Daily Horoscope: ಆರ್ಥಿಕವಾಗಿ ನೀವು ಅಭಿಮೃದ್ಧಿ, ಆರೋಗ್ಯ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 08) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಆರ್ಥಿಕವಾಗಿ ನೀವು ಅಭಿಮೃದ್ಧಿ, ಆರೋಗ್ಯ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 08, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 08 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ ಸಂಜೆ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ.

ಮೇಷ ರಾಶಿ: ಕೆಲಸದಲ್ಲಿ ಸಾವಧಾನತೆ ಇರಲಿ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು.‌ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಯಾರದೋ ಒತ್ತಡದಿಂದ ನಿಮ್ಮ ದಿನಚರಿಯನ್ನು ವ್ಯತ್ಯಾಸ‌ ಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿದರೆ ಉತ್ತಮ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸಣ್ಣ ವಿಚಾರವೂ ವಾಗ್ವಾದದಿಂದ ದೊಡ್ಡದಾಗಬಹುದು. ನೀರೀಕ್ಷಿಸಿದಂತೆ ಎಲ್ಲವೂ ನಡೆಯದೇ ಇರಬಹುದು. ಉತ್ತಮ‌ವಾದ ಸಮಯವನ್ನು ಎದುರು ನೋಡುವಿರಿ. ಹಣದ ಒಳ ಹರಿವು ನಿಮಗೆ ನೆಮ್ಮದಿಯನ್ನು ಕೊಟ್ಟೀತು.

ವೃಷಭ ರಾಶಿ: ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದಂತೆ ಆಗುವುದು. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವು ಸಿಗುವುದು. ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು. ಕಛೇರಿಯಲ್ಲಿ ಅನ್ಯ ಕಾರಣಗಳಿಂದ ನಿಮ್ಮ ಕೆಲಸಗಳು ನಿಧಾನವಾಗಿ ಸಾಗಬಹುದು. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ‌ಮತ್ತೆ ಮತ್ತೆ ಒಂದೇ ಘಟನೆಗಳು ನಿಮಗೆ ಬೇಸರ ತರಿಸಬಹುದು. ಆರ್ಥಿಕ‌ಭದ್ರತೆಯ ಕಡೆ ಅಧಿಕ ಗಮನವನ್ನು ಕೊಡುವಿರಿ. ಮನಸ್ಸಿಗೆ ನಕಾರಾತ್ಮಕ ಆಲೋಚನೆಯು ಬರದಂತೆ ನೋಡಿಕೊಳ್ಳಿ.

ಮಿಥುನ ರಾಶಿ: ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಬರಬಹುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗಿ ಇರದು. ನಿಮ್ಮ‌ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ದೊರೆಯುವುದು. ವಾಹನ ಸಂಚಾರದಲ್ಲಿ ನಿಮಗೆ ಭಯವಾಗಬಹುದು. ಆರ್ಥಿಕವಾಗಿ ನೀವು ಬಲವಾಗಿತ್ತಿರುವುದು ನಿಮಗೆ ಹೆಮ್ಮೆಯ ವಿಚಾರವಾಗುವುದು. ಪ್ರಭಾವಿ ವ್ಯಕ್ತಿಗಳ ಜೊತೆ ಸೌಹಾರ್ದ ಮಾತುಕತೆಯನ್ನು ಮಾಡುವಿರಿ. ವಿಶ್ವಾಸ ಗಳಿಕೆಯು ನಿಮ್ಮ ಇಂದಿನ ಉದ್ದೇಶವಾಗಲಿದೆ.

ಕರ್ಕ ರಾಶಿ: ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಯಾರ‌ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳಬಹುದು. ಕಣ್ಣಿನ ಸಮಸ್ಯೆಯು ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ತೊಂದರೆಯಾಗಬಹುದು. ಕೆಲಸದಲ್ಲಿ ಮಂದಗತಿಯಲ್ಲಿ ಇರುವಿರಿ. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ. ಉದ್ಯೋಗವನ್ನೇ ನಂಬಿದ್ದರೆ ನಿಮಗೆ ಆತಂಕವು ಸೃಷ್ಟಿಯಾಗಬಹುದು.

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು