Horoscope: ರಾಶಿಭವಿಷ್ಯ, ಈ ರಾಶಿಯವರು ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟಲಿದ್ದಾರೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 09) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟಲಿದ್ದಾರೆ
ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Aug 09, 2023 | 12:15 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 09 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ನವಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೃದ್ಧಿ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:28 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:38ರ ವರೆಗೆ.

ಮೇಷ ರಾಶಿ: ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳೇ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತವೆ. ಒತ್ತಡದಿಂದ ಕೆಲಸವನ್ನು ಮಾಡಬೇಕಾಗಬಹುದು. ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಸ್ತ್ರೀಯರ ಸಹಾಯದಿಂದ ಜವಾಬ್ದಾರಿಯನ್ನು ಮುಗಿಸುವಿರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ಅಗತ್ಯ. ಕಾರಣಾಂತರಗಳಿಂದ ಇಂದು ನೀವು ಮನೆಯಲ್ಲಿಯೇ ಇರುವಿರಿ. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯಮವನ್ನು ಹೇಳಿ ಪ್ರಯೋಜನವಿಲ್ಲ. ಯಾರದೋ ತಪ್ಪನ್ನು ನೀವು ಸರಿ ಮಾಡಬೇಕಾದೀತು. ಆಪದ್ಧನವನ್ನು ಕೂಡಿಡುವುದು ಒಳ್ಳೆಯದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.

ವೃಷಭ ರಾಶಿ: ಕೋಪದಲ್ಲಿ ಏನನ್ನಾದರೂ ಹೇಳಬಹುದು.‌ ಜಾಗ್ರತೆ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಇರಲಿದೆ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ ಇಂದು‌. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯರಿಂದ ಉತ್ತಮ ವಿಚಾರಗಳು ಗೊತ್ತಾಗುವುದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾಗಬಹುದು. ಯಾರಾದರೂ ಏನನ್ನಾದರೂ ಕೊಡಲು ಬಂದರೆ ನಿರಾಕರಿಸಿ. ಹಿತಶತ್ರುಗಳಿಗೆ ನಿಮ್ಮ ಯಶಸ್ಸನ್ನು ಸಹಿಸಲಾಗದು. ವ್ಯರ್ಥವಾದ ಚರ್ಚೆಗಳಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಆಲೋಚನೆಯನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ.

ಮಿಥುನ ರಾಶಿ: ಸ್ವಪ್ರತಿಷ್ಠೆಯಿಂದ ಎಲ್ಲವನ್ನೂ ಹಾಳು ಮಾಡಿಕೊಳ್ಳುವಿರಿ. ಹಿರಿಯರೆದುರು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ದೇವತಾಕಾರ್ಯಗಳಲ್ಲಿ ಆಸಕ್ತಿಯು ಇದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದು. ಕಛೇರಿಯಲ್ಲಿ ಅಧಿಕಾರಿಗಳ ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾದ ಮಾಡಬಹುದು. ಸಾಲವನ್ನು ಕೊಡಲು ಹೋಗುವುದು ಬೇಡ. ಸಹೋದರರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ. ನಿಮ್ಮ ಸಂಬಂಧಗಳು ಬಳಕೆಯಲ್ಲಿ ಇಲ್ಲದೇ ದೂರವಾಗುವುದು. ಬುದ್ಧಿಪೂರ್ವಕವಾಗಿ ತಪ್ಪುಗಳನ್ನು ಮಾಡಿ ಪಶ್ಚಾತ್ತಪಪಡುವಿರಿ. ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ಸಿದ್ಧರಿರಿ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿ ಕೊಡುವುದು.

ಕರ್ಕ ರಾಶಿ: ನಾನಾ ಮಾರ್ಗಗಳಿಂದ ಹಣವು ಬರಬಹುದು. ‌ಉತ್ಸಾಹಕ್ಕೆ ಭಂಗ ಬರುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಬಹುದು. ಪ್ರಸಿದ್ಧಿಗಾಗಿ ನೀವು ಹಂಬಲಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಇತರರ ಕೆಲಸದ ಕಡೆ ಗಮನ ಹರಿಸುವಿರಿ. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವನ್ನು ಪಡೆಯುವುದು ಕಷಗಟವಾದೀತು. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವು ಸಿಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಗೊಂದಲವು ಬರಬಹುದು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ಆಡಿಕೊಂಡಾರು.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?