ್ರೀತಿ ಬದಲಾವಣೆ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಪುಷ್ಯಾ ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 08 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15-20 – 16:40, ಯಮಗಂಡ ಕಾಲ 09:41 – 11:06, ಗುಳಿಕ ಕಾಲ 12:30 – 13:55
ಮೇಷ ರಾಶಿ :
ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ಒತ್ತಾಯದಿಂದ ನಿಮಗೆ ಗೌರವ ಪ್ರಾಪ್ತವಾಗಬಹುದು. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ. ಖರೀದಿಯಲ್ಲಿ ನೀವು ಸ್ಥೂಲವಾಗಿ ಖರ್ಚನ್ನು ಅಂದಾಜಿಸಿಕೊಳ್ಳಿ. ಮಕ್ಕಳು ನಿಮ್ಮ ಬಳಿ ಹೊಸತನ್ನು ತಿಳಿದುಕೊಳ್ಳಲು ಬಯಸುವರು. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಸಿಕ್ಕ ಅಧಿಕಾರದ ಬಗ್ಗೆ ಕೀಳರಿಮೆ ಬೇಡ.
ವೃಷಭ ರಾಶಿ :
ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಮಿತ್ರರ ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಅವಿವಾಹಿತರಾಗಿರುವವರಿಗೆ ಕೊರಗು ಕಾಣಿಸವಹುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳುವುದು ಬೇಡ. ಯಾರನ್ನೂ ಉಪಯೋಗಿಸಿಕೊಳ್ಳಲು ಹೋಗಬೇಡಿ. ಉದ್ಯೋಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸಲು ಹೆಜ್ಜೆ ಇಡಿ.
ಮಿಥುನ ರಾಶಿ :
ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ. ಅರಿವಿಲ್ಲದೆ ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರುವುದು. ಮನೆಯ ಹಿರಿಯರನ್ನು ಅನಾದರದಿಂದ ನೋಡುವುದು ಯೋಗ್ಯವಾಗದು. ಅಧಿಕಾರದಿಂದ ಅಹಂಕಾರವು ಹೆಚ್ಚಾದೀತು. ಇಂದು ನೀವು ಬಹಳ ಸಿಟ್ಟಗೊಂಡರೂ ಬೇಗ ಶಾಂತರಾಗುವಿರಿ. ಸ್ವಾವಲಂಬನೆ ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು.
ಕರ್ಕಾಟಕ ರಾಶಿ :
ಭೂಮಿಯ ಲಾಭದ ವಿಚಾರದಲ್ಲಿ ಸರಿಯಾದ ಮಾತುಕತೆಗಳು ಆಗಲಿ. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ವಿದ್ಯಾಭ್ಯಾಸದ ಸಾಲವನ್ನು ನೀವು ತೀರಿಸುವಿರಿ. ಹಿರಿಯರ ಬಳಿ ಮಾತನಾಡುವಾಗ ವಿನಯವಿರಲಿ.
ಸಿಂಹ ರಾಶಿ :
ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಅಪರಿಚಿತರ ಹಸಿವನ್ನು ನೀಗಿಸುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡಲಾಗದು.
ಕನ್ಯಾ ರಾಶಿ :
ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು. ನ್ಯಾಯಾಲಯದ ವಿಚಾರವನ್ನು ಯಾರ ಬಳಿಯೂ ಹೇಳಲು ಇಚ್ಛಿಸುವುದಿಲ್ಲ. ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಆರ್ಥಿಕ ಒತ್ತಡದಿಂದ ಮನೆಯ ನೆಮ್ಮದಿಯು ಕದಡಬಹುದು. ಸಂಗಾತಿಯ ಬಗ್ಗೆ ಹೆಚ್ಚು ಕರುಣೆ ಬರಬಹುದು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ.
ತುಲಾ ರಾಶಿ :
ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಹನೆಯಿಂದ ಅದನ್ನು ಎದುರಿಸಬೇಕಾಗುವುದು. ದುಡುಕಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಏಕಾಗ್ರತೆಯ ಕೊರತೆಯನ್ನು ಸರಿ ಮಾಡಿಕೊಳ್ಳಿ. ನಿಮ್ಮ ಯೋಜನೆಗೆ ಸರಿಯಾದ ಚೌಕಟ್ಟು ಬೇಕು.
ವೃಶ್ಚಿಕ ರಾಶಿ :
ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಆಸ್ತಿಯ ವಿಚಾರದಲ್ಲಿ ದುಡುಕುವುದು ಬೇಡ, ಎಲ್ಲವೂ ಶಾಂತವಾಗುವ ತನಕ ಕಾಯಬೇಕಾಗುವುದು. ವ್ಯವಸ್ಥೆಯ ಸಣ್ಣ ಕೊರತೆಗಳು ಮುಖ್ಯವಾಗಬಾರದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕಾಣಿಸದು.
ಧನು ರಾಶಿ :
ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಬಹಳ ದಿನಗಳ ಅನಂತರ ಕುಟುಂಬದವರನ್ನು ಭೇಟಿಯಾಗುತ್ತಿರುವುದು ನಿಮ್ಮ ಮುಖದಲ್ಲಿ ಹರುಷ ಕಾಣುವುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಿಕೆಯಬ್ಯಾಂಕ್ಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ.
ಮಕರ ರಾಶಿ :
ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಕಲಹವಾಗಿ ಪರಿಣಮಿಸೀತು. ಒಬ್ಬರಾದರೂ ತಟಸ್ಥರಾಗಿರುವುದು ವಿವಾದವು ಆಗದಂತೆ ನೋಡಿಕಳ್ಳಬಹುದು. ಯಾರೇ ಏನೇ ಹೇಳಿದರೂ ಕೇಳಿಕೊಳ್ಳುವ ತಾಳ್ಮೆ ಅಗತ್ಯವಾಗಿ ಬೇಕು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.
ಕುಂಭ ರಾಶಿ :
ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಸಾಲಗಾರರಿಂದ ನಿಮ್ಮ ಮಾನಸಿಕ ಸ್ಥಿತಿಯು ಕೆಡಬಹುದು. ಯಾರದೋ ತಪ್ಪಿಗೆ ನೀವು ತಲೆಕೊಡಬೇಕಾದೀತು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಲಿದ್ದೀರಿ. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ನೆರೆಹೊರೆಯ ವಿಚಾರದಲ್ಲಿ ಅಸಮಾಧಾನ ಇರಲಿದೆ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಸ್ಥಿತಿ ತಪ್ಪಬಹುದು.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಜನವರಿ 4ರಿಂದ 10ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ
ಮೀನ ರಾಶಿ :
ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಸಹೋದ್ಯೋಗಿಗಳ ಮಾತಿನ ಬಗ್ಗೆ ಅಧಿಕವಾಗಿ ಪ್ರತಿಕ್ರಿಯೆ ಬೇಡ. ನೌಕರರ ಮೇಲೆ ನಿಮ್ಮದೊಂದು ಲಕ್ಷ್ಯ ಇರಬೇಕಾಗುವುದು. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
