Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 6ರ ದಿನಭವಿಷ್ಯ
ಜನ್ಮಸಂಖ್ಯೆ 4 ರವರಿಗೆ ಇಂದು ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ. ತಕ್ಷಣಕ್ಕೆ ಕೆಲಸ ಮಾಡಬೇಕೆಂಬ ಒತ್ತಾಯಕ್ಕೆ ಜಾಗ್ರತೆಯಿಂದ ಪ್ರತಿಕ್ರಿಯಿಸಿ. ಕಷ್ಟವೆಂದುಕೊಂಡಿದ್ದ ಸರ್ಕಾರಿ ಕೆಲಸ ಸುಲಭವಾಗಿ ಮುಗಿಯಲಿದೆ. ಸಾಲ ಕೊಡುವ ವಿಚಾರದಲ್ಲಿ ಎಚ್ಚರವಿರಲಿ, ವಸೂಲಿ ಕಷ್ಟವಾದೀತು. ಹಲ್ಲಿನ ನೋವಿನ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆತುರದ ನಿರ್ಧಾರಗಳಿಂದ ದೂರವಿರಿ.

ಜನ್ಮಸಂಖ್ಯೆಗೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 6ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈಗಿಂದ ಈಗಲೇ ಕೆಲಸ ಆಗಬೇಕು, ಹೆಚ್ಚಿಗೆ ಹಣ ಆದರೂ ಕೊಡಲು ತಯಾರಾಗಿದ್ದೀವಿ ಅಂತ ನಿಮ್ಮ ಬಳಿ ಕೆಲಸಕ್ಕೆ ಒತ್ತಾಯ ಮಾಡುತ್ತಾ ನಿಂತಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿದ ನಂತರ ಹೂಂ ಅನ್ನುವುದು ಒಳ್ಳೆಯದು. ಸುಲಭಕ್ಕೆ ಆಗದು ಎಂದುಕೊಂಡಿದ್ದ ಸರ್ಕಾರಿ ಕೆಲಸವೊಂದು ಸಲೀಸಾಗಿ ಮುಗಿಯಲಿದೆ. ಬಹಳ ದಿನಗಳಿಂದ ಬೆನ್ನಟ್ಟಿದ್ದಾರೆ ಎಂಬ ಕಾರಣಕ್ಕೆ ಸಾಲ ಕೊಡುವುದಕ್ಕೆ ಒಪ್ಪಿಕೊಂಡಲ್ಲಿ ಅದನ್ನು ವಾಪಸ್ ವಸೂಲಿ ಮಾಡುವುದರ ಒಳಗೆ ಹೈರಾಣಾಗಲಿದ್ದೀರಿ. ಹಲ್ಲಿನ ನೋವಿನ ಸಮಸ್ಯೆ ಇರುವವರು ಜಾಗ್ರತೆಯಿಂದ ಇರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಛಲದೊಳ್ ದುರ್ಯೋಧನ ಎಂಬ ಮಾತಿನಂತೆ ನಿಮ್ಮ ಹಿಂದಿನ ಸಿಟ್ಟು, ಪ್ರತೀಕಾರವನ್ನು ತೀರಿಸಿಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ಹೊಸ ಬಟ್ಟೆ, ಫ್ಯಾಷನ್ ದಿರಿಸುಗಳ ಖರೀದಿಗೆ ಹಣ ಖರ್ಚು ಮಾಡುವ ಯೋಗ ಈ ದಿನ ಇದೆ. ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಹಣವನ್ನು ನಾಜೂಕಾಗಿ ವಸೂಲಿ ಮಾಡುವುದಕ್ಕೆ ಸಾಧ್ಯ ಆಗಲಿದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರಲಿದೆ. ಮುಖ್ಯವಾದ ಕೆಲಸವೊಂದನ್ನು ಪೂರ್ತಿ ಮಾಡಿಕೊಂಡು ಬರುವುದಕ್ಕೆ ನಿಮಗೆ ವಹಿಸಲಿದ್ದಾರೆ.
ಇದನ್ನೂ ಓದಿ: 2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮೆಟ್ಟಿಲು ಹತ್ತುವಾಗ ಇಳಿಯುವಾಗ ಜಾಗ್ರತೆ ಇರಲಿ. ಮನೆಯಲ್ಲಿ ಆಗಬೇಕಾದ ಕೆಲಸ- ಕಾರ್ಯಗಳನ್ನು ಮುಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ವ್ಯಕ್ತಿಗಳನ್ನು ಕರೆಸಿ, ಮಾತನಾಡಲಿದ್ದೀರಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನೀವು ಒಪ್ಪಿಕೊಂಡ ಕೆಲಸಗಳಿಗೆ ಹೆಚ್ಚು ಸಮಯವನ್ನು ಎತ್ತಿಡಬೇಕಾದ ಸನ್ನಿವೇಶ ಎದುರಾಗಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಶುಭ ವಾರ್ತೆ ಕೇಳಲಿದೆ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
