ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 09:27 ರಿಂದ 10:59ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 02:05 ರಿಂದ 03:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 06:22 ರಿಂದ 07:54ರ ವರೆಗೆ.
ಮೇಷ ರಾಶಿ : ವೈದ್ಯರ ಸಲಹೆಯನ್ನು ಪಡೆದು ಮುಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಳಿಯ ಸಂಪತ್ತನ್ನು ಕೊಟ್ಟು ಬಿಡಬೇಕಾಗುವುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಚಟುವಟಿಕೆಯಿಂದ ನೀವು ಇರುವಿರಿ. ಸಂಗಾತಿಯ ಮನೋಭಾವವು ನಿಮಗೆ ಗೊತ್ತಾಗದೇ ಹೋದೀತು. ಸಾಮಾಜಿಕ ಸಹಕಾರವನ್ನು ನೀವು ನೀಡಲಿದ್ದೀರಿ. ಸಮಾರಂಭಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ನಿಮ್ಮವರನ್ನು ನೀವು ದೂರ ಮಾಡಿಕೊಳ್ಳಬಹುದು.
ವೃಷಭ ರಾಶಿ : ಮೃದುವಾದ ಮಾತೂ ನಿಮ್ಮಿಂದ ಬರಲಿದೆ. ನಿಮ್ಮ ಕೆಲಸಗಳ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಸಹಯೋಗವು ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ. ಡೋಲಾಯಮಾನವಾದ ಸ್ಥಿತಿಗೆ ಸರಿಯಾದ ಉತ್ತರದ ಅವಶ್ಯಕತೆಇರಲಿದೆ. ಇಂದು ವೇಗದ ನಡಿಗೆ ಇರಲಿದೆ. ಸಂಬಂಧಗಳು ಇನ್ನಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗಬಹುದು. ವ್ಯಾಪಾರದ ತಂತ್ರವು ಫಲಿಸುವುದು. ದುರಭ್ಯಾಸವನ್ನು ರೂಢಿಸಿಕೊಳ್ಳುವಿರೊ.
ಮಿಥುನ ರಾಶಿ : ಆರೋಗ್ಯದ ಮೇಲೆ ಕಾಳಜಿಯು ಕಡಿಮೆ ಆಗಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಸವಾಲು ಬರಬಹುದು. ಹಣದ ಹೊಂದಾಣಿಯು ಸ್ವಲ್ಪ ಕಷ್ಟವಾದೀತು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನೀವು ಹೋಗದಿರುವಿರಿ. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾದೀತು. ನಿತ್ಯಕರ್ಮದಲ್ಲಿ ವ್ಯತ್ಯಾಸವು ಬರಬಹುದು. ಶುದ್ಧತೆಯ ಬಗ್ಗೆ ನೀವು ಬಹಳ ಎಚ್ಚರಿಕೆಯನ್ನು ವಹಿಸುವುದು ಅವಶ್ಯಕ. ಕಿರಿಕಿರಿ ಎನಿಸಿದ ಕಾರ್ಯಗಳನ್ನು ನೀವು ಮುಂದೂಡುವಿರಿ. ಸಂಗಾತಿಯ ಮನೋಭಾವಕ್ಕೆ ತಕ್ಕಂತೆ ವರ್ತಿಸುವುದು ಕಷ್ಟವಾದೀತು. ಸಿಕ್ಕಷ್ಟು ವಸ್ತುವನ್ನು ಜೋಪಾನವಾಗಿ ಇಟ್ಟಕೊಳ್ಳಿ.
ಕಟಕ ರಾಶಿ : ಆರ್ಥಿಕತೆಯ ಬಗ್ಗೆಯೇ ಹೆಚ್ಚಿನ ಒಲವು ಇಲ್ಲದ್ದರಿಂದ ಒತ್ತಡವೂ ಸಹಜವಾಗಿ ಇರಲಿದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವಿರಕ. ಹಿರಿಯ ಮಾತನ್ನು ಕೇಳದೇ ಅಸಡ್ಡೆ ಮಾಡಬಹುದು. ನೀವು ಇಡುವ ಹೆಜ್ಜೆಗಳು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹಾರವಿರಲಿ. ಭವಿಷ್ಯದ ಗೊಂದಲವು ನಿಮಗೆ ಪರಿಹಾರವಾಗದೇ ಹೋಗಬಹುದು. ಅತಿಯಾದ ನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ಅತಿಥಿ ಸತ್ಕಾರವನ್ನು ನೀವು ಮಾಡುವಿರಿ. ವಿದ್ಯಾರ್ಥಿಗಳ ಆರೋಗದ ಬಗ್ಗೆ ಗಮನ ಅವಶ್ಯಕ.
-ಲೋಹಿತಶರ್ಮಾ 8762924271 (what’s app only)