ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,
ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್,
ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಧ್ರುವ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ 04:49ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:47 ರಿಂದ 11:12 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:36 ರಿಂದ 02:00 ರವರೆಗೆ.
ಮೇಷ ರಾಶಿ: ನಿಮಗೆ ಯಾರೂ ಶತ್ರುಗಳು ಇಲ್ಲದಿದ್ದರೂ ನೀವೇ ಕೆಲವರಿಗೆ ಶತ್ರುಗಳಾಗುವಿರಿ. ಮುಖ್ಯ ಅಂಶಗಳನ್ನು ಎಲ್ಲಿಯಾದರೂ ಮರೆತುಬಿಡುವಿರಿ. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳಲಾಗದು. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಮಾತಿನ ಮೇಲೆ ಹಿಡಿತವು ಬೇಕಾದೀತು. ನಿಮಗೆ ಸಂಗಾತಿಯ ಮೇಲೆ ಸಿಟ್ಟಾಗುವ ಸನ್ನಿವೇಶವು ಬರಲಿದೆ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ. ನಿಮ್ಮನ್ನು ದಿಕ್ಕು ತಪ್ಪಿಸಿ ಕಾರ್ಯದ ವೇಗವನ್ನು ಕಡಿಮೆ ಮಾಡಿಸಬಹುದು. ಔದಾರ್ಯವೇ ನಿಮಗೆ ಹಿಂದಿರುಗಿ ಬರುವುದು.
ವೃಷಭ ರಾಶಿ: ಯಾವುದನ್ನೂ ಹಲಕೆಯದು ಎಂದು ಮೂಲೆಗುಂಪು ಮಾಡುವುದು ಬೇಡ. ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ಪೂರ್ವಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಪೂರ್ಣ ಸಮಾಧಾನ ಇರದು. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಸಾಲವನ್ನು ಮಾಡುವಾಗ ಯಾರದ್ದಾದರೂ ಸಲಹೆಯನ್ನು ಪಡೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಆದಾಯದ ಮೂಲವು ಬದಲಾಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದರಿಂದ ಬೇಸರವಾದೀತು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ದೂರ ಪ್ರಯಾಣದ ಮನಸ್ಸಿದ್ದರೂ ಅನನುಕೂಲತೆಯಿಂದ ಅದು ಕಷ್ಟವಾದೀತು.
ಮಿಥುನ ರಾಶಿ: ನಿಮ್ಮನ್ನು ಎಲ್ಲರೆದುರು ಪ್ರಕಟಪಡಿಸಿಕೊಳ್ಳಲು ಇಂದು ಇಷ್ಟವಾಗದು. ಉದ್ಯಮದ ಸ್ಥಳವನ್ನು ಬದಲಾವಣೆ ಮಾಡುವಿರಿ. ಮೇಲಧಿಕಾರಿಗಳ ವರ್ತನೆಯನ್ನು ಸಹಿಸಲು ಕಷ್ಟವಾದೀತು. ಹಿರಿಯರ ಮಾರ್ಗದರ್ಶನವನ್ನು ನೀವು ಅಲ್ಲಗಳೆಯುವಿರಿ. ಧನವ್ಯಯವಾಗುವ ಸಂದರ್ಭವು ಬರಬಹುದು. ತುರ್ತು ಹಣ ಸಂಪಾದನೆಯನ್ನು ಮಾಡಬೇಕಾದೀತು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನಿಮ್ಮ ಸತ್ಯದಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮ್ಮ ನಡೆಯುವುದು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಅತಿಯಾದ ನಿದ್ರೆಯಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಸಾಮಾಜಿಕ ಗೌರವವನ್ನು ನೀವು ಪಡೆಯಲಿದ್ದೀರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.
ಕರ್ಕಾಟಕ ರಾಶಿ; ಇಂದು ನಿಮ್ಮ ಉದ್ಯಮಕ್ಕೆ ಸಹಕಾರ ನೀಡಿದವರಿಗೆ ಏನಾದರೂ ನೀಡುವಿರಿ. ಎಲ್ಲವನ್ನೂ ತಿಳಿದೆನೆಂಬ ಅಹಂ ನಿಂದ ಸೋಲಾಗುವುದು. ಕುಟುಂಬದವರ ಜೊತೆ ನಿಮ್ಮ ಒಡಾನಾಟವು ಕಡಿಮೆ ಆಗಬಹುದು. ಕೃಷಿಯ ಚಟುವಟಿಕೆಯಿಂದ ಲಾಭವಾಗುವುದು. ಮಿತ್ರರ ಸಹಾಯವನ್ನು ನೀವು ಉಪೇಕ್ಷಿಸುವಿರಿ. ಓಡಾಟದಿಂದ ಕೆಲಸವಾಗದು. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವಾಗುವುದು. ಪರಿಚಿತರಿಂದಲೇ ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ವಂಚನೆಯಾಗಲಿದೆ. ಸ್ನೇಹವೇ ಪ್ರೇಮವಾಗಿ ಬದಲಾಗಬಹುದು. ಮುಖ್ಯ ಕೆಲಸವು ಮರೆತುಹೋಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ಪರ್ಧಾತ್ಮಕ ಅಂಶಗಳನ್ನು ಸರಿಯಾಗಿ ತಿಳಿದು, ಮುಂದುವರಿಯಿರಿ.
ಸಿಂಹ ರಾಶಿ: ಅಪ್ರಯೋಜನವಾದ ವಿಚಾರದಲ್ಲಿ ಆಸಕ್ತಿ ಇರದು. ಕೆಲವು ಸಂದರ್ಭಗಳನ್ನು ಎಷ್ಟೇ ಪ್ರಯತ್ನಿಸಿದರೂ ಅದನ್ನು ಇಂದು ನಿಮ್ಮಿಂದ ತಡೆದುನಿಲ್ಲಿಸಲಾಗದು. ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ಸಾಮೂಹಿಕ ಕೆಲಸವು ನಿಮಗೆ ಕಿರಿಕಿರಿ ಕೊಡಬಹುದು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚರಚಾಗುವುದು. ಬಂಧುಗಳಿಂದ ಆತಿಥ್ಯ ಸಿಗುವುದು. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಯಾರೋ ಮಾಡಿದ ನಿಯಮಕ್ಕೆ ನಿಮಗೆ ತೊಂದರೆಯಾಗಬಹುದು. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ.
ಕನ್ಯಾ ರಾಶಿ: ಇಂದ ಅಪರಿಚಿತರ ಜೊತೆ ಸರಿಯಾಗಿ ವ್ಯವಹಾರ ಮಾಡದೇ ನಷ್ಟ ಮಾಡಿಕೊಳ್ಳುವಿರಿ. ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಹಠದ ಸ್ವಭಾವದಿಂದ ಉದ್ಯೋಗವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಧೃತಿಗೆಡದೇ ಹೊಸ ಉದ್ಯೋಗಕ್ಕೆ ತೆರಳುವಿರಿ. ವ್ಯವಹಾರದ ನಷ್ಟವು ನಿಮ್ಮ ಮನಸ್ಸನ್ನು ವಿಚಲಿತ ಮಾಡೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸುವಿರಿ. ನೀವು ಸಣ್ಣ ನೋವನ್ನೂ ನಿರ್ಲಕ್ಷಿಸುವುದು ಬೇಡ. ಅನುಮಾನದಿಂದ ಸ್ನೇಹವು ಹಾಳುಗುವುದು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವ ಶಂಕೆ ಇದೆ.
ತುಲಾ ರಾಶಿ: ನಿಮ್ಮ ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವರು. ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಪಾಲುದಾರಿಕೆಯಲ್ಲಿ ಹಣದ ವ್ಯವಹಾರದಿಂದ ನಿಮಗೆ ಅಸಮಾಧಾನವಾಗುವುದು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದುಹೋದ ವಿಷಯವನ್ನು ಯಾರೋ ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ನಿಮ್ಮ ಅಂತಶ್ಶಕ್ತಿ ನಿಮ್ಮರಿಗೆ ಗೊತ್ತಾಗುವುದು. ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾರ ಸಹಾಯವನ್ನೂ ಪಡೆಯದೆ ಸ್ವಾಭಿಮಾನದಿಂದ ವರ್ತಿಸುವಿರಿ.
ವೃಶ್ಚಿಕ ರಾಶಿ; ನಿಮ್ಮ ಕಾರ್ಯಭಾರವನ್ನು ಪರರಿಗೆ ಸ್ವಲ್ಪ ನೀಡುವಿರಿ. ಧಾರ್ಮಿಕ ನಾಯಕರ ನಡುವೆ ವಾಗ್ವಾದ ಮಾಡುವಿರಿ. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ಇಂದು ಇನ್ನೊಬ್ಬರ ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕ ಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ. ನಿಮ್ಮ ಮಾತುಗಳು ಕೆಲವರಿಗೆ ಮಾರ್ಗದರ್ಶನವಾಗಲಿದೆ.
ಧನು ರಾಶಿ: ಖಾಸಗಿ ಸಂಸ್ಥೆಯ ಅಧಿಕಾರಿಯಾಗಲು ಕರೆ ಬರಬಹುದು. ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ರಾಜಕೀಯದ ಅನಿರೀಕ್ಷಿತ ಬದಲಾವಣೆಯ ಬಿಸಿಯು ನಿಮಗೂ ತಟ್ಟಬಹುದು. ಕೆಲವನ್ನು ನೀವು ಹೇಳಿ ಮಾಡುವುದು ಸಾಧ್ಯವಾಗದು. ಕಳ್ಳತನದ ಭೀತಿ ಇರಲಿದೆ. ಅಕಸ್ಮಾತ್ ವಾಹನದಿಂದ ಬೀಳಬಹುದು. ಸಣ್ಣ ಗಾಯಗಳೂ ಆಗಬಹುದು. ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಸಣ್ಣ ಉದ್ಯೋಗದವರು ಅಲ್ಪ ಲಾಭವನ್ನು ಗಳಿಸುವರು. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು. ಕಬ್ಬಿಣದ ವ್ಯಾಪರದಿಂದ ಲಾಭವನ್ನು ಪಡೆಯುವಿರಿ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿ ಆತಂಕವಾಗಬಹುದು. ನಿಮ್ಮನ್ನು ಅವಲಂಬಿಸಿದವರ ಅವಶ್ಯಕತೆಗಳನ್ನು ಪೂರೈಸುವಿರಿ. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.
ಮಕರ ರಾಶಿ: ನಿಮ್ಮ ಮಾತಿನ ಮಧುರತೆಯು ಇತರರಿಗೆ ಇಷ್ಟವಾಗುವುದು. ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ತಂದೆಯ ಜೊತೆಗಿನ ಮನಸ್ತಾಪವನ್ನು ನೀವು ಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಕಲಾವಿದರು ಹೊಸ ಅವಕಾಶಗಳನ್ನು ಪಡೆದುಕೊಳ್ಳುವರು. ನಿಮ್ಮ ವಿದ್ಯೆಗೆ ಗೌರವ ಸಿಗುವುದು. ಬರಬೇಕಾದ ಹಣವನ್ನು ಬಹಳ ಮುತುವರ್ಜಿಯಿಂದ ಪಡೆಯಬೇಕು. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವು ನಿಮಗೆ ದುಃಖಕೊಟ್ಟೀತು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ಇರಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ಗೌರವ ಬರುವಂತಹ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುವಿರಿ.
ಕುಂಭ ರಾಶಿ: ಬರುವ ಕಷ್ಟಗಳು ನಿಮ್ಮ ಪೂರ್ವಕರ್ಮದ್ದು ಎನ್ನುವ ವಿಚಾರವನ್ನು ಸ್ಮರಣೆಗೆ ತಂದುಕೊಳ್ಳಿ. ಸಮಯಪ್ರಜ್ಞೆಯಿಂದ ನೀವು ಸೂಕ್ತವಾದ ಮಾತುಗಳನ್ನು ಆಡುವಿರಿ. ರಪ್ತು ವ್ಯಾಪಾರವು ಸುಗಮವಾಗಿ ಸಾಗುವುದು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಸಮಯಪ್ರಜ್ಞೆಯಿಂದ ನೀವು ಯೋಗ್ಯ ಮಾತುಗಳನ್ನು ಆಡುವಿರಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಪ್ರಶಂಸೆ ಪಡೆಯುವಿರಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸ್ವತಂತ್ರವಾಗಿ ಇರಲು ನಿಮ್ಮ ಚಿಂತನೆ ಮಾಡುವಿರಿ.
ಮೀನ ರಾಶಿ; ಇಂದು ನಿಮ್ಮನ್ನು ಯಾರಾದರೂ ಗೌಪ್ಯವಾಗಿ ಗಮನಿಸುತ್ತಿರುವಂತೆ ಅನ್ನಿಸಬಹುದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿ ಯಾವ ಪ್ರಯೋಜನವೂ ಆಗದು. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ನಿಮ್ಮ ಮುಂದಿನ ಕೆಲಸವನ್ನು ಮಾಡಿ. ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ಪಡೆಯುವಿರಿ. ಹದಗೆಡುವ ಆರೋಗ್ಯವನ್ನು ಮೊದಲೇ ಸರಿಮಾಡಿಕೊಂಡು ಜಾಣರಾಗಿರಿ. ನಿಮ್ಮ ಯೋಜನೆಗೆ ಕೆಲವು ಅಪಸ್ವರಗಳು ಕೇಳಿಸುವುದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೂ ಪ್ರಯೋಜನವಾಗದು. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಆಪ್ತರ ಮಾತಿಗೆ ಕಿವಿಯಾಗಿರುವಿರಿ. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ಅವರವರ ಭಾರ ಅವರಿಗೇ ಗೊತ್ತಾಗುವ ದಿನ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.
ಲೋಹಿತ ಹೆಬ್ಬಾರ್ – 8762924271 (what’s app only)