Horoscope Today 11 November: ಈ ರಾಶಿಯವರು ಎಲ್ಲವನ್ನು ನಕಾರಾತ್ಮಕವಾಗಿ ನೋಡುವರು
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಮಂಗಳವಾರ ಸ್ತ್ರೀಯರಿಗೆ ಲಾಭ, ಆಕ್ಷೇಪ, ಪರಿಹಾರ, ದೈಹಿಕ ಶ್ರಮ, ಗೌರವ, ಮನೆಯವರ ಒಡನಾಟ, ಆತ್ಮಬಲ, ಆರ್ಥಿಕ ನಿಂದನೆ, ಅವಶ್ಯಕ ಮಾತು ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶುಭ, ಕರಣ : ಬಾಲವ, ಸೂರ್ಯೋದಯ – 06 – 17 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:56 – 16:23, ಗುಳಿಕ ಕಾಲ 12:04 – 13:30, ಯಮಗಂಡ ಕಾಲ 09:11 – 10:37.
ಮೇಷ ರಾಶಿ: ನಿಮಗೆ ಇಂದು ಕಾರ್ಯಕ್ಕಿಂತ ಹೆಚ್ಚಾಗಿ ಸ್ಥಾನವೇ ಮುಖ್ಯ ಎನ್ನುವ ಭಾವ ಬರಬಹುದು. ಪರೀಕ್ಷೆಯ ಫಲಿತಾಂಶದ ಮೇಲೆ ನಿಮ್ಮ ಮುಂದಿನ ಅಭ್ಯಾಸವು ನಿರ್ಣಯವಾಗಲಿದೆ. ವ್ಯವಹಾರದಲ್ಲಿ ಅನಗತ್ಯ ಚರ್ಚೆಯನ್ನು ತಪ್ಪಿಸಿ. ಉದ್ಯೋಗಕ್ಕಾಗಿ ಇಲ್ಲಿಂದ ಅಲ್ಲಿಗೆ ಅಲೆಯಬೇಕಾಗುತ್ತದೆ. ಉನ್ನತ ವಿದ್ಯಾಭ್ಯಾಸದ ಕುರಿತು ಸ್ನೇಹಿತರ ಜೊತೆ ಚರ್ಚೆ ನಡೆಸುವಿರಿ. ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುವುದು. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಅಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ಮೇಲಿಂದ ಮೇಲೆ ಕೇಳುವ ಆಕ್ಷೇಪವು ನಿಮಗೆ ರೂಢಿಯಾಗಲಿದೆ. ಪಾಲುದಾರಿಕೆ ಹಣದಲ್ಲಿ ಸರಿಯಾದ ಭಾಗವನ್ನು ಮಾಡಿಕೊಳ್ಳಿ. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ. ಯಾವುದೇ ಪ್ರತಿಸ್ಪಂದ ಇಲ್ಲದೇ ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು.
ವೃಷಭ ರಾಶಿ: ಒಂದೇ ಸ್ಥಾನಕ್ಕೆ ನಿಮ್ಮಿಂದ ಸ್ಪರ್ಧೆ ನಡೆಯಲಿದೆ. ಪ್ರತಿಭೆಗೆ ಸರಿಯಾದ ಪುರಸ್ಕಾರ ಸಿಗುವುದು. ಧಾರ್ಮಿಕ ಆಸಕ್ತಿಯಲ್ಲಿ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಓದಿನಲ್ಲಿ ಆಸಕ್ತಿ ಕಡಿಮೆ ಆಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ. ದಾಖಲೆಗಳಲ್ಲಿ ಆಗಬೇಕಾದ ಬದಲಾವಣೆಯನ್ನು ಸಮಯ ಪಡೆದು ಮಾಡಿಕೊಳ್ಳಿ. ಬಲದಿಂದ ಕಾರ್ಯವನ್ನು ಮಾಡದೇ ಯುಕ್ತಿಯಿಂದ ಮಾಡಬೇಕಾಗುವುದು. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ದಾಂಪತ್ಯದ ಕಲಹವನ್ನು ಮೌನವಹಿಸಿ ನೀವೇ ಶಾಂತಗೊಳಿಸಿ. ಮಾತಿಗೆ ಮಾತು ಬೆಳೆಯುವುದು ಬೇಡ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ಮನೆಯಲ್ಲಿ ನಿಮ್ಮ ಗಮನಕ್ಕೆ ಬರದೇ ಆದ ಕಾರ್ಯದಿಂದ ಬೇಸರ. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಕೋಪ. ಕುಟುಂಬದಲ್ಲಿ ಕಲಹದ ಕಾರಣ ಕೆಲಸ ಕಾರ್ಯವು ವಿಳಂಬವಾಗುವುದು.
ಮಿಥುನ ರಾಶಿ: ಯಂತ್ರೋಪಕರಣಗಳ ದುರಸ್ತಿಯಿಂದ ಬೇಸರವುಂಟಾಗುವುದು. ರಾಜಕಾರಣಿಗಳಿಗೆ ಅಧಿಕಾರಿಗಳಿಂದ ಕಿರಿಕಿರಿ. ಇಂದು ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಇಂದಿನ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ವೃದ್ಧಿ ಆಗಬಹುದು. ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿ ಪರರ ಪಾಲಾಗಬಹುದು. ಮಾತನ್ನು ಪರರ ಅಪಹಾಸ್ಯಕ್ಕಾಗಿ ಹೆಚ್ಚು ಆಡುವಿರಿ. ಇದು ಅತಿಯಾಗುವುದು ಬೇಡ. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಕೆಲಸದಿಂದ ತಪ್ಪಿಸಿಕೊಳ್ಳುವ ವಿಧಾನವನ್ನು ಅರಿಯುವಿರಿ. ಹಿತಶತ್ರುಗಳನ್ನು ದೂರವಿಟ್ಟು ಆಗಬೇಕಾದುದನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.
ಕರ್ಕಾಟಕ ರಾಶಿ: ಅನಿವಾರ್ಯತೆ ಸೃಷ್ಟಿಯಾಗುವಂತೆ ಕಾರ್ಯಗಳನ್ನು ಮಾಡಿ. ದುರ್ಬರ ಸ್ಥಿತಿಗೆ ನೀವು ಅಂಟಿಕೊಳ್ಳಲಾರಿರಿ. ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ಮನೆಯಿಂದ ದೂರವಾಸವಾಗಲಿದೆ. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ನಿಂದನೆ ಸಿಗುವುದು. ಭಯವನ್ನು ಬಿಟ್ಟು ಬಂದ ಅವಕಾಶಗಳನ್ನು ಮುನ್ನುಗ್ಗಬೇಕು. ಇಂದು ಅಸಾಧ್ಯ ಕಾರ್ಯದಲ್ಲೂ ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಇಂದಿನ ಖುಷಿಯ ವಿಚಾರವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ಪರಿಣಾಮವಿಲ್ಲದ ಸಿಟ್ಟಿನಿಂದ ಮನಸ್ಸು ಹಾಳಷ್ಟೇ. ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ.
ಸಿಂಹ ರಾಶಿ: ಮಾನಸಿಕ ಅಥವಾ ದೈಹಿಕ ಪೀಡಿಯನ್ನು ಪರರಿಗೆ ಕೊಡುವ ಯೋಚನೆ ಬರಲಿದೆ. ಸ್ವಭಾವವು ಪ್ರದೇಶವನ್ನು ಅವಲಂಬಿಸಿ ಬದಲಾಗಲಿದೆ. ಸ್ನೇಹಿತರ ವೈವಾಹಿಕ ಕಾರ್ಯಕ್ಕೆ ಸಹಾಯ ಮಾಡುವಿರಿ. ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ನೆರೆಹೊರೆಯರಿಂದ ತೊಂದರೆ ಬರಬಹುದು. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಧಾರ್ಮಿಕ ಆಚರಣೆಯಿಂದ ಮನಸ್ಸು ಪ್ರಶಾಂತ. ಈ ದಿನವು ದುರಂತದಲ್ಲಿ ಕೊನೆಯಾಗಬಹುದು. ನಿಮ್ಮ ಉಪಯೋಗವನ್ನು ಪಡೆದು ಕೈ ಬಿಡಬಹುದು. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ. ನಿಶ್ಚಿತ ಸಮಯಕ್ಕೆ ಮಂಗಲಕಾರ್ಯವನ್ನು ಮಾಡಲಾಗದು.
ಕನ್ಯಾ ರಾಶಿ: ಆರ್ಥಿಕ ಅಸಮತೋಲನ ನಿಮ್ಮ ಮನಸ್ಸಿಗೆ ಹಿಂಸೆ ನೀಡುವುದು. ಆದಾಯ ಮೂಲದಿಂದ ಸಂಪತ್ತು ವಿಳಂಬವಾಗಿ ಬರಲಿದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನೆರವೇರಲಿವೆ. ಇಂದು ನಿಮ್ಮಲ್ಲಿ ವಿನೋದದ ಮನಃಸ್ಥಿತಿ ಇರುವುದು. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಭೂಮಿಯ ಹೂಡಿಕೆಗೆ ಸಂಗಾತಿಯನ್ನು ಒಪ್ಪಿಸುವಿರಿ. ನಿಮ್ಮ ಸಹಜ ವರ್ತನೆಯೂ ತೋರಿಕೆಯಂತೆ ಕಾಣಬಹುದು. ತಂದೆಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ. ಉದ್ಯಮದಲ್ಲಿ ನಿಮಗೆ ಸಣ್ಣ ಪೈಪೋಟಿ ರೂಪುಗೊಳ್ಳುವುದು. ಅವಧಿಗೆ ಮೊದಲೇ ಕಾರ್ಯವನ್ನು ಮುಗಿಸಿ, ಮತ್ತಷ್ಟು ಕಾರ್ಯ ಮಾಡಬೇಕಾಗುವುದು.
ತುಲಾ ರಾಶಿ: ಹಲವು ಆಕರ್ಷಣೆಯಿಂದ ನಿಮಗೆ ಆಯ್ಕೆ ಕಷ್ಟ. ಮಕ್ಕಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ. ನಿಮ್ಮ ವ್ಯಾಪಾರ ಯೋಜನೆಯಿಂದ ಯಶಸ್ಸು. ಅಪೂರ್ಣ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಾಹಿತ್ಯ ಕ್ಷೇತ್ರದಲ್ಲಿ ಒತ್ತಡವು ಹೆಚ್ಚು ಕಾಣಿಸುವುದು. ಸಂಗಾತಿಯು ನಿಮ್ಮ ಪರವಾಗಿ ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅಧ್ಯಾತ್ಮ ಬಲದಿಂದ ದ ಅತ್ಮಬಲವನ್ನು ತಂದುಕೊಳ್ಳುವಿರಿ. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ನಿಮ್ಮಲ್ಲಿ ಖಾಯಿಲೆ ದಿನಚರಿಯ ವ್ಯತ್ಯಾಸದಿಂದ ಉಲ್ಬಣವಾಗಬಹುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.
ವೃಶ್ಚಿಕ ರಾಶಿ: ಮಾತನಾಡುವ ಭರದಲ್ಲಿ ಅಸಂಬದ್ಧವಾಗಿ ಹೇಳಿ ಅನಂತರ ಕ್ಷಮೆ ಕೇಳಬೇಕಾಗುವುದು. ಔದ್ಯೋಗಿಕ ನಿರ್ಣಯವನ್ನು ತೆಗೆದುಕೊಳ್ಳಲು ಸಮಯವನ್ನು ಪಡೆಯಿರಿ. ಇಂದು ನಿಮ್ಮ ಹಳೆಯ ನ್ಯಾಯಾಲಯದ ಪ್ರಕರಣಗಳಲ್ಲಿ ಜಯ. ಸಂಗಾತಿಯ ಜೊತೆ ಸ್ನೇಹ ಕೂಟದಲ್ಲಿ ಭಾಗವಹಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಹಿರಿಯರು ಮಾಡುವ ವಿವಾಹ ಸಂಬಂಧವನ್ನು ವಿವಾಹ ಆಗುವವರು ಒಪ್ಪಿಗೆ ನೀಡರು. ವೃತ್ತಿಯಲ್ಲಿ ದಿಢೀರ್ ಬದಲಾವಣೆಯಿಂದ ನಿಮಗೆ ಕಷ್ಟವಾಗುವುದು. ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಅಪರಿಚಿತ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಬೇಡವೆಂದರೂ ಕೇಳುವ ಸ್ಥಿತಿಯನ್ನು ದಾಟಿರುವಿರಿ.
ಧನು ರಾಶಿ: ಬಾಕಿ ಇಟ್ಟಕೊಳ್ಳದೇ ವ್ಯವಹಾರವನ್ನು ಅಲ್ಲಿಯೇ ಮುಗಿಸಿ. ಮನಸ್ತಾಪಕ್ಕೆ ದಾರಿಯನ್ನು ನೀವು ಮಾಡುವುದು ಬೇಡ. ಪ್ರೇಮವನ್ನು ಪೂರ್ಣವಾಗಿ ನಂಬಲಾಗದು. ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ವಿದ್ಯಾಭ್ಯಾಸವು ನಿಮಗೆ ಹೊರೆ ಎನಿಸಬಹುದು. ನೀವು ಮಾಡುವ ತಪ್ಪನ್ನು ಸಂಗಾತಿಯು ಲೆಕ್ಕವಿಡುವರು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ಆಗದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಕೊಂಡು ಬಳಸುವಿರಿ.
ಮಕರ ರಾಶಿ: ಆತ್ಮಪ್ರಶಂಸೆಯ ಕಾರಣ ಆಪ್ತರೂ ದೂರಾಗಬಹುದು. ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ವಿದೇಶದಿಂದ ಬಂದ ಬಂಧುಗಳಿಂದ ಉಡುಗೊರೆ ಸಿಗಲಿದೆ. ಕಛೇರಿಯ ನಿಯಮಗಳನ್ನು ಸಡಿಲ ಮಾಡುಕೊಳ್ಳುವಿರಿ. ನಿಮ್ಮ ಮಾರ್ಗದರ್ಶಕರನ್ನು ಗೌರವಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಅಪರಿಚಿತರ ಜೊತೆ ಸುತ್ತಾಟ ಮಾಡುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದು ಸುತ್ತಾಡುವಿರಿ. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ.
ಕುಂಭ ರಾಶಿ: ನೀವು ಕೊಡುವ ಹೇಳಿಕೆ ತಪ್ಪಿದ್ದರೂ ಆತ್ಮವಿಶ್ವಾಸದಿಂದಲೇ ಹೇಳುವಿರಿ. ವೃತ್ತಿಯ ಕಾರಣಕ್ಕೆ ಮಾಡುವ ಪ್ರಯಾಣದಲ್ಲಿ ಇಷ್ಟವಿರದು. ಯಾವುದೇ ವೃತ್ತಿಯಾಗಿದ್ದರೂ ಅವರ ಸಾಧನೆಗೆ ಗೌರವವು ಸಿಗಲಿದೆ ಇಂದು ಅನಗತ್ಯವಾಗಿ ಜಗಳಕ್ಕೆ ಇಳಿಯುವ ಸಂದರ್ಭ ಬರಬಹುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಇಬ್ಬರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಧಾರ್ಮಿಕ ಆಚರಣೆಗಳನ್ನು ಅಶ್ರದ್ಧೆಯಿಂದ ಮಾಡುವಿರಿ. ಸ್ನೇಹಿತರನ್ನು ದೂರವಿಡುವಿರಿ. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ಕುಟುಂಬದ ಅಸಮಾಧಾನವನ್ನು ನೀವೇ ಸರಿಮಾಡುವಿರಿ. ನಿಮ್ಮ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ. ನಿಮ್ಮ ಬಗ್ಗೆ ಇತರರಿಗೆ ತಿಳಿವಳಿಕೆ ಕೊಡುವಿರಿ.
ಮೀನ ರಾಶಿ: ನಿಮ್ಮ ಸಿದ್ಧಾಂತಗಳು ದಾರಿಯನ್ನು ಬದಲಿಸಲಿವೆ. ಆಸ್ತಿಯ ಹಂಚಿಕೆಯಲ್ಲಿ ಹಳೆಯ ವಿಚಾರಗಳು ಮರುಕಳಿಸುವುದು. ನಿಮ್ಮ ತಪ್ಪುಗಳಿಂದ ಪಶ್ಚಾತ್ತಾಪವಾಗಬೇಕೇ ಹೊರತೆ, ಅದನ್ನು ಸಮರ್ಥಿಸಿಕೊಂಡು ದೊಡ್ಡವರಾಗುವುದಿಲ್ಲ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಸ್ವಯಾರ್ಜಿತ ಆಸ್ತಿಯನ್ನು ನೀವು ಗಳಿಸುವಿರಿ. ನಿಂದಿಸುವವರಿಗೆ ನಿಮ್ಮಿಂದ ತಕ್ಕ ಉತ್ತರ. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಿಗಬಹುದು. ಕಾರಣಾಂತರಗಳಿಂದ ನಿಮ್ಮ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಸಂತೋಷದ ವಾತಾವರಣವು ಮನೆಯಲ್ಲಿ ಇರುವುದು. ನಿರಾಸೆಯಿಂದ ನೀವು ಹೊರಬರುವಿರಿ. ನಿಮ್ಮ ಕೆಲಸದಲ್ಲಿ ನಿಮ್ಮ ಮೇಲಧಿಕಾರಿಯ ಕೋಪಕ್ಕೆ ನೀವು ಬಲಿಯಾಗಬಹುದು.
ಲೋಹಿತ ಹೆಬ್ಬಾರ್-8762924271 (what’s app only)




