Monthly Horoscope November 2023: ನವೆಂಬರ್ ಮಾಸದಲ್ಲಿ ದ್ವಾದಶ ರಾಶಿಗಳ ಗ್ರಹಚಾರ ಫಲ, ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
ನವೆಂಬರ್ ತಿಂಗಳ ದ್ವಾದಶ ರಾಶಿ ಭವಿಷ್ಯ: 2023ರ ನವೆಂಬರ್ ತಿಂಗಳಲ್ಲಿ ಯಾವ ರಾಶಿಗಳ ಮೇಲೆ ಪ್ರಭಾವವನ್ನು ಬೀರಲಿದೆ..? ನವೆಂಬರ್ನಲ್ಲಿ ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು? ನವೆಂಬರ್ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ತಿಳಿಯಿರಿ.
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಅದರಂತೆ ಅಕ್ಟೋಬರ್ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ನೀಡಲಾಗಿದೆ. ಹಾಗಾದರೆ, ನವೆಂಬರ್ ತಿಂಗಳ ನಿಮ್ಮ ರಾಶಿ ಭವಿಷ್ಯದಲ್ಲಿ ಏನು ಇದೆ ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ : ವರ್ಷದ ಹನ್ನೊಂದನೇ ತಿಂಗಳಾದ ನವೆಂಬರ್ ನಲ್ಲಿ ಹಲವು ಗ್ರಹಗಳ ಬದಲಾವಣೆ ಆಗಲಿದೆ. ನಿಮ್ಮ ಮನೆಯಲ್ಲಿ ವರ್ಷಗಳಿಂದ ಇದ್ದ ರಾಹುವು ಪರಿವರ್ತನೆ ಆಗಿ ದ್ವಾದಶಕ್ಕೆ ಹೋಗಲಿದ್ದಾನೆ. ಧನವ್ಯಯವನ್ನು ಕೆಟ್ಟ ಕಾರ್ಯಗಳಿಗೆ ಮಾಡಿಸುವನು. ನಿಮ್ಮನ್ನು ಮನೆಯಲ್ಲಿ ಗುರುವು ಇದ್ದು ಮನಸ್ಸನ್ನು ದೃಢಗೊಳಿಸಲು ಸಹಕಾರ ನೀಡಬಹುದು. ಷಷ್ಠದಲ್ಲಿ ಕೇತುವು ಶತ್ರುಗಳಿಂದ ನಿಮ್ಮನ್ನು ಮುಕ್ತ ಮಾಡುವರು. ಸಪ್ತಮದಲ್ಲಿ ಶುಕ್ರನಿದ್ದು ಸಂಗಾತಿಯ ಜೊತೆ ನೆಮ್ಮದಿಯಿಂದ ಕಳೆಯುವಿರಿ. ಅಷ್ಟಮದಲ್ಲಿ ಸೂರ್ಯ ಹಾಗೂ ಕುಜರು ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಶ್ರಮಪಡಬೇಕು. ನವಮದಲ್ಲಿ ಬುಧನು ಬಂಧುಗಳ ಪ್ರೀತಿಯು ನಮ್ಮ ಮೇಲೆ ಇರಲಿದೆ. ಏಕಾದಶದಲ್ಲಿ ಶನಿಯು ನಿಮಗೆ ನಿಧಾನವಾಗಿ ಸಂಪತ್ತನ್ನು ಕೊಡುವನು.
ವೃಷಭ ರಾಶಿ : ನವೆಂಬರ್ ತಿಂಗಳಲ್ಲಿ ಈ ರಾಶಿಗೆ ಮಿಶ್ರಫಲವು ಇರಲಿದೆ. ಪಂಚಮದಲ್ಲಿ ಕೇತುವು ಮಕ್ಕಳಿಂದ ಅಪಮಾನವನ್ನು ಮಾಡಿಸಬಹುದು. ಷಷ್ಠದಲ್ಲಿ ಶುಕ್ರನು ಸಂಗಾತಿಯ ಪ್ರೀತಿಯನ್ನು ಕಡಿಮೆ ಮಾಡಿಸಬಹುದು. ಸಪ್ತಮದ ಸೂರ್ಯ ಹಾಗೂ ಕುಜರು ಅನಾರೋಗ್ಯ, ಪ್ರಾಣಭೀತಿಯನ್ನು ಕೊಡಬಹುದು. ಸಂಗಾತಿಯ ಬಗ್ಗೆ ಎಚ್ಚರಿಕೆ ಅಗತ್ಯ. ಅಷ್ಟಮದಲ್ಲಿ ಬುಧನು ಬಂಧುಗಳಿಂದ ಗೌರವ, ಪ್ರೀತಿ, ಸತ್ಕಾರಗಳಿಂದ ವಂಚಿಸುವನು. ದೇಹಪೀಡೆಯು ಕಾಣಿಸಿಕೊಳ್ಳುವುದು. ದಶಮದಲ್ಲಿ ಶನಿಯು ವೃತ್ತಿಯನ್ನು ಮಾಡಲು ಮನಸ್ಸು ಕೊಡನು ಹಾಗೂ ಹಣದ ಮುಗ್ಗಟ್ಟು ಬರಬಹುದು. ಆರಾಮಾಗಿ ಇರಬೇಕು ಎನಿಸಬಹುದು. ಏಕಾದಶದಲ್ಲಿ ರಾಹುವು ಸಂಪತ್ತನ್ನು ಕೊಟ್ಟರೂ ಸಂಪತ್ತಿನ ಮಾರ್ಗವು ಅನೀತಿಯಿಂದ ಇರಬಹುದು. ಗುರುವು ಸದ್ಯ ದುರ್ಬಲನಾಗಿದ್ದು ಯಾವ ಶುಭಫಲವೂ ಇರದು. ಗುರುವಿನ ದರ್ಶನ, ಲಕ್ಷ್ಮೀನಾರಾಯಣರ ಪೂಜೆಗಳನ್ನು ಮಾಡಬೇಕಾಗುವುದು.
ಮಿಥುನ ರಾಶಿ : ಈ ತಿಂಗಳು ನಿಮಗೆ ಮಿಶ್ರಫಲವಿದ್ದು, ಗುರು ಬಲದಿಂದ ಅಶುಭವು ಕಡಿಮೆ ಆಗುವುದು. ಚತುರ್ಥದಲ್ಲಿ ಕೇತುವಿದ್ದು ಬಂಧುಗಳ ನಡುವೆ ಕಲಹವಾಗಬಹುದು. ಪಂಚಮದಲ್ಲಿ ಶುಕ್ರನಿದ್ದು ಸಂತಾನ ಭಾಗ್ಯವು ಪ್ರಾಪ್ತವಾಗಲಿದೆ. ಷಷ್ಠದಲ್ಲಿ ಸೂರ್ಯ ಹಾಗೂ ಕುಜರು ಇರಲಿದ್ದು ಸರ್ಕಾರದ ಕಡೆಯಿಂದ ತೊಂದರೆ ಬರಬಹುದು. ಆತ್ಮವಿಶ್ವಾಸ ಕೊರತೆ ಕಾಣಿಸುವುದು. ಬುಧನು ಸಪ್ತಮದಲ್ಲಿ ಇರುವುದರಿಂದ ಬಂಧುಗಳ ಕಡೆಯಿಂದ ವಿವಾಹವು ಕೂಡಿ ಬರಬಹುದು. ನವಮದಲ್ಲಿ ಶನಿಯು ಇರುವ ಕಾರಣ ಕಾರ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ದಶಮದಲ್ಲಿ ರಾಹುವಿನ ಉಪಸ್ಥಿತಿಯು ನಿಮ್ಮ ಕೆಲಸದಲ್ಲಿ ವಿಘ್ನಗಳು ಬರಲಿವೆ. ಏಕಾದಶದ ಗುರುವು ನಿಮ್ಮ ಎಲ್ಲ ಸಮಸ್ಯೆಗಳನ್ನು ಪೂರ್ಣ ಪ್ರಯಾಣದಲ್ಲಿ ಆಗಲು ಕೊಡನು.
ಕಟಕ ರಾಶಿ : ಈ ವರ್ಷದ ನವೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳ ಪರಿವರ್ತನೆ ಆಗಲಿದೆ. ತೃತೀಯದಲ್ಲಿ ಕೇತುವಿರಲಿದ್ದು ನಿಮ್ಮ ಸಾಮರ್ಥ್ಯವನ್ನು ಮರೆಮಾಚುವನು. ಚತುರ್ಥದಲ್ಲಿ ಶುಕ್ರನಿದ್ದು ಕುಟುಂಬದಲ್ಲಿ ನೆಮ್ಮದಿ, ಸಂಗಾತಿಯ ಜೊತೆ ಹರಟೆ ಇತ್ಯಾದಿಗಳನ್ನು ಹೆಚ್ಚು ಮಾಡುವಿರಿ. ಪಂಚಮದಲ್ಲಿ ಕುಜ ಹಾಗೂ ಸೂರ್ಯರಿದ್ದು ತಂತ್ರಜ್ಞಾನದ ಅಥವಾ ವೈದ್ಯ ವಿದ್ಯಾಭ್ಯಾಸದಲ್ಲಿ ಬಹಳ ಶ್ರಮದಿಂದ ಓದನ್ನು ಮುಂದುವರಿಸಬೇಕಾಗುವುದು. ಷಷ್ಠದಲ್ಲಿ ಬುಧನು ಬಂಧುಗಳೇ ಶತ್ರುಗಳಾಗುವಂತೆ ಮಾಡುವನು. ಅಷ್ಟಮದಲ್ಲಿ ಶನಿಯು ನಿಮ್ಮ ಆಯುಸ್ಸನ್ನು ಗಟ್ಟಿಗೊಳಿಸುವನು. ನವಮದಲ್ಲಿ ರಾಹುವಿನ ಆಗಮನದಿಂದ ನಿಮ್ಮ ಕೆಲಸವೂ ಕೆಟ್ಟದ್ದಾಗಿರಲಿದೆ. ಸತ್ಕಾರ್ಯಕ್ಕೆ ಮನಸ್ಸು ಇರದು. ಹಿರಿಯರಿಗೆ ಅಗೌರವವನ್ನು ತೋರಿಸುವಿರಿ. ದಶಮದಲ್ಲಿ ಗುರುವಿದ್ದು ಸ್ವಲ್ಪಮಟ್ಟಿಗೆ ವೃತ್ತಿಯಲ್ಲಿ ಶುಭವಿರುವುದು.
ಸಿಂಹ ರಾಶಿ : ಈ ತಿಂಗಳು ನವೆಂಬರ್ ಆಗಿದ್ದು ಖಗೋಳದಲ್ಲಿ ಗ್ರಹಗಳ ಪರಿವರ್ತನೆ ಆಗಲಿದ್ದು ನಿಮಗೆ ಮಿಶ್ರಫಲವು ಇರಲಿದೆ. ದ್ವಿತೀಯದಲ್ಲಿ ಕೇತುವಿದ್ದು ಬರಬೇಕಾದ ಸಂಪತ್ತು ಬಾರದೇ ಹೋಗಬಹುದು. ಮಾತಿನ ಮೇಲೆ ನಿಗಾ ಇರಲಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಕಣ್ಗಾವಲು ಅವಶ್ಯಕ. ಶುಕ್ರನು ತೃತೀಯದಲ್ಲಿ ಇರುವ ಕಾರಣ ಸಹೋದರಿಯ ಜೊತೆ ಆಪ್ತತೆ ಬೆಳೆಯಬಹುದು. ಚತುರ್ಥದಲ್ಲಿ ಸೂರ್ಯ ಹಾಗೂ ಕುಜರು ಕುಟುಂಬದಲ್ಲಿ ಕಲಹವನ್ನು ತಂದರೂ ಮತ್ತೆ ಸಮಾಧಾನವಾಗಿ ಸರಿಯಾಗುವುದು. ಬುಧನಿಂದ ನಿಮ್ಮ ಜ್ಞಾನದ ಬಗ್ಗೆ ಹೆಮ್ಮೆ ಉಂಟಾಗುವುದು. ಸಪ್ತಮದಲ್ಲಿ ಶನಿಯು ಇರುವ ಕಾರಣ ನಿಮ್ಮ ಮನೋವಿಕಾರವು ಅಧಿಕವಾಗಬಹುದು. ಅಷ್ಟಮದಲ್ಲಿ ರಾಹುವಿನ ಆಗಮನವಾಗಿದ್ದು ಆರೋಗ್ಯ, ಆಯುಷ್ಯ ದೃಢವಾಗಲಿದೆ. ನವಮದಲ್ಲಿ ಇರುವ ಗುರುವು ನಿಮ್ಮನ್ನು ಸತ್ಕಾರ್ಯಕ್ಕೆ ಪ್ರೇರಿಸುವನು.
ಕನ್ಯಾ ರಾಶಿ : ನವೆಂಬರ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯು ನಿಮಗೆ ಅಶುಭವೇ ಇರಲಿದೆ. ನಿಮ್ಮ ಮನೆಯಲ್ಲಿ ಕೇತುವು ಇರಲಿದ್ದು ದೇಹಕ್ಕೆ ಮಾನಸಿಕ ಒತ್ತಡವು ಅಧಿಕವಾಗಿ ಇರಲಿದೆ. ದ್ವಿತೀಯದಲ್ಲಿ ಇರುವ ಶುಕ್ರನು ನಿಮಗೆ ಪತ್ನಿಯ ಕಡೆಯಿಂದ ಸಂಪತ್ತು ಸಿಗಲಿದೆ. ತೃತೀಯದಲ್ಲಿ ಕುಜ ಹಾಗೂ ಸೂರ್ಯರ ಉಪಸ್ಥಿತಿಯು ಪರಾಕ್ರಮವನ್ನು ತೋರಿಸಲು ಅನುಕೂಲವಾಗುವುದು. ಶನಿಯು ಷಷ್ಠದಲ್ಲಿ ಇರುವುದರಿಂದ ಶತ್ರುಗಳು ಬಾಧೆಯು ಕಡಿಮೆ ಆಗುವುದು. ರಾಹುವು ಸಪ್ತಮದಲ್ಲಿ ಇರುವುದರಿಂದ ವಿವಾಹಕ್ಕೆ ನಾನಾ ತೊಂದರೆಗಳು ಬರಬಹುದು. ಗುರುಬಲವೂ ಇಲ್ಲದ ಕಾರಣ ಮಂಗಲಕಾರ್ಯವನ್ನು ಮುಂದೆ ಹಾಕುವುದು ಉತ್ತಮ. ಸ್ತ್ರೀಯರಿಂದ ಅಪಮಾನವಾಗಬಹುದು. ಇದರಿಂದ ಮಾನಸಿಕವಾಗಿ ಕುಗ್ಗುವಿರಿ.
ತುಲಾ ರಾಶಿ : ನವೆಂಬರ್ ನ ಈ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಇರಲಿದ್ದು ಅಶುಭಫಲವು ಹೆಚ್ಚಿದ್ದು ಗುರುಬಲವು ಅಶುಭವನ್ನು ದೂರಮಾಡಬಹುದು. ನಿಮ್ಮ ಮನೆಯಲ್ಲಿ ಶುಕ್ರನು ಇದ್ದಾನೆ. ಇದು ಅವನ ಸ್ವಕ್ಷೇತ್ರವಾದ ಕಾರಣ ಮಾನಸಿಕವಾಗಿ ನೀವು ಸದೃಢರಾಗಿರುವಿರಿ. ಆಕರ್ಷಣೆಗೆ ಹೆಚ್ಚು ಮಹತ್ವ ಕೊಡುವಿರಿ. ದ್ವಿತೀಯದಲ್ಲಿ ಸೂರ್ಯ ಹಾಗು ಕುಜರಿದ್ದು ವಿದ್ಯಾಭ್ಯಾಸಕ್ಕೆ ತೊಂದರೆ. ಬಹಳ ಪ್ರಯತ್ನದ ಫಲವಾಗಿ ಓದಿನ ಆಸಕ್ತಿ ಬರಬಹುದು. ಇಲ್ಲವಾದರೆ ಕಷ್ಟವಾಗಬಹುದು. ಬುಧನು ತೃತೀಯದಲ್ಲಿ ಇದ್ದು ಬಂಧುಗಳ ಸ್ವಭಾವವು ತಿಳಿಯುವುದು. ಅಷ್ಟಮಕ್ಕೆ ರಾಹುವು ಬಂದಿರುವ ಕಾರಣ ಶತ್ರುಬಾಧೆ, ಸಾಲ ಬಾಧೆಯು ಕಡಿಮೆ ಆಗುವುದು. ಸಾಲದಿಂದ ಮುಕ್ತಿ ಸಿಕ್ಕಿ ನೆಮ್ಮದಿ ಇರುವುದು. ಸಪ್ತಮದಲ್ಲಿ ಗುರುವಿದ್ದು ವಿವಾಹ ಕಾರ್ಯವು ಯಾವುದೇ ಅಡೆತಡೆಗಳಿಲ್ಲದೇ ಮುಗಿಯವುದು. ದ್ವಾದಶದಲ್ಲಿ ಕೇತುವಿರುವ ಕಾರಣ ಯಂತ್ರಗಳಿಂದ ಧನನಷ್ಟವಾಗಬಹುದು.
ವೃಶ್ಚಿಕ ರಾಶಿ : ನವೆಂಬರ್ ತಿಂಗಳು ನಿಮ್ಮ ಮನೆಗೆ ಕುಜ ಹಾಗೂ ಸೂರ್ಯರು ಬರಲಿದ್ದಾರೆ. ಪರಸ್ಪರ ಮಿತ್ರರಾಗಿ ಕುಜನು ಸ್ವಕ್ಷೇತ್ರದಲ್ಲಿ ಇರವನು. ದೇಹಕ್ಕೆ ಸಂಬಂಧಿಸಿದ ತೊಂದರೆಗಳು, ಆಘಾತಗಳು ಆಗಬಹುದು. ಮನಸ್ಸು ಚಂಚಲವಾಗಿ ಕಾರ್ಯದಲ್ಲಿ ಏಕಾಗ್ರತೆಯ ಕೊರತೆ ಕಾಣಿಸೀತು. ದ್ವಾದಶದಲ್ಲಿ ಬುಧನು ಇರಲಿದ್ದು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ನಿಮ್ಮ ಮಾತು ನಡೆಯಬಹುದು. ಚತುರ್ಥದಲ್ಲಿ ಇರುವ ಶನಿಯಿಂದ ನಿಮಗೆ ಕುಟುಂಬದ ಬೆಂಬಲು ಸಿಗದೇ ಹೋಗಬಹುದು. ಮಕ್ಕಳ ನಡತೆಯ ಕಾರಣದಿಂದ ನಿಮಗೆ ಅಪವಾದವು ಪಂಚಮದ ರಾಹುವು ನೀಡಬಹುದು. ಷಷ್ಠದಲ್ಲಿ ಗುರುವು ಏಕಾಂಗಿ ಆಗಿದ್ದು ಗುರುಬಲವೂ ಇಲ್ಲವಾಗಿದೆ. ನಿಮಗೆ ಅಗೌರವವು ಸಿಗಲಿದೆ. ಏಕಾದಶದಲ್ಲಿರುವ ಕೇತುವು ಅನೀತಿ ಮಾರ್ಗದಿಂದ ಸಂಪತ್ತನ್ನು ಮಾಡುವಂತೆ ಪ್ರೇರಿಸಬಹುದು. ದ್ವಾದಶದಲ್ಲಿ ಶುಕ್ರನಿರುವ ಕಾರಣ ಮೋಜಿಗಾಗಿ ಧನವ್ಯಯವಾಗುವುದು.
ಧನು ರಾಶಿ : ಈ ತಿಂಗಳು ಉಂಟಾದ ಗ್ರಹಗಳ ಚಲನೆಯಿಂದ ಮಿಶ್ರಫಲವು ಪ್ರಾಪ್ತವಾಗುವುದು. ನಿಮ್ಮ ಮನೆಯಲ್ಲಿಯೇ ಇರುವ ಬುಧನು ಮಾನಸಿಕ ನೆಮ್ಮದಿಯನ್ನು ಕೊಡುವನು. ದ್ವಾದಶದಲ್ಲಿ ಕುಜ ಹಾಗೂ ಸೂರ್ಯರ ಸ್ಥಿತಿಯು ನಿಮಗೆ ವಾಹನದಿಂದ ಕಷ್ಟ ಅಥವಾ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಸಂದರ್ಭವು ಬರಬಹುದು. ಏಕಾದಶದಲ್ಲಿ ಇರುವ ಶುಕ್ರನು ಸ್ವಕ್ಷೇತ್ರದಲ್ಲಿ ಇದ್ದು ಹಣದ ಹರಿವು ಚೆನ್ನಾಗಿ ಆಗುವಂತೆ ನೋಡಿಕೊಳ್ಳುವನು. ದಶಮದಲ್ಲಿ ಕೇತುವು ಇರಲಿದ್ದು ತಂತ್ರಜ್ಞರು ಕಾರ್ಯದಲ್ಲಿ ಪ್ರಗತಿಯನ್ನು ಕಾಣುವರು. ಪಂಚಮದಲ್ಲಿ ಗುರು ಇರದ್ದು ಪೂರ್ಣ ಬಲದಿಂದ ಇರುವನು. ಮಕ್ಕಳಿಂದ ನಿಮಗೆ ಅಂದುಕೊಂಡ ಕಾರ್ಯವು ಆಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾದ ಅನುಕೂಲತೆಗಳು ಇರಲಿವೆ. ಚತುರ್ಥದಲ್ಲಿ ರಾಹುವು ಅಷ್ಟು ಉತ್ತಮವಲ್ಲ. ಕುಟುಂಬದಲ್ಲಿ ಕಿರಿಕಿರಿ ಉಂಟುಮಾಡಬಹುದು.
ಮಕರ ರಾಶಿ : ಈ ತಿಂಗಳು ನಮಗೆ ಶುಭಫಲದ ಸಾಲುಗಳು ತೆರೆದುಕೊಳ್ಳುವುದು. ದ್ವಿತೀಯದ ಶನಿಯು ನಿಮಗೆ ಸಂಪತ್ತಿಗೆ ಸ್ವಲ್ಪ ತೊಂದರೆಯನ್ನು ಕೊಡಬಹುದು. ಆದರೆ ಉಳಿದ ಗ್ರಹಗಳ ಬಲದಿಂದ ಅದು ಗೌಣವಾಗುವುದು. ತೃತೀಯದಲ್ಲಿ ರಾಹುವಿನ ಆಗಮನವಾಗಿದೆ. ನಿಮ್ಮ ಬಲವನ್ನು ಪ್ರದರ್ಶಿಸಲು ಸಕಾಲ. ನವಮದಲ್ಲಿ ಕೇತುವು ಇರಲಿದ್ದು ಅನೀತಿಯ ಕರ್ಮಗಳಿಗೆ ಪ್ರೇರಣೆ ನೀಡಬಹುದು. ಕಲಾವಿದರ ವೃತ್ತಿಗೆ ದಶಮದ ಶುಕ್ರನು ಸಹಾಯ ಮಾಡುವನು. ವಿನ್ಯಾಸಕಾರರಿಗೂ ಉತ್ತಮ ಅವಕಾಶವು ಸಿಗುವುದು. ಏಕಾದಶದಲ್ಲಿ ಕುಜ ಹಾಗೂ ಸೂರ್ಯರ ಸಂಯೋಗದಿಂದ ವೃತ್ತಿಯಲ್ಲಿ ಬದಲಾವಣೆ ಹಾಗೂ ಉನ್ನತ ಮಟ್ಟಕ್ಕೂ ಹೋಗಲು ಅವಕಾಶ ಸಿಗುವುದು. ದ್ವಾದಶದಲ್ಲಿ ಬುಧನ ಉಪಸ್ಥಿತಿಯು ಬಂಧುಗಳಿಂದ ನಷ್ಟವನ್ನು ಮಾಡಿಸುವನು.
ಕುಂಭ ರಾಶಿ : ನವೆಂಬರ್ ತಿಂಗಳಲ್ಲಿ ಹಲವು ಗ್ರಹಗಳ ಬದಲಾವಣೆಯಿಂದ ಶುಭಫಲವು ಅಧಿಕವಾಗಿ ಇರಲಿದೆ. ದ್ವಿತೀಯದಲ್ಲಿ ರಾಹುವು ಇರಲಿದ್ದು ಮಾತಿನ ಬಗ್ಗೆ ಗಮನ ಹೆಚ್ಚು ಇರಬೆರಕಾದೀತು. ಶತ್ರುಗಳನ್ನು ನಿರ್ಮಿಸಿಕೊಳ್ಳುವಿರಿ. ತೃತೀಯದಲ್ಲಿ ಇರುವ ಗುರುವು ಸಾಮಾನ್ಯನಾಗಿದ್ದು ಮಂಗಲ ಕಾರ್ಯಗಳನ್ನು ಪರಿಹಾರದ ಮೂಲಕ ಮಾಡಿಕೊಳ್ಳಿ. ಅಷ್ಟಮದಲ್ಲಿ ಕೇತು ನಿಮ್ಮ ಆಯುಷ್ಯವನ್ನು ಗಟ್ಟಿಗೊಳಿಸವನು. ಆರೋಗ್ಯವೂ ಚೆನ್ನಾಗಿ ಇರಲಿದೆ. ನವಮದಲ್ಲಿ ಶುಕ್ರನು ಸ್ವಕ್ಷೇತ್ರದಲ್ಲಿಯೂ ಇರಲಿದ್ದು ಈ ತಿಂಗಳು ನಿಮ್ಮಂದ ಉತ್ತಮೋತ್ತಮ ಕಾರ್ಯಗಳು ನಡೆಯಲಿವೆ. ಮನೆಯ ನಿರ್ಮಾಣದ ಸಂಕಲ್ಪವನ್ನು ಮಾಡಿಕೊಂಡರೆ ಉತ್ತಮವಾಗುವುದು. ದಶಮದಲ್ಲಿ ಸೂರ್ಯ ಹಾಗೂ ಕುಜರು ಇರುವ ಕಾರಣ ತಂತ್ರಜ್ಞರಿಗೆ ಉತ್ತಮ ಅವಕಾಶಗಳು ಸಿಗಲಿವೆ. ವಿದೇಶಕ್ಕೂ ಹೋಗಬಹುದು. ಬುಧನು ಏಕಾದಶಕ್ಕೆ ಬರಲಿದ್ದು ಬಂಧುಗಳೂ ನಿಮಗೆ ಪೂರಕವಾಗಿ ಇರುವರು.
ಮೀನ ರಾಶಿ : ನವೆಂಬರ್ ತಿಂಗಳಲ್ಲಿ ಗ್ರಹಗಳ ಚಲನೆಯಿಂದ ಶುಭಾಶುಭಫಲವು ಮಿಶ್ರವಾಗಿದೆ. ಸಪ್ತಮದಲ್ಲಿರುವ ಶುಕ್ರನು ನೀಚ ಸ್ಥಾನದಿಂದ ಮುಂದೆ ಹೊಗಲಿದ್ದು ಅಷ್ಟಮದಲ್ಲಿ ಇರುವನು. ಸ್ವಕ್ಷೇತ್ರವಾದರೂ ದುಃಸ್ಥಾನವಾಗಿರುವ ಕಾರಣ ಕಫಕ್ಕೆ ಸಂಬಂಧಿದ ರೋಗವು ಕಾಣಿಸಿಕೊಳ್ಳಬಹುದು. ಉದರಪೀಡೆಯು ಹೆಚ್ಚಾದೀತು. ಸಂಗಾತಿಯ ಆರೋಗ್ಯದ ಬಗ್ಗೆಯೂ ಗಮನ ಬೇಕು. ನವಮಕ್ಕೆ ಬರಲಿರುವ ಕುಜ ಹಾಗೂ ಸೂರ್ಯರು ಒಳ್ಳೆಯ ಕರ್ಮವೇ ಮಾಡುವುದಾದರೂ ಬಹಳ ಕಷ್ಟದಿಂದ ಮಾಡಬೇಕಾಗಬಹುದು. ಸ್ವಕ್ಷೇತ್ರಕ್ಕೆ ರಾಹುವಿನ ಪ್ರವೇಶವಾದ ಕಾರಣ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಯು ಕಾಣಿಸಿಕೊಂಡೀತು. ದ್ವಿತೀಯದಲ್ಲಿ ಇರುವ ಗುರುವು ನಿಮ್ಮ ಅನೇಕ ತೊಂದರೆಗಳನ್ನು ನಾಶ ಮಾಡುವನು. ದ್ವಾದಶದಲ್ಲಿ ಸಾಡೇಸಾಥ್ ಶನಿಯು ಇರಲಿದ್ದು ಎಲ್ಲ ಕೆಲಸಗಳೂ ವಿಘ್ನವಿಲ್ಲದೇ ಮುಗಿಯಲಾರದು.
-ಲೋಹಿತಶರ್ಮಾ 8762924271 (what’s app only)
Published On - 7:44 pm, Wed, 1 November 23