Daily Horoscope 04 December 2024: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಲಾಭ..? ಯಾರಿಗೆ ನಷ್ಟ..?

| Updated By: ರಮೇಶ್ ಬಿ. ಜವಳಗೇರಾ

Updated on: Dec 04, 2024 | 1:26 AM

04 ಡಿಸೆಂಬರ್​​ 2024: ಬುಧವಾರದಂದು ದ್ವಾದಶ ರಾಶಿಗಳ ರಾಶಿಫಲ ಹೇಗಿದೆ? ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಎನ್ನುವುದನ್ನು ತಿಳಿದುಕೊಳ್ಳಿ

Daily Horoscope 04 December 2024: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಲಾಭ..? ಯಾರಿಗೆ ನಷ್ಟ..?
ನಿತ್ಯ ಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಗಂಡ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:23 ರಿಂದ13:48ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:09 ರಿಂದ ಬೆಳಿಗ್ಗೆ 09:34 ರವರೆಗೆ, ಗುಳಿಕ ಕಾಲ ಬೆಳಿಗ್ಗೆ10:59 ರಿಂದ 12:23 ರವರೆಗೆ.

ಮೇಷ ರಾಶಿ :ನೀವು ತೊಡಗಿಕೊಳ್ಳುವ ವ್ಯವಹಾರದಲ್ಲಿ ಅನುಭವ ಅಥವಾ ಅನುಭವಿಗಳ ಮಾರ್ಗದರ್ಶನ ಇರಲಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಇಂದು ನೀವು ಬಂಧುಗಳ ಬಳಿ ಸಾಲಕ್ಕೆ ಕೈ ಚಾಚುವು ಬೇಡ. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು. ಹಳೆಯ ಸಾಲವನ್ನು ಉಳಿಸಿಕೊಂಡೇ ಮತ್ತೊಂದು ಸಾಲವನ್ನು ಮಾಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆಗಿರುವುದು ನಿಮಗೆ ಧೈರ್ಯ ಬರಲಿದೆ. ಯಾವದೇ ಉದ್ವೇಗಕ್ಕೆ ಒಳಗಾಗದೇ ಸಮಾಧಾನದ ಮನಃಸ್ಥಿತಿಯಲ್ಲಿ ಇರಿ. ಯಾರನ್ನೂ ಇಂದು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲಾರಿರಿ.

ವೃಷಭ ರಾಶಿ :ಇಂದು ಅಸ್ಥಿರತೆಯು ನಿಮ್ಮನ್ನು ಅಧಿಕವಾಗಿ ಕಾಡಬಹುದು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಸಂತೋಷಕ್ಕೆ ಸುಳ್ಳು ಹೇಳುವ ಸಾಧ್ಯತೆ ಇದೆ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸಬೇಕಾದೀತು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ. ನೀವು ಕೊಟ್ಟ ಸಾಲವು ಪುನಃ ಬರಬಹುದು. ನಿಮ್ಮ ಕುಟುಂಬದ ವಿಚಾರವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ‌ ಮಾಡಲು ಸಂಗಾತಿಗೆ ಹೇಳುವಿರಿ. ಇಂದು ನಿಮಗೆ ಚೆನ್ನಾಗಿ ಕಾಣಿಸಿಕೊಳ್ಳುವುದು ಇಷ್ಟವಾಗದು.

ಮಿಥುನ ರಾಶಿ :ವ್ಯವಹಾರದ ಮಧ್ಯದಲ್ಲಿ ನೀವು ಕಳೆದುಹೋಗಬಹುದು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.‌ ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಕುಟುಂಬಕ್ಕೆ ನಿಮ್ಮಿಂದ ಶುಭ ವಾರ್ತೆಯು ಬರಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣವು ಸಾಕಾಗದೇ ಸಾಲವನ್ನು ಮಾಡಬೇಕಾದೀತು.‌ ಇಂದು ನೀವು ಅಂದುಕೊಂಡಷ್ಟು ಕೆಲಸವು ಆಗುವತನಕ ಫಲವನ್ನು ಬಿಡುವುದಿಲ್ಲ. ಧಾರ್ಮಿಕ ಕರ್ಮಗಳನ್ನು ಶ್ರದ್ಧೆಯಿಂದ ಪೂರೈಸುವಿರಿ.

ಕರ್ಕಾಟಕ ರಾಶಿ :ಹೂಡಿಕೆಯಿಂದ ಆದ ಲಾಭವನ್ನು ಪರೀಕ್ಷಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ವಿಳಂಬವಾಗಿ ನಡೆಯುವ ವಿವಾಹಕ್ಕೆ ಸಂತೋಷವಿರಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂಯಗೊಳಿಸಿ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಸಾಧ್ಯವಾಗದು.‌ ಸಂಕೋಚದ ಸ್ವಭಾವದಿಂದ ನೀವು ಬಂದ ಅವಕಾಶವನ್ನು ಕೈ ಬಿಡುವಿರಿ. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು. ಇಂದು ಸಾಮಾಜಿಕ ಗೌರವವನ್ನು ಬಯಸುವಿರಿ. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅದೇ ಉತ್ತಮವಾದುದೂ ಕೂಡ. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.

ಸಿಂಹ ರಾಶಿ :ರಾಜಕಾರಣದ ದಿಕ್ಕು ನಿಮಗೆ ಅರ್ಥವಾಗುವುದು ಕಷ್ಟ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ವಿದ್ಯಾಭ್ಯಾಸದ‌ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ಕಾಣಬೇಕಾದೀತು.‌ ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ನಿಮಗೆ ಇಂದು ಕಾರ್ಯಗಳನ್ನು ಮಾಡಿಸಲು ಆಗದು. ನಿಮ್ಮ‌ ಮಾತನ್ನು ಯಾರೂ ಕೇಳರು. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಂದು ಒದ್ದಾಡುವಿರಿ. ವಾಹನ ಖರೀದಿಸಲು ನಿಮಗೆ ಯಾರಾದರೂ ಒತ್ತಾಯಮಾಡಬಹುದು. ಅಸಹಾಯಕರಾಗಿ ಕುಳಿತು ಮತ್ತಷ್ಟು ಹತಾಶರಾಗುವ ಅವಶ್ಯಕತೆ ಇಲ್ಲ.

ಕನ್ಯಾ ರಾಶಿ :ನಿಮ್ಮ ನೋಟದ ಬಗ್ಗೆ ದೂರು ಬರಬಹುದು. ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಸತ್ಯವನ್ನು ನೀವು ಮಾರ್ಮಿಕವಾಗಿ ಹೇಳುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ. ಎಲ್ಲ ವಿಚಾರಕ್ಕೂ ನೀವು ಇನ್ನೊಬ್ಬರನ್ನು ಹಗುರಾಗಿ ಕಾಣುವಿರಿ. ಬಿಡುವಿನ ಸಮಯದಲ್ಲಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಸ್ವಂತ ಉದ್ಯಮವನ್ನು ಆರಂಭಿಸಲು ಚಿಂತಿಸುವಿರಿ. ನಿಮ್ಮ ಕೆಲವು ಮಾತುಗಳು ಕುಟುಂಬದ ಗೌರವವನ್ನು ತಗ್ಗಿಸೀತು. ಹೆಚ್ಚು ಆಹಾರದ ಸೇವೆಯಿಂದ ಕಷ್ಟವಾದೀತು. ನಿಮ್ಮ ಅಯ್ಕೆಯ ಉದ್ಯೋಗವೇ ನಿಮ್ಮನ್ನು ಪ್ರಯಾಣ ಮಾಡಿಸೀತು.

ತುಲಾ ರಾಶಿ :ನಿಮ್ಮ ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ಇಂದು ನೀವು ಕೃತಜ್ಞತೆಯನ್ನು ಮರೆಯುವಿರಿ. ಸಂಬಂಧಗಳ ಮಹತ್ತ್ವವನ್ನು ನೀವು ಅರಿತುಕೊಳ್ಳಲಾರಿರಿ. ವಿಶ್ವಾಸಕ್ಕೆ ಘಾಸಿಯಾಗದಂತೆ ನಡೆದುಕೊಳ್ಳುವಿರಿ. ಅಧಿಕಾರಿಗಳು ನಿಮಗೆ ತೊಂದರೆಯನ್ನು ಕೊಡಬಹುದು. ಯಾರೂ ನಿಮ್ಮ ಮಾತಿಗೆ ಲಕ್ಷ್ಯ ಕೊಡದೇಹೋಗಬಹುದು. ವಿಶ್ವಾಸಕ್ಕೆ ಉಳಿಸಿಕೊಳ್ಳುವುದು ಕೆಲಸವನ್ನು ಮಾಡುವುದು ಸೂಕ್ತ.

ವೃಶ್ಚಿಕ ರಾಶಿ :ನೋವಾಗುವಂತೆ ಇಂದು ಮಾತನಾಡಿ ಅನಂತರ ಕ್ಷಮೆಯನ್ನು ಕೇಳುವ ಹಾಗೆ ನಟನೆ ಮಾಡುವಿರಿ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ‌ ಮೇಲೆ ಆಗದೇಹೋದೀತು. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ನಿಮ್ಮ ಇಂದಿನ ಮುಖ್ಯ ಕೆಲಸವೇ ಗೌಣವಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲ್ಲು ಪತ್ನಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದ ಪಡೆಯಲು ನೀವು ಕಾದು ಸಮಯವನ್ನು ಹಾಳು ಮಾಡುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ನೀವು ಒಪ್ಪಿಕೊಳ್ಳುವಿರಿ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಸೇವಾ ಮನೋಭಾವದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಅಧಿಕಾರಿಗಳಿಂದ ಅಪಮಾನವೂ ಆದೀತು.

ಧನು ರಾಶಿ :ಇಂದು ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ‌ ತಿಳಿದುಕೊಳ್ಳದೇ ಮಾತನಾಡಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಅನಾಥಪ್ರಜ್ಞೆಯು ಕಾಡಲಿದ್ದು ದುಃಖವನ್ನು ನಿಯಂತ್ರಿಸುವಿರಿ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಕಡಿಮೆ ಆದೀತು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು. ಅಧಿಕಾರವು ನಿಮ್ಮಿಂದ ತಪ್ಪಿಹೋಗಬಹುದು. ಸರಿಯಾಗಿ ಯೋಜನೆ ಮಾಡಿಕೊಳ್ಳದೇ ಕಾರ್ಯವನ್ನು ಆರಂಭಿಸುವಿರಿ. ‌ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಗೊತ್ತಾಗುವುದು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳು ಬರಬಹುದು.

ಮಕರ ರಾಶಿ :ಇಂದು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ. ಹೃದಯವನ್ನು ಅದು ಪ್ರವೇಶಿಸಲಿ, ತಲೆಯನ್ನಲ್ಲ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಮನಸ್ಸಿನಲ್ಲಿ‌ ಯಾವುದಾದರೂ ಭೀತಿಯು ಕಾಡಬಹುದು. ಅತಿಯಾಯದೆ ಆಸೆಯಿಂದ ನಿಮಗೆ ದುಃಖವಿದೆ. ನಿಮ್ಮ ಬಗ್ಗೆ ನೀವು ಸ್ವಲ್ಪ ಅವಲೋಕನ‌ ಮಾಡಿಕೊಳ್ಳಿ. ಎಲ್ಲವನ್ನೂ ನೀವು ಅತಿಯಾಗಿಸುವಿರಿ. ಇಂದು ಸಿಗಬೇಕಾದ ಕಾಲಕ್ಕೆ ಸಿಗುವುದು ಎಂಬ ನಂಬಿಕೆ ಇರಲಿ. ಆರ್ಥಿಕತೆಯ ಬೆಳವಣಿಗೆಯಿಂದ ನಿಮಗೆ ಸಂತೋಷವಿದೆ.

ಕುಂಭ ರಾಶಿ :ಸ್ಪರ್ಧೆಯಲ್ಲಿ ಸೋಲುವುದು ಸೋಲಲ್ಲ, ಮುಂದೆ ಸಾಗದಿರುವುದೇ ಸೋಲು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಆಪ್ತರ ಸಹವಾಸದಿಂದ ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು.‌ ನಿಮ್ಮ ಬಂದಿದ್ದನ್ನು ಬಿಟ್ಟುಕೊಡಬೇಡಿ. ತಮಾಷೆಯ ಮಾತುಗಳೂ ನಿಮಗೆ ಸರಿಯಾದ ತೊಂದರೆ ತಂದೀತು. ಒಂದೇ ವಿಚಾರವನ್ನು ಹಲವರಿಂದ ಕೇಳುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಸ್ವಂತ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು.

ಮೀನ ರಾಶಿ :ಊಹಿಸದ ಕೆಲವನ್ನು ಪಡೆಯಬೇಕಾಗುವುದು. ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು.‌ ನಿಮ್ಮ ಸಂತಸಕ್ಕೆ ಮಿತಿ ಇರದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ಮುಳುಗುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)