AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಗತ್ಯ ಖರ್ಚಿನಿಂದ ಮನಸ್ಸು ಸ್ವಲ್ಪ ವಿಚಲಿತವಾಗಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ದಶೀ ತಿಥಿ ಗುರುವಾರ ನಿರ್ಲಕ್ಷ್ಯದ ಅನುಭವ, ವ್ಯಕ್ತಿಯ ಬದಲಾವಣೆ, ಔದ್ಯೋಗಿಕ ವ್ಯಕ್ತಿತ್ವ, ಸಮೂಹದಲ್ಲಿ ತಪ್ಪು, ಅತಿಮಾನಿಷ ಶಕ್ತಿಯ ಆವಾಹನೆ ಇವೆಲ್ಲ ಈ ದಿನದ ಭವಿಷ್ಯ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಅನಗತ್ಯ ಖರ್ಚಿನಿಂದ ಮನಸ್ಸು ಸ್ವಲ್ಪ ವಿಚಲಿತವಾಗಬಹುದು
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 07, 2025 | 1:45 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 58 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:13 – 15:48 ಗುಳಿಕ ಕಾಲ 09:08 – 11:03 ಯಮಗಂಡ ಕಾಲ 06:19 – 07:54

ಮೇಷ ರಾಶಿ: ಇಂದು ನಿಮಗೆ ಮಾನಸಿಕ ಹಾಗೂ ದೈಹಿಕ ಶ್ರಮಕ್ಕೆ ಒಪ್ಪಿಗೆಯನ್ನು ಮನಸ್ಸೇ ಕೊಡದು. ನೀವು ಈಗಲೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಿಲ್ಲ. ಎಲ್ಲದಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು‌ ನೀವು ವಿಳಂಬ ಆಗಬಹುದು. ಇನ್ನೊಬ್ಬರ ತಪ್ಪನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನೀವು ಇರಲಾರಿರಿ. ವಿಕಲ್ಪಗಳು ನಿಮ್ಮ ಮಾರ್ಗಕ್ಕೆ ಆಗಾಗ ಅಡ್ಡಿಯನ್ನು ಕೊಡುತ್ತವೆ. ದಾರಿಯನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಗಳನ್ನು ಎದುರಿಸುವುದು ನಿಮಗೆ ಸಹಜ ಕೆಲಸವಾಗಿದೆ. ಜೀವನ ಪರೀಕ್ಷೆಯನ್ನೂ ಜೀವನಕ್ಕೆ ಬೇಕಾದ ಪರೀಕ್ಷೆಯನ್ನೂ ನೀವು ಎದುರಿಸುವಿರಿ. ನಿಮ್ಮ ಪ್ರೇಮಿಗೆ ಅಚ್ಚರಿಯ ಉಡುಗೊರೆ ನೀಡಲು ಇಂದು ಸೂಕ್ತ ದಿನ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ. ನಿಮ್ಮನ್ನು ನಂಬಿದವರಿಗೆ ಕಿಂಚಿತ್ ಸಹಾಯವೂ ದೊಡ್ಡದಾಗಿರುತ್ತದೆ.

ಮಿಥುನ ರಾಶಿ: ಅರಿಸಿದ್ದು ಒಳ್ಳೆಯ ವ್ಯಕ್ತಿಯೇ ಆದರೂ ಸಮಯ ಅವನನ್ನು ಬದಲಿಸುವುದು. ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಎಲ್ಲ ಶರತ್ತುಗಳಿಗೂ ಸರಿಯಾದ ನಿಬಂಧನೆ ಇರಲಿ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಸಾಹಸ ಮಾಡಲು ಹೋಗುವಾಗ ಎಚ್ಚರವಿರಲಿ. ‌ಮುಖಭಂಗ ಮಾಡಿಕೊಂಡು ಬರಬೇಕಾದೀತು. ಆಪ್ತರಿಂದ ಧನವನ್ನು ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸವನ್ನು ನೀವು ಅನ್ಯರ ಒತ್ತಾಯಕ್ಕೆ ಮಾಡುವಿರಿ. ಸ್ವಪ್ರತಿಷ್ಠೆ ಜಾಗವನ್ನಾದರೂ ಉಳಿಸಿಕೊಳ್ಳುವಷ್ಟು ಒಳ್ಳೆಯವರಾಗಿ. ಗೊತ್ತಿಲ್ಲ ಕೆಲಸವನ್ನು ಕಲಿತು ಸಾಧಿಸಿದ್ದು ನಿಮಗೆ ಹೆಮ್ಮೆಯಾಗಲಿದೆ. ಸ್ವಂತಿಕೆಯ ವಿಚಾರದಲ್ಲಿ ನಿಮಗೆ ಗೊಂದಲವೆನಿಸುವುದು. ಜಾಣ್ಮೆಯಿಂದ ನೀವು ಬೇರೆಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ.

ಮಿಥುನ ರಾಶಿ: ಎಲ್ಲ ಕಡೆಗಳಲ್ಲಿ ಔದ್ಯೋಗದ ಮಾನಸಿಕತೆಯಲ್ಲಿ ಇರುವಿರಿ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಹಂಕಾರಕ್ಕೆ ಪೆಟ್ಟಾದರೆ ಅಹಂ ಹೋಗುತ್ತದೆ.‌ ಕೇವಲ ಕಾರ ಮಾತ್ರ ಉಳಿಯುತ್ತದೆ. ಅಧಿಕಾರಿಗಳ ಭೇಟಿಯಿಂದ ಆದಾಯವು ಚಿಂತಿಸಿದ ಮಟ್ಟದಲ್ಲಿದ್ದರೂ ಖರ್ಚು ಅದಕ್ಕಿಂತಲೂ ಹೆಚ್ಚಾಗಲಿದೆ. ನೀವು ಇಂದು ವೃತ್ತಿಯನ್ನು ಆನಂದಿಸುವಿರಿ. ದೇಹದ ಕೆಲವು ಭಾಗಗಳಲ್ಲಿ ತಾತದ ಕಾರಣದಿಂದ ನೋವುಗಳು ಕಾಣಿಸಬಹುದು. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಸೋಲಬಹುದು. ಯಾರೋ ನೀಡಿದ ವಸ್ತುಗಳನ್ನು ಉಪಯೋಗಿಸುವಾಗ ಹಿಂದೇಟು ಹಾಕುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯ ದೂರ.

ಕರ್ಕಾಟಕ ರಾಶಿ: ಒಮ್ಮೆ ಸಿಕ್ಕ ರುಚಿಯಿಂದ ವಿಮುಖರಾಗುವುದು ಸುಲಭವಲ್ಲ. ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ನಿಮ್ಮ ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇಂದು ನೀವು ಹೆಚ್ಚು ಶೋಕಿ ಮಾಡಲು ಇಷ್ಡಪಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ಸ್ತ್ರೀಯರು ನಿಮ್ಮ ತಾಳ್ಮೆಯನ್ನು ಕೆಡಿಸುವರು. ಕೊಟ್ಟರೂ ಕೊಡದಿದ್ದರೂ ಮನಸ್ತಾಪ ಏಳಬಹುದು. ಯೋಗ್ಯ ವಿವಾಹಸಂಬಂಧವು ಬರಬಹುದು‌. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಸಿಂಹ ರಾಶಿ: ನಿಮ್ಮ ನಿರ್ಧಾರವನ್ನು ಮೇಲಿನವರು ನಿಮ್ಮನ್ನು ಕೇಳದೇ ಬದಲಿಸುವರು. ಇದರಿಂದ ಮನಸ್ಸಿಗೆ ಬೇಸರ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ.‌ ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಪುಸ್ತಕ ಮಾರಾಟ ಮಾಡುವವರಿಗೆ ಲಾಭ. ಆಸ್ತಿಯ ಮಾರಾಟಕ್ಕೆ ಮಾಡಿದ ಪ್ರಯತ್ನ ಸಫಲವಾಗಲಿದೆ. ದಾಂಪತ್ಯದಲ್ಲಿ ಪ್ರೀತಿ ಬೆಳೆಯಲು ಇಬ್ಬರ ಸಹಕಾರ ಅಗತ್ಯ. ಅದು ವಿಪರೀತ ಪರಿಣಾಮವನ್ನು ಉಂಟುಮಾಡೀತು. ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ನಿಭಾಯಿಸುವಿರಿ. ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರುವುದು ಉಚಿತ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು.

ಕನ್ಯಾ ರಾಶಿ: ಸಮೂಹದಲ್ಲಿ ಕೆಲಸ ಮಾಡುವಾಗ ಅನ್ಯರ ತಪ್ಪಿಗೆ ನೀವು ಸೇರಿಕೊಳ್ಳುವಿರಿ. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಎಷ್ಟೇ ಎಚ್ಷರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ.‌ ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸುವಿರಿ. ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ಹಣವನ್ನು ಸಾಲವಾಗಿ ಪಡೆದು, ಮರಳಿ ಕೊಡಲು ಆಗದೇಹೋಗಬಹುದು. ಪುಣ್ಯ ಕೆಲಸದಲ್ಲಿ ನೀವು ಹೆಚ್ಚು ಭಾಗಿಯಾಗುವಿರಿ. ಮಾತನಿಂದ ಮರುಳು ಮಾಡಿ ಕೆಲಸ ಸಾಧಿಸುವಿರಿ. ಖರ್ಚನ್ನು ನೀವು ನಿಯಂತ್ರಣ ಮಾಡುವ ಅವಶ್ಯಕತೆ ಇಂದು ಬರಬಹುದು. ಅನಗತ್ಯ ಖರ್ಚಿನಿಂದ ಮನಸ್ಸು ಸ್ವಲ್ಪ ವಿಚಲಿತವಾಗಬಹುದು. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ