Horoscope: ಈ ರಾಶಿಯವರಿಗೆ ವಿವಾಹ ನಿಶ್ಚಯ, ಅಗ್ನಿಯಿಂದ ದೂರವಿರುವುದು ಉತ್ತಮ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 12:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರಿಗೆ ವಿವಾಹ ನಿಶ್ಚಯ, ಅಗ್ನಿಯಿಂದ ದೂರವಿರುವುದು ಉತ್ತಮ
ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 02 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:10 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:29 ರಿಂದ 07:56 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:49ರ ವರೆಗೆ.

ಮೇಷ ರಾಶಿ: ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು.‌ ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ‌ ಬಳಿಯ‌ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ವಿದ್ವಾಂಸರ ಭೇಟಿಯು ಅಕಸ್ಮಾತ್ ಆಗಿ ಆಗುವುದು.

ವೃಷಭ ರಾಶಿ: ನಿಮ್ಮ ಯೋಜನೆಯು ಸಕಾರವಾಗದೇ ಇರುವುದು ನಿಮಗೆ ಕಷ್ಟವಾಗಬಹುದು. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ‌ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು. ಕೆಲವು ಸಂಬಂಧಗಳು‌ ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವ್ಯಾಪಾರದಲ್ಲಿ ನಿಮ್ಮ ತಂತ್ರವು ಫಲಿಸಿದ್ದು ಖುಷಿಯಾದೀತು.

ಮಿಥುನ ರಾಶಿ: ಅಗ್ನಿಯ ಭೀತಿಯು ಇರಲಿದೆ. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ‌ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ.‌ ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಪ್ರಾಮಾಣಿಕತೆಯಿಂದ‌ ನಿಮಗೇ ಕಷ್ಟವಾಗುವುದು. ಎಲ್ಲವನ್ನೂ ನೀವೇ ನಿಭಾಯಿಸಬೇಕಾದೀತು.

ಕಟಕ ರಾಶಿ: ಕುಟುಂಬದ ಸಹಿತವಾಗಿ ನೀವು ಬಂಧುಗಳ‌ ಮನೆಗೆ ಹೋಗುವಿರಿ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ‌ ಕೆಲಸ ಮಾಡುವಿರಿ. ದೂರ ಬಂಧುಗಳ‌ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು.‌ ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ‌ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ‌ ದ್ವಂದ್ವಗಳು ಇರಬಹುದು. ವಿದ್ಯಾರ್ಥಿಗಳು ಅನಾರೋಗ್ಯದ ಕಾರಣಕ್ಕೆ ಓದಿನ ಬಗ್ಗೆ ಗಮನ ಕೊಡುವುದು ಕಷ್ಟವಾದೀತು.