Horoscope: ನಿತ್ಯಭವಿಷ್ಯ, ಈ ರಾಶಿಯವರು ಶತ್ರುಗಳಿಂದ ಸೃಷ್ಟಿಯಾಗುವ ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಕಾರ್ಯ ಆರಂಭಿಸುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದು ಡಿಸೆಂಬರ್ 10 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ನಿತ್ಯಭವಿಷ್ಯ, ಈ ರಾಶಿಯವರು ಶತ್ರುಗಳಿಂದ ಸೃಷ್ಟಿಯಾಗುವ ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ
ಇಂದಿನ ದಿನಭವಿಷ್ಯ Image Credit source: iStock Photo
Follow us
TV9 Web
| Updated By: Rakesh Nayak Manchi

Updated on: Dec 10, 2023 | 12:45 AM

ಕೈ ಉಜ್ಜಿ ಮುಖಕ್ಕೆ ಒತ್ತಿ ನಿಧಾನವಾಗಿ ಕಣ್ಣು ತೆರೆದು ಪ್ರಪಂಚವನ್ನು ನೋಡಿದ ನಂತರ ಇಂದು ತಮ್ಮ ಭವಿಷ್ಯ ಹೇಗಿದೆ ಎಂದು ಅರಿತುಕೊಳ್ಳುತ್ತಾರೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 10) ರಾಶಿಭವಿಷ್ಯ (Horoscope) ಹೇಗಿದೆ ಎಂಬುದು ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣಮ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 09:36 ರಿಂದ 11ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:49 ರಿಂದ 03:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 06:47 ರಿಂದ 08:12ರ ವರೆಗೆ, ರಾಹು ಕಾಲ ಮಧ್ಯಾಹ್ನ 04:38 ರಿಂದ 06:03ರ ವರೆಗೆ.

ಧನು ರಾಶಿ : ಆರ್ಥಿಕತೆಯ ದೌರ್ಬಲ್ಯವು ನಿಮ್ಮ ಎಲ್ಲ ಬಲವನ್ನು ಕುಗ್ಗಿಸುವುದು. ಶುಭಸೂಚನೆಯನ್ನು ಅಲಕ್ಷಿಸಿ ಆಪತ್ತನ್ನು ತಂದುಕೊಳ್ಳುವಿರಿ. ನಿಮ್ಮ ರಹಸ್ಯದ ವಿಚಾರವನ್ನು ಇತರರು ತಿಳಿಯಲು ಬಯಸಬಹುದು. ಸಾಮಾಜಿಕ ವಲಯದಲ್ಲಿ ನಿಮ್ಮ ಹೆಸರು ಕೇಳಿ ಬರಬಹುದು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡುವುದು ಸರಿಯಾಗದು. ಉದ್ಯಮವನ್ನು ಬೆಳೆಸುವ ಚಿಂತನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ನಾಯಕತ್ವದ ಗುಣವನ್ನು ನೀವು ಗೊತ್ತಿಲ್ಲದಂತೆ ಬೆಳೆಸಿಕೊಳ್ಳುವಿರಿ. ನಿಮ್ಮ ಜೀವನದ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ.

ಮಕರ ರಾಶಿ : ಪೂರ್ವನಿರ್ಧಾರಿತ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ಮಾಡುವಿರಿ. ನಿಮ್ಮ ಕ್ರಿಯಾತ್ಮಕತೆಯನ್ನು ಇತರರಿಗೂ ತೋರಿಸುವಿರಿ. ಸಾಮಾಜಿಕ ಕಾರ್ಯವು ನಿಮಗೆ ಖ್ಯಾತಿಯನ್ನು ತರಲಿದೆ. ಹಣದ ಹೂಡಿಕೆಗೆ ನಿಮಗೆ ಆಸಕ್ತಿಯು ಹೆಚ್ಚಿರಲಿದೆ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಿ.

ಕುಂಭ ರಾಶಿ : ನಿಮ್ಮ ಹೊಸ ಬಯಕೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳುವಿರಿ. ಅದು ಅಪಹಾಸ್ಯವಾಗಬಹುದು. ಮನೆಯ ಕಾರ್ಯದಲ್ಲಿ ನೀವು ತನ್ಮಯತೆಯಿಂದ ಇರುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ ಮೇಲೆ ನಿಯಂತ್ರಣವಿಟ್ಟುಕೊಂಡು ಮಾತನಾಡಿ. ಉದ್ವೇಗಗೊಳ್ಳುವ ಅವಕಾಶವಿದ್ದರೂ ಸಂಯಮದಿಂದ ವರ್ತಿಸುವುದು ಸೂಕ್ತ. ಬಾಕಿ ಸಾಲದ ಮೊತ್ತವನ್ನು ತುಂಬಲು ಸ್ನೇಹಿಯರ ಸಹಾಯವನ್ನು ಕೇಳುವಿರಿ. ಸಹೋದರಿಯ ಜೊತೆ ಸಲುಗೆಯಿಂದ ಇರುವಿರಿ. ಸಕಾರಾತ್ಮಕ ಆಲೋಚನೆಯು ನಿಮಗೆ ನೆಮ್ಮದಿ ಕೊಡುವುದು. ಇನ್ನೊಬ್ಬರ ವಿಚಾರಕ್ಕೆ ನೀವು ಮೂಗು ತೂರಿಸುವುದು ಬೇಡ. ತಾಯಿಯಿಂದ ಬೈಗುಳ ಸಿಕ್ಕೀತು.

ಮೀನ ರಾಶಿ : ನಿಮ್ಮ ಶ್ರಮವನ್ನು ಕಂಡು ಎಂತಹವರಿಗೂ ಕನಿಕರ ಬಂದೀತು. ಇತರರಿಂದ ಸಿಗುವ ಪ್ರೀತಿಯು ನಿಮಗೆ ಉತ್ತೇಜನವನ್ನು ನೀಡುವುದು. ಮಾಡಬೇಕು ಎಂದುಕೊಂಡ ಕೆಲಸವು ನಿಮಗೆ ಸಮಾಧಾನ ತರದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಅತಿಯಾದ ವ್ಯಾಯಾಮದಿಂದ ದೇಹಕ್ಕೆ ತೊಂದರೆಯನ್ನು ತಂದುಕೊಳ್ಳುವಿರಿ. ಬಂಧುಗಳ ಒಡನಾಟದಿಂದ ನೋವನ್ನು ಕಳೆಯುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ವಿವಾಹಕ್ಕೆ ಸಂಬಂಧಿಸಿದಂತೆ ಕುತೂಹಲವು ಇರಲಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ