Horoscope Today 31 October: ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು
ನಿತ್ಯ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಶುಕ್ರವಾರ ವಿಶ್ವಾಸಭಂಗ, ಅನಿರೀಕ್ಷಿತ ಆದಾಯ, ಉದ್ಯಮದ ಸಹಕಾರ, ರಿಯಾಯಿತಿಯ ಲಾಭ, ದೊಡ್ಡ ಕಾರ್ಯಕ್ಕೆ ಸಣ್ಣ ತ್ಯಾಗ, ಕ್ರಿಯಾತ್ಮಕತೆಗೆ ಅಡ್ಡಿ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:36 – 12:13, ಗುಳಿಕ ಕಾಲ 07:41 – 09:09 ಯಮಗಂಡ ಕಾಲ 14:58 – 16:25.
ಮೇಷ ರಾಶಿ: ನಿಮ್ಮ ಕೌಶಲವೇ ಇಂದಿನ ಆದಾಯದ ಮೂಲವೂ ಆಗುವುದು. ನಿಮಗೆ ಯಾರೂ ಶತ್ರುಗಳು ಇಲ್ಲದಿದ್ದರೂ ನೀವು ಕೆಲವರಿಗೆ ಶತ್ರುಗಳಾಗುವಿರಿ. ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ನಿಮ್ಮ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗವುದು. ಬಂಧುಗಳ ಆಗಮನದಿಂದ ನಿಮಗೆ ವ್ಯಾಪಾರದಲ್ಲಿ ನಷ್ಟವಾಗಬಹುದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಒಂದೇ ತೆರೆನಾಗಿ ಇರದು. ಮನೆಯ ಹಿರಿಯರಿಂದ ನಿಮಗೆ ಸೂಕ್ತ ಉಪದೇಶ ಸಿಗಲಿದೆ. ನಿಮ್ಮ ಮಾರ್ಗದರ್ಶನಕ್ಕೆ ಗಾಢವಾದ ಚಿಂತೆಯಿಂದ ಹೊರಬರಲು ಕಷ್ಟವಾದೀತು. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಉದ್ಯಮದ ಯೋಜನೆಯನ್ನು ಅಂತಿಮಗೊಳಿಸಿ. ಪಾರದರ್ಶಕ ವ್ಯವಹಾರದಿಂದ ನಿಮಗೆ ಲಾಭವಿರವುದು. ಕಡಿಮೆ ಖರ್ಚಿನಲ್ಲಿ ಸಂತಸವನ್ನು ಅನುಭವಿಸುವಿರಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ ಮಾಡಿಸಬಹುದು.
ವೃಷಭ ರಾಶಿ: ತಮಾಷೆಗಾಗಿ ಆಡಿದ ಮಾತೂ ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟುಕೊಡುವುದು. ಯಾವುದನ್ನೂ ಹಲಕೆಯದು ಎಂದು ಮೂಲೆಗುಂಪು ಮಾಡುವುದು ಬೇಡ. ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ದಾಳವಾಗಿ ಬಳಸಿಕೊಳ್ಳಬಹುದು. ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿಯುವಿರಿ. ನಿಮ್ಮ ನಿಜ ಸ್ವಭಾವವು ಜೊತೆಗಾರರಿಗೆ ಗೊತ್ತಾಗುವುದು. ಹಣದ ಹೂಡಿಕೆಯನ್ನು ಅತಿಯಾಗಿ ಮಾಡಿಕೊಂಡು ಖರ್ಚಿಗೇ ಹಣವಿಲ್ಲದಂತೆ ಆಗಬಹುದು. ವಾಹನ ಖರೀದಿಗೆ ಸಾಲವನ್ನೂ ಮಾಡಬೇಕಾಗುವುದು. ನಿಮ್ಮ ಮಾತಿಗೆ ಬೆಲೆ ಕಡಿಮೆ ಆಗುವುದು. ನಿಮ್ಮ ಕೆಲಸಗಳ ಅವಲೋಕನವನ್ನು ಇಂದು ಮಾಡಿಕೊಳ್ಳುವಿರಿ. ನಿಮ್ಮ ನೇರ ಮಾತು ಇನ್ನೊಬ್ಬರನ್ನು ಘಾಸಿಗೊಳಿಸುವುದು. ಕೆಟ್ಟ ಕನಸಿನಿಂದ ಮನಸ್ಸಿಗೆ ತಳಮಳ. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ದೂರ ಪ್ರಯಾಣದ ಮನಸ್ಸಿದ್ದರೂ ಅನನುಕೂಲತೆಯಿಂದ ಅದು ಕಷ್ಟವಾದೀತು.
ಮಿಥುನ ರಾಶಿ: ಆಸ್ತಿಗಾಗಿ ಮುಂಗಡ ಹಣ ಕೊಟ್ಟು ಪೆಚ್ಚಾಗುವ ಸಂದರ್ಭವನ್ನು ತಂದುಕೊಳ್ಳಬೇಡಿ. ನಿಮ್ಮನ್ನು ಪ್ರಕಟಪಡಿಸಿಕೊಳ್ಳಲು ಇಂದು ಇಷ್ಟಪಡಲಾರಿರಿ. ಸುಖದ ಜೀವನ ಮತ್ತು ಹಣ ಸಂಪಾದನೆ ಈ ಎರಡು ಮಾರ್ಗಗಳು ನಿಮ್ಮ ಮುಂದು ಇರುವುದು. ಆಯ್ಕೆಯೂ ನಿಮಗೇ ಬಿಟ್ಟಿದ್ದಾಗಿದೆ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ನಡೆಸುವಿರಿ. ಮುಖ್ಯ ಕಾರ್ಯಗಳು ನಿಮ್ಮನ್ನು ತಪ್ಪಿಹೋಗಬಹುದು. ನಿಮ್ಮ ಸತ್ಯದಿಂದ ಸಹೋದ್ಯೋಗಿಯ ಕೆಲಸವು ಇಲ್ಲವಾಗುವುದು. ಸ್ವಭಾವವನ್ನು ಬದಲಿಸಿಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಸಾಮಾಜಿಕ ಗೌರವಕ್ಕೆ ನೀವು ಪಾತ್ರರಾಗುವಿರಿ. ದಾಖಲೆಗಳ ಮೇಲೆ ವ್ಯವಹಾರವನ್ನು ಮಾಡಿ, ನಂಬುಗೆಯಮೇಲಲ್ಲ. ವಿಪರೀತ ಸಿಟ್ಟಿನಿಂದ ಇಂದು ಇರುವಿರಿ. ಇಂದು ಎಂತಹ ಆಚರಣೆಯನ್ನೂ ನೀವು ಮಾಡಲು ಸಿದ್ಧರು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.
ಕರ್ಕಾಟಕ ರಾಶಿ: ಮನೆಗೆ ಬಂದುಹೋಗುವ ಬಂಧುಗಳು ಮನೆಯಲ್ಲಿಯೇ ಇರಬಹುದು. ಉದ್ಯಮಕ್ಕೆ ಸಹಕಾರ ನೀಡಿದವರಿಗೆ ಏನಾದರೂ ನೀಡುವಿರಿ. ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಲಭ್ಯವಾಗದೇ ಹೋಗಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಮಾಡುವಿರಿ. ಸ್ವಾಭಿಮಾನಕ್ಕೆ ಅಡ್ಡಿಯಾದೀತು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವು ಬರುವುದು. ಭೂ ವ್ಯವಹಾರದಲ್ಲಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದು. ನಿಮ್ಮ ಪ್ರೈವೆಸಿಗೆ ಅಡ್ಡಿಯಾದವರನ್ನು ಆಡಿಕೊಳ್ಳುವಿರಿ. ಸ್ನೇಹವೇ ಪ್ರೇಮವಾಗುವ ಸಾಧ್ಯತೆ ಇದೆ. ಪ್ರತಿಯೊಂದು ನಡೆಯನ್ನೂ ಗಮನಿಸುವರು. ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತನೆಯು ಇರಲಿದೆ. ಓದಿನಲ್ಲಿ ಹಿಂದುಳಿಯುವ ಸಾಧ್ಯತೆ ಇರಲಿದೆ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ಪರ್ಧಾತ್ಮಕ ಅಂಶಗಳನ್ನು ಸರಿಯಾಗಿ ತಿಳಿದು, ಮುಂದುವರಿಯಿರಿ.
ಸಿಂಹ ರಾಶಿ: ಪ್ರೇಮಕ್ಕೆ ಪರರಿಂದ ವಿಘ್ನಗಳು. ಹಿತಶತ್ರುಗಳೇ ಇಬ್ಬರ ನಡುವೆ ಸಂದೇಹದ ಸಂದರ್ಭವನ್ನು ನಿರ್ಮಿಸುವರು. ಕೆಲವು ಸಂದರ್ಭಗಳನ್ನು ಎಷ್ಟೇ ಪ್ರಯತ್ನಿಸಿದರೂ ಅದನ್ನು ಇಂದು ನಿಮ್ಮಿಂದ ತಡೆದುನಿಲ್ಲಿಸಲಾಗದು. ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಆರ್ಥಿಕ ನಷ್ಟಕ್ಕೆ ನಿಮಗೆ ಚಿಂತೆಯಾಗಬಹುದು. ಎಲ್ಲರ ಜೊತೆಗೂಡಿ ಕೆಲಸ ಮಾಡಲು ನಿಮಗೆ ಆಗದೇ ಇರುವುದು. ನಿಮ್ಮ ಪ್ರಶಂಸೆಯಿಂದ ಉಳಿದವರಿಗೆ ಕಷ್ಟವಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಆಗಲಿದೆ. ಧಾರ್ಮಿಕ ಕಾರ್ಯಗಳನ್ನು ಇಂದು ಅನಿವಾರ್ಯವಾಗಿ ಮಾಡಬೇಕಾಗಬಹುದು. ನಿಮ್ಮ ಯೋಜನೆಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಗುರಿ ಸಾಧನೆಗೆ ದೈವಕ್ಕೆ ಶರಣಾಗುವಿರಿ. ತಮಾಷೆಯನ್ನು ನೀವು ಅತಿಯಾಗಿ ಯಾರಮೇಲೂ ಮಾಡುವುದು ಬೇಡ. ಬಂಧುಗಳ ಜೊತೆಗೆ ಸಂವಹನವು ಇಷ್ಟವಾಗದು. ವಾಹನದ ಓಡಾಟವು ನಿಮಗೆ ಕಿರಿಕಿರಿ ಕೊಡಬಹುದು. ನಿಮ್ಮ ಪ್ರಯಾಣವನ್ನು ಮಾಡಿ ಮುಂದೂಡುವುದು ಉತ್ತಮ. ಯಾರೋ ಮಾಡಿದ ನಿಯಮಕ್ಕೆ ನಿಮಗೆ ತೊಂದರೆಯಾಗಬಹುದು.
ಕನ್ಯಾ ರಾಶಿ: ನಿಮ್ಮ ಉದ್ಯಮಕ್ಕೆ ಇನ್ನೊಂದು ಉದ್ಯಮದ ಸಹಕಾರ ಬೇಡುವುದು ಔಚಿತ್ಯವೇ. ಅನಾಮಿಕರ ಜೊತೆ ಸರಿಯಾಗಿ ವ್ಯವಹಾರ ಮಾಡಿ. ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಅನಿರೀಕ್ಷಿತವಾಗಿ ದೊರೆತ ಉನ್ನತ ಅಧಿಕಾರದಿಂದ ನಿಮಗೆ ಸಂತೋಷವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ನೀವೇ ಸರಿಮಾಡಿಕೊಳ್ಳುವುದು ಉತ್ತಮ. ಮಕ್ಕಳನ್ನು ಸುಂದರ ತಾಣಕ್ಕೆ ಕರೆದುಕೊಂಡುಹೋಗುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ. ಕಾರ್ಯವೇ ನಿಮ್ಮ ಕುರಿತು ಮಾತನಾಡಲಿ. ಇಂದಿನ ನಿಮ್ಮ ಸಮಯವು ಗೃಹ ಬಳಕೆಯ ವಸ್ತುಗಳ ಖರೀದಿಗೆ ಮೀಸಲಿಡುವಿರಿ. ಪ್ರಾಚೀನ ವಿದ್ಯೆ, ವ್ಯಕ್ತಿಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ, ಸಂಶೋಧನೆಯನ್ನು ಮಾಡಬೇಕಾಗುವುದು. ನಿಮ್ಮ ಮೇಲಿನ ಆರೋಪವು ಸುಳ್ಳು ಎಂದು ತೀರ್ಮಾನವು ಪ್ರಕಟವಾಗುವವುದು. ಸಮಯಸ್ಫೂರ್ತಿಯಿಂದ ಗಂಭೀರವಾದ ಸಮಸ್ಯೆಯನ್ನೂ ಸಲೀಸಾಗಿ ಬಗೆಹರಿಸಿಕೊಳ್ಳುವಿರಿ. ಇಂದು ನೀವು ಸಣ್ಣ ನೋವನ್ನೂ ನಿರ್ಲಕ್ಷಿಸುವುದು ಬೇಡ. ಅನುಮಾನದಿಂದ ಸ್ನೇಹವು ಹಾಳುಗುವುದು.
ತುಲಾ ರಾಶಿ; ಸಾಮರಸ್ಯದ ಕಾರ್ಯವನ್ನು ಉತ್ಸಾಹದಿಂದ ಮಾಡುವಿರಿ. ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ಮಾತಿನಿಂದ ಮರ್ಮಾಘಾತವಾಗುವ ಸಾಧ್ಯತೆ ಇದೆ. ಉದ್ಯೋಗವನ್ನು ಅರಸಿ ದೂರದ ಊರಿಗೆ ಹೋಗುವಿರಿ. ಕೆಲಸದ ಹುಡುಕಾಟದಲ್ಲಿ ನಿಮ್ಮ ಸಮಯವು ವ್ಯರ್ಥವಾಗುವುದು. ಪದೆ ಪದೆ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಬಿನ್ನವಾಗಿರುವುದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಹಾಳುಮಾಡಿಕೊಳ್ಳುವಿರಿ. ಸಂಸ್ಥೆಯಲ್ಲಿ ಇದ್ದರೂ ನಿಮ್ಮ ಲಾಭವನ್ನೇ ಧ್ಯೇಯವಾಗಿಸಿಕೊಂಡು ಕೆಲಸಮಾಡುವಿರಿ. ಇಂದಿನ ನಿಮ್ಮ ಪ್ರಯಾಣವು ಅಡೆತಡೆಗಳಿಂದ ಇರಲಿದೆ. ಅನೇಕ ವಿಚಾರದಲ್ಲಿ ಆಸಕ್ತಿಯಿದ್ದು ಯಾವುದುನ್ನೂ ಪೂರ್ಣ ಮಾಡುವುದಿಲ್ಲ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡುವರು. ನಿಮ್ಮ ಅಂತಶ್ಶಕ್ತಿ ನಿಮ್ಮರಿಗೆ ಗೊತ್ತಾಗುವುದು.
ವೃಶ್ಚಿಕ ರಾಶಿ: ನೀವು ರಿಯಾಯಿತಿ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಭಾರವನ್ನು ಪರರಿಗೆ ಸ್ವಲ್ಪ ನೀಡುವಿರಿ. ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ ಮಾಡುವಿರಿ. ರಾಜಕೀಯ ವ್ಯಕ್ತಿಗಳ ಸಹವಾಸವಾಗಲಿದೆ. ಸ್ನೇಹಿತರು ನಿಮ್ಮ ಉದ್ಯೋಗಕ್ಕೆ ಸಹಾಯ ಮಾಡುವರು. ತುಂಬಾ ಹಳೆಯದಾದ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮ್ಮ ಹೆಗಲಿಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಉದ್ಯಮದಿಂದ ನೀವು ನಿರೀಕ್ಷಿಸುವಿರಿ. ನಿಮಗೆ ಸಿಕ್ಕ ಉದ್ಯೋಗದಲ್ಲಿ ತೃಪ್ತಿ ಇರದು. ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ವ್ಯರ್ಥಮಾಡುವ ಸಾಧ್ಯತೆ ಇದೆ. ದಾಖಲೆಗಳ ಪರಿಷ್ಕರಣೆ ಸಾಧ್ಯವಾಗದು. ಮಾತಿಗೆ ತಪ್ಪಿದ ಕಾರಣ ನಿಮ್ಮನ್ನು ಅವಮಾನಿಸಬಹುದು. ಆರ್ಥಿಕಬಲವು ನಿಮಗೆ ತುಂಬಾ ಅಗತ್ಯವಾಗಿ ಬೇಕಿದೆ. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ. ನಿಮ್ಮ ಮಾತುಗಳು ಕೆಲವರಿಗೆ ಪ್ರಯೋಜನಕ್ಕೆ ಬರಲಿದೆ.
ಧನು ರಾಶಿ: ದೊಡ್ಡ ಕಾರ್ಯಕ್ಕೆ ಲಾಭಕ್ಕೆ ಕ್ಷುಲ್ಲಕ ಕಾರಣ ಮನಸ್ಸುಗಳನ್ನು ಬದಲಾಯಿಸುವಿರಿ. ಖಾಸಗಿ ಸಂಸ್ಥೆಯ ಅಧಿಕಾರಿಯಾಗುವ ಸಂಭವವಿದೆ. ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ಇಂದು ನೀವು ಮನೆಯನ್ನು ಶುದ್ಧ ಮಾಡುವಲ್ಲಿ ಆಸಕ್ತರಾಗಿರುವಿರಿ. ಸಣ್ಣ ಉದ್ಯೋಗಕ್ಕೂ ಇಂದು ಅಲ್ಪ ಲಾಭವಾಗುವುದು. ಉದ್ಯೋಗದ ನಿಮಿತ್ತ ಮಾಡಿದ ಸುತ್ತಾಟವು ಅನಾರೋಗ್ಯಕ್ಕೆ ಕಾರಣವಾಗುವುದು. ನಿಕಟ ಸಂಪರ್ಕಗಳಿಂದ ನಿಮಗೆ ಹೊಸ ದೃಷ್ಟಿ ಸಿಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗವನ್ನು ಉಂಟುಮಾಡಬಹುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಸಬಹುದು. ಆಪ್ತರನ್ನು ಯಃಕಶ್ಚಿತ್ ಕಾರಣಕ್ಕೆ ದೂರಮಾಡಿಕೊಂಡು ಸಂಕಟಪಡುವಿರಿ. ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಅಲ್ಪದೂರದಲ್ಲಿ ಇರುವಿರಿ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ನಿಮ್ಮನ್ನು ಅವಲಂಬಿಸಿದವರ ಅವಶ್ಯಕತೆಗಳನ್ನು ಪೂರೈಸುವಿರಿ.
ಮಕರ ರಾಶಿ: ಸಮಕಾಲೀನರಿಗಿಂತ ಪ್ರಾಚೀನರ ಜೊತೆ ಒಡನಾಡ, ಬಗ್ಗೆ ಅತಿಯಾಗಿಲಿದೆ. ಮಧುರತೆಯು ಇತರರಿಗೆ ಇಷ್ಟವಾಗುವುದು. ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವನ್ನು ನೀವು ಕಳೆದುಕೊಳ್ಳುವಿರಿ. ಅಪರಿಚಿತರ ಸಲಹೆಗಳು ಸೂಕ್ತ ಎಂದೆನಿಸಬಹುದು. ಎಲ್ಲರನ್ನೂ ನೀವು ನೋಡುವ ದೃಷ್ಟಿಯು ಬದಲಾಗುವುದು. ನಿಮ್ಮ ಆಸಕ್ತಿಕ್ಷೇತ್ರದಲ್ಲಿ ಅಧ್ಯಯನಕ್ಕೆ ಅವಕಾಶ ಸಿಗುವುದು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ. ಉದ್ಯಮಕ್ಕೆ ಹೊಸ ವ್ಯಕ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕುಳಿತು ಭವಿಷ್ಯವನ್ನು ಚಿಂತಿಸುವಿರಿ. ದೈವಭಕ್ತಿಯಿಂದ ನಿಮಗೆ ಸಮಾಧಾನವು ಸಿಗಲಿದೆ. ಕಷ್ಟಗಳು ಮೋಡಗಳಂತೆ ಒಂದೇ ಕಡೆ ನಿಲ್ಲದೇ ಚಲಿಸುವುವು. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರುವಂತೆ ಆಲೋಚನೆ ಮಾಡುವಿರಿ.
ಕುಂಭ ರಾಶಿ: ಕ್ರಿಯಾತ್ಮಕವಾಗಿ ಏನನ್ನಾದರೂ ಮಾಡಲು ಇಚ್ಛಿಸಿದರೆ ಅದನ್ನು ತಡೆಯಲು, ಬದಲಾಯಿಸಲು ಬಹಳ ಮಂದಿ ಸಾಲುಗಟ್ಟುವರು. ಬರುವ ಕಷ್ಟಗಳು ನಿಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ಸಮಯಪ್ರಜ್ಞೆಯಿಂದ ನೀವು ಸೂಕ್ತವಾದ ಮಾತುಗಳನ್ನು ಆಡುವಿರಿ. ನಿಮ್ಮೊಳಗಿನ ಭೀತಿಯನ್ನು ನೀವು ಯಾರೊಂದಿಗಾದರೂ ಹೇಳಿಕೊಳ್ಳಿ. ಉದ್ಯೋಗದ ಹಾದಿ ಸುಗಮವಾಗಲಿದೆ. ನೀವು ಅಧಿಕಾರಿಗಳ ಬೆಂಬಲ ಸಿಗುವುದು. ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಾಗಲಿದೆ. ಪ್ರೀತಿಯು ಸಿಗದೇ ನೀವು ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಮಾತನ್ನು ಉಳಿಸಿಕೊಳ್ಳಿ. ನಿಮ್ಮ ಸಮಾನಕ್ಕೆ ನಿಮ್ಮ ಮುಂದೆ ಯಾರೂ ಇರದಂತೆ ಪ್ರಯತ್ನಿಸುವಿರಿ. ನಿಮ್ಮ ವೃತ್ತಿಯು ನಿಮಗೆ ನೆಮ್ಮದಿಯನ್ನು ಕೊಟ್ಟಿದೆ. ಅದೇ ನಿಮ್ಮ ಬಲವೂ ಆಗಿರಲಿದೆ. ನಿಮ್ಮ ಊಹೆಯು ಇಂದು ಸತ್ಯವಾಗುವುದು. ವ್ಯಾಪಾರದಲ್ಲಿ ಅಧಿಕಲಾಭವನ್ನು ನಿರೀಕ್ಷಿಸುವುದು ಬೇಡ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸ್ವತಂತ್ರವಾಗಿ ಇರಲು ನಿಮ್ಮ ಚಿಂತನೆ ಮಾಡುವಿರಿ.
ಮೀನ ರಾಶಿ: ಅತಿಯಾದ ಆತುರದಿಂದ ಪಡೆದುಕೊಳ್ಳಬಹುದಾದುದನ್ನು ಕಳೆದುಕೊಳ್ಳುವಿರಿ. ನಿಮ್ಮನ್ನು ಗುಪ್ತವಾಗಿ ಗಮನಿಸುವಂತೆ ತಿಳಿದೀತು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿ ಯಾವ ಪ್ರಯೋಜನವೂ ಆಗದು. ಹೊಸತನ್ನು ರೂಢಿಸಿಕೊಳ್ಳಲು ಬಯಸುವಿರಿ. ಅಧಿಕ ಲಾಭದಿಂದ ಅತಿಯಾದ ಸಂತೋಷವಾಗುವುದು. ಸಿಕ್ಕ ಅವಕಾಶಗಳನ್ನು ನೀವು ಯೋಗ್ಯರೀತಿಯಿಂದ ಬಳಸಿಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸುವುದು ಒಳ್ಳೆಯದು. ಅಮೂಲ್ಯವಾದ ವಸ್ತುವೊಂದು ಕಳೆದುಕೊಳ್ಳುವಿರಿ. ಇಂದು ಮಾಡುವ ಕಾರ್ಯಕ್ಕಿಂತ ಸಮಸ್ಯೆಯೇ ದೊಡ್ಡದಾಗಿ ಕಾಣಿಸುವುದು. ಹೊಟ್ಟೆಗೆ ಸಂಬಂಧಿಸಿದ ರೋಗದಿಂದ ವ್ಯಥೆ. ಕೆಲಸದ ವಿಚಾರದಲ್ಲಿ ಉಭಯ ಸಂಕಟವಾಗಬಹುದು. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ಅವರವರ ಭಾರ ಅವರಿಗೇ ಗೊತ್ತಾಗುವ ದಿನ.
ಲೋಹಿತ ಹೆಬ್ಬಾರ್ – 8762924271 (what’s app only)




