AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ ಮಂಗಳವಾರ ದಾಖಲೆಗಳ ಪರಿಶೀಲನೆ, ರೋಗಬಾಧೆ, ವ್ಯಾಪಾರ ಸುಗಮ, ಪ್ರೇಮಿಗಳ ಭೇಟಿ, ಗುರಿಯ ಕಡೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 19, 2025 | 1:28 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:44 – 17:18, ಗುಳಿಕ ಕಾಲ 12:36 – 14:10 ಯಮಗಂಡ ಕಾಲ 09:28 – 11:02

ತುಲಾ ರಾಶಿ: ಇಂದು ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಗುಣಾತ್ಮಕತೆಯಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ. ಕರ್ತವ್ಯದ ವಿಚಾರದಲ್ಲಿ ನೀವು ಸೋಲುವಿರಿ. ಯಾವುದನ್ನೂ ಮೇಲ್ನೋಟದಿಂದ ತೀರ್ಮಾನಿಸುವುದು ಬೇಡ‌. ಹಳೆಯ ಸಂಪರ್ಕಗಳು ಉದ್ಯೋಗ ಕ್ಷೇತ್ರದಲ್ಲಿ ಸಹಕಾರ ನೀಡಬಹುದು. ದೂರದ ಪ್ರಯಾಣ ಸಾಧ್ಯತೆ ಇದೆ. ಹಿರಿಯರಿಂದ ಪ್ರೋತ್ಸಾಹ ಸಿಗುತ್ತದೆ. ದಿನಾಂತ್ಯದಲ್ಲಿ ನಿಮ್ಮ ಶ್ರಮ ಫಲ ನೀಡುವುದರಿಂದ ತೃಪ್ತಿ ಅನುಭವಿಸುತ್ತೀರಿ. ಎಲ್ಲ‌ ಮೋಡಗಳೂ‌‌ ಮಳೆಯನ್ನು ಸುರಿಸುವುದಿಲ್ಲ. ಹಣದ ಅನಿವಾರ್ಯತೆ ಇದ್ದರೂ ಸಿಕ್ಕುವುದು ಕಷ್ಟವಾದೀತು. ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮಗಿರುವ ಹೊಣೆಗಾರಿಕೆ ತಪ್ಪಬಹುದು. ಪ್ರಯಾಣದಲ್ಲಿ ಜಾಗರೂಕತೆ ಅವಶ್ಯಕ. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳನ್ನು ನೀವು ಕೇಳುವಿರಿ

ವೃಶ್ಚಿಕ ರಾಶಿ: ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ‌. ಸ್ವಾರ್ಥವನ್ನು ಬಿಟ್ಟು ಆಚೆಗೆ ಬಂದಾಗ ನಿಮ್ಮ ಬುದ್ಧಿಯೂ ವಿಕಾಸವಾಗುತ್ತದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ಸ್ನೇಹಿತರೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಹರ್ಷಭರಿತ ವಾತಾವರಣ ಸಿಗಲಿದೆ. ಇಂದು ನಿಮ್ಮ ನಾಯಕತ್ವ ಗುಣ ಹೊರಹೊಮ್ಮುತ್ತದೆ. ಸಂಗಾತಿಯ ಕೆಲವು ವರ್ತನೆಗಳು ನಿಮಗೆ ವಿಚಿತ್ರ ಎನಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ಕ್ರೀಡೆಗೆ ಸಂಬಂಧಿಸಿದ ವಸ್ತುಗಳಿಂದ ಲಾಭವು ಸಿಗುವುದು. ನೀವು ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು. ಭಕ್ತಿ ಇದ್ದರೂ ಅದನ್ನು ಸದ್ವಿನಿಯೋಗ‌ಮಾಡಲು ಸಮಯ ಸಾಕಾಗದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.‌ ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ಕೆಲವನ್ನು ನೀವು ಸಣ್ಣವರಿಂದ ಕಲಿಯಬೇಕಾಗುವುದು. ನಿಮ್ಮ ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು.

ಧನು ರಾಶಿ: ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ ನಿಮಗೆ ಖುಷಿಯನ್ನು ಕೊಡದು. ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು‌. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು. ಸಂಗಾತಿಯ ತಪ್ಪನ್ನು ಹೇಳುವ ರೀತಿಯಲ್ಲಿ ಹೇಳಿ.‌ ಇಲ್ಲವಾದರೆ ಸುಮ್ಮನೇ ವೈಮನಸ್ಯ ಉಂಟಾಗಬಹುದು. ಆರೋಗ್ಯದಲ್ಲಿ ಚುರುಕುತನ ಮತ್ತು ಶಕ್ತಿ ಕಂಡುಬರುತ್ತದೆ. ನಿರ್ಣಾಯಕ ನಿರ್ಧಾರಗಳಿಗೆ ಇದು ಉತ್ತಮ ಕಾಲ. ಪ್ರವಾಸಕ್ಕೆ ಅನುಕೂಲಕರ ದಿನ. ಆಪ್ತರ ಬೆಂಬಲದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮರಳಿ ಯತ್ನ ಮಾಡುವುದೇ ಸೋಲಿನಿಂದ ಕಲಿಯುವ ಪಾಠ. ಎಲ್ಲ ಸಮಯದಲ್ಲಿಯೂ ನಿಮ್ಮ‌ ಮಾತು ಸರಿಯಲ್ಲ. ಹಿರಿಯರಿಗೆ ಎದುರಾಡುವುದು ನಿಮಗೆ ಶೋಭೆಯಾಗದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಖರ್ಚಿನ ಬಗ್ಗೆ ಅಂದಾಜು ಇಲ್ಲದೇ ಕಾರ್ಯವನ್ನು ಒಪ್ಪಿಕೊಳ್ಳುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ.

ಮಕರ ರಾಶಿ: ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಯುವಕರಲ್ಲಿ ಅಧಿಕ ಉತ್ಸಾಹ ಕಾಣಿಸುವುದು. ದಾಂಪತ್ಯದಲ್ಲಿ ಸಾಮರಸ್ಯವು ಸ್ವಲ್ಪವೇ ಬರಲಿದೆ. ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ‌ ಮಾತನ್ನು‌ ಮಾತ್ರ ನಂಬಿ. ಅನ್ಯರ ಮಾತನ್ನು ಕೇಳಿಸಿಕೊಳ್ಳುವುದು ಬೇಡ. ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಅವಶ್ಯ. ಹಿರಿಯರ ಮಾತುಗಳನ್ನು ಗೌರವಿಸುವುದು ಒಳಿತು. ದಿನಾಂತ್ಯದಲ್ಲಿ ಮನಸ್ಸು ಶಾಂತಿಯಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಶ್ರದ್ಧೆಯ‌ ಕೊರೆತೆಯು ಕಾಣಿಸುವುದು. ಕಛೇರಿಯಲ್ಲಿ ಕೆಲವರ ಕೆಲಸವು ನಿಮ್ಮ ಮೇಲೆ ಬರಬಹುದು. ಸಾಧ್ಯವಾದಷ್ಟು ಮಾಡಿ. ನಕಾರಾತ್ಮಕ ಪ್ರತಿಕ್ರಿಯೆ ಬೇಡ. ಮಕ್ಕಳ‌ ವಿಚಾರದಲ್ಲಿ ಸಕಾರಾತ್ಕ ಬೆಂಬಲವನ್ನು ನೀಡಿ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಮಾತುಗಳನ್ನು ಬೇಕಾದಲ್ಲಿ ಮಾತ್ರ ಬಳಸಿ.

ಕುಂಭ ರಾಶಿ: ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ಬದಲಾವಣೆಗಾಗಿ ದಿನವನ್ನೋ ವ್ಯಕ್ತಿಗಳನ್ನೋ ಕಾಯುವುದು ಬೇಡ. ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಎದುರಾಗಬಹುದು. ಆದರೆ ತಾಳ್ಮೆ ಕಾಪಾಡಿದರೆ ಉತ್ತಮ ಫಲ. ಕುಟುಂಬದಲ್ಲಿ ಸಣ್ಣ ಅಸಮಾಧಾನಗಳಿದ್ದರೂ ಸಂಜೆ ವೇಳೆಗೆ ಶಾಂತಿ ಸ್ಥಾಪನೆ ಆಗಬಹುದು. ನೆರೆ ಹೊರೆಯ ಕಾರಣದಿಂದ ಮನೆಯಲ್ಲಿ ಮನಸ್ತಾಪ ಬರಬಹುದು. ದೇವತಾರಾಧನೆಗೆ ಹೆಚ್ಚು ಮನಸ್ಸು ತೊಡಗುವುದು. ನಿಮ್ಮ ಇಚ್ಛೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆತುರದ ನಿರ್ಧಾರವನ್ನು ಬಿಟ್ಟು ವಾಸ್ತವವಾಗಿ ಯೋಚಿಸಿ. ಏಕಮುಖಗಮನವು ತೊಂದರೆ ಕೊಟ್ಟೀತು. ಗುರಿಯೆಡೆಗೆ ಪ್ರಯತ್ನವು ನಿರಂತರವಾಗಿರಲಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಪ್ರಯಾಣದ ಉದ್ದೇಶವೇ ಬದಲಾಗಿ ಕೆಲಸವೂ ಕೈಗೂಡದು.

ಮೀನ ರಾಶಿ: ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. ನಿಮ್ಮ ಮಂತ್ರಕ್ಕೆ‌ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು. ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಸಹೋದ್ಯೋಗಿಗಳ ಸಹಕಾರದಿಂದ ಕೆಲವು ನಿರೀಕ್ಷಿತ ಫಲಗಳು ದೊರೆಯಬಹುದು. ಹಣಕಾಸಿನಲ್ಲಿ ಸಣ್ಣ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ. ಮನೆಯ ವಿಷಯದಲ್ಲಿ ಸಂತೋಷದ ಸುದ್ದಿ ಕೇಳಬಹುದು. ಸರ್ಕಾರದಿಂದ ನಿಮಗೆ ಸವಲತ್ತು ಸಿಗಲಿದೆ. ರಾಜಕೀಯದವರ ಒಡನಾಟ ಬೆಳೆಯಬಹುದು. ಸ್ತ್ರೀಯರ ಸಹವಾಸ‌ ಮತ್ತೊಬ್ಬರ ಬಾಯಿಗೆ ಸಿಗಲಿದೆ. ಸಂಗಾತಿಯ ಮೇಲೆ‌ ಅನುಮಾನದ ಅಧಿಕವಾಗುವುದು. ಮಾತನ್ನು ಕಡಿಮೆ‌ ಮಾಡಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ